ನಗರಸಭೆಯಿಂದ ಕಿರುಕುಳ: ತಳ್ಳು ಗಾಡಿಗೆ ಬೆಂಕಿ ಹಚ್ಚಿದ ವ್ಯಾಪಾರಿ

Team Udayavani, May 18, 2022, 4:19 PM IST

fire

ಚಿಕ್ಕಮಗಳೂರು: ನಗರದಲ್ಲಿ ತಳ್ಳುಗಾಡಿ ವ್ಯಾಪಾರಿಗಳಿಗೆ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಇದಕ್ಕೆ ಪೂರಕವಾಗಿ ನಗರಸಭೆ ಸಿಬ್ಬಂದಿಗಳ ಕಿರುಕುಳಕ್ಕೆ ಬೇಸತ್ತು ವ್ಯಾಪಾರಿಯೊಬ್ಬರು ತಳ್ಳುಗಾಡಿಗೆ ಬೆಂಕಿ ಹಚ್ಚಿ ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಮಲ್ಲಂದೂರು ರಸ್ತೆಯಲ್ಲಿ ಸೋಮವಾರ ಸಂಜೆ ತಳ್ಳುಗಾಡಿ ವ್ಯಾಪಾರಿಯೊಬ್ಬರು ತಳ್ಳುಗಾಡಿ ಮೂಲಕ ವ್ಯಾಪಾರ ಮಾಡುತ್ತಿದ್ದರು. ಅವರನ್ನು ನಗರಸಭೆಯವರು ತೆರವು ಮಾಡಲು ಮುಂದಾಗಿದ್ದರು. ಈ ವೇಳೆ ತಳ್ಳುಗಾಡಿ ವ್ಯಾಪಾರಿಯೊಬ್ಬರು ಗಾಡಿಯನ್ನು ತೆರವು ಮಾಡಲು ಒಪ್ಪದೆ ನಗರಸಭೆ ಸಿಬ್ಬಂದಿ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಳ್ಳುಗಾಡಿಯನ್ನು ತೆರವು ಮಾಡದಂತೆ ವ್ಯಾಪಾರಿ ಪರಿಪರಿಯಾಗಿ ಬೇಡಿಕೊಂಡರೂ ಒಪ್ಪದ ನಗರಸಭೆ ಸಿಬ್ಬಂದಿ ತಳ್ಳುಗಾಡಿಯನ್ನು ತೆರವು ಮಾಡಲು ಮುಂದಾಗಿದ್ದಾರೆ.

ಇದರಿಂದ ಬೇಸತ್ತ ವ್ಯಾಪಾರಿ ತನ್ನ ತಳ್ಳುಗಾಡಿಗೆ ತಾನೇ ಬೆಂಕಿ ಹಚ್ಚಿಕೊಂಡು ನಗರಸಭೆ ಅಧ್ಯಕ್ಷರು, ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಳ್ಳುಗಾಡಿಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ವ್ಯಾಪಾರ ಮಾಡಲು ಸಾಲ ಮಾಡಿದ್ದೇನೆ. ನಗರಸಭೆ ಅಧಿಕಾರಿ, ಸಿಬ್ಬಂದಿ ವ್ಯಾಪಾರ ಮಾಡಲು ಲಂಚ ಕೇಳುತ್ತಾರೆ. ಲಂಚ ನೀಡದಿದ್ದಲ್ಲಿ ತಳ್ಳುಗಾಡಿಯನ್ನು ನಿಲ್ಲಿಸಿಕೊಂಡು ವ್ಯಾಪಾರ ಮಾಡುವಂತಿಲ್ಲ ಎಂದು ಗಾಡಿಯನ್ನೇ ಕೊಂಡೊಯ್ಯುತ್ತಿದ್ದಾರೆ. ನಾವು ಬಡವರು, ವ್ಯಾಪಾರ ಇಲ್ಲದಿದ್ದರೆ ಕುಟುಂಬವನ್ನು ಸಾಕುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಈ ಘಟನೆಯನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ವಿಡಿಯೋ ವೈರಲ್‌ ಆಗಿದೆ. ವಿಡಿಯೋ ನೋಡಿದವರು ಬಡ ವ್ಯಾಪಾರಿಗಳ ಮೇಲೆ ನಗರಸಭೆ ಅಧಿಕಾರಿ, ಸಿಬ್ಬಂದಿ ನೀಡುತ್ತಿರುವ ಕಿರುಕುಳದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಳ್ಳುಗಾಡಿ ವ್ಯಾಪಾರಿಗಳು ಎಲ್ಲೆಂದರಲ್ಲಿ ಗಾಡಿ ನಿಲ್ಲಿಸಿಕೊಂಡು ವ್ಯಾಪಾರ ಮಾಡುತ್ತಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಪೊಲೀಸ್‌ ಇಲಾಖೆಯವರು ನಗರಸಭೆಗೆ ಪತ್ರ ಬರೆದಿದ್ದಾರೆ. ಈ ಸಂಬಂಧ ತಳ್ಳುಗಾಡಿಯನ್ನು ನಿಲ್ಲಿಸಿಕೊಂಡು ವ್ಯಾಪಾರ ಮಾಡದೆ ತಳ್ಳಿಕೊಂಡೇ ವ್ಯಾಪಾರ ಮಾಡಬೇಕೆಂದು ಸೂಚನೆ ನೀಡಲಾಗಿದೆ. ಕೆಲ ವ್ಯಾಪಾರಿಗಳು ರಸ್ತೆ ಬದಿಗಳಲ್ಲಿ ಗಾಡಿ ನಿಲ್ಲಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಕಾರಣಕ್ಕೆ ಇಂತಹ ವ್ಯಾಪಾರಿಗಳಿಗೆ ಅನೇಕ ಬಾರಿ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಿಲ್ಲ. ಸೋಮವಾರ ಮಲ್ಲಂದೂರು ರಸ್ತೆಯ ವ್ಯಾಪಾರಿಗೆ ನಗರಸಭೆ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರಷ್ಟೆ. ಅವರು ಗಾಡಿಗೆ ಬೆಂಕಿ ಹಚ್ಚಿಲ್ಲ. ವರಸಿದ್ಧಿ ವೇಣುಗೋಪಾಲ್‌, ನಗರಸಭೆ ಅಧ್ಯಕ್ಷ

ಟಾಪ್ ನ್ಯೂಸ್

ಕರಾವಳಿಯಲ್ಲಿ ಭಾರೀ ಮಳೆ; ಜೂನ್. 26ರವರೆಗೆ ಆರೆಂಜ್ ಅಲರ್ಟ್​ ಘೋಷಣೆ

ಕರಾವಳಿಯಲ್ಲಿ ಭಾರೀ ಮಳೆ; ಜೂನ್. 26ರವರೆಗೆ ಆರೆಂಜ್ ಅಲರ್ಟ್​ ಘೋಷಣೆ

ವಿರಾಜಪೇಟೆ: ಹುಲಿ ದಾಳಿ: ಎರಡು ಹಸು ಸಾವು: ಪಾಲಿಬೆಟ್ಟದಲ್ಲೂ ಆತಂಕ

ವಿರಾಜಪೇಟೆ: ಹುಲಿ ದಾಳಿ: ಎರಡು ಹಸು ಸಾವು: ಪಾಲಿಬೆಟ್ಟದಲ್ಲೂ ಆತಂಕ

ಪ್ರತಿ ಜಿಲ್ಲೆಯಲ್ಲೂ ಕಾಂಗ್ರೆಸ್‌ ಪಾದಯಾತ್ರೆ : ಧ್ರುವನಾರಾಯಣ

ಪ್ರತಿ ಜಿಲ್ಲೆಯಲ್ಲೂ ಕಾಂಗ್ರೆಸ್‌ ಪಾದಯಾತ್ರೆ : ಧ್ರುವನಾರಾಯಣ

ಅಗ್ನಿಪಥ ಸೇವೆ ಬಳಿಕ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ: ನಳಿನ್‌

ಅಗ್ನಿಪಥ ಸೇವೆ ಬಳಿಕ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ: ನಳಿನ್‌

ಮಂಗಳೂರು ಏರ್‌ಪೋರ್ಟ್‌ಗೆ ಸರಕಾರಿ ಬಸ್‌ ಸೇವೆ

ಮಂಗಳೂರು ಏರ್‌ಪೋರ್ಟ್‌ಗೆ ಸರಕಾರಿ ಬಸ್‌ ಸೇವೆ

ಶಿಕ್ಷಕನಿಂದ ಹಲ್ಲೆ ಆರೋಪ: ಇಬ್ಬರು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ಶಿಕ್ಷಕನಿಂದ ಹಲ್ಲೆ ಆರೋಪ: ಇಬ್ಬರು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ಕಸಬಾ ಬಜಾರ್: ಮೊಬೈಲ್‌ ಟವರನ್ನೇ ಕದ್ದೊಯ್ದರು!

ಕಸಬಾ ಬಜಾರ್: ಮೊಬೈಲ್‌ ಟವರನ್ನೇ ಕದ್ದೊಯ್ದರು!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vszdvgdf

ಯೋಗ ಜೀವನದ ಅಂಗವಾಗಲಿ

tdy-3

ಚಿಕ್ಕಮಗಳೂರು: ನಿರ್ಮಾಣವಾದ ಒಂದೇ ವಾರದಲ್ಲಿ ಕುಸಿದ 30 ಲಕ್ಷ ವೆಚ್ಚದ ಸೇತುವೆ

ಸಿದ್ದರಾಮಯ್ಯ ಮತ್ತು ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು: ಸಿ.ಟಿ.ರವಿ ವ್ಯಂಗ್ಯ

ಸಿದ್ದರಾಮಯ್ಯ ಮತ್ತು ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು: ಸಿ.ಟಿ.ರವಿ ವ್ಯಂಗ್ಯ

6

ಚಿಕ್ಕಮಗಳೂರು: ಚಾಲಕ-ನಿರ್ವಾಹಕರ ಬೇಜವಾಬ್ದಾರಿ, ವಿದ್ಯಾರ್ಥಿಗಳ ಮೋಜು ಮಸ್ತಿ

5

ಚಿಕ್ಕಮಗಳೂರು: ಮೋದಿ ಗೋ ಬ್ಯಾಕ್ ಘೋಷಣೆ ಕೂಗಲು ಹೊರಟ್ಟಿದ್ದ ಕಾರ್ಯಕರ್ತರ ಬಂಧನ

MUST WATCH

udayavani youtube

ಗೃಹ ಪ್ರವೇಶ ಸಂದರ್ಭ ಅವಾಂತರ |ಮಂಗಳಮುಖಿಯರ ರಂಪಾಟ

udayavani youtube

ಕಿನ್ನಿಗೋಳಿ :ಪತ್ನಿ ಸೇರಿ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಯತ್ನಿಸಿದ ಪತಿ

udayavani youtube

ನೀವು ಬಿಜೆಪಿಗೆ ಸೇರಿ, ನಾವು ಶಿವಸೇನೆಯನ್ನು ಮತ್ತೆ ಕಟ್ಟುತ್ತೇವೆ : ರಾವತ್

udayavani youtube

13,940 ಮೊಳೆಗಳಲ್ಲಿ ಕಲಾಕೃತಿ : India Book of Records ಗೆ ದಾಖಲಾದ ಕಾಪುವಿನ ಶಶಾಂಕ್

udayavani youtube

ಮನುಷ್ಯನ ಮನಸ್ಸು ಒಂದೇ ರೀತಿ ಇರುವುದಿಲ್ಲ.. ಯಾಕೆ ?

ಹೊಸ ಸೇರ್ಪಡೆ

ಕರಾವಳಿಯಲ್ಲಿ ಭಾರೀ ಮಳೆ; ಜೂನ್. 26ರವರೆಗೆ ಆರೆಂಜ್ ಅಲರ್ಟ್​ ಘೋಷಣೆ

ಕರಾವಳಿಯಲ್ಲಿ ಭಾರೀ ಮಳೆ; ಜೂನ್. 26ರವರೆಗೆ ಆರೆಂಜ್ ಅಲರ್ಟ್​ ಘೋಷಣೆ

ವಿರಾಜಪೇಟೆ: ಹುಲಿ ದಾಳಿ: ಎರಡು ಹಸು ಸಾವು: ಪಾಲಿಬೆಟ್ಟದಲ್ಲೂ ಆತಂಕ

ವಿರಾಜಪೇಟೆ: ಹುಲಿ ದಾಳಿ: ಎರಡು ಹಸು ಸಾವು: ಪಾಲಿಬೆಟ್ಟದಲ್ಲೂ ಆತಂಕ

ಪ್ರತಿ ಜಿಲ್ಲೆಯಲ್ಲೂ ಕಾಂಗ್ರೆಸ್‌ ಪಾದಯಾತ್ರೆ : ಧ್ರುವನಾರಾಯಣ

ಪ್ರತಿ ಜಿಲ್ಲೆಯಲ್ಲೂ ಕಾಂಗ್ರೆಸ್‌ ಪಾದಯಾತ್ರೆ : ಧ್ರುವನಾರಾಯಣ

ಅಗ್ನಿಪಥ ಸೇವೆ ಬಳಿಕ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ: ನಳಿನ್‌

ಅಗ್ನಿಪಥ ಸೇವೆ ಬಳಿಕ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ: ನಳಿನ್‌

ಮಂಗಳೂರು ಏರ್‌ಪೋರ್ಟ್‌ಗೆ ಸರಕಾರಿ ಬಸ್‌ ಸೇವೆ

ಮಂಗಳೂರು ಏರ್‌ಪೋರ್ಟ್‌ಗೆ ಸರಕಾರಿ ಬಸ್‌ ಸೇವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.