ಕಡೂರು: ಅರಿವು ಮೂಡಿಸುವುದೇ ಗುರುವಿನ ಧರ್ಮ: ರಂಭಾಪುರಿ ಶ್ರೀ

ಸಮಾಜದ ಆದರ್ಶ ಉಳಿಸಿ ಬೆಳೆಸಲು ಗುರು ಪೀಠಗಳ ಮಾರ್ಗದರ್ಶನದ ಅವಶ್ಯಕತೆಯಿದೆ

Team Udayavani, Jun 1, 2023, 6:08 PM IST

Udayavani Kannada Newspaper

ಕಡೂರು: ಮಾನವೀಯ ಸಂಬಂಧಗಳು ಸಡಿಲಗೊಳ್ಳುತ್ತಿರುವ ಸಂದರ್ಭದಲ್ಲಿ ಅರಿವು, ಆದರ್ಶಗಳನ್ನು ಬೋಧಿಸುವುದರ ಮೂಲಕ ಜಗತ್ತಿಗೆ ಜಾಗೃತಿ ಉಂಟು ಮಾಡುವುದೇ ಗುರುವಿನ ನಿಜವಾದ ಧರ್ಮ ಎಂದು ಬಾಳೆಹೊನ್ನೂರು ರಂಭಾಪುರಿ ಡಾ| ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ತಾಲೂಕಿನ ಹುಲಿಕೆರೆ ದೊಡ್ಡಮಠದ ಜಾತ್ರಾ ಮೈದಾನದಲ್ಲಿ ಬುಧವಾರ ನೂತನ ಗುರುಗಳ ಪಟ್ಟಾಧಿಕಾರ ಮಹೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಅಂತರಂಗ ಬಹಿರಂಗ ಶುದ್ಧಿಗಾಗಿ ಶ್ರಮಿಸುವುದೇ ಎಲ್ಲ ಧರ್ಮಗಳ ಮೂಲ ಗುರಿಯಾಗಿದೆ. ವಿಶ್ವ ಬಂಧುತ್ವ ಸಾರಿದ ವೀರಶೈವ ಧರ್ಮ ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸುತ್ತಾ ಬಂದಿದೆ. ಆಸೆ ಆಮಿಷಗಳಿಲ್ಲದ ಜೀವನ ಶಾಂತಿ ನೆಮ್ಮದಿಗೆ ಮೂಲವಾಗಿದೆ. ಕರ್ತವ್ಯ, ಶಿಸ್ತು, ಶ್ರದ್ಧೆ, ನಿಷ್ಠೆ, ಛಲ ಮನುಷ್ಯನ ಉಜ್ವಲ ಬದುಕಿಗೆ ಅಡಿಪಾಯವಾಗಿರುತ್ತವೆ ಎಂದರು.

ಹುಲಿಕೆರೆ ದೊಡ್ಡಮಠದ ವಿರೂಪಾಕ್ಷ ಶಿವಾಚಾರ್ಯ ಸ್ವಾಮಿಗಳು ಸಕಲ ಸದ್ಭಕ್ತರ ಪ್ರೀತಿ ವಿಶ್ವಾಸಗಳನ್ನು ಗಳಿಸಿಕೊಂಡು ಶ್ರೀ ಮಠದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ತಮ್ಮ ಉತ್ತರಾಧಿಕಾರಿಯನ್ನು ಗುರುತಿಸಿ ಇಂದು ವಿದ್ಯುಕ್ತವಾಗಿ ಪಟ್ಟಾಧಿಕಾರ ಅನುಗ್ರಹಿಸಿರುವುದು ಅತ್ಯಂತ ಸಂತೋಷ ತಂದಿದೆ ಎಂದರು.

ನೂತನ ಶ್ರೀಳಿಗೆ ಪ್ರಾತಃಕಾಲದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಸಂಸ್ಕಾರ ಮಾಡಿ ಷಟ್‌ ಸ್ಥಲ ಬ್ರಹ್ಮೋಪದೇಶ ಮಾಡಿ ಗುರುತ್ವಾಧಿಕಾರ ಅನುಗ್ರಹಿಸಿದ್ದಾರೆ ಎಂದರು. ಶ್ರೀ ರಂಭಾಪುರಿ ಜಗದ್ಗುರುಗಳು ದಂಡ, ಕಮಂಡಲ ಸಮೇತ ಪಂಚ ಮುದ್ರೆಗಳನ್ನು ಕೊಟ್ಟು ಶ್ರೀ ಷ||ಬ್ರ|| ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಎಂಬ ನೂತನ ಅಭಿದಾನದಿಂದ ರೇಷ್ಮೆ ಶಾಲು ಫಲ ಪುಷ್ಪ ಸ್ಮರಣಿಕೆಯಿತ್ತು ಶುಭ ಹಾರೈಸಿದರು.

ಯಡಿಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಧರ್ಮ ಜಾಗೃತಿ ಸಮಾರಂಭ ಉದ್ಘಾಟಿಸಿ, ಗುರು-ಶಿಷ್ಯ ಪರಂಪರೆಯನ್ನು ಭಕ್ತರಿಗೆ ತಿಳಿಸಿದರು. ಹುಲಿಕೆರೆ ದೊಡ್ಡಮಠ ಪುತ್ರವರ್ಗದ ಮಠವಾಗಿದೆ. ಆದ್ದರಿಂದಲೇ ಅವರ ವಂಶಸ್ಥರಲ್ಲಿಯೇ ಗುರುಗಳನ್ನು ಆಯ್ಕೆ ಮಾಡುವ ಪದ್ಧತಿ ಬೆಳೆದು ಬಂದಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್‌.ಡಿ. ತಮ್ಮಯ್ಯ ಮಾತನಾಡಿ, ತಾವು ಶಾಸಕ ಎನ್ನುವುದಕ್ಕಿಂತ ಜನಸೇವಕ ಎಂದು ಕರೆಸಿಕೊಳ್ಳಲು ಇಷ್ಟಪಡುತ್ತೇನೆ. ವೀರಶೈವ ಮಠಗಳ ಕೊಡುಗೆ ಈ ನಾಡಿಗೆ ಅಪಾರವಾಗಿದೆ. ಹುಲಿಕೆರೆ ದೊಡ್ಡ ಮಠದ ಇತಿಹಾಸ ಪರಂಪರೆಯಿಂದ ಬಂದಿದೆ. ನೂತನ ಶ್ರೀಗಳಿಗೆ ಸಹಕಾರ ನೀಡಿ ಮಠದ ಭಕ್ತನಾಗಿ ಕಾರ್ಯನಿರ್ವಹಿಸುವೆ ಎಂದು ಭರವಸೆ ನೀಡಿದರು.

ಹುಲಿಕೆರೆ ಮಠದ ನೂತನ ಶ್ರೀಗಳಾದ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ತಮ್ಮ ಮೊದಲ ಧರ್ಮ ಸಂದೇಶದಲ್ಲಿ ಸಮಾಜದ ಆದರ್ಶ ಉಳಿಸಿ ಬೆಳೆಸಲು ಗುರು ಪೀಠಗಳ ಮಾರ್ಗದರ್ಶನದ ಅವಶ್ಯಕತೆಯಿದೆ ಎಂದರು.

ನೇತೃತ್ವ ವಹಿಸಿದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು, ವೀರಶೈವ ಧರ್ಮದಲ್ಲಿ ಗುರುವಿನ ಪಾತ್ರ ಬಹಳಷ್ಟು ಮಹತ್ವವಾದದ್ದು. ಶ್ರೀ ಮಠದ ಪರಂಪರೆ ಮತ್ತು ಪರಮಾಚಾರ್ಯರ ಆಶೀರ್ವಾದ ಬಲದಿಂದ ಎಲ್ಲಾ ಕಾರ್ಯಗಳು ವಿಜೃಂಭಣೆಯಿಂದ ಜರುಗಿದ್ದು ತಮಗೆ ಸಂತೋಷ ತಂದಿದೆ ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಎಚ್‌.ಸಿ. ಕಲ್ಕರುಡಪ್ಪ, ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಚ್‌.ಎಂ. ಲೋಕೇಶ್‌, ಮಹಡಿ ಮನೆ ಸತೀಶ ಪ್ರಾಸ್ತಾವಿಕ ಮಾತನಾಡಿದರು. ಆಲ್ದೂರಿನ ಬಿ.ಬಿ.
ರೇಣುಕಾರ್ಯ ಉಪನ್ಯಾಸ ನೀಡಿದರು.

ಹುಣಸಘಟ್ಟ, ಬಿಳಕಿ, ಹೊನ್ನವಳ್ಳಿ, ಶಂಕರದೇವರಮಠ, ಕೆ.ಬಿದರೆ, ಬೀರೂರು, ತಾವರೆಕೆರೆ, ತರೀಕೆರೆ, ಹಣ್ಣೆ, ಬೇರುಗಂಡಿಮಠ,
ನಂದಿಪುರ, ಮಾದಿಹಳ್ಳಿ, ಫಲಹಾರಸ್ವಾಮಿ ಮಠ ಮತ್ತು ಕರಡಿಗವಿಮಠ ಶ್ರೀಗಳು ಉಪಸ್ಥಿತರಿದ್ದರು. ನೂತನ ಶ್ರೀಗಳ ಮಾತೃ-ಪಿತೃಗಳಾದ ಸದಾಶಿವಸ್ವಾಮಿ ಮತ್ತು ಜಯಮ್ಮ ದಂಪತಿಯನ್ನು ರಂಭಾಪುರಿ ಶ್ರೀಗಳು ತ್ಯಾಗ ಮಯಿಗಳೆಂದು ಬಣ್ಣಿಸಿ ಸನ್ಮಾನಿಸಿದರು. ನಿತ್ಯ ಪಿ. ಮತ್ತು ಎಸ್‌.ಕೃತಿ ಇವರಿಂದ ಭರತ ನಾಟ್ಯ ಜರುಗಿತು. ನಿವೃತ್ತ ಮುಖ್ಯ ಶಿಕ್ಷಕ ಎಸ್‌.ಎಂ. ಮಲ್ಲೇಶಪ್ಪ, ಶಿಕ್ಷಕ ಬಿ.ಜೆ. ಜಗದೀಶ ನಿರೂಪಿಸಿದರು. ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಮಾರಂಭವು ನಡೆದು ದಾಸೋಹ ಕಾರ್ಯವು ನೆರವೇರಿತು.

ಟಾಪ್ ನ್ಯೂಸ್

1-saasd

Tamil Nadu : ನೀಲಗಿರಿಯಲ್ಲಿ ಪ್ರವಾಸಿಗರ ಬಸ್ ಕಮರಿಗೆ ಬಿದ್ದು 8 ಮಂದಿ ಮೃತ್ಯು

1-sasa

Asian Games ಅಭಿಯಾನ ದುರಂತದಲ್ಲಿ ಕೊನೆ; ಜಾರಿ ಬಿದ್ದ ಮೀರಾಬಾಯಿ ಚಾನು

accident

Holehonnuru ; ಭೀಕರ ರಸ್ತೆ ಅಪಘಾತದಲ್ಲಿ ಮೂವರ ದುರ್ಮರಣ

1-asdasd

Asian Games ಪುರುಷರ ಹಾಕಿ: 10-2ರಿಂದ ಪಾಕಿಸ್ಥಾನವನ್ನು ಮಣಿಸಿದ ಭಾರತ

1-dadas

Kushtagi : ವೈಯಕ್ತಿಕ ಸಿಟ್ಟಿಗೆ ಸ್ನೇಹಿತನ ಹತ್ಯೆಗೈದ ಇಬ್ಬರ ಬಂಧನ

Shamanuru Shivashankarappa

Lingayat ಅಧಿಕಾರಿಗಳಿಗೆ ಅನ್ಯಾಯ ಹೇಳಿಕೆಗೆ ಬದ್ಧ: ಶಾಮನೂರು ಪುನರುಚ್ಚಾರ

1-sasa-sa

Hirekerur ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rrwrwer

Kottigehara; ಅಪರಿಚಿತ ಜಿಪ್ಸಿ ಢಿಕ್ಕಿ:ವ್ಯಕ್ತಿಗೆ ಗಂಭೀರ ಗಾಯ

1rrrer

Charmadi Ghat ; ಬೃಹತ್ ಮರ ಬಿದ್ದು ಮೂರು ಗಂಟೆ ಸಂಚಾರ ಸ್ಥಗಿತ

1-sasadsa

Chikkamagaluru: ದ್ವೇಷದಿಂದ ಒಂದು ಎಕರೆ ಅಡಿಕೆ ತೋಟ ಕಡಿದು ನಾಶ

4-kottigehara

Kottigehara: ಧಾರಾಕಾರ ಮಳೆ, ಹೈರಾಣಾದ ರೈತರು

1-saddasdad

Sringeri; ತುಂಗಾ ನದಿಯ ನಡುಗಡ್ಡೆಯಲ್ಲಿ ಸಿಲುಕಿದ ಇಬ್ಬರ ರಕ್ಷಣೆ

MUST WATCH

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

ಹೊಸ ಸೇರ್ಪಡೆ

5 eyes

Five Eyes; ಫೈವ್‌ ಐಸ್‌ ಜಾಗತಿಕವಾಗಿ ಮತ್ತೆ ಸದ್ದು  ಮಾಡಿದ ಗುಪ್ತಚರ ಒಕ್ಕೂಟ

beg

Pakistani: ಅರಬ್‌ ರಾಷ್ಟ್ರಗಳಲ್ಲಿ ಪಾಕ್‌ ಭಿಕ್ಷುಕರ ಸಾಮ್ರಾಜ್ಯ!

art of living

Art of Living: ಕಲಾರಾಧನೆಗೆ ಆರ್ಟ್‌ ಆಫ್ ಲಿವಿಂಗ್‌ ಸಾಮರಸ್ಯದ ವೇದಿಕೆ

chandrayaan 3………….

Fraud: ಚಂದ್ರಯಾನ-3 ಹೆಸರಿನಲ್ಲಿ 20 ಕೋಟಿ ರೂ. ವಂಚನೆ!

ny rain

Rain: ದಿಢೀರ್‌ ಪ್ರವಾಹಕ್ಕೆ ನ್ಯೂಯಾರ್ಕ್‌ ತತ್ತರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.