ಚಿಕ್ಕಮಗಳೂರು ಜಿಲ್ಲೆಯಲ್ಲಿ 500 ಗಡಿ ದಾಟಿದ ಕೋವಿಡ್ ಪ್ರಕರಣ


Team Udayavani, Apr 30, 2021, 8:35 PM IST

ghfghty

ಚಿಕ್ಕಮಗಳೂರು: ಕೋವಿಡ್-19ರ ಎರಡನೇ ಅಲೆ ತೀವ್ರಗತಿಯಲ್ಲಿ ಹಬ್ಬುತ್ತಿದ್ದು, ಶುಕ್ರ ವಾರ ಒಂದೇ ದಿನ ಜಿಲ್ಲಾದ್ಯಂತ 542 ಸೋಂಕಿತರು ಪತ್ತೆಯಾಗುವುದರೊಂದಿಗೆ ಇಡೀ ಜಿಲ್ಲೆಯೇ ಬೆಚ್ಚಿಬೀಳುವಂತೆ ಮಾಡಿದೆ.

ಜಿಲ್ಲೆಯಲ್ಲಿ ಸೋಂಕು ಕಾಣಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ 500 ಗಡಿಯನ್ನು ದಾಟಿದ್ದು, ಸೋಂಕು ಸಮುದಾಯಕ್ಕೆ ವ್ಯಾಪಿಸಿರುವ  ಶಂಕೆಯುಂಟಾಗಿದೆ. ಸೋಂಕಿನ ಆರ್ಭಟಕ್ಕೆ ಶುಕ್ರವಾರ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ. ಸೋಂಕಿನ ಎರಡನೇ ಅಲೆಗೆ ಕಳೆದ ಕೆಲವೆ ದಿನಗಳಲ್ಲಿ 16 ಜನರನ್ನು ಬಲಿ ಪಡೆದುಕೊಂಡಿದೆ.

ಶುಕ್ರವಾರ ಪತ್ತೆಯಾದ 542 ಸೋಂಕಿತರಲ್ಲಿ 518 ಸೋಂಕಿತರನ್ನು ಹೋಮ್ ಐಸೋ ಲೇಶನ್‍ಗೆ ಒಳಪಡಿಸಲಾಗಿದೆ. 19 ಸೋಂಕಿತರನ್ನು ಕೋವಿಡ್ ಆಸ್ಪತ್ರೆ ಹಾಗೂ 5 ಸೋಂಕಿತರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲೆಯಲ್ಲಿ ಸೋಂಕು ಯಾವ ಮಟ್ಟದಲ್ಲಿ ಹಬ್ಬಲಾರಂಭಿಸಿದೆ ಎಂದರೆ  1ವರ್ಷ ಬಾಲಕಿಯಿಂದ ಹಿಡಿದು 80 ವರ್ಷದ ಒಳಗಿನ ವೃದ್ಧರು, ವೃದ್ಧೆಯರು ಯುವಕರು, ಯುವತಿಯರು, ಮಕ್ಕಳು ಎನ್ನದೇ ಬೆಂಬಿಡದೆ ಕಾಡುತ್ತಿದೆ.

ಶುಕ್ರವಾರ ಕೊಪ್ಪ ತಾಲ್ಲೂಕಿನ 65 ವರ್ಷದ ಮಹಿಳೆ ಹಾಗೂ ಕಡೂರು ತಾಲ್ಲೂಕಿನ 55 ವರ್ಷದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಇವರಿಗೆ ಸೋಂಕು ತಗುಲಿದ್ದು, ನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದು, ಕೋವಿಡ್ ನಿಮಯದಂತೆ ಅಂತ್ಯಕ್ರಿಯೇ ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಜಿಲ್ಲೆಯಲ್ಲಿ ಇದುವರೆಗೂ 18,070 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 15,173 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಸದ್ಯ 2,542 ಸೋಂಕು ಪ್ರಕರಣ ಸಕ್ರೀಯವಾಗಿದ್ದು, ಇಂದು 200 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ 155 ಮಂದಿ ಸೋಂಕಿಗೆ ಉಸಿರು ಚೆಲ್ಲಿದ್ದಾರೆ.

ಟಾಪ್ ನ್ಯೂಸ್

ಪೋರ್ನ್ ಹಬ್ ನಲ್ಲಿ ಗಣಿತ ಪಾಠ ಮಾಡುವ ಟೀಚರ್! ವರ್ಷಕ್ಕೆ 2 ಕೋಟಿ ರೂ. ಸಂಪಾದನೆ

ಪೋರ್ನ್ ಹಬ್ ನಲ್ಲಿ ಗಣಿತ ಪಾಠ ಮಾಡುವ ಟೀಚರ್! ವರ್ಷಕ್ಕೆ 2 ಕೋಟಿ ರೂ. ಸಂಪಾದನೆ

ಸಾಮಾನ್ಯರಿಗಾಗುವ ತೊಂದರೆಗಳ ವಿರುದ್ಧ ಜೈಲಿಗೆ ಹೋಗಲೂ ಸಿದ್ಧ: ಮಾಜಿ ಸಚಿವ ವಿನಯ ಕುಮಾರ್ ಸೊರಕೆ

ಸಾಮಾನ್ಯರಿಗಾಗುವ ತೊಂದರೆಗಳ ವಿರುದ್ಧ ಜೈಲಿಗೆ ಹೋಗಲೂ ಸಿದ್ಧ: ಮಾಜಿ ಸಚಿವ ವಿನಯ ಕುಮಾರ್ ಸೊರಕೆ

22congress

ಅ. 30ಕ್ಕೆ ಗೋವಾಗೆ ರಾಹುಲ್ ಗಾಂಧಿ ಭೇಟಿ

koppala news

ಮಧ್ಯಾಹ್ನದ ಬಿಸಿ ಊಟಕ್ಕಾಗಿ ಒಂದು ಕಿಲೋಮೀಟರ್ ನಡೆದು ಹೋಗುವ ಮಕ್ಕಳು!

ಬಲಿಪಾಡ್ಯಮಿಯಂದು ದೇವಾಲಯಗಳಲ್ಲಿ ಗೋಪೂಜೆ: ಸಚಿವೆ ಶಶಿಕಲಾ ಜೊಲ್ಲೆ

ಬಲಿಪಾಡ್ಯಮಿಯಂದು ದೇವಾಲಯಗಳಲ್ಲಿ ಗೋಪೂಜೆ: ಸಚಿವೆ ಶಶಿಕಲಾ ಜೊಲ್ಲೆ

ಕೋವಿಡ್ 19 ಸೋಂಕು ಹೆಚ್ಚಳ; ಚೀನಾದ 11 ಪ್ರಾಂತ್ಯಗಳಲ್ಲಿ ಮತ್ತೆ ಲಾಕ್ ಡೌನ್ ಜಾರಿ

ಕೋವಿಡ್ 19 ಸೋಂಕು ಹೆಚ್ಚಳ; ಚೀನಾದ 11 ಪ್ರಾಂತ್ಯಗಳಲ್ಲಿ ಮತ್ತೆ ಲಾಕ್ ಡೌನ್ ಜಾರಿ

ಬಿಜೆಪಿ, ಆರ್ ಎಸ್ ಎಸ್ ಸುಳ್ಳನ್ನು ಬಹಿರಂಗಪಡಿಸಲು ಕಾಂಗ್ರೆಸ್ ಒಗ್ಗಟ್ಟು ಮುಖ್ಯ: ಸೋನಿಯಾ

ಬಿಜೆಪಿ, ಆರ್ ಎಸ್ ಎಸ್ ಸುಳ್ಳನ್ನು ಬಹಿರಂಗಪಡಿಸಲು ಕಾಂಗ್ರೆಸ್ ಒಗ್ಗಟ್ಟು ಮುಖ್ಯ: ಸೋನಿಯಾ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಲಿಪಾಡ್ಯಮಿಯಂದು ದೇವಾಲಯಗಳಲ್ಲಿ ಗೋಪೂಜೆ: ಸಚಿವೆ ಶಶಿಕಲಾ ಜೊಲ್ಲೆ

ಬಲಿಪಾಡ್ಯಮಿಯಂದು ದೇವಾಲಯಗಳಲ್ಲಿ ಗೋಪೂಜೆ: ಸಚಿವೆ ಶಶಿಕಲಾ ಜೊಲ್ಲೆ

siddaramaiah

ಉಪಚುನಾವಣೆಯಲ್ಲಿ ಮೈಮರೆತ ಸರ್ಕಾರ ರೈತರನ್ನು ಮರೆತಿದೆ: ಸಿದ್ದರಾಮಯ್ಯ

vidhana soudha

‘ಅನುಗ್ರಹ ಯೋಜನೆ’ ಮುಂದುವರಿಸಲು ಸರ್ಕಾರದ ಆದೇಶ

ಕಾಂಗ್ರೆಸ್ ಭಯೋತ್ಪಾದಕರನ್ನು ಬೆಂಬಲಿಸುವ ಪಕ್ಷ: ಸಿ.ಟಿ.ರವಿ ವಾಗ್ದಾಳಿ

ಕಾಂಗ್ರೆಸ್ ಭಯೋತ್ಪಾದಕರನ್ನು ಬೆಂಬಲಿಸುವ ಪಕ್ಷ: ಸಿ.ಟಿ.ರವಿ ವಾಗ್ದಾಳಿ

6train

ಬಿರುಕು ಬಿಟ್ಟ ರೈಲ್ವೆ ಹಳಿ: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಭಾರೀ ದುರಂತ!

MUST WATCH

udayavani youtube

ಮೊಸಳೆ ಬಾಯಿಯಿಂದ ಬಾಲಕನ ರಕ್ಷಣಾ ಕಾರ್ಯಾಚರಣೆ ಹೇಗೆ ನಡೆಯಿತು ನೋಡಿ

udayavani youtube

ದಾಂಡೇಲಿ :ಕಳೆದ ಎರಡು ದಿನಗಳಿಂದ ಬಾಲಕನನ್ನು ಬಾಯಲ್ಲಿಟ್ಟುಕೊಂಡೇ ಓಡಾಡುತ್ತಿತ್ತು ಮೊಸಳೆ

udayavani youtube

ಎಡೆಬಿಡದೆ ಸುರಿದ ಮಳೆಗೆ ಜಲಾವೃತಗೊಂಡ ಮನೆಗಳು

udayavani youtube

ಮಂಗಳೂರು: ಬಲೆಗೆ ಬಿತ್ತು ಭಾರೀ ಗಾತ್ರದ ಶಾರ್ಕ್ ಮೀನು

udayavani youtube

ಪತ್ತೆಯಾಗದ ಬಾಲಕನ ದೇಹ : ಕಾಳಿ ನದಿಯಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ

ಹೊಸ ಸೇರ್ಪಡೆ

26sugar

ಘಟಪ್ರಭಾ ಶುಗರ್ಸ್‌ನಿಂದ ಕಬ್ಬಿಗೆ 2700 ರೂ. ದರ ಘೋಷಣೆ

goa news

ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಹಿನ್ನೆಲೆ: ಸ್ವಯಂಪೂರ್ಣ ಯುವಾ ಕಾರ್ಯಕ್ರಮ

25protest

ಎಂಇಎಸ್‌ ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರದ ನಿಂದನೆ

ಚಿಗ್ಗಾವಿ ಗ್ರಾಮದಲ್ಲಿ ಹಣ-ಆಸ್ತಿಗಾಗಿ ತಂದೆಯಿಂದಲೇ ಮಗನಿಗೆ ಹಿಂಸೆ

ಚಿಗ್ಗಾವಿ ಗ್ರಾಮದಲ್ಲಿ ಹಣ-ಆಸ್ತಿಗಾಗಿ ತಂದೆಯಿಂದಲೇ ಮಗನಿಗೆ ಹಿಂಸೆ

15 ವರ್ಷಗಳಿಂದ ರಾಮನ ಪರಿವಾರ ಅನಾಥ 

15 ವರ್ಷಗಳಿಂದ ರಾಮನ ಪರಿವಾರ ಅನಾಥ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.