
ಕಾಫಿನಾಡ ಕಾಂಗ್ರೆಸ್ ನಲ್ಲಿ ನಿಲ್ಲದ ಅಸಮಾಧಾನದ ಕೂಗು
Team Udayavani, Apr 2, 2023, 3:37 PM IST

ಚಿಕ್ಕಮಗಳೂರು: ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಫಿನಾಡ ಕಾಂಗ್ರೆಸ್ ನಲ್ಲಿ ಅಸಮಾಧಾನದ ಕೂಗು ಮತ್ತಷ್ಟು ಜೋರಾಗಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಗೆ ಸೇರಿದ ಎಚ್.ಡಿ.ತಮ್ಮಯ್ಯ ವಿರುದ್ಧ ಆಕ್ರೋಶ ಮುಂದುವರಿದಿದೆ.
ಶನಿವಾರದ ಗಲಾಟೆ ಬಳಿಕ ಇಂದು ಮತ್ತೆ ಕಾಂಗ್ರೆಸ್ ಮುಖಂಡರು ಬಹಿರಂಗ ಸಭೆ ನಡೆಸಿದ್ದು, ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಒಟ್ಟು ಸೇರಿದ್ದಾರೆ.
ಇದನ್ನೂ ಓದಿ:ಹೈದರಾಬಾದ್ ಸವಾಲಿಗೆ ರಾಜಸ್ಥಾನ ಸಜ್ಜು: ಟಾಸ್ ಗೆದ್ದ ಭುವಿ, ಬೌಲಿಂಗ್ ಆಯ್ಕೆ
ಆರು ಜನ ಟಿಕೆಟ್ ಆಕಾಂಕ್ಷಿಗಳ ನೇತೃತ್ವದಲ್ಲಿ ಸಭೆ ನಡೆಸಿ, ನಮ್ಮ ಆರು ಜನರಲ್ಲೇ ಒಬ್ಬರಿಗೆ ಟಿಕೆಟ್ ಕೊಡಬೇಕು. ಆರು ಜನರಲ್ಲಿ ಯಾರಿಗೆ ಟಿಕೆಟ್ ಸಿಕ್ಕರೂ ಒಗ್ಗಟ್ಟಲ್ಲಿ ಕೆಲಸ ಮಾಡೋಣ ಎಂದು ನಿರ್ಧಾರ ಮಾಡಿದ್ದಾರೆ.
ಎಚ್.ಡಿ.ತಮ್ಮಯ್ಯ ಬಿಜೆಪಿ ಏಜೆಂಟ್ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರುಗಳು, ತಮ್ಮಯ್ಯ ಕಾಂಗ್ರೆಸ್ ಸೇರಿರುವುದೇ ಬಿಜೆಪಿ ಗೆಲ್ಲಿಸೋದಕ್ಕೆ. ಆದ್ದರಿಂದ ಅವರಿಗೆ ಟಿಕೆಟ್ ಕೊಡದೆ ಪಕ್ಷ ಆರು ಜನರಲ್ಲೇ ಒಬ್ಬರಿಗೆ ಟಿಕೆಟ್ ನೀಡಬೇಕು ಎಂದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shobha Karandlaje ಅವರಿಗೂ ಫ್ರೀ…; ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವೆ ಗರಂ

Chikkamagaluru: ಓಡಿಶಾ ರೈಲು ಅಪಘಾತದಲ್ಲಿ ಬದುಕುಳಿದ ಯಾತ್ರಿಕ ಹೃದಯಾಘಾತದಿಂದ ನಿಧನ

ದೇವರುಮನೆ ಗುಡ್ಡದಲ್ಲಿ ಕೊಳೆತ ಸ್ಥಿತಿಯಲ್ಲಿ ಯುವಕನ ಶವ ಪತ್ತೆ;ಕೊಲೆ ಶಂಕೆ

Chikkamagaluru ; ನಾಲ್ವರು ಕುಖ್ಯಾತ ಶ್ರೀಗಂಧ ಕಳ್ಳರ ಬಂಧನ

ಸೂಲಿಬೆಲೆ ದೇಶಭಕ್ತಿಗೆ ಕಾಂಗ್ರೆಸ್ ಸರ್ಟಿಫಿಕೇಟ್ ಬೇಕಾಗಿಲ್ಲ: ಸಿ.ಟಿ ರವಿ