ಕಾಫಿನಾಡಲ್ಲಿ ಬಂದ್‌ಗೆ ಸಿಕ್ತು ಬೆಂಬಲ
Team Udayavani, Dec 6, 2020, 4:15 PM IST
ಚಿಕ್ಕಮಗಳೂರು: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ರಾಜ್ಯ ಸರ್ಕಾರ ತಕ್ಷಣ ರದ್ದುಪಡಿಸಬೇಕೆಂದು ಒತ್ತಾಯಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಶನಿವಾರ ಕರೆದಿದ್ದ ಕರ್ನಾಟಕ ರಾಜ್ಯ ಬಂದ್‌ಗೆ ಕಾಫಿನಾಡಿನಲ್ಲಿ ಭಾಗಶಃ ಬೆಂಬಲ ವ್ಯಕ್ತವಾಯಿತು.
ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಬಂದ್‌ಗೆ ಬೆಂಬಲ ವ್ಯಕ್ತವಾದರೆ, ಕೆಲವು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆಗೆ ಸೀಮಿತವಾಗಿದ್ದು, ವ್ಯಾಪಾರ ವಹಿವಾಟು, ಜನಸಂಚಾರ ಎಂದಿನಂತಿತ್ತು. ಶನಿವಾರ ಬೆಳಗ್ಗೆಯಿಂದಲೇ ವಿವಿಧ ಕನ್ನಡಪರ ಸಂಘಟನೆಯ ನೂರಾರು ಕಾರ್ಯಕರ್ತರು ರಸ್ತೆಗಿಳಿದು ನಗರದಾದ್ಯಂತ ತಂಡೋಪ ತಂಡವಾಗಿ ಸಂಚರಿಸಿ ಬಂದ್‌ಗೆ ಸಾರ್ವಜನಿಕರು ಬೆಂಬಲ ನೀಡುವಂತೆ ಮನವಿ ಮಾಡಿ ತೆರೆದಿದ್ದ ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡಿಸಿದ ದೃಶ್ಯಗಳು ಕಂಡು ಬಂದವು.
ನಗರದ ಎಂ.ಜಿ. ರಸ್ತೆ, ಐ.ಜಿ. ರಸ್ತೆ, ಮಾರ್ಕೆಟ್ ರಸ್ತೆ, ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡಿ ಬೆಂಬಲ ಸೂಚಿಸಿದರು. ಆಟೋ, ಟ್ಯಾಕ್ಸಿ, ಖಾಸಗಿ ಬಸ್, ಸರಕು ಸಾಗಣೆ, ಲಾರಿ ಸಂಚಾರ ಸಂಪೂರ್ಣ ಸ್ತಬ್ಧವಾಗಿತ್ತು. ಪೆಟ್ರೋಲ್ ಬಂಕ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಹೊಟೇಲ್‌ಗಳವರು ಬಾಗಿಲು ಮುಚ್ಚಿ ಬಂದ್‌ಗೆ ಬೆಂಬಲ ನೀಡಿದರು.
ಹೊರ ಜಿಲ್ಲೆಗೆ ಹೋಗುವ ಕೆಎಸ್‌ಆರ್‌ಟಿಸಿ ಬಸ್ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ನಗರದ ಸುತ್ತಮುತ್ತಲ ಗ್ರಾಮಗಳಿಗೆ ತೆರಳುವ ಕೆಎಸ್‌ಆರ್‌ಟಿಸಿಬಸ್‌ಗಳು ಅತ್ಯಂತ ವಿರಳವಾಗಿ ಸಂಚರಿಸಿದವು. ಅಲ್ಲೊಂದು ಇಲ್ಲೊಂದು ಆಟೋಗಳು ಸಂಚರಿಸಿದವು. ಗ್ರಾಹಕರಿಲ್ಲದೇ ಖಾಲಿ ಹೊಡೆಯುತ್ತಿದ್ದ ದೃಶ್ಯ ಕಂಡು ಬಂದವು.
ಆಟೋ, ಟ್ಯಾಕ್ಸಿ ಸಂಚಾರ ಇಲ್ಲದಿರುವುದರಿಂದ ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಆಗಮಿಸಿದವರು ಪರದಾಡಬೇಕಾಯಿತು. ಅಲ್ಲೊಂದು ಇಲ್ಲೊಂದು ಆಟೋ ಸಂಚಾರ ಇದ್ದರೂ ಕಾರ್ಯಕರ್ತರು ಆಟೋಗಳನ್ನು ತಡೆದುಬಂದ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡು ವಾಪಸ್ ಕಳಿಸಿದರು. ಇನ್ನು ಖಾಸಗಿ ವಾಹನ ಸಂಚಾರ ಎಂದಿಗಿಂತ ಕಡಿಮೆ ಸಂಖ್ಯೆಯಲ್ಲಿತ್ತು.
ಮಧ್ಯಾಹ್ನದ ವೇಳೆಗೆ ನಗರದ ಬಹುತೇಕ ಅಂಗಡಿ- ಮುಂಗಟ್ಟುಗಳನ್ನು ತೆರೆದ ಮಾಲೀಕರು ಎಂದಿನಂತೆ ವ್ಯಾಪಾರ- ವಹಿವಾಟು ನಡೆಸಿದರು. ವಾಹನ ಸಂಚಾರ, ಜನಸಂಚಾರ ಎಂದಿನಂತೆ ಮುಂದುವರಿಯಿತು. ಸರ್ಕಾರಿ ಕಚೇರಿ, ಮೆಡಿಕಲ್ ಶಾಪ್, ಆಸ್ಪತ್ರೆ, ಬ್ಯಾಂಕ್ ಸೇರಿದಂತೆಸರ್ಕಾರಿ ಕಚೇರಿಗಳು ಎಂದಿನಂತೆ ತೆರೆದಿದ್ದರೂ ಬಂದ್‌ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಿಂದ ಹೆಚ್ಚಿನ ಸಂಖ್ಯೆಯಜನರು ನಗರದತ್ತ ಮುಖ ಮಾಡದಿದ್ದರಿಂದ ಸರ್ಕಾರಿ ಕಚೇರಿಗಳಲ್ಲಿ ಜನರ ಸಂಖ್ಯೆ ವಿರಳವಾಗಿತ್ತು. ಒಟ್ಟಾರೆ ವಿವಿಧ ಕನ್ನಡ ಪರ ಸಂಘಟನೆಗಳು ಕರೆದಿದ್ದ ರಾಜ್ಯ ಬಂದ್‌ಗೆ ಜಿಲ್ಲೆಯಲ್ಲಿ ಭಾಗಶಃ ಬೆಂಬಲ ವ್ಯಕ್ತವಾಯಿತು.
ಪೊಲೀಸ್ ಬಿಗಿ ಬಂದೋಬಸ್ತ್: ಬಂದ್ ಹಿನ್ನೆಲೆಯಲ್ಲಿಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಪೊಲೀಸ್ ಇಲಾಖೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿತ್ತು. ನಗರದ ಹನುಮಂತಪ್ಪ ವೃತ್ತ, ಆಜಾದ್ ಪಾರ್ಕ್ ವೃತ್ತ ಸೇರಿದಂತೆ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಬಂದೋಬಸ್ತ್ ಕೈಗೊಳ್ಳಲಾಯಿತು.? ಮಧ್ಯಾಹ್ನದ ವೇಳೆಗೆ ಬಹುತೇಕ ಅಂಗಡಿ- ಮುಂಗಟ್ಟುಗಳು ತೆರೆದುಕೊಂಡವು!
ಶನಿವಾರ ಬೆಳಗ್ಗೆಯಿಂದ ನಗರದ ಐಜಿ ರಸ್ತೆ, ಎಂಜಿ ರಸ್ತೆ, ಮಾರ್ಕೆ ಟ್ ರಸ್ತೆ ಸೇರಿದಂತೆ ಎಲ್ಲಾ ರಸ್ತೆಗಳಲ್ಲಿನ ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಮಧ್ಯಾಹ್ನ 12 ಗಂಟೆಗೆ ವಿವಿಧ ಕನ್ನಡ ಪರ ಸಂಘಟನೆ ಕಾರ್ಯಕರ್ತರುಹನುಮಂತಪ್ಪ ವೃತ್ತದಿಂದ ಆಜಾದ್ ಪಾರ್ಕ್ ವೃತ್ತದ ವರೆಗೂ ಪ್ರತಿಭಟನೆ ಮೆರವಣಿಗೆ ಸಾಗುತ್ತಿದ್ದಂತೆ ಮುಚ್ಚಿದ್ದ ಅಂಗಡಿ- ಮುಂಗಟ್ಟುಗಳು ತೆರೆದುಕೊಂಡವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುತಾಲಿಕ್ಗೆ ಸಹಕರಿಸದಿದ್ದರೆ ಚಿಕ್ಕಮಗಳೂರಿನಲ್ಲೂ ಸ್ಪರ್ಧೆ
ಸಿ.ಟಿ ರವಿ ವಿರುದ್ಧ ಸ್ಪರ್ಧಿಸಿದರೆ ಅಡಿಕೆ ತೋಟ ಮಾರಿ 1 ಕೋಟಿ ರೂ ಕೊಡುತ್ತೇನೆ: ಸಿದ್ದರಾಮಯ್ಯಗೆ ಆಹ್ವಾನ
ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ
ಬೆಂಗಳೂರಿನಲ್ಲಿ ಕೊಲೆ ಚಾರ್ಮಾಡಿಯಲ್ಲಿ ಹೆಣ: ಯುವಕನ ಕೊಲೆ ಪ್ರಕರಣ ಭೇದಿಸಿದ ಪೊಲೀಸರು
ಮೋದಿ ನೂರು- ಮುನ್ನೂರು ವರ್ಷದ ಬಗ್ಗೆ ಯೋಚಿಸಿ ಬಜೆಟ್ ಮಾಡಿದ್ದಾರೆ: ಸಿ.ಟಿ ರವಿ