ಮನೆಯಲ್ಲಿ ಮಲಗಿದ್ದಾಗ ಬೆಂಕಿ ತಗಲಿ ವ್ಯಕ್ತಿ ಸಾವು


Team Udayavani, May 18, 2022, 1:03 AM IST

ಮನೆಯಲ್ಲಿ ಮಲಗಿದ್ದಾಗ ಬೆಂಕಿ ತಗಲಿ ವ್ಯಕ್ತಿ ಸಾವು

ಮೂಡಿಗೆರೆ: ಪಟ್ಟಣದ ಹೊರವಲಯದಲ್ಲಿರುವ ಕಡೆಮಾಡ್ಕಲ್‌ ಗ್ರಾಮದ ನಿವಾಸಿ ಅವಿನಾಶ್‌ (29) ಸೋಮವಾರ ರಾತ್ರಿ ತನ್ನ ಮನೆಯಲ್ಲಿ ಮಲಗಿದ್ದಾಗ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಮೃತಪಟ್ಟಿದ್ದಾರೆ.

ಅವಿನಾಶ್‌ ಕೂಲಿ ಕೆಲಸ ಮಾಡಿಕೊಂಡಿದ್ದು, ಕಳೆದ 5 ವರ್ಷಗಳ‌ ಹಿಂದೆ ಕಸಬಾ ಹೋಬಳಿಯ ಇಂದರವಳ್ಳಿ ಗ್ರಾಮದ ಭಾಗ್ಯಾ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರು. 12 ದಿನದ ಹಿಂದೆ ಪತ್ನಿ ಭಾಗ್ಯಾ ಮತ್ತು ಮಕ್ಕಳು ತವರು ಮನೆಗೆ ತೆರಳಿದ್ದು ಮನೆಯಲ್ಲಿ ಅವಿನಾಶ್‌ ಒಬ್ಬರೇ ಇದ್ದರು ಎಂದು ತಿಳಿದುಬಂದಿದೆ.

ಅವಿನಾಶ್‌ ಸೋಮವಾರ ಎಂದಿನಂತೆ ಕೆಲಸ ಮಾಡಿಕೊಂಡು ರಾತ್ರಿ ಮನೆಗೆ ಬಂದು ಮಲಗಿದ್ದಾರೆ. ಪಕ್ಕದಲ್ಲೇ ಪೆಟ್ರೋಲ್‌ ಚಾಲಿತ ಕಳೆ ಕಟ್ಟುವ ಮಾಡುವ ಯಂತ್ರವಿತ್ತು. ಅವಿನಾಶ್‌ಗೆ ಸಿಗರೇಟ್‌ ಸೇದುವ ಚಟವಿತ್ತು. ಬಹುಶಃ ಇದರಿಂದಲೇ ಯಂತ್ರಕ್ಕೆ ಆಕಸ್ಮಿಕ ಬೆಂಕಿ ತಗಲಿ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ. ಮಂಗಳವಾರ ಬೆಳಗ್ಗೆ ಅವಿನಾಶ್‌ ಮನೆಯಲ್ಲಿ ಬೆಂಕಿ ಹೊಗೆ ಕಾಣಿಸಿಕೊಂಡಿದ್ದನ್ನು ಗಮನಿಸಿದ ಸ್ಥಳೀಯರು, ಹತ್ತಿರ ಹೋಗಿ ವೀಕ್ಷಿಸಿದಾಗ ಅವಿನಾಶ್‌ ಬೆಂಕಿಯಲ್ಲಿ ಸುಟ್ಟು ಮೃತಪಟ್ಟಿರುವುದು ತಿಳಿದುಬಂದಿದೆ. ಮೂಡಿಗೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಗರ: ಎಸೆಸೆಲ್ಸಿ ವಿದ್ಯಾರ್ಥಿನಿ ಆತ್ಮಹತ್ಯೆ
ಸಾಗರ: ಪರೀಕ್ಷೆ ಫಲಿತಾಂಶಕ್ಕೆ ಹೆದರಿ ಎಸೆಸೆಲ್ಸಿ ವಿದ್ಯಾರ್ಥಿನಿಯೊಬ್ಬಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.

ಇಲ್ಲಿನ ಜಂಬಗಾರು ನಿವಾಸಿ ರಕ್ಷಿತಾ (16) ಆತ್ಮಹತ್ಯೆಗೈದವರು.

ಶಿವಲಿಂಗಪ್ಪ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ರಕ್ಷಿತಾ ಸೋಮವಾರ ಬೆಳಗ್ಗೆ ತಿಂಡಿ ತಿಂದು ಶಾಲೆಗೆ ಹೋಗುವುದಾಗಿ ತಿಳಿಸಿ ಹೋಗಿದ್ದಳು. ರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ಎಲ್ಲ ಕಡೆ ಹುಡುಕಿದ್ದಾರೆ. ಮಂಗಳವಾರ ಬೆಳಗ್ಗೆ ಗಣಪತಿ ಕೆರೆಯಲ್ಲಿ ರಕ್ಷಿತಾ ಮೃತದೇಹ ಪತ್ತೆಯಾಗಿದ್ದು, ಸೋಮವಾರ ರಾತ್ರಿಯೇ ರಕ್ಷಿತಾ ಕೆರೆಗೆ ಬಿದ್ದಿರಬಹುದು ಎಂದು ಅನುಮಾನಿಸಲಾಗಿದೆ.

ರಕ್ಷಿತಾ ಮುಂಬರುವ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶದ ಬಗ್ಗೆ ತೀವ್ರವಾಗಿ ಆತಂಕಗೊಂಡಿದ್ದಳು. ಮನೆಯಲ್ಲಿ ಸಹ ಅಪ್ಪ-ಅಮ್ಮನ ಬಳಿ ಪರೀಕ್ಷೆಯಲ್ಲಿ ಫೇಲ್‌ ಆಗುತ್ತೇನೆ ಎಂದು ಹೇಳಿಕೊಂಡಿದ್ದಳು. ಫಲಿತಾಂಶಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಾಯಿ ಹೇಮಾವತಿ ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

ನ್ಯೂಯಾರ್ಕ್‌ನಲ್ಲಿ ಶೂಟೌಟ್: ಭಾರತೀಯ ಮೂಲದ ವ್ಯಕ್ತಿಯ ಹತ್ಯೆ

ನ್ಯೂಯಾರ್ಕ್‌ನಲ್ಲಿ ಶೂಟೌಟ್: ಭಾರತೀಯ ಮೂಲದ ವ್ಯಕ್ತಿಯ ಹತ್ಯೆ

ಲೈಂಗಿಕ ದೌರ್ಜನ್ಯ ಆರೋಪ : ಮಲಯಾಳಂ ನಟ ವಿಜಯ್ ಬಾಬು ಬಂಧನ

ಲೈಂಗಿಕ ದೌರ್ಜನ್ಯ ಆರೋಪ : ಮಲಯಾಳಂ ನಟ ವಿಜಯ್ ಬಾಬು ಬಂಧನ

1-fgfg

ಪಠ್ಯ ಪುಸ್ತಕದಲ್ಲಿ ಕನಕದಾಸರ ಕಡೆಗಣನೆ : ಕಾಗಿನೆಲೆ ಶ್ರೀ ಆಕ್ರೋಶ

M B Patil

ಬಿಜೆಪಿಯವರು ಯಾಕೆ ದಲಿತರನ್ನ ಸಿಎಂ ಮಾಡಲಿಲ್ಲ?: ಎಂ.ಬಿ ಪಾಟೀಲ್

Uddhav

ಮಹಾಬಲದ ಜಟಾಪಟಿ: 9 ಬಂಡಾಯ ಸಚಿವರ ಖಾತೆಗಳು ವಜಾ

ಮಣ್ಣೆತ್ತಿನ ಅಮವಾಸ್ಯೆ: ಬಸವ ಮೂರ್ತಿಗಳ ಆರಾಧನೆ; ಕೃಷಿಕರ ಮುಂಗಾರಿನ ಮೊದಲ ಹಬ್ಬ

ಮಣ್ಣೆತ್ತಿನ ಅಮವಾಸ್ಯೆ: ಬಸವ ಮೂರ್ತಿಗಳ ಆರಾಧನೆ; ಕೃಷಿಕರ ಮುಂಗಾರಿನ ಮೊದಲ ಹಬ್ಬ

Rohit Sharma can be relieved as captain from T20s: Virender Sehwag

ರೋಹಿತ್ ಶರ್ಮಾ ನಾಯಕತ್ವ ತ್ಯಜಿಸಬೇಕು: ಸಲಹೆ ನೀಡಿದ ಸೆಹವಾಗ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vdsgvbsdfbdf

ಪಕ್ಷಿಗಳ ಹೆರಿಗೆ ಆಸ್ಪತ್ರೆಯಂತಾದ ಭದ್ರಾ ಜಲಾಶಯ ಹಿನ್ನೀರು ಪ್ರದೇಶ

1-dsfdsf

ಚಿಕ್ಕಮಗಳೂರು : ಯುವಕರ ವೀಲಿಂಗ್ ಹುಚ್ಚಾಟ ; ಪೊಲೀಸರಿಂದ ಕಠಿಣ ಕ್ರಮ

selfi2

ಚಾರ್ಮಾಡಿ ಘಾಟ್ ನಲ್ಲಿ ರಸ್ತೆ ಮಧ್ಯೆಯೇ ಪ್ರವಾಸಿಗರ ಸೆಲ್ಪಿ : ವಾಹನ ಸವಾರಿಗೆ ತೊಂದರೆ

Svbszfdb

ಕಾನೂನು ಪ್ರಕಾರವೇ ಕಾರ್ಯ ನಿರ್ವಹಿಸಿ

vszdvgdf

ಯೋಗ ಜೀವನದ ಅಂಗವಾಗಲಿ

MUST WATCH

udayavani youtube

ಚಿಕ್ಕಮಗಳೂರು : ವೀಲಿಂಗ್ ಶೋಕಿ ಮಾಡಿದವರಿಗೆ ಖಾಕಿಗಳ ಬುಲ್ಡೋಜರ್ ಟ್ರೀಟ್ಮೆಂಟ್

udayavani youtube

ರಸ್ತೆ ಮಧ್ಯೆಯೇ ಪ್ರವಾಸಿಗರ ಸೆಲ್ಪಿ… ಚಾರ್ಮಾಡಿ ಘಾಟ್ ನಲ್ಲಿ ವಾಹನ ಸವಾರರ ಪರದಾಟ

udayavani youtube

ವರ್ಷದ ಬಳಿಕ ತಾಯಿ ಮಡಿಲು ಸೇರಿದ ಮಗ: ವಿಳಾಸ ಪತ್ತೆಗೆ ನೆರವಾಯಿತು ಫೇಸ್‌ ಬುಕ್

udayavani youtube

ಉಡುಪಿ : ಆಟೋರಿಕ್ಷಾ ಬಳಿ ತೆರಳಿ ಪ್ರಕರಣ ಇತ್ಯರ್ಥಪಡಿಸಿದ ನ್ಯಾಯಾಧೀಶರು

udayavani youtube

ಸುಳ್ಯ, ಕೊಡಗಿನ ಕೆಲವೆಡೆ ಭಾರಿ ಶಬ್ದದೊಂದಿಗೆ ಭೂಕಂಪನ, ಗೋಡೆ ಬಿರುಕು

ಹೊಸ ಸೇರ್ಪಡೆ

15

ದೂರು ಪ್ರಾಧಿಕಾರದ್ದೇ ದೊಡ್ಡ ದೂರು!

tdy-18

ಮನೆ ರಸ್ತೆ ಸಂಪರ್ಕಕ್ಕಾಗಿ ಗ್ರಾಪಂ ಕಚೇರಿ ಮುಂದೆ ಧರಣಿ

ನ್ಯೂಯಾರ್ಕ್‌ನಲ್ಲಿ ಶೂಟೌಟ್: ಭಾರತೀಯ ಮೂಲದ ವ್ಯಕ್ತಿಯ ಹತ್ಯೆ

ನ್ಯೂಯಾರ್ಕ್‌ನಲ್ಲಿ ಶೂಟೌಟ್: ಭಾರತೀಯ ಮೂಲದ ವ್ಯಕ್ತಿಯ ಹತ್ಯೆ

ಲೈಂಗಿಕ ದೌರ್ಜನ್ಯ ಆರೋಪ : ಮಲಯಾಳಂ ನಟ ವಿಜಯ್ ಬಾಬು ಬಂಧನ

ಲೈಂಗಿಕ ದೌರ್ಜನ್ಯ ಆರೋಪ : ಮಲಯಾಳಂ ನಟ ವಿಜಯ್ ಬಾಬು ಬಂಧನ

1-fgfg

ಪಠ್ಯ ಪುಸ್ತಕದಲ್ಲಿ ಕನಕದಾಸರ ಕಡೆಗಣನೆ : ಕಾಗಿನೆಲೆ ಶ್ರೀ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.