Udayavni Special

ಮಲೆನಾಡು ಭಾಗದಲ್ಲಿ ಹೆಚ್ಚಾಯ್ತು ಗಜ ಕಾಟ!

ಬೆಳೆಗಾರರು ಹೈರಾಣ,ಜಿಲ್ಲೆಯ ಜನತೆಗೆ ಪ್ರಾಣಭಯ

Team Udayavani, Oct 19, 2020, 7:15 PM IST

cm-tdy-1

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಅತಿವೃಷ್ಟಿ, ಅನಾವೃಷ್ಟಿ, ಕಸ್ತೂರಿ ರಂಗನ್‌ ವರದಿ ಜಾರಿ ಹೀಗೆ ಹಲವು ಸಮಸ್ಯೆಗಳಿಂದನಲುಗಿದ್ದ ಮಲೆನಾಡಿನ ರೈತರು ಈಗ ಕಾಡಾನೆಗಳಹಾವಳಿಯಿಂದ ಕಂಗಾಲಾಗಿದ್ದಾರೆ. ಆನೆ ಉಪಟಳಕ್ಕೆ ಜಿಲ್ಲೆಯ ಅಡಕೆ, ಕಾಫಿ ಕಾಳುಮೆಣಸು, ಬಾಳೆ ಬೆಳೆಗಾರರು ಹೈರಾಣಾಗಿದ್ದಾರೆ.

ಮೂರು ವರ್ಷಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿದ ಭಾರೀ ಮಳೆಗೆ ರೈತರ ಜಮೀನು ನಾಶವಾಗಿದೆ. ಅಡಕೆ, ಕಾಫಿ, ಕಾಳು ಮೆಣಸುಬಾಳೆಬೆಳೆ ಮಣ್ಣು ಪಾಲಾಗಿದ್ದು, ಮಳೆ ಆರ್ಭಟಕ್ಕೆ ಬೆಳೆಗಾರರು ರೋಸಿ ಹೋಗಿದ್ದಾರೆ. ಭಾರೀ ಮಳೆಯ ನಡುವೆ ಅಳಿದುಳಿದ ಅಡಕೆ, ಕಾಫಿ, ಕಾಳುಮೆಣಸು ಬೆಳೆಗೆ ಕೊಳೆ ರೋಗ ಸೇರಿದಂತೆ ವಿವಿಧ ರೋಗಗಳ ಭಾಧೆಯಿಂದ ನಷ್ಟ ಅನುಭವಿಸಿ ಜೀವನ ಕಷ್ಟಕರವಾಗಿದೆ.

ಈ ವರ್ಷವಾದರೂ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಬೆಳೆಗಾರರು ಹವಾಮಾನ ವೈಪರೀತ್ಯ, ಚಂಡಮಾರುತದಿಂದ ಫಸಲು ಕಳೆದುಕೊಳ್ಳುವ ಭೀತಿಎದುರಿಸುತ್ತಿದ್ದಾರೆ. ಇದರ ನಡುವೆ ಕಸ್ತೂರಿ ರಂಗನ್‌ವರದಿ ಜಾರಿಯ ತೂಗುಗತ್ತಿ ರೈತರ ತಲೆಮೇಲೆನೇತಾಡುತ್ತಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿಕಾಡಾನೆಗಳ ಹಾವಳಿಯಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಜಿಲ್ಲೆಯ ಮೂಡಿಗೆರೆ ತಾಲೂಕು ಸುತ್ತಮುತ್ತ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಸಾಮಾನ್ಯವಾಗಿ ಬಿಟ್ಟಿದೆ. ಅಡಕೆ, ಕಾಫಿ ತೋಟ, ಬಾಳೆತೋಟ ಭತ್ತದ ಗದ್ದೆಗಳಿಗೆ ಕಾಡಾನೆಗಳ ಹಿಂಡು ನುಗ್ಗಿ ದಾಂಧಲೆ ಮಾಡಿ ಬೆಳೆನಾಶ ಮಾಡುತ್ತಿವೆ. ಒಂದೆಡೆ ಬೆಳೆನಾಶವಾದರೆ, ಮತ್ತೂಂದೆಡೆ ಕಾಡಾನೆಗಳು ಕಾಫಿ ತೋಟದಲ್ಲಿ ಎಲ್ಲಿ ಇರುತ್ತವೆ ಎನ್ನುವುದು ತಿಳಿಯದೆ ಜೀವ ಭಯದಲ್ಲೇ ತೋಟಗಳಲ್ಲಿ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಈಗಾಗಲೇ ಮಾನವ ಮತ್ತು ಆನೆ ಸಂಘರ್ಷದಲ್ಲಿ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕಾಡಾನೆಗಳ ಹಾವಳಿ ನಿಯಂತ್ರಣ ಮತ್ತು ಸ್ಥಳಾಂತರಕ್ಕೆ ಸರ್ಕಾರ ಮತ್ತು ಅರಣ್ಯ ಇಲಾಖೆಗೆ ಪ್ರತೀವರ್ಷ ಮನವಿ ಮಾಡುತ್ತಿದ್ದರೂ ಪ್ರಯೋಜನವಾಗಿಲ್ಲವೆಂದು ರೈತರ ಆರೋಪವಾಗಿದೆ. ಒಂದು ವಾರದಿಂದ ಮೂಡಿಗೆರೆ ತಾಲೂಕಿನ ಗ್ರಾಮಗಳ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟಿವೆ. ಸಕಲೇಶಪುರ ಅರಣ್ಯ ಭಾಗದಲ್ಲಿರುವ ಕಾಡಾನೆಗಳು ಮೂಡಿಗೆರೆ ತಾಲೂಕು ಹಳಸೆ, ದುಂಡುಗ, ಕೆಲ್ಲೂರು, ಕುನ್ನಹಳ್ಳಿ, ಕಿರುಗುಂದ ಭಾಗದಲ್ಲಿ ಬೀಡು ಬಿಟ್ಟಿದ್ದು, ಕಾಫಿ, ಅಡಕೆ, ಕಾಳುಮೆಣಸು, ಬಾಳೆ, ಭತ್ತದ ಗದ್ದೆಗಳನ್ನು ನಾಶಪಡಿಸುತ್ತಿವೆ.

ಗುರುವಾರ, ಶುಕ್ರವಾರ ದುಂಡುಗ ಗ್ರಾಮದ ಕಾಫಿ ತೋಟದಲ್ಲಿ ಆನೆಗಳ ಹಿಂಡು ಬೀಡು ಬಿಟ್ಟಿದ್ದು, ಶನಿವಾರ ಮೂಡಿಗೆರೆ ಪಟ್ಟಣ ಸಮೀಪದ ಹಳೇ ಮೂಡಿಗೆರೆ ಕೃಷ್ಣೇಗೌಡ ಎಂಬುವರ ಕಾಫಿ ತೋಟದಲ್ಲಿ 23ಕ್ಕೂ ಹೆಚ್ಚು ಆನೆಗಳು ಬೀಡುಬಿಟ್ಟಿದ್ದು ಬೆಳೆನಾಶ ಮಾಡಿವೆ. ಈ ಭಾಗದ ಗ್ರಾಮಗಳಲ್ಲಿ ರಾತ್ರಿವೇಳೆ ಎಲ್ಲೆಂದರಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುತ್ತಿದ್ದು, ಜೀವಭಯದಿಂದ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆನೆಗಳು ತಮ್ಮ ಜಮೀನುಗಳಿಗೆ ಎಲ್ಲಿ ದಾಳಿ ಇಡುತ್ತವೋ ಎಂದು ಜಮೀನು ಮಾಲೀಕರು ರಾತ್ರಿ ಇಡೀ ಕಾವಲು ಕಾಯುವಂತಾಗಿದೆ. ಕಾಡಾನೆ ಬೀಡುಬಿಟ್ಟಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟು ಆನೆಗಳನ್ನು ಓಡಿಸಲು ಶತಪ್ರಯತ್ನ ಮಾಡುತ್ತಿದ್ದಾರೆ.

ಅತಿವೃಷ್ಟಿ, ಅನಾವೃಷ್ಟಿಯಿಂದ ಜಮೀನು ನಾಶವಾಗಿದ್ದು, ತೋಟಗಳ ನಿರ್ವಹಣೆಯೇ ಸಾಧ್ಯವಿಲ್ಲದಂತಹ ಪರಿಸ್ಥಿತಿಗೆ ಬೆಳೆಗಾರರು ಬಂದಿದ್ದಾರೆ. ಅದರಲ್ಲೂ ಅಷ್ಟೋ ಇಷ್ಟೋ ಉಳಿದ ಫಸಲು ಉಳಿಸಿಕೊಳ್ಳೋಣ ಎಂದರೆ ಇದರ ನಡುವೆಕಾಡಾನೆಗಳ ಕಾಟ. ಸರ್ಕಾರ ಕಾಡಾನೆಗಳ ಸ್ಥಳಾಂತರಕ್ಕೆ ಮುಂದಾಗಬೇಕು ಮತ್ತು ಕಾಡಂಚಿನ ಗ್ರಾಮಗಳ ಆನೆ ಕಾರಿಡಾರ್‌ ಗುರುತು ಮಾಡಿ ರೈಲ್ವೆ ಕಂಬಿಗಳಿಂದ ಬ್ಯಾರಿಕೇಡ್‌ ನಿರ್ಮಾಣ ಮಾಡಬೇಕು. ಕಾಡಾನೆಹಾವಳಿಗೆ ಸರ್ಕಾರ ಶಾಶ್ವತ ಪರಿಹಾರ ಒದಗಿಸಬೇಕು ಎಂಬುದು ಬೆಳೆಗಾರರ ಆಗ್ರಹವಾಗಿದೆ.

ಅತಿವೃಷ್ಟಿ, ಅನಾವೃಷ್ಟಿ, ಕಸ್ತೂರಿ ರಂಗನ್‌ ವರದಿ, ಕಾಡಾನೆಗಳ ಹಾವಳಿಯಿಂದ ಜಿಲ್ಲೆಯ ಅಡಕೆ, ಕಾಫಿ ಕಾಳುಮೆಣಸು, ಬಾಳೆ ಬೆಳೆಗಾರರು ಬೇಸತ್ತು ಹೋಗಿದ್ದು, ಕಾಡಾನೆಗಳ ಹಾವಳಿ ತಪ್ಪಿಸಿರೈತರ ನೆರವಿಗೆ ಸರ್ಕಾರ ಬರುತ್ತಾ ಎಂಬುದನ್ನು ಕಾದುನೋಡಬೇಕಿದೆ.

ಮೂಡಿಗೆರೆ ಭಾಗದಲ್ಲಿ 18 ಆನೆಗಳು ಇದ್ದು, ಅವು ಅಡಕೆ ತೋಟ, ಕಾಫಿ ತೋಟಗಳಲ್ಲಿ ಭಾರೀ ಲೂಟಿ ಮಾಡುತ್ತಿದ್ದವು. ಅವುಗಳು ಸೇರಿದಂತೆ ಸಕಲೇಶಪುರ ಭಾಗದ 28 ಕಾಡಾನೆಗಳು ಮೂಡಿಗೆರೆ ಭಾಗದಲ್ಲಿ ಲಗ್ಗೆ ಇಟ್ಟಿದ್ದು, ಬೆಳೆ ನಾಶ ಮಾಡುತ್ತಿವೆ. ಮೂರು ವರ್ಷಗಳಲ್ಲಿ ನಿರಂತರ ಅತಿವೃಷ್ಟಿಯಿಂದ ಫಸಲು ಕಡಿಮೆಯಾಗಿದೆ. ಬೆಲೆ ಕುಸಿತವಾಗಿದೆ. ಇದರೊಂದಿಗೆ ಕಾಡಾನೆ, ಕಾಡುಕೋಣ, ಕೋತಿ, ನವಿಲು ಸೇರಿದಂತೆ ಕಾಡು ಪ್ರಾಣಿಗಳ ಕಾಟ ಜಾಸ್ತಿಯಾಗಿದೆ. ನೈಸರ್ಗಿಕ ವಿಕೋಪ ಮತ್ತು ಕಾಡುಪ್ರಾಣಿಗಳಹಾವಳಿಯಿಂದ ಬೆಳೆ ಕಳೆದುಕೊಂಡು ರೈತರುಕಂಗಾಲಾಗಿದ್ದು ಕಾಡು ಪ್ರಾಣಿಗಳ ಹಾವಳಿ ತಡೆಗೆ ಸರ್ಕಾರ ಮತ್ತು ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು.- ಬಾಲಕೃಷ್ಣ ಬಾಳೂರು, ಮೂಡಿಗೆರೆ ತಾಲೂಕು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ

 

-ಸಂದೀಪ್‌ ಶೇಡ್ಗಾರ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಹಳೇ ಹುಬ್ಬಳ್ಳಿಯ ಬೈಪಾಸ್ ಬಳಿ ಯುವಕನ ಕೊಲೆ: ಹಣಕಾಸು ವೈಷಮ್ಯ ಶಂಕೆ

ಹಳೇ ಹುಬ್ಬಳ್ಳಿಯ ಬೈಪಾಸ್ ಬಳಿ ಯುವಕನ ಕೊಲೆ: ಹಣಕಾಸು ವೈಷಮ್ಯ ಶಂಕೆ

ಹೈದರಾಬಾದ್ ಪಾಲಿಕೆ ಫಲಿತಾಂಶ:ಬಿಜೆಪಿ ಭರ್ಜರಿ ಮುನ್ನಡೆ,ಟಿಆರ್ ಎಸ್ ಗೆ ಗದ್ದುಗೆ ತಪ್ಪಲಿದೆಯಾ?

ಹೈದರಾಬಾದ್ ಪಾಲಿಕೆ ಫಲಿತಾಂಶ:ಬಿಜೆಪಿ ಭರ್ಜರಿ ಮುನ್ನಡೆ,ಟಿಆರ್ ಎಸ್ ಗೆ ಗದ್ದುಗೆ ತಪ್ಪಲಿದೆಯಾ?

ಮಧ್ಯಪ್ರದೇಶ: ಸೈಕೋಪಾತ್ ಕಿಲ್ಲರ್ ಎನ್ ಕೌಂಟರ್ ಗೆ ಬಲಿ, ಐವರು ಪೊಲೀಸರಿಗೆ ಗಾಯ

ಮಧ್ಯಪ್ರದೇಶ: ಸೈಕೋಪಾತ್ ಕಿಲ್ಲರ್ ಎನ್ ಕೌಂಟರ್ ಗೆ ಬಲಿ, ಐವರು ಪೊಲೀಸರಿಗೆ ಗಾಯ

ಶಿವಮೊಗ್ಗದಲ್ಲಿ ಮುಸಲ್ಮಾನ್ ಗೂಂಡಾಗಿರಿ ನಡೆಯಲ್ಲ: ಈಶ್ವರಪ್ಪ ಕೆಂಡಾಮಂಡಲ

ಶಿವಮೊಗ್ಗದಲ್ಲಿ ಮುಸಲ್ಮಾನ್ ಗೂಂಡಾಗಿರಿ ನಡೆಯಲ್ಲ: ಈಶ್ವರಪ್ಪ ಕೆಂಡಾಮಂಡಲ

ಆನೆಗೊಂದಿ ಬೈಪಾಸ್ ರಸ್ತೆಯಲ್ಲಿ ಚಿರತೆ ಮರಿ‌ ಪ್ರತ್ಯಕ್ಷ: ಭಯಭೀತರಾದ ಜನ

ಆನೆಗೊಂದಿ ಬೈಪಾಸ್ ರಸ್ತೆಯಲ್ಲಿ ಚಿರತೆ ಮರಿ‌ ಪ್ರತ್ಯಕ್ಷ: ಭಯಭೀತರಾದ ಜನ

ಬೂದಿ ಮುಚ್ಚಿದ ಕೆಂಡದಂತಿರುವ ಶಿವಮೊಗ್ಗ ನಗರ: ಅಂಗಡಿ ಮುಂಗಟ್ಟುಗಳು ಬಂದ್, ಪೊಲೀಸ್ ಬಂದೋಬಸ್ತ್

ಬೂದಿ ಮುಚ್ಚಿದ ಕೆಂಡದಂತಿರುವ ಶಿವಮೊಗ್ಗ ನಗರ: ಅಂಗಡಿ ಮುಂಗಟ್ಟುಗಳು ಬಂದ್, ಪೊಲೀಸ್ ಬಂದೋಬಸ್ತ್

ಭಾರತ-ಆಸ್ಟ್ರೇಲಿಯ ಮೊದಲ ಟಿ20: ತಿರುಗೇಟು ನೀಡಲು ಕೊಹ್ಲಿ ಪಡೆಗೊಂದು ಅವಕಾಶ

ಭಾರತ-ಆಸ್ಟ್ರೇಲಿಯ ಮೊದಲ ಟಿ20: ತಿರುಗೇಟು ನೀಡಲು ಕೊಹ್ಲಿ ಪಡೆಗೊಂದು ಅವಕಾಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗ್ರಾಪಂ ಫೈಟ್‌: ರಂಗೇರುತ್ತಿದೆ ಅಖಾಡ

ಗ್ರಾಪಂ ಫೈಟ್‌: ರಂಗೇರುತ್ತಿದೆ ಅಖಾಡ

vಪಕ್ಷದಲ್ಲಿ ಭಿನ್ನಾಭಿಪ್ರಾಯ:ಗಿರೀಶ್ ಉಪ್ಪಾರರಿಂದ ನಿಗಮ ಅಧ್ಯಕ್ಷ ಸ್ಥಾನ ವಾಪಾಸ್ ಪಡೆದ ಸರ್ಕಾರ

ಪಕ್ಷದಲ್ಲಿ ಭಿನ್ನಾಭಿಪ್ರಾಯ:ಗಿರೀಶ್ ಉಪ್ಪಾರರಿಂದ ನಿಗಮ ಅಧ್ಯಕ್ಷ ಸ್ಥಾನ ವಾಪಾಸ್ ಪಡೆದ ಸರ್ಕಾರ

ಇಂದು ಎಎಸ್ಐ ಆಗಿ ಅಧಿಕಾರ ಪಡೆಯಬೇಕಿದ್ದ ಮುಖ್ಯ ಪೇದೆ ರಸ್ತೆ ಅಪಘಾತದಲ್ಲಿ ಸಾವು!

ಇಂದು ಎಎಸ್ಐ ಆಗಿ ಅಧಿಕಾರ ಪಡೆಯಬೇಕಿದ್ದ ಮುಖ್ಯ ಪೇದೆ ರಸ್ತೆ ಅಪಘಾತದಲ್ಲಿ ಸಾವು!

Untitled-1

ಬಾಳೆಹೊನ್ನೂರು: ಸ್ವಯಂಪ್ರೇರಿತ ರಕ್ತದಾನ ಶಿಬಿರ

ಸಿದ್ದರಾಮಯ್ಯ ಇನ್ನೊಮ್ಮೆ ಹುಟ್ಟಿ ಬಂದರೂ ಲವ್ ಜಿಹಾದಿ ಕಾಯ್ದೆ ತಡೆಯಲು ಸಾಧ್ಯವಿಲ್ಲ: ಶೋಭಾ

ಸಿದ್ದರಾಮಯ್ಯ ಇನ್ನೊಮ್ಮೆ ಹುಟ್ಟಿ ಬಂದರೂ ಲವ್ ಜಿಹಾದ್ ಕಾಯ್ದೆ ತಡೆಯಲು ಸಾಧ್ಯವಿಲ್ಲ: ಶೋಭಾ

MUST WATCH

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಬಸ್ಸಿನಲ್ಲಿ ಪ್ರಯಾಣಿಸುವಾಗ ವಾಂತಿ ಯಾಕೆ ಬರುತ್ತದೆ ?

udayavani youtube

ಉಗ್ರಪರ ಗೋಡೆ ಬರಹ ಪ್ರಕರಣದ ಆರೋಪಿಗಳ ಶೀಘ್ರ ಬಂಧನ: ಗೃಹ ಸಚಿವ ಬೊಮ್ಮಾಯಿ

udayavani youtube

Meal of Bakasur | ತುಳುನಾಡಿನ 14ಖಾದ್ಯಗಳನ್ನು ಉಣಬಡಿಸುವ ಬಕಾಸುರನ ಬಾಡೂಟ | FishCampus

udayavani youtube

ಸ್ವಂತ ಉದ್ಯಮ ಪ್ರಾರಂಭಿಸುವ ಮುನ್ನ ಇಲ್ಲೊಮ್ಮೆ ನೋಡಿ

ಹೊಸ ಸೇರ್ಪಡೆ

ಪ್ರತಾಪ್‌ ಸಿಂಹ ಸಾಧನೆ ಏನೆಂದು ತಿಳಿಸಲಿ

ಪ್ರತಾಪ್‌ ಸಿಂಹ ಸಾಧನೆ ಏನೆಂದು ತಿಳಿಸಲಿ

ಹಳೇ ಹುಬ್ಬಳ್ಳಿಯ ಬೈಪಾಸ್ ಬಳಿ ಯುವಕನ ಕೊಲೆ: ಹಣಕಾಸು ವೈಷಮ್ಯ ಶಂಕೆ

ಹಳೇ ಹುಬ್ಬಳ್ಳಿಯ ಬೈಪಾಸ್ ಬಳಿ ಯುವಕನ ಕೊಲೆ: ಹಣಕಾಸು ವೈಷಮ್ಯ ಶಂಕೆ

ಹೈದರಾಬಾದ್ ಪಾಲಿಕೆ ಫಲಿತಾಂಶ:ಬಿಜೆಪಿ ಭರ್ಜರಿ ಮುನ್ನಡೆ,ಟಿಆರ್ ಎಸ್ ಗೆ ಗದ್ದುಗೆ ತಪ್ಪಲಿದೆಯಾ?

ಹೈದರಾಬಾದ್ ಪಾಲಿಕೆ ಫಲಿತಾಂಶ:ಬಿಜೆಪಿ ಭರ್ಜರಿ ಮುನ್ನಡೆ,ಟಿಆರ್ ಎಸ್ ಗೆ ಗದ್ದುಗೆ ತಪ್ಪಲಿದೆಯಾ?

ಜನಸ್ಪಂದನ ಕಾರ್ಯಕ್ರಮಕ್ಕೆ ಶಾಸಕರು ಬೇಕು : ಯತೀಂದ್ರ

ಜನಸ್ಪಂದನ ಕಾರ್ಯಕ್ರಮಕ್ಕೆ ಶಾಸಕರು ಬೇಕು : ಯತೀಂದ್ರ

ಅಧ್ಯಕ್ಷನಾದರೆ ಚಾ.ನಗರದಲ್ಲಿ ಸಮ್ಮೇಳನ

ಅಧ್ಯಕ್ಷನಾದರೆ ಚಾ.ನಗರದಲ್ಲಿ ಸಮ್ಮೇಳನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.