
9 ಗ್ರಾಪಂ; 208 ಅಭ್ಯರ್ಥಿಗಳು ಕಣದಲ್ಲಿ
Team Udayavani, Dec 21, 2020, 6:41 PM IST

ಶೃಂಗೇರಿ: ಶೃಂಗೇರಿ ತಾಲೂಕು ಕೇವಲ 9 ಗ್ರಾಪಂ ಒಳಗೊಂಡ ಚಿಕ್ಕ ತಾಲೂಕಾದರೂ ಇಲ್ಲಿ ಸ್ಪರ್ಧಿಗಳಿಗೇನು ಕಡಿಮೆ ಇಲ್ಲ. 9 ಗ್ರಾಪಂನಲ್ಲಿ 86 ಸ್ಥಾನಗಳಿಗೆ 208 ಅಭ್ಯರ್ಥಿಗಳು ಕಣದಲ್ಲಿ ಉಳಿಯುವ ಮೂಲಕ ಮತದಾರರ ಹುಬ್ಬೇರಿಸಿದ್ದು ಗ್ರಾಪಂ ಚುನಾವಣೆಗೆ ರಣಕಹಳೆ ಮೊಳಗಿದೆ.
ಅಡ್ಡಗದ್ದೆ ಗ್ರಾಪಂ: ಇಲ್ಲಿ 9 ಸ್ಥಾನಕ್ಕೆ 20 ಮಂದಿ ಕಣದಲ್ಲಿದ್ದಾರೆ. ಇಲ್ಲಿ ಕಳೆದ ಬಾರಿಬಿಜೆಪಿ ಬೆಂಬಲಿತ ಐವರು ಸದಸ್ಯರು ಕಾಂಗ್ರೆಸ್ ಬೆಂಬಲಿತ ನಾಲ್ವರುಸದಸ್ಯರು ಆಯ್ಕೆಯಾಗಿದ್ದರು. ಬಿಜೆಪಿಯ ಕೆ.ಡಿ. ಸುರೇಶ್ ಮತ್ತು ಮಹಾಲಕ್ಷ್ಮೀ ಅಧ್ಯಕ್ಷಹಾಗೂ ಉಪಾಧ್ಯಕ್ಷರಾಗಿದ್ದರು.ಈ ಬಾರಿಯೂ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತರ ನಡುವೆಯೇ ನೇರ ಹಣಾಹಣಿ ನಡೆಯಲಿದೆ.
ಬೇಗಾರು ಗ್ರಾಪಂ: ಇಲ್ಲಿ ಕೂಡ 9 ಸ್ಥಾನಕ್ಕೆ 19 ಮಂದಿ ಅಭ್ಯರ್ಥಿಗಳುಕಣದಲ್ಲಿದ್ದಾರೆ. ಕಳೆದ ಬಾರಿ ಇಲ್ಲಿ ಐವರುಕಾಂಗ್ರೆಸ್ ಬೆಂಬಲಿಗರು, ನಾಲ್ವರು ಬಿಜೆಪಿಬೆಂಬಲಿತರು ಆಯ್ಕೆಯಾಗಿದ್ದರು. ಈಬಾರಿಯೂ ಇಲ್ಲಿ ಬಿರುಸಿನ ಮತಬೇಟೆ ಕಾರ್ಯ ನಡೆಯುತ್ತಿದೆ.
ಧರೆಕೊಪ್ಪ ಗ್ರಾಪಂ: ಕಳೆದ ಬಾರಿ ಇಲ್ಲಿ ನಾಲ್ವರೂ ಬಿಜೆಪಿ ಹಾಗೂ ಎರಡು ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದರು.ಒಟ್ಟು 6 ಸ್ಥಾನಗಳನ್ನು ಹೊಂದಿದ್ದು ಈ ಬಾರಿ 15 ಅಭ್ಯರ್ಥಿಗಳು ಇಲ್ಲಿ ಸ್ಪ ರ್ಧಿಸುತ್ತಿದ್ದಾರೆ. ಕಳೆದ ಬಾರಿ ಬಿಜೆಪಿಯಚೇತನ್ ಹೆಗ್ಡೆ ಮತ್ತು ವಿಶ್ವನಾಥ ಹೆಗ್ಡೆ ಪಕ್ಷದ ಒಡಂಬಡಿಕೆಯಂತೆ ಒಂದೊಂದು ಅವಧಿಗೆ ಅಧ್ಯಕ್ಷರಾಗಿದ್ದರು.
ಮರ್ಕಲ್ ಗ್ರಾಪಂ: ಇಲ್ಲಿ 12 ಸ್ಥಾನಕ್ಕೆ 30 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಕಳೆದ ಬಾರಿ ಬಿಜೆಪಿ ಬೆಂಬಲಿಗರು 10 ಮಂದಿ ಆಯ್ಕೆಯಾಗಿದ್ದರು. ಕಾಂಗ್ರೆಸ್ ಬೆಂಬಲಿಗರು ಕೇವಲ ಇಬ್ಬರು ಆಯ್ಕೆಯಾಗಿದ್ದರು.
ಮೆಣಸೆ ಗ್ರಾಪಂ: ಇಲ್ಲಿನ ಗ್ರಾಪಂಗೆ 16 ಸ್ಥಾನವಿದ್ದು 37 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಳೆದ ಬಾರಿ ಇಲ್ಲಿಬಿಜೆಪಿ ಬೆಂಬಲಿಗರು 11 ಅಭ್ಯರ್ಥಿಗಳು ಜಯಶೀಲರಾಗಿದ್ದರು. 3 ಕಾಂಗ್ರೆಸ್, 1 ಪಕ್ಷೇತರ, 1 ಜೆಡಿಎಸ್ ಬೆಂಬಲಿಗರುಜಯಗಳಿಸಿದ್ದರು. ಈ ಬಾರಿಯೂ ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಬಿರುಸಿನ ಪೈಪೋಟಿ ಇದೆ.
ವಿದ್ಯಾರಣ್ಯಪುರ ಗ್ರಾಪಂ: ಇಲ್ಲಿ 15 ಸ್ಥಾನಗಳಿದ್ದು 41 ಮಂದಿ ಕಣದಲ್ಲಿದ್ದಾರೆ. ಕಳೆದ ಬಾರಿ9 ಕಾಂಗ್ರೆಸ್ ಬೆಂಬಲಿತರು,4 ಬಿಜೆಪಿ ಬೆಂಬಲಿತರು, ಇಬ್ಬರು ಪಕ್ಷೇತರರುಆಯ್ಕೆಯಾಗಿದ್ದರು. ಕಳೆದ ಬಾರಿ ಅಧ್ಯಕ್ಷರಾಗಿದ್ದ ರಾಜೇಶ್ ಶೆಟ್ಟಿ ಈ ಬಾರಿಯೂ ಸ್ಪ ರ್ಧಿಸುತ್ತಿದ್ದು ಹಾಗೆಯೇಸೌಭಾಗ್ಯ ಗೋಪಾಲನ್, ಸ್ವಾಮಿ, ಸೇರಿದಂತೆ ಬಹುತೇಕ ಹಳೆ ಮುಖಗಳೇ ಸ್ಪರ್ಧಿಸುತ್ತಿದ್ದಾರೆ.
ನೆಮ್ಮಾರು ಗ್ರಾಪಂ: ಇಲ್ಲಿ 7 ಸ್ಥಾನಕ್ಕೆ 19 ಮಂದಿ ಸ್ಪರ್ಧಿಸುತ್ತಿದ್ದಾರೆ. ಕಳೆದ ಬಾರಿ 4 ರಲ್ಲಿ ಕಾಂಗ್ರೆಸ್ ಬೆಂಬಲಿತರು, 3 ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದರು.
ಕೂತಗೋಡು ಗ್ರಾಪಂ: ಇಲ್ಲಿಯೂ 7 ಸ್ಥಾನವಿದ್ದು 16 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಕಳೆದ ಬಾರಿ ಇಲ್ಲಿ 5ಕಾಂಗ್ರೆಸ್ ಬೆಂಬಲಿತರು, 1 ಬಿಜೆಪಿ ಬೆಂಬಲಿತರು ಹಾಗೂ 1 ಪಕ್ಷೇತರಅಭ್ಯರ್ಥಿ ಜಯಶೀಲರಾಗಿದ್ದರು.
ಕೆರೆ ಗ್ರಾಪಂ: ತಾಲೂಕಿನಲ್ಲಿ ಅತ್ಯಂತ ಸಣ್ಣ ಗ್ರಾಪಂ ಆಗಿದ್ದು ಕೇವಲ 5 ಸ್ಥಾನ ಹೊಂದಿದೆ. ಇಲ್ಲಿ 11 ಜನ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಕಳೆದ ಬಾರಿ ಇಲ್ಲಿ 5 ಸ್ಥಾನಕ್ಕೆ 5 ಸ್ಥಾನವೂ ಬಿಜೆಪಿ ಬೆಂಬಲಿತರ ಪಾಲಾಗಿತ್ತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kottigehara: ಅಕ್ರಮ ಭೂ ಕಬಳಿಕೆ ತೆರವುಗೊಳಿಸದ ಕಂದಾಯ ಇಲಾಖೆ ವಿರುದ್ದ ಪ್ರತಿಭಟನೆ

Chikkamagaluru; ವ್ಯಕ್ತಿಯ ಮೇಲೆ ಲಾಂಗ್ ಬೀಸಿದ ಯುವಕ

KSRTC ಕೆಟ್ಟು ನಿಂತು ಪರದಾಡಿದ ಪ್ರಯಾಣಿಕರು: ನೆರವಿಗೆ ಬಂದ ಶಾಸಕಿ ನಯನಾ ಮೋಟಮ್ಮ

Balehonnur;ತಾಲೂಕು ವೈದ್ಯಾಧಿಕಾರಿಗೆ ಹಿಗ್ಗಾಮುಗ್ಗಾ ಥಳಿತ: Video Viral

Kadur: ಪಟ್ಟಣದಲ್ಲಿ ವಿವಿಧ ರೂಪಗಳಲ್ಲಿ ಗಣೇಶನ ಪ್ರತಿಷ್ಠಾಪನೆ
MUST WATCH
ಹೊಸ ಸೇರ್ಪಡೆ

NDA ಗೆ ಜೆಡಿಎಸ್ ಪಕ್ಷವನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದ ಶಾ, ನಡ್ಡಾ

Gokarna; ಸೆ. 26,27,28 ರಂದು ಪ್ರಧಾನಿ ಮೋದಿ ಹೆಸರಲ್ಲಿ ಮಹಾರುದ್ರಯಾಗ

Explainer:ಕ್ಷೇತ್ರ ಪುನರ್ ವಿಂಗಡಣೆಯಾದ್ರೆ ತಮಿಳುನಾಡು 8, ಕೇರಳಕ್ಕೆ 8ಲೋಕಸಭಾ ಸ್ಥಾನ ನಷ್ಟ

J&K; ಗೃಹಬಂಧನದಿಂದ ಬಿಡುಗಡೆ: ಕಣ್ಣೀರಿಟ್ಟ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಮಿರ್ವೈಜ್

BJP ಸಂಸದನ ವಿವಾದ ; ಡ್ಯಾನಿಶ್ ಅಲಿ ವಿರುದ್ಧ ಅಸಂಸದೀಯ ಪದಗಳ ಬಳಕೆ