
ಜಯಣ್ಣ ತಾಪಂ ನೂತನ ಅಧ್ಯಕ್ಷ
Team Udayavani, Jun 27, 2018, 11:37 AM IST

ಚಿಕ್ಕಮಗಳೂರು: ತಾಲೂಕು ಪಂಚಾಯತ್ ನೂತನ ಅಧ್ಯಕ್ಷರಾಗಿ ಬಿಜೆಪಿಯ ನೆಟ್ಟೇಕೆರೆಹಳ್ಳಿ ಜಯಣ್ಣ ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದಿನ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್ ಪಕ್ಷದ ಆಂತರಿಕ ಒಪ್ಪಂದದಂತೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಹಿನ್ನೆಲೆ ನೂತನ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ನೆಟ್ಟೇಕೆರೆಹಳ್ಳಿ ಜಯಣ್ಣ ಒಬ್ಬರೇ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆ ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಅಮರೇಶ್ ಜಯಣ್ಣ ಅವರ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ತಾಲೂಕು ಪಂಚಾಯತ್‌ನಲ್ಲಿ 19 ಸದಸ್ಯರಿದ್ದು, ಬಿಜೆಪಿ 12, ಜೆಡಿಎಸ್ 4, ಕಾಂಗ್ರೆಸ್ 3 ಸದಸ್ಯರನ್ನು ಹೊಂದಿದೆ. ಬಿಜೆಪಿಗೆ ಸ್ಪಷ್ಟಬಹುಮತ ಇರುವ ಹಿನ್ನೆಲೆ ವಿಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿರಲಿಲ್ಲ. ನಂತರ ನಡೆದ ನೂತನ ಅಧ್ಯಕ್ಷರ ಅಭಿನಂದನ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಸೋಮಶೇಖರ್ ಮಾತನಾಡಿ, ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಯಣ್ಣ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಆಡಳಿತ ನೀಡಬೇಕು. ತಾಲೂಕು ಪಂಚಾಯತ್‌ನ್ನು ರಾಜ್ಯದಲ್ಲಿಯೇ ಮಾದರಿ ತಾಲೂಕು ಪಂಚಾಯತ್ ಮಾಡುವತ್ತ ಗಮನಹರಿಸಲಿ ಎಂದರು.
ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್ ಮಾತನಾಡಿ, ತಮಗೆ ದೊರೆತ ಎರಡು ವರ್ಷದ ಅವಧಿಯಲ್ಲಿ ಉತ್ತಮ ಆಡಳಿತ ನೀಡಿದ್ದು, ಇಂದು ಜಯಣ್ಣ ಅವಿರೋಧ ಆಯ್ಕೆಯಾಗಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನೆಟ್ಟೆಕೆರೆಹಳ್ಳಿ ಜಯಣ್ಣ ಮಾತನಾಡಿ, ರಾಜಕೀಯ ಗಂಧ ಗಾಳಿ ತಿಳಿಯದ ನಾನು ಇಂದು ಅಧ್ಯಕ್ಷ ಸ್ಥಾನ ಅಲಂಕರಿಸಿದ್ದೇನೆ. ರಾಜಕೀಯವಾಗಿ ಬೆಳೆಯಲು ಸಹಕರಿಸಿದ ಶಾಸಕ ಸಿ.ಟಿ.ರವಿ ಹಾಗೂ ಎಲ್ಲರಿಗೂ ಕೃತಜ್ಞ ಎಂದ ಅವರು, ಚಿಕ್ಕಮಗಳೂರು ತಾಲೂಕು ಪಂಚಾಯತ್ ಅನ್ನು ರಾಜ್ಯದಲ್ಲಿಯೇ ಮಾದರಿ ಪಂಚಾಯತ್ ಆಗಿ ಮಾಡುವ ಉದ್ದೇಶ ಹೊಂದಿದ್ದು, ಎಲ್ಲಾ ಸದಸ್ಯರ ಸಹಕಾರ ಪಡೆದು ಕಾರ್ಯಪ್ರವೃತ್ತನಾಗುತ್ತೇನೆ ಎಂದರು.
ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಸದಸ್ಯರಾದ ಜಸಿಂತಾ ಅನಿಲ್‌ಕುಮಾರ್, ಕವಿತಾ ಲಿಂಗರಾಜ್, ಬೆಳವಾಡಿ ರವೀಂದ್ರ, ನಗರ ಬಿಜೆಪಿ ಅಧ್ಯಕ್ಷ ಕೋಟೆ ರಂಗನಾಥ್, ಜಿಲ್ಲಾ ಉಪಾಧ್ಯಕ್ಷ ಸಿ.ಆರ್.ಪ್ರೇಮ್ ಕುಮಾರ್ ಇತರರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಳಸ: ಕಂಠಪೂರ್ತಿ ಕುಡಿದು ಬಂದು ಆಪರೇಷನ್ ಥಿಯೇಟರ್ ನಲ್ಲಿ ಮಲಗಿದ ಸರ್ಕಾರಿ ವೈದ್ಯ

Shocking ಮೃತ ಉರಗತಜ್ಞ ನರೇಶ್ ಮನೆಯಲ್ಲಿ ವಿಷಕಾರಿ ಹಾವುಗಳ ರಾಶಿ!

ಕೊಟ್ಟಿಗೆಹಾರ: ಮನೆಯ ಬಳಿಯೇ ಅವಿತು ಕುಳಿತ್ತಿತ್ತು ಭಾರಿ ಗಾತ್ರದ ಕಾಳಿಂಗ ಸರ್ಪ

ಚಿಕ್ಕಮಗಳೂರು: ನಾಗರಹಾವು ಕಚ್ಚಿ ಉರಗತಜ್ಞ ಸ್ನೇಕ್ ನರೇಶ್ ಸಾವು!

ಚಿಕ್ಕಮಗಳೂರು: ಆಲೂಗಡ್ಡೆ ಬೆಳೆ ಮೇಲೆ ಟ್ರ್ಯಾಕ್ಟರ್ ಚಲಾಯಿಸಿದ ರೈತ