ದತ್ತ ಜಯಂತಿ ಉತ್ಸವಕ್ಕೆ ಅಡ್ಡಿಪಡಿಸುವ ಹುನ್ನಾರ; ದತ್ತಪೀಠದ ರಸ್ತೆ ಉದ್ದಕ್ಕೂ ಮೊಳೆಗಳು
ಕಿಡಿಕೇಡಿಗಳ ಕೃತ್ಯಕ್ಕೆ ಶಾಸಕ ಸಿ.ಟಿ.ರವಿ ಆಕ್ರೋಶ
Team Udayavani, Dec 6, 2022, 12:35 PM IST
ಚಿಕ್ಕಮಗಳೂರು: ಕಾಫಿನಾಡಿನಲ್ಲಿ ದತ್ತ ಜಯಂತಿ ಉತ್ಸವಕ್ಕೆ ಅಡ್ಡಿಪಡಿಸುವ ಹುನ್ನಾರ ನಡೆದಿದ್ದು, ದತ್ತಪೀಠಕ್ಕೆ ತೆರಳುವ ಮಾರ್ಗ ಮಧ್ಯೆ ರಸ್ತೆ ಉದ್ದಕ್ಕೂ ಮೊಳೆಗಳನ್ನು ಹಾಕಲಾಗಿತ್ತು ಎಂದು ತಿಳಿದು ಬಂದಿದೆ.
ವಾಹನಗಳು ಅಪಘಾತವಾಗುವ ರೀತಿಯಲ್ಲಿ ಸಂಚು ರೂಪಿಸಿರುವ ಕಿಡಿಗೇಡಿಗಳು ದರ್ಶನಕ್ಕೆ ಅಡ್ಡಿಪಡಿಸುವ ಹಿನ್ನೆಲೆ ದತ್ತಪೀಠಕ್ಕೆ ತೆರಳುವ ರಸ್ತೆ ಉದ್ದಕ್ಕೂ ಮೊಳೆಗಳನ್ನು ಹಾಕಿ ಅಪಘಾತ ಸೃಷ್ಠಿಸುವ ಹುನ್ನಾರ ನಡೆದಿತ್ತು ಎನ್ನಲಾಗಿದೆ.
ಕೈಮರ ಚೆಕ್ ಪೋಸ್ಟ್ ನಿಂದ ದತ್ತಪೀಠದ ರಸ್ತೆಯ ಉದ್ದಕ್ಕೂ ಮೊಳೆಗಳನ್ನು ಹಾಕಲಾಗಿದ್ದು, ಕಿಡಿಕೇಡಿಗಳ ಕೃತ್ಯಕ್ಕೆ ಶಾಸಕ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಂದಿನಿಂದ ದತ್ತ ಜಯಂತಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಮೊದಲ ದಿನವಾದ ಇಂದು ಅನುಸೂಯ ಜಯಂತಿ ನಡೆಯಲಿದ್ದು, ಮಹಿಳೆಯರು ದತ್ತಪೀಠಕ್ಕೆ ತೆರಳಿ ಅನುಸೂಯ ದೇವಿಯ ದರ್ಶನ ಪಡೆಯಲಿರುವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುದೀಪ್ ಭೇಟಿಯಾದ ಡಿಕೆ ಶಿವಕುಮಾರ್: ಕಾಂಗ್ರೆಸ್ ಪಕ್ಷ ಸೇರುತ್ತಾರಾ ಕಿಚ್ಚ?
ನಿನ್ನೆ ರಾತ್ರಿಯೇ ಅಮಿತ್ ಶಾ ಭೇಟಿ ಮಾಡಿ ಸುದೀರ್ಘವಾಗಿ ಚರ್ಚಿಸಿದ ರಮೇಶ ಜಾರಕಿಹೊಳಿ
ಎಂ.ಬಿ.ಪಾ- ಪರಂ ಗರಂ: ಕಾಂಗ್ರೆಸ್ ಪ್ರಚಾರ ಸಮಿತಿ – ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಪರಂ ರಾಜೀನಾಮೆ ವದಂತಿ
ಜನಪ್ರಿಯತೆಗೆ ಚಿತ್ತ, ಸಂಪನ್ಮೂಲ ಎತ್ತ
ಟ್ರಾಫಿಕ್ ದಂಡ ಪಾವತಿಗೆ ಭರ್ಜರಿ ರಿಯಾಯಿತಿ