ಅಜ್ಜಂಪುರ: ಸಿಡಿಲು ಬಡಿದು 18 ಕುರಿಗಳು ಸಾವು
Team Udayavani, May 16, 2022, 9:45 PM IST
ಚಿಕ್ಕಮಗಳೂರು : ಸಿಡಿಲು ಬಡಿದು 18 ಕುರಿಗಳು ಸಾವನ್ನಪ್ಪಿರುವ ಘಟನೆ ಅಜ್ಜಂಪುರ ತಾಲೂಕಿನ ಶಂಬೈನೂರು ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಮಾರಿಕಣಿವೆ ಮೂಲದ ಮಾಲೀಕನ ಕುರಿಗಳು ಸಾವನ್ನಪ್ಪಿದ್ದು, ಕುರಿಗಳ ಸ್ಥಿತಿ ಕಂಡು ಮಾಲೀಕ ದಿಗ್ಭ್ರಾಂತನಾಗಿದ್ದಾರೆ.
300ಕ್ಕೂ ಹೆಚ್ಚು ಕುರಿಗಳ ಮಂದೆ ರಸ್ತೆಯಲ್ಲಿ ನಡೆದು ಬರುವಾಗ ಸಿಡಿಲು ಬಡಿದು ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ. ಸಿಡಿಲಿನ ಶಬ್ಧಕ್ಕೆ ಭಯಗೊಂಡು ಹತ್ತಾರು ಕುರಿಗಳು ತಪ್ಪಿಸಿಕೊಂಡಿವೆ.
ಕುರಿಗಳ ಸಾವಿನಿಂದ ಮತ್ತು ತಪ್ಪಿಸಿಕೊಂಡಿರುವುದರಿಂದ ಭಾರಿ ನಷ್ಟ ಸಂಭವಿಸಿದೆ.