
ಹಿಂದುತ್ವಕ್ಕೆ ರಾಜ್ಯ ಸರಕಾರ ಬದ್ಧ: ಸುನಿಲ್ ಕುಮಾರ್
Team Udayavani, Dec 7, 2022, 11:16 PM IST

ಚಿಕ್ಕಮಗಳೂರು: ರಾಜ್ಯ ಸರಕಾರ ಹಿಂದುತ್ವಕ್ಕೆ ಬದ್ಧವಾಗಿದ್ದು, ಹಿಂದೂಗಳ ಭಾವನೆಗೆ ತಕ್ಕಂತೆ ಕೆಲಸ ಮಾಡುತ್ತಿದೆ ಎಂದು ಕನ್ನಡ ಸಂಸ್ಕೃತಿ ಮತ್ತು ಇಂಧನ ಇಲಾಖೆ ಸಚಿವ ಸುನಿಲ್ ಕುಮಾರ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ದತ್ತಾತ್ರೇಯರ ಪಾದುಕೆಗಳ ಪೂಜೆಗೆ ಹಿಂದೂ ಅರ್ಚಕರ ನೇಮಕ ಮಾಡಬೇಕು. ವರ್ಷಪೂರ್ತಿ ಪೂಜೆ ನಡೆಯಬೇಕು. ತ್ರಿಕಾಲ ಪೂಜೆ ನಡೆಯಬೇಕು ಎನ್ನುವುದು ಹಿಂದೂ ಸಂಘಟನೆ ಸೇರಿದಂತೆ ನಮ್ಮೆಲ್ಲರ ಹಲವು ವರ್ಷಗಳ ಬೇಡಿಕೆಯಾಗಿತ್ತು. ಬಿಜೆಪಿ ಸರಕಾರ ಹಿಂದೂ ಅರ್ಚಕರ ನೇಮಕಾತಿ ಮಾಡುವ ಮೂಲಕ ಲಕ್ಷಾಂತರ ಹಿಂದೂಗಳ ಮನಸ್ಸಿನ ಭಾವನೆ ಈಡೇರಿಸುವ ಪ್ರಯತ್ನ ಮಾಡಿದೆ. ಹಿಂದೂ ಭಾವನೆಗಳ ಬೇಡಿಕೆ ಈಡೇರಿಸಲು ರಾಜ್ಯ ಸರಕಾರ ಬದ್ಧವಾಗಿದೆ. ಹಂತ ಹಂತವಾಗಿ ಪೂರ್ಣಾವಧಿ ಅರ್ಚಕರ ನೇಮಕವಾಗಲಿದೆ. ಯಾರೋ ವಿರೋಧ ಮಾಡುತ್ತಾರೆಂದು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ, ಮುಜರಾಯಿ ದೇವಸ್ಥಾನದಲ್ಲಿ ನಂದಾ ದೀಪ ಬೆಳಗಬೇಕು ಎಂದು ಹೇಳಿದರು.
ಗುಜರಾತ್ ಚುನಾವಣೆ ಫಲಿತಾಂಶದ ಅನಂತರ ರಾಜ್ಯದಲ್ಲಿ ಹೊಸ ಬದಲಾವಣೆ ಆರಂಭವಾಗಲಿದೆ. ಹಿಮಾಚಲ ಪ್ರದೇಶ ಮತ್ತು ಗುಜರಾತ್‌ನಲ್ಲಿ ಗೆಲುವು ಸಾಧಿಸುತ್ತೇವೆ. ಅದೇ ಗೆಲುವು ಕರ್ನಾಟಕದಲ್ಲೂ ಮುಂದುವರೆಯುತ್ತದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ಗೆ ಟೀಕೆಗಳು ಬಿಟ್ಟರೆ ಒಳ್ಳೆಯ ಸಂಗತಿಗಳು ನೆನಪಿಗೆ ಬರುವುದಿಲ್ಲ. ಕೆಟ್ಟ ಸಂಗತಿಗನ್ನೇ ಅವರು ಉಲ್ಲೇಖ ಮಾಡುತ್ತಿದ್ದಾರೆ ಎಂದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

14 ವರ್ಷದ ಕೆಲಸದ ಅವಧಿಯಲ್ಲಿ 4,512 ಬಾರಿ ಸಿಗರೇಟ್ ಸೇದಿದ ವ್ಯಕ್ತಿಗೆ 11,000 ಡಾಲರ್ ದಂಡ!

ನೀರಿನಲ್ಲಿ ಮುಳುಗುತ್ತಿದ್ದ ಮೂವರ ಪ್ರಾಣ ಉಳಿಸಿದ ನಾಲ್ಕನೇ ತರಗತಿ ವಿದ್ಯಾರ್ಥಿ

ಐಸಿಸಿ ಏಕದಿನ ರ‍್ಯಾಂಕಿಂಗ್ : ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಪ್ರಗತಿ

ಸೇಡಂ: ತೆಲಂಗಾಣ ಮೂಲದ ಕಾರಿನಲ್ಲಿ ದಾಖಲೆ ಇಲ್ಲದ 35 ಲಕ್ಷ ಹಣ ಪತ್ತೆ

ಧಾರ್ಮಿಕ ಭಾವನೆಗಳಿಗೆ ಧಕ್ಕೆ: ನಟಿ ತಾಪ್ಸಿ ಪನ್ನು ವಿರುದ್ಧ ದೂರು ದಾಖಲು