454 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರ

Team Udayavani, Dec 24, 2020, 4:34 PM IST

454 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರ

ಕೊಪ್ಪ: ಮಂಗಳವಾರ ನಡೆದ ತಾಲೂಕಿನ 21 ಗ್ರಾಪಂಗಳ ಚುನಾವಣೆಯಲ್ಲಿ 74 ಕ್ಷೇತ್ರಗಳಿಂದ ಸ್ಪರ್ಧಿಸಿದ್ದ 189 ಅಭ್ಯರ್ಥಿಗಳ ಭವಿಷ್ಯ ಮತಪಟ್ಟೆಗೆಯಲ್ಲಿ ಭದ್ರವಾಗಿದೆ. ಡಿ.30ರಂದು ಮತ ಎಣಿಕೆ ನಡೆಯಲಿದೆ.

ಒಟ್ಟು 108 ಮತಗಟ್ಟೆಗಳಲ್ಲಿ ಮತದಾನವಾಗಿದ್ದು ಎಲ್ಲಾ ಮತಪೆಟ್ಟಿಗೆಗಳನ್ನು ಬಾಳಗಡಿಯ ಪ್ರಥಮ ದರ್ಜೆ ಕಾಲೇಜಿನ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ. ಭದ್ರತಾ ಕೊಠಡಿಗೆ ಬಿಗು ಪೊಲೀಸ್‌ ಪಹರೆ ಜೊತೆಗೆ ಸಿಸಿ ಕ್ಯಾಮೆರದ ಕಣ್ಗಾವಲು ಇಡಲಾಗಿದೆ. 1ಪಿಎಸ್‌ಐ, 1 ಎಎಸ್‌ಐ, 1 ಎಚ್‌ಸಿ, 1 ಪಿಸಿ, 6 ಮಂದಿ ಮೀಸಲು ಪೊಲೀಸ್‌ ಸಿಬ್ಬಂ ದಿ, 1ಅಗ್ನಿ ಶಾಮಕ ದಳದ ಸಿಬ್ಬಂದಿ  ಸೇರಿದಂತೆ 11ಮಂದಿಯ ಎರಡು ತಂಡವನ್ನು ದಿನದ ಎರಡು ಪಾಳಿಯಲ್ಲಿ ಪಹರೆ ಹಾಕಲಾಗಿದೆ.

ತಾಲೂಕಿನಲ್ಲಿ 30,192 ಪುರುಷರು, 31,228 ಮಹಿಳೆಯರು ಹಾಗೂ 1 ಇತರೆ ಮತದಾರರು ಸೇರಿದಂತೆ ಒಟ್ಟು 61,421ಮತದಾರರ ಪೈಕಿ 23,664 ಪುರುಷರು,24,229 ಮಹಿಳೆಯರು ಸೇರಿದಂತೆ ಒಟ್ಟು47,893 ಮಂದಿ ಮತ ಚಲಾಯಿಸಿದ್ದು ಶೇ.77.975 ಮತದಾನವಾಗಿದೆ.

ಶ್ಯಾನುವಳ್ಳಿ ಪಂಚಾಯತ್‌ನಲ್ಲಿ ಅತೀ ಹೆಚ್ಚು ಶೇ.88.6183 ಮತದಾನವಾಗಿದ್ದರೆ, ಕೊಪ್ಪ ಗ್ರಾಮಾಂತರ ಪಂಚಾಯತ್‌ನಲ್ಲಿ ಅತೀ ಕಡಿಮೆ ಶೇ.71.9547 ಮತದಾನವಾಗಿದೆ.ಕೊಪ್ಪ ಗ್ರಾಮಾಂತರ ಪಂಚಾಯತ್‌ನಲ್ಲಿ ಅತೀಹೆಚ್ಚು 4942 ಮಂದಿ ಮತದಾರರಿದ್ದರೆ, ಕೆಸವೆ ಪಂಚಾಯತ್‌ನಲ್ಲಿ ಅತೀ ಕಡಿಮೆ 1704 ಮತದಾರರಿದ್ದರು. ಕೊಪ್ಪ ಗ್ರಾಪಂನಲ್ಲಿ ಅತೀ ಹೆಚ್ಚು 3556 ಮಂದಿ ಮತ ಚಲಾಯಿಸಿದ್ದರೇ, ಕೆಸವೆ ಪಂಚಾಯತ್‌ನಲ್ಲಿ ಅತೀ ಕಡಿಮೆ 1414 ಮಂದಿ ಮತ ಚಲಾಯಿಸಿದ್ದಾರೆ. ಈ ಬಾರಿಯ ಮತದಾರರ ಪಟ್ಟಿಯಲ್ಲಿ ಮಹಿಳಾ ಮತದಾರರೇ ಹೆಚ್ಚು 31228 ಇದ್ದು ಮತದಾನದಲ್ಲೂ ಮಹಿಳೆಯರೇ 24,229 ಮುಂದೆ ಇದ್ದಾರೆ. ತಾಲೂಕಿನಲ್ಲಿ ಒಟ್ಟು 22 ಗ್ರಾಪಂಗಳಿದ್ದು ಹೇರೂರು ಗ್ರಾಪಂನ ಅವಧಿ ಮುಗಿಯದಿರುವಕಾರಣ ಚುನಾವಣೆ ನಡೆಯಲಿಲ್ಲ. ಉಳಿದ21 ಗ್ರಾಪಂಗಳ 193 ಸ್ಥಾನಗಳ ಪೈಕಿ 189ಸ್ಥಾ ನಕ್ಕೆ ಚುನಾವಣೆ ನಡೆಯಿತು. ಅತ್ತಿಕೊಡಿಗೆಗ್ರಾಪಂನ ಬೆತ್ತದಕೊಳಲು ಕ್ಷೇತ್ರದ ಎರಡು ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಎಲ್ಲಾ 5 ಮಂದಿ ನಾಮಪತ್ರ ವಾಪಸ್‌ ಪಡೆದ ಕಾರಣ ಅಲ್ಲಿಯಚು ನಾವಣೆಯನ್ನು ಮುಂದೂಡಲಾಗಿತ್ತು.

ಭಂಡಿಗಡಿ ಪಂಚಾಯತ್‌ನಲ್ಲಿ ಹೊಸೂರುಕ್ಷೇತ್ರದ ಎಸ್‌ಸಿ ಮೀಸಲು ಸ್ಥಾನಕ್ಕೆ ಸ್ಪರ್ಧಿಸಿದ್ದ ಚಂದ್ರು ಹಾಗೂ ಕೆಸವೆ ಪಂಚಾಯತ್‌ನಕೆಸವೆ ಕ್ಷೇತ್ರದ ಎಸ್‌ಟಿ ಮೀಸಲು ಸ್ಥಾನಕ್ಕೆ ಸ್ಪರ್ಧಿಸಿದ್ದ ಸುನೀತಾ ಅವಿರೋಧವಾಗಿ ಆಯ್ಕೆಯಾಗಿದ್ದರು.

ಟಾಪ್ ನ್ಯೂಸ್

arrested

ಮನೆ ಕಳ್ಳತನ : ಇಬ್ಬರು ಆರೋಪಿಗಳ ಬಂಧನ, ಚಿನ್ನಾಭರಣ ನಗದು ವಶ

ಭೂ ಪರಿವರ್ತನೆ ಸರಳ ಕ್ರಮ: ಸಚಿವ ಆರ್‌.ಅಶೋಕ್‌

ಭೂ ಪರಿವರ್ತನೆ ಸರಳ ಕ್ರಮ: ಸಚಿವ ಆರ್‌.ಅಶೋಕ್‌

ಅಂತಾರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಯಲ್ಲಿ ರಾಜ್ಯ ಶೀಘ್ರ ಸೇರ್ಪಡೆ

ಅಂತಾರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಯಲ್ಲಿ ರಾಜ್ಯ ಶೀಘ್ರ ಸೇರ್ಪಡೆ

1-sdsdddad

ಬಣ್ಣದ ವೈಭವ-4 : ಮರೆತು ಹೋದ ರಾಕ್ಷಸ ಪಾತ್ರಗಳ ಮೇಕಪ್ ಕಲೆಗಾರಿಕೆ

ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಶಿಕ್ಷಕರ ದಿನಾಚರಣೆ  : ಒಕ್ಕಲಿಗ ಸಂಘದ ಅಂತರಿಕ ಕಲಹ ಸ್ಪೋಟ

ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಶಿಕ್ಷಕರ ದಿನಾಚರಣೆ  : ಒಕ್ಕಲಿಗ ಸಂಘದ ಅಂತರಿಕ ಕಲಹ ಸ್ಪೋಟ

ಪುರಿ ಜಗನ್ನಾಥನ ದೇಗುಲದ ಆಸ್ತಿ ಡಿಜಿಟಲೀಕರಣ

ಪುರಿ ಜಗನ್ನಾಥನ ದೇಗುಲದ ಆಸ್ತಿ ಡಿಜಿಟಲೀಕರಣ

ಕಟೀಲ್ ಬಫೂನ್ ಇದ್ದಂತೆ: ಅವರ ಮೆದುಳು-ನಾಲಿಗೆಗೆ ಸಂಪರ್ಕವೇ ಇರಲ್ಲ; ಎಂ.ಬಿ.ಪಾಟೀಲ್

ಕಟೀಲ್ ಬಫೂನ್ ಇದ್ದಂತೆ: ಅವರ ಮೆದುಳು-ನಾಲಿಗೆಗೆ ಸಂಪರ್ಕವೇ ಇರಲ್ಲ; ಎಂ.ಬಿ.ಪಾಟೀಲ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14.-

ಚಿಕ್ಕಮಗಳೂರು: ಆಕಸ್ಮಿಕ ಬೆಂಕಿ ತಗುಲಿ ಎರಡು ಹಸುಗಳ ಸಜೀವ ದಹನ

ದ್ವಾರಕಾ – ಬದರಿ ಶ್ರೀಗಳಿಗೆ ಅನುಗ್ರಹ: ಶ್ರೀಗಳಿಗೆ ದಂಡ – ಕಮಂಡಲ ನೀಡಿದ ಶೃಂಗೇರಿ ಶ್ರೀಗಳು

ದ್ವಾರಕಾ – ಬದರಿ ಶ್ರೀಗಳಿಗೆ ಅನುಗ್ರಹ: ಶ್ರೀಗಳಿಗೆ ದಂಡ – ಕಮಂಡಲ ನೀಡಿದ ಶೃಂಗೇರಿ ಶ್ರೀಗಳು

ಆರ್ ಎಸ್ಎಸ್ ಧರ್ಮ ಜಾಗರಣದ ಜಿಲ್ಲಾ ಸಹಸಂಯೋಜಕರ ಕಾರ್ ಮೇಲೆ ಕಿಲ್ ಯು ಜಿಹಾದಿ ಬರಹ

ಆರ್ ಎಸ್ಎಸ್ ಧರ್ಮ ಜಾಗರಣದ ಜಿಲ್ಲಾ ಸಹಸಂಯೋಜಕರ ಕಾರ್ ಮೇಲೆ ‘ಕಿಲ್ ಯು ಜಿಹಾದಿ’ ಬರಹ

ನನ್ನ ಮದುವೆ ಯಾವುದೇ ವಿಘ್ನವಿಲ್ಲದೆ ನೆರವೇರುವಂತೆ ಮಾಡು: ಉಕ್ಕಡದ ಮಾರಮ್ಮನಿಗೆ ಭಕ್ತನ ಪತ್ರ

ನನ್ನ ಮದುವೆ ಯಾವುದೇ ವಿಘ್ನವಿಲ್ಲದೆ ನೆರವೇರುವಂತೆ ಮಾಡು: ಉಕ್ಕಡದ ಮಾರಮ್ಮನಿಗೆ ಭಕ್ತನ ಪತ್ರ

ಎಸ್‌ಡಿಪಿಐ-ಪಿಎಫ್‌ಐ ನಿಷೇಧಕ್ಕೆ ಕಾಲ ಸನ್ನಿಹಿತ: ಸಚಿವೆ ಶೋಭಾ ಕರಂದ್ಲಾಜೆ

ಎಸ್‌ಡಿಪಿಐ-ಪಿಎಫ್‌ಐ ನಿಷೇಧಕ್ಕೆ ಕಾಲ ಸನ್ನಿಹಿತ: ಸಚಿವೆ ಶೋಭಾ ಕರಂದ್ಲಾಜೆ

MUST WATCH

udayavani youtube

ಮಂಗಳೂರು ಶ್ರೀ ಶಾರದಾ ಮಹೋತ್ಸವ – 100 ವರ್ಷಗಳ ಪಯಣ ಹೇಗಿತ್ತು ?

udayavani youtube

ದಸರಾ ಆನೆಗಳ ತೂಕವನ್ನು ಹೆಚ್ಚಿಸಲು ಏನೆಲ್ಲಾ ತಿನ್ನಿಸುತ್ತಾರೆ ನೋಡಿ !

udayavani youtube

ಬಿಜೆಪಿ ಸರಕಾರ ಇರೋವರೆಗೆ ದೇಶ ದ್ರೋಹಿಗಳಿಗೆ ವಿಜೃಂಭಿಸಲು ಅವಕಾಶವಿಲ್ಲ

udayavani youtube

ಉಚ್ಚಿಲ ದಸರಾ ವೈಭವಕ್ಕೆ ಅದ್ದೂರಿಯ ಚಾಲನೆ

udayavani youtube

ಓದಿನ ಜೊತೆ ಕೃಷಿ : ಮಕ್ಕಳೇ ನಿರ್ಮಿಸಿದ ‘ಆರೋಗ್ಯವನ’ !

ಹೊಸ ಸೇರ್ಪಡೆ

arrested

ಮನೆ ಕಳ್ಳತನ : ಇಬ್ಬರು ಆರೋಪಿಗಳ ಬಂಧನ, ಚಿನ್ನಾಭರಣ ನಗದು ವಶ

ಭೂ ಪರಿವರ್ತನೆ ಸರಳ ಕ್ರಮ: ಸಚಿವ ಆರ್‌.ಅಶೋಕ್‌

ಭೂ ಪರಿವರ್ತನೆ ಸರಳ ಕ್ರಮ: ಸಚಿವ ಆರ್‌.ಅಶೋಕ್‌

ಅಂತಾರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಯಲ್ಲಿ ರಾಜ್ಯ ಶೀಘ್ರ ಸೇರ್ಪಡೆ

ಅಂತಾರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಯಲ್ಲಿ ರಾಜ್ಯ ಶೀಘ್ರ ಸೇರ್ಪಡೆ

1-sdsdddad

ಬಣ್ಣದ ವೈಭವ-4 : ಮರೆತು ಹೋದ ರಾಕ್ಷಸ ಪಾತ್ರಗಳ ಮೇಕಪ್ ಕಲೆಗಾರಿಕೆ

ಕುಟುಂಬ ಕಲಹ : ದಂಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ಕುಟುಂಬ ಕಲಹ : ದಂಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.