ಚಿಕ್ಕಮಗಳೂರು: ಚಿನ್ನದ ವ್ಯಾಪಾರಿಯನ್ನು ಬೆದರಿಸಿ ಐದು ಲಕ್ಷ ದರೋಡೆ ಮಾಡಿದ ಪೊಲೀಸರು!
Team Udayavani, Nov 20, 2022, 4:28 PM IST
ಚಿಕ್ಕಮಗಳೂರು: ಪೊಲೀಸರೇ ಸೇರಿ ಚಿನ್ನದ ವ್ಯಾಪಾರಿಯನ್ನ ಬೆದರಿಸಿ ಐದು ಲಕ್ಷ ದರೋಡೆ ಮಾಡಿದ್ದಾರೆಂದು ದೂರು ದಾಖಲಾಗಿದೆ. ಈ ಘಟನೆ ನಡೆದಿರವುದು ಕಾಫಿನಾಡು ಚಿಕ್ಕಮಗಳೂರಿನಲ್ಲಿ.
ಇನ್ಸ್‌ಪೆಕ್ಟರ್ ಸೇರಿದಂತೆ ಮೂವರು ಪೇದೆಗಳ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಅಜ್ಜಂಪುರ ಠಾಣೆ ಪಿಐ ಲಿಂಗರಾಜ್, ಪೇದೆಗಳಾದ ಧನಪಾಲ್ ನಾಯ್ಕ, ಓಂಕಾರಮೂರ್ತಿ, ಶರತ್ ರಾಜ್ ಮೇಲೆ ದರೋಡೆ ಕೇಸ್ ಹಾಕಲಾಗಿದೆ.
ಇದನ್ನೂ ಓದಿ:ರಾಮ ಹಿಂದೂಗಳಿಗೆ ಮಾತ್ರವಲ್ಲ ಎಲ್ಲರಿಗೂ ಸೇರಿದವನು : ಫಾರೂಕ್ ಅಬ್ದುಲ್ಲಾ
ಚಿನ್ನ ಸಾಗಿಸುತ್ತಿದ್ದ ವ್ಯಾಪಾರಿ ಭಗವಾನ್ ಸಾಂಕ್ಲಾನನ್ನು ಬೆದರಿಸಿದ ಪೊಲೀಸರು ಬುಕ್ಕಾಂಬುದಿ ಟೋಲ್ ಬಳಿ ಹಣ ದರೋಡೆ ಮಾಡಿದ್ದಾರೆಂದು ದೂರಲಾಗಿದೆ. ತಾವೇ ಕರ್ತವ್ಯ ನಿರ್ವಹಿಸುತ್ತಿದ್ದ ಠಾಣೆಯಲ್ಲಿ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಇನ್ಸ್ ಪೆಕ್ಟರ್, ಮೂವರು ಪೇದೆಗಳನ್ನು ಅಮಾನತುಗೊಳಿಸಿ ಎಸ್ ಪಿ ಆದೇಶಿಸಿದ್ದಾರೆ.