ಚಿಕ್ಕಮಗಳೂರು: ಆನೆ ಕಾಟ ತಾಳಲಾರದೆ ಮೇಲಾಧಿಕಾರಿಗೆ ಪತ್ರ ಬರೆದ ಶಾಸಕ ಟಿ.ಡಿ. ರಾಜೇಗೌಡ
Team Udayavani, Jul 27, 2022, 2:04 PM IST
ಚಿಕ್ಕಮಗಳೂರು: ಆನೆ ಕಾಟ ತಾಳಲಾರದೆ, ಆನೆಯನ್ನು ಸೆರೆ ಹಿಡಿಯಲು ಅನಮುತಿ ಕೋರಿ ಶಾಸಕರೊಬ್ಬರು ಮೇಲಾಧಿಕಾರಿಗೆ ಪತ್ರ ಬರೆದಿದ್ದಾರೆ.
ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡರಿಂದ ಸರ್ಕಾರಕ್ಕೆ ಪತ್ರ ಬರೆದಿದ್ದು, ಪತ್ರದಲ್ಲಿ ಕಳೆದ 2 ತಿಂಗಳಿನಿಂದ ಕೊಪ್ಪ ತಾಲೂಕಿನ ಚೌಡಿಕಟ್ಟೆ ಸುತ್ತಮುತ್ತ ದಾಂಧಲೆ ಎಬ್ಬಿಸುತ್ತಿದೆ. ಇದರಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ರೈತರ ಬೆಳೆ, ಕಾಫಿ, ತೆಂಗಿನ ಮರಗಳನ್ನು ನಾಶಗೊಳಿಸುತ್ತಿದೆ. ಜನ ಭಯ ಭೀತಿಯಿಂದ ಕೆಲಸಕ್ಕೆ ಹೋಗುತ್ತಿಲ್ಲ. ಆನೆ ಸ್ಥಳಾಂತರಿಸದಿದ್ರೆ ಮುಂದಾಗುವ ಅನಾಹುತಕ್ಕೆ ಸರ್ಕಾರವೇ ನೇರ ಹೊಣೆ ಎಂದು ಹೇಳಿ, ಅರಣ್ಯ ಅಧಿಕಾರಿಗಳು ಆನೆಯನ್ನು ಕಾಡಿಗೆ ಓಡಿಸುವ ಪ್ರಯತ್ನ ಮಾಡಿದರೂ, ಆನೆ ಮತ್ತೆ ಊರಿನೊಳಗೆ ಬರುತ್ತಿದೆ. ಇದರಿಂದ ಶಾಸಕರು ಸರ್ಕಾರಕ್ಕೆ ಆನೆಯನ್ನು ಸೆರೆ ಹಿಡಿಯಲು ಪತ್ರದ ಮೂಲಕ ಅನುಮತಿ ಕೋರಿದ್ದಾರೆ.
ಆನೆ ಹಾವಳಿಯಿಂದ ಕಂಗೆಟ್ಟ ಶಾಸಕರು ಬೆಂಗಳೂರಿನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.