ಗ್ರಾಮ ಪಂಚಾಯತಿಗಳು ಪ್ರಜಾಪ್ರಭುತ್ವದ ಬೇರು
Team Udayavani, Dec 19, 2020, 6:33 PM IST
ಕಡೂರು: ಗ್ರಾಮ ಪಂಚಾಯಿತಿ ಚುನಾವಣೆ ಪ್ರಜಾಪ್ರಭುತ್ವ ಬಲಗೊಳಿಸುವ ಬೇರು ಮಟ್ಟದ ಪ್ರಕ್ರಿಯೆಯಾಗಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಶುಕ್ರವಾರ “ಉಯದವಾಣಿ’ ಯೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಗಿಡ ಹುಲುಸಾಗಿ ಬೆಳೆದುಆಶ್ರಯ ಫಲ ನೀಡುವ ಅದರ ಮೂಲವೇ ಗ್ರಾಮಸ್ವರಾಜ್ಯದ ಕಲ್ಪನೆಯಾಗಿದೆ. ಗ್ರಾಮ ಪಂಚಾಯಿತಿಚುನಾವಣೆಯಲ್ಲಿ ರಾಜಕೀಯ ನುಸುಳಬಾರದು. ಈಗಾಗಲೇ ಕೆಟ್ಟು ಹೋಗಿರುವ ರಾಜಕೀಯವ್ಯವಸ್ಥೆ ಹಣ, ಜಾತಿ, ತೋಳ್ಬಲಗಳಿಂದ ನಡೆಯುತ್ತಿದ್ದು,ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿಜಾತಿ, ತೋಳ್ಬಲಗಳಿಗೆ ಬೆಲೆ ಕೊಡದೆ ಸ್ವತ್ಛಮೂಲಭೂತ ಸೌಲಭ್ಯಗಳನ್ನು ಗುರುತಿಸಿಉತ್ತಮ ಕೆಲಸಗಾರನನ್ನು ಗ್ರಾಮಸ್ಥರೇ ಆರಿಸಬೇಕು.ಇಲ್ಲಿಯೂ ಕುಟುಂಬ ಸಂಬಂಧ, ಮಿತ್ರರೇ ಶತ್ರುಗಳಾಗುವ ಪರಿಸ್ಥಿತಿ ಇರುತ್ತದೆ. ಚುನಾವಣೆನಂತರ ಇದೆಲ್ಲವನ್ನು ಮರೆತು ಗ್ರಾಮದಲ್ಲಿ ಶಾಂತಿ, ನೆಮ್ಮದಿಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಪ್ರತಿಯೊಂದು ಗ್ರಾಮ ಪಂಚಾಯಿತಿ ಗ್ರಾಮಸ್ಥರು ಶ್ರಮಿಸಬೇಕು. ಶಾಂತಿ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ತಾವು ಈಗಾಗಲೇ ಕ್ಷೇತ್ರದ 49 ಗ್ರಾಪಂಗಳಲ್ಲಿಸುಮಾರು 35ಕ್ಕೂ ಹೆಚ್ಚಿನ ಗ್ರಾಪಂಗಳ ವ್ಯಾಪ್ತಿಗೆ ಸೇರುವ ನೂರಾರು ಊರುಗಳಿಗೆ ಭೇಟಿ ನೀಡಿದ್ದೇನೆ. ಎಲ್ಲಿಯೂ ಯಾವ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತಿಲ್ಲ. ಆದರೆ ಹಳ್ಳಿಗೆ ಕೆಲಸಮಾಡುವಂತಹ ವ್ಯಕ್ತಿಯನ್ನು ಆರಿಸಿ ಗ್ರಾಮದಲ್ಲಿನ ಒಗ್ಗಟ್ಟನ್ನು ಉಳಿಸಿಕೊಳ್ಳಿ ಎಂಬ ಸಂದೇಶ ನೀಡಿದ್ದೇನೆ ಎಂದರು.
ಇತರೆ ರಾಜಕೀಯ ಪಕ್ಷಗಳ ವ್ಯಕ್ತಿಗಳು ಫಲಿತಾಂಶದ ನಂತರ ಹೇಳಿಕೊಳ್ಳುತ್ತಾರೆ. ಆ ಗ್ರಾಮಕ್ಕೆ ಇಷ್ಟು ಬೆಂಬಲ ನೀಡಿದೆ, ಆ ಜಾತಿಯವರಿಗೆ ಇಷ್ಟುಹಣ ನೀಡಿದೆ. ಇದೀಗ ನಮ್ಮ ಬೆಂಬಲದಿಂದಗೆದ್ದಿದ್ದಾರೆ. ಅವರು ನಮ್ಮ ಪಕ್ಷದ ಬೆಂಬಲದಿಂದಗೆದ್ದಿದ್ದಾರೆ ಎಂದು ಬೀರ್ಬಲ್ ಕಾಗೆ ಲೆಕ್ಕದ ಕಥೆ ಹೇಳುವ ನಾಯಕರು ಇದ್ದಾರೆ ಎಂದು ವ್ಯಂಗ್ಯವಾಡಿದರು.
ಆದರೆ, ನಮ್ಮ ಪಕ್ಷದ ಅನೇಕ ಕಾರ್ಯಕರ್ತರು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅವರು ಗೆದ್ದ ನಂತರ ನಾವು ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸುವುದನ್ನು ನಾವೇನು ಮರೆತಿಲ್ಲ. ಮಾಡುತ್ತೇವೆ. ಅಧ್ಯಕ್ಷ-ಉಪಾಧ್ಯಕ್ಷರಚುನಾವಣೆಯಲ್ಲಿ ನಮ್ಮ ಪಕ್ಷದ ಬೇರನ್ನು ಗಟ್ಟಿಗೊಳಿಸುತ್ತೇವೆ. ಪಕ್ಷ ಹಾಗೂ ನಾವು ನಮ್ಮ ಪಕ್ಷದ ಕೆಲಸ ಮಾಡುತ್ತೇವೆ ಎಂದರು.
ಎಷ್ಟು ಗ್ರಾಪಂ ಗೆಲ್ಲುವ ನಿರೀಕ್ಷೆ ಇದೆ ಎಂಬ ಪ್ರಶ್ನೆಗೆ ಉತ್ತರಿಸಿದ ದತ್ತ ಅವರು, ಸಂಪೂರ್ಣ ಫಲಿತಾಂಶ ಹೊರಬೀಳಲಿ. ನಂತರ ತಮಗೇ ಗೊತ್ತಾಗುತ್ತದೆ ಎಂಬ ಉತ್ತರ ನೀಡಿದರು.
ತಾವು ಶಾಸಕರಾಗಿದ್ದ ಅವಧಿಯಲ್ಲಿ ಇಲ್ಲಿನ ಜನಪ್ರತಿನಿಧಿಗಳು ದತ್ತ ಸದಾ ಕಾಲ ಬೆಂಗಳೂರಿನಲ್ಲಿರುತ್ತಾರೆ. ಕ್ಷೇತ್ರಕ್ಕೆ ಬರುವುದೇ ಇಲ್ಲ ಎಂಬ ಆರೋಪ ಮಾಡುತ್ತಿದ್ದರು. ಆದರೆ ಸದ್ಯದ ಜನಪ್ರತಿನಿಧಿಗಳು ಕಡೂರಿನ ಕಚೇರಿಯಲ್ಲಿಯೇ ಬೀಡುಬಿಟ್ಟಿರುತ್ತಾರೆ. ನಮ್ಮ ಗ್ರಾಮಕ್ಕೆ ಇದುವರೆಗೂ ಬಂದೇ ಇಲ್ಲ ಎಂಬ ಮಾತನ್ನು ಅನೇಕ ಗ್ರಾಮಸ್ಥರು ಹೇಳಿದ್ದಾರೆ. ಇದಕ್ಕೆ ವಿರೋಧಿಗಳು ಏನು ಉತ್ತರ ನೀಡುತ್ತಾರೆ ಎಂದು ವ್ಯಂಗ್ಯವಾಡಿದರು.