ತಾಲ್ಲೂಕು ಮಟ್ಟದ ಅಧಿಕಾರಿಗಳ ದಲಿತ ವಿರೋಧಿ ಧೋರಣೆ : ದಲಿತ ಮುಖಂಡರ ಆಕ್ರೋಶ


Team Udayavani, Jul 30, 2021, 5:00 PM IST

Udayavani Gouribidanur News Chikkaballapura

ಗೌರಿಬಿದನೂರು :  ದೀನ ದಲಿತರ ಅಭಿವೃದ್ದಿಗೆ ಸರ್ಕಾರಗಳು ಸಾಕಷ್ಟು ಅನುದಾನ ನೀಡುತ್ತಿದೆ, ಆದರೆ ಇಲ್ಲಿನ ಅಧಿಕಾರಿಗಳು ಅವುಗಳನ್ನು ಅನುಷ್ಥಾನಗೊಳಿಸಲು ನಿರ್ಲಕ್ಷ್ಯ ತೋರುತ್ತಿದ್ದಾರೆ ಇದರಿಂದ ದಲಿರ ಅಭಿವೃದ್ದಿ ಕುಂಟಿತವಾಗಿದೆ ಇದಕ್ಕೆ ಯಾರು ಹೊಣೆ ಎಂದು ದಲಿತ ಮುಖಂಡರು ಒಕ್ಕೊರಲಿನಿಂದ ಧ್ವನಿ ಗೂಡಿಸಿ ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿದರು.

ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ತಹಸೀಲ್ದಾರ್ ಅವರ ನೇತೃತ್ವದಲ್ಲಿ ಕರೆದಿದ್ದ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸರ್ಕಾರಿ ಆಸ್ಪ್ಪತ್ರೆಯಲ್ಲಿ ಬಡವರ ಪಾಲಿಗೆ ಮೃತ್ಯುಕೂಪವಾಗಿದೆ ಹೆರಿಗೆ ಎಂದು ಹೋದರೆ ಹಣ ನೀಡಬೇಕು ಇಲ್ಲವಾದಲ್ಲಿ ಚಿಕಿತ್ಸೆ ನೀಡುವುದರಲ್ಲಿ ನಿರ್ಲಕ್ಷ್ಯ  ತೋರುತ್ತಾರೆ,ಇದರಿಂದ ಅದೆಷ್ಟೊ ಪ್ರಾಣಗಳು ಹೋಗಿದೆ ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ ಅವರು ಸಕಾಲಕ್ಕೆ ಆಂಬ್ಯುಲೆನ್ಸ್ ಸೇವೆ ಇಲ್ಲ ಇದನ್ನು ಪ್ರಶ್ನೆ ಮಾಡಿದರೆ  ಅಂಬ್ಯುಲೆನ್ಸ್  ಕೆಟ್ಟು ಹೋಗಿದೆ ಎಂದು ಹಾರಿಕೆ ಉತ್ತರ ನೀಡುತ್ತಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಚ್.ಎನ್.ಸನಂದ್ ಕುಮಾರ್ ಜಿಲ್ಲೆ ಸಂಚಾಲಕ ಹುದೂಗೂರು ಕೆ.ನಂಜುಂಡಪ್ಪ ಆರೋಪಿಸಿದ್ದರು.

ಇದನ್ನೂ ಓದಿ : ತೇಜ್ ಪಾಲ್ ಅತ್ಯಾಚಾರ ಪ್ರಕರಣ : ಆಗಸ್ಟ್ 9ಕ್ಕೆ ವಿಚಾರಣೆ ಮುಂದೂಡಿದ ಬಾಂಬೆ ಹೈ ಕೋರ್ಟ್

ಚಿಕ್ಕಕುರುಗೂಡು ನಿವಾಸಿ ರೂಪ (28) ಗರ್ಭಿಣಿ ವೈದ್ಯರ ನಿರ್ಲಕ್ಷ್ಯದಿಂದ ಮೃತರಾಗಿದ್ದಾರೆ ಇದಕ್ಕೆ ಯಾರು ಹೊಣೆ ಇವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಹುದುಗೂರು ಕೆ.ನಂಜುಂಡಪ್ಪ ಒತ್ತಾಯ ಮಾಡಿದರು.

ಹಿರಿಯ ದಲಿತ ಮುಖಂಡ ಸಿ.ಜಿ,ಗಂಗಪ್ಪ ಮಾತನಾಡಿ ತಾಲ್ಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ ಅದು ದಲಿತ ಕೇರಿಗಳಲ್ಲಿ ರಾತ್ರಿ ವೇಳೆಯಲ್ಲಿ ಶಾಂತಿ ಕದಡುವಂತೆ ಮಾಡಿದೆ, ಇದಕ್ಕೆ ಅಬಕಾರಿ ಅಧಿಕಾರಿಗಳು ಕಾರಣ ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಧ್ವನಿಗೂಡಿಸಿದ ದಲಿತ ಅಶ್ವಥ್ ಇಡಗೂರು, ಗಂಗಸಂದ್ರ, ನಾಮಗೊಂಡ್ಲು ಇನ್ನಿತರೆ ಗಡಿ ಗ್ರಾಮದಲ್ಲಿ ಹೆಂಡ ಮದ್ಯ ಮಾರಾಟ ನಡೆಯುತ್ತಿದೆ ಇದನ್ನು ತಡೆಯಬೇಕು ಎಂದು ಒತಾಯ್ತಿಸಿದರು.

ದಲಿತರು ಸಾಗುವಳಿ ಮಾಡುತ್ತಿರುವ ಸರ್ಕಾರಿ ಜಮೀನನ್ನು  ಬಗರ್‌ಹುಕಂ ಅಡಿಯಲ್ಲಿ ಪಾರಂ 50. 53 ಅರ್ಜಿಯಲ್ಲಿ ಸಲ್ಲಿಸಿದರವರಿಗೆ ಕೂಡಲೇ ಸಾಗುವಳಿ ಚೀಟಿ ನೀಡಬೇಕು ಎಂದು ಸನಂದ್‌ಕುಮಾರ್, ಚೆನ್ನಪ್ಪ, ಹುಲಿಕುಂಟೆ ಅಶ್ವಥ್ಥಪ್ಪ, ಸತ್ಯನಾರಾಯಣ್ ಜೆ.. ಗಂಗಾಧರ್ ಒತ್ತಾಯಿಸಿದರು.

ನರೇಗಾ ಕಾಮಗಾರಿಯಲ್ಲಿ ಅವ್ಯಹಾರ ನಡೆಯುತ್ತಿದೆ ಜೆಸಿಬಿ ಯಂತ್ರಗಳ ಮೂಲಕ ಕೆಲಸ ಮಾಡುತ್ತಿದ್ದಾರೆ ಎಂದು ದಲಿತ ಮುಖಂಡರಾದ ಜೆಕೆ ಗಂಗಾಧರ್ ಚೆನ್ನಪ್ಪ ಹುಲಿಕುಂಟೆ ಅಶ್ವತ್ಥಪ್ಪ ಆರೋಪಿಸಿದರು.

ಶೇಕಡಾ 22. 75 ಭಾರೀ ಗೋಲ್‌ಮಾಲ್ : ತಾಪಂ ಸೇರಿದ ಕಟ್ಟಡ ಇನ್ನಿತರೆ ಕಡೆಗಳಿಂದ ಬರುವ ಆಧಾಯದಲ್ಲಿ ಪ.ಜಾತಿ ಮತ್ತು ಪ.ಪಂಗಡ ಅಭಿವೃದ್ದಿಗೆ ಮೀಸಲು ಇಟ್ಟಿರುವ ಶೇ. 22. 75 ಹಣದವನ್ನು ಪ್ರತ್ಯೇಕ ಖಾತೆಯಲ್ಲಿಟ್ಟು ಅದನ್ನು ಪ.ಜಾತಿ, ಪ.ಪಂಗಡ ಅಭಿವೃದ್ದಿಗೆ ಬಳಕೆಮಾಡಬೇಕು ಆದರೆ ಅಧಿಕಾರಿಗಳು ಈ ತನಕ ಖಾತೆ ತೆರೆದಿಲ್ಲ ಹಾಗೂ ಕಾಟಚಾರಕ್ಕೆ ಕುಂದುಕೊರತೆ ಸಭೆಗಳನ್ನು ಕರೆಯುತ್ತಾರೆ ಎಂದು ಮಾಜಿ ತಾ.ಪಂ ಸದಸ್ಯ  ನರಸಿಂಹಮೂರ್ತಿ ಅಧಿಕಾರಗಳನ್ನು ತರಾಟೆಗೆ ತೆಗೆದುಕೊಂಡರು.

ಸಭೆಯಲ್ಲಿ ತಹಸೀಲ್ದಾರ್ ಎಚ್.ಶ್ರೀನಿವಾಸ್ ಸಮಾಜ ಕಲ್ಯಾಣ ಅಧಿಕಾರಿ ಮಹದೇವಸ್ವಾಮಿ,ವೃತ್ತ ನಿರೀಕ್ಷಕ ಶಶಿಧರ್, ಇ.ಒ.ಮುನಿರಾಜು,ಪರಿಶಿಷ್ಟ ವರ್ಗಗಳ ಇಲಾಖೆ ಮ್ಯಾನೇಜರ್ ಕೆ.ರವಿ ದಲಿತ ಮುಖಂಡರಾದ ಬಿಕೆ.ನರಸಿಂಹಮೂರ್ತಿ ಬಾಲಕೃಷ್ಣ, ವೆಂಕಟೇಶ್, ಬಾಲು,ಗಂಗಾಧರಪ್ಪ,ಇಡಗೂರು ವೈ.ಟಿ. ಪ್ರಸನ್ನಕುಮಾರ್ ಎಲ್‌ಎಲ್‌ಬಿ ಗಂಗಾಧರ್, ಕೃಷ್ಣಪ್ಪ ಮಾ.ಕ.ರಾಮಚಂದ್ರ ಎಸ್‌ಎಸ್‌ಡಿ ಸತ್ಯನಾರಾಯಣ್,ವೆಂಕಟೇಶ್,ನಾರಾಯಣಸ್ವಾಮಿ. ಮುಂತಾದವರು ಹಾಜರಿದ್ದರು.

ಇದನ್ನೂ ಓದಿ : ಜೆಡಿಎಸ್ ಗೆ ಹೋಗಿದ್ದಾಗ ಎಲ್ಲಿತ್ತು ಹಿಂದುತ್ವ: ಯತ್ನಾಳ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.