ಚಾರ್ಮಾಡಿ ಘಾಟ್ ನಲ್ಲಿ ಹಂದಿಗಳ ಕಳೇಬರ ಎಸೆದು ಹೋದ ಕಿಡಿಗೇಡಿಗಳು
Team Udayavani, Nov 18, 2022, 11:15 AM IST
ಕೊಟ್ಟಿಗೆಹಾರ: ಚಾರ್ಮಾಡಿ ಘಾಟ್‍ನ ಮಲಯಮಾರುತ ಸಮೀಪ ಕಿಡಿಗೇಡಿಗಳು ರಸ್ತೆ ಬದಿಯಲ್ಲಿ ಹಂದಿಗಳ ಕಳೇಬರವನ್ನು ಎಸೆದು ಹೋದ ಘಟನೆ ನಡೆದಿದೆ.
ನಾಲ್ಕಕ್ಕೂ ಹೆಚ್ಚು ಬಾರಿ ಗಾತ್ರದ ಹಂದಿಗಳನ್ನು ಎಸೆದು ಹೋಗಿದ್ದು, ರಸ್ತೆ ಬದಿಯಲ್ಲಿ ಎಸೆದಿರುವುದರಿಂದ ಈ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರು ಮೂಗು ಮುಚ್ಚಿ ತಿರುಗಾಡುವಂತಾಗಿದೆ. ಅದರ ಸಮೀಪದಲ್ಲೇ ತೊರೆಯೊಂದು ಹರಿಯುತ್ತಿದ್ದು, ಹಂದಿಯ ಕಳೇಬರ ಕೊಳೆತು ತೊರೆ ಸೇರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.
ಮಂಗಳೂರು ಕಡೆಗೆ ಹಂದಿಗಳನ್ನು ಸಾಗಾಟ ಮಾಡುವ ವಾಹನ ಚಾಲಕರು ಸತ್ತ ಹಂದಿಗಳನ್ನು ಹೀಗೆ ಎಸೆದು ಹೋಗಿರುವ ಸಾಧ್ಯತೆ ಇದ್ದು, ಹೀಗೆ ಎಸೆದು ಹೋಗಿರುವವರ ವಿರುದ್ದ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಭಾರತಕ್ಕೆ ಗುಪ್ತಚರ ಮಾಹಿತಿ ದೃಢಪಡಿಸಲು ಒಪ್ಪದ ಅಮೆರಿಕ
ಇ.ಡಿ.ಗೆ ಮೊಬೈಲ್ ಹಸ್ತಾಂತರಿಸಿದ ಬಿಆರ್‌ಎಸ್ ಎಂಎಲ್‌ಸಿ ಕವಿತಾ
ಟಿಕೆಟ್ ಇಕ್ಕಟ್ಟು; ಕೆಲವು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳಿಂದ ಬಿಗಿಪಟ್ಟು
ಮುಂಬೈ ಇಂಡಿಯನ್ಸ್‌ಗೆ 4 ವಿಕೆಟ್ ಗೆಲುವು: ಸೋಲಿನೊಂದಿಗೆ ಡಬ್ಲೂಪಿಎಲ್ ಮುಗಿಸಿದ ಮಂಧನಾ ಪಡೆ
ಮೈಸೂರು ಪ್ರಾಂತಗಳಲ್ಲಿ ಚಾಂದ್ರಮಾನ ಯುಗಾದಿ ಹೆಚ್ಚು ಪ್ರಸಿದ್ಧ..ಚಿರನವೀನವಾದ ಪ್ರಾಚೀನ ಯುಗಾದಿ