
ಕುಮಾರಸ್ವಾಮಿಯನ್ನು CM ಮಾಡುತ್ತೇವೆಂದು ಯಾರ್ಯಾರು ಕಾಲು ಹಿಡಿಯಾತ್ತಾರೋ ಗೊತ್ತಿಲ್ಲ: ಭೋಜೇಗೌಡ
Team Udayavani, Feb 9, 2023, 3:28 PM IST

ಚಿಕ್ಕಮಗಳೂರು: ಸೂರ್ಯ-ಚಂದ್ರ ಹುಟ್ಟುವುದು ಎಷ್ಟು ಸತ್ಯವೋ, ಕುಮಾರಸ್ವಾಮಿ ಸಿಎಂ ಆಗುವುದು ಅಷ್ಟೇ ಸತ್ಯ ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯನ್ನೇ ಸಿಎಂ ಮಾಡುತ್ತೇವೆಂದು ಯಾರ್ಯಾರು ಬಂದು ಕಾಲು ಹಿಡಿಯುತ್ತಾರೋ ಗೊತ್ತಿಲ್ಲ. ಕಾಲು ಹಿಡಿಯೋದಂತೂ ಗ್ಯಾರಂಟಿ, ದೇವೇಗೌಡರ ಕಾಲಿಡಿಯುತ್ತಾರೆ. ಕುಮಾರಸ್ವಾಮಿಯ ಒಂದು ಇಂಟರ್ ವ್ಯೂ ಕೊಡಿಸಿಯೆಂದು ದೇವೇಗೌಡರ ಕಾಲು ಹಿಡಿಯುತ್ತಾರೆ ಎಂದರು.
ಇದನ್ನೂ ಓದಿ:ಒಂದು ವೇಳೆ ಕಾಂಗ್ರೆಸ್, ಸಿಪಿಐಎಂ ಅಧಿಕಾರದಲ್ಲಿದ್ದಿದ್ದರೆ…ತ್ರಿಪುರಾದಲ್ಲಿ ಸಿಎಂ ಯೋಗಿ …
ಈ ರಾಜ್ಯದಲ್ಲಿ ಯಡಿಯೂರಪ್ಪ ಇಲ್ಲದಿದ್ದರೆ ಬಿಜೆಪಿ ಬಿಗ್ ಜೀರೋ. ಬಿಜೆಪಿಯಲ್ಲಿ ನೂರು ಜನ ಲೀಡರ್ ಇರಬಹುದು, ಆದರೆ ಬಿಜೆಪಿ ನಿಂತಿರುವುದು ಬಿ.ಎಸ್. ಯಡಿಯೂರಪ್ಪ ಮೇಲೆ. ಸಮ್ಮಿಶ್ರ ಸರ್ಕಾರ ಮಾಡದಿದ್ದರೆ ಬಿ.ಎಸ್.ವೈ ಬಿಜೆಪಿಯಲ್ಲಿ ಇಷ್ಟು ಪ್ರಭಾವಿ ಆಗುತ್ತಿರಲಿಲ್ಲ. ದಕ್ಷಿಣ ಭಾರತದಲ್ಲಿ ಬಿಜೆಪಿ ಬಾಗಿಲು ತೆಗಿಯಲು ಅಂದಿನ ಸಮ್ಮಿಶ್ರ ಸರ್ಕಾರವೇ ಕಾರಣ. ಆದರೆ, ಇಂದು ಅದೇ ಪಕ್ಷದವರು ದಕ್ಷಿಣ ಭಾರತದಲ್ಲಿ ಬಿಜೆಪಿ ಬಾಗಿಲು ತೆಗೆದವರನ್ನು ಮನೆಗೆ ಕಳಿಸಿದ್ದಾರೆ ಎಂದರು.
ಹಾಸನದಲ್ಲಿ ಪಕ್ಷ ಬಿಡುತ್ತೇವೆಂದು ಹೇಳಿದವರದ್ದು ಎರಡು ವರ್ಷದ ಧಾರಾವಾಹಿ. ಅರಸೀಕೆರೆ, ಅರಕಲಗೂಡಿಗೆ ಅಭ್ಯರ್ಥಿಗಳಿದ್ದಾರೆ, ಜೆಡಿಎಸ್ ಬಿಟ್ಟು ನೂರಾರು ಜನ ಬಿಟ್ಟು ಹೋಗಿದ್ದಾರೆ, ಆದರೂ 37 ಸೀಟು ಗೆದ್ದಿಲ್ವಾ ಎಂದು ಎಸ್.ಎಲ್.ಭೋಜೇಗೌಡ ಹೇಳಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೀತಿ ಸಂಹಿತೆ ಉಲ್ಲಂಘನೆ: ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಎಫ್ ಐಆರ್

ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಸಂಕಷ್ಟ; ಬಂಧಿಸುವಂತೆ ಕೋರ್ಟ್ ಆದೇಶ

ಮರಳಿ ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಸಚಿವ ಗುಬ್ಬಿ ಶ್ರೀನಿವಾಸ್

ಗೆದ್ದಮೇಲೆ ಬೆಂಗಳೂರಿನಲ್ಲಿ ಕುಳಿತು ದುಡ್ಡು ಮಾಡುವ ವ್ಯಕ್ತಿಗೆ ಮತಹಾಕಬೇಡಿ: ಹೊರಟ್ಟಿ

ಮಿಸ್ಟರ್ ಹಾಲಪ್ಪ… ಅಭಿವೃದ್ಧಿ ಸಂಬಂಧ ಬಹಿರಂಗ ಚರ್ಚೆ; ಬೇಳೂರು ಸವಾಲು