Udayavni Special

ಭೂಸ್ವಾಧೀನ ಪ್ರಕ್ರಿಯೆ ಶೀಘ್ರವೇ ಪೂರ್ಣ

•ಚಿಕ್ಕಮಗಳೂರು-ಬೇಲೂರು-ಸಕಲೇಶಪುರ ರೈಲ್ವೆ ಮಾರ್ಗ •

Team Udayavani, May 14, 2019, 3:30 PM IST

cm-tdy-1…
ಚಿಕ್ಕಮಗಳೂರು: ಚಿಕ್ಕಮಗಳೂರು-ಬೇಲೂರು-ಸಕಲೇಶಪುರ ರೈಲ್ವೆ ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ಶೀಘ್ರದಲ್ಲಿಯೇ ಪೂರ್ಣಗೊಳ್ಳುವ ಲಕ್ಷಣಗಳು ಕಂಡು ಬಂದಿದೆ.

ಹಲವು ದಶಕಗಳ ಬೇಡಿಕೆಯಾಗಿದ್ದ ಚಿಕ್ಕಮಗಳೂರಿಗೆ ರೈಲು ಬರುವ ಬೇಡಿಕೆ ಈಡೇರಿ 6 ವರ್ಷಗಳು ಕಳೆಯಿತು. ಬೇಡಿಕೆ ಈಡೇರಿದರೂ ನಗರಕ್ಕೆ ಈಗಲೂ ಪ್ರತಿನಿತ್ಯ ಕೇವಲ 2 ರೈಲುಗಳು ಮಾತ್ರ ಬರುತ್ತಿವೆ. ಚಿಕ್ಕಮಗಳೂರಿನಿಂದ ಸಕಲೇಶಪುರಕ್ಕೆ ರೈಲ್ವೆ ಮಾರ್ಗ ಪೂರ್ಣಗೊಂಡಲ್ಲಿ ಹೆಚ್ಚಿನ ರೈಲುಗಳು ಬರಲು ಸಾಧ್ಯವಾಗುತ್ತದೆ. ಇಲ್ಲಿನ ಜನತೆಗೂ ಸಾಕಷ್ಟು ಅನುಕೂಲವಾಗುತ್ತದೆ ಎಂಬ ಕಾರಣದಿಂದ ಚಿಕ್ಕಮಗಳೂರು-ಬೇಲೂರು-ಸಕಲೇಶಪುರ ರೈಲ್ವೆ ಮಾರ್ಗಕ್ಕೆ ಕಳೆದ ಯುಪಿಎ ಸರ್ಕಾರದ ಅವಧಿಯಲ್ಲಿ ಅಂದಿನ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ 2014ರ ಫೆಬ್ರವರಿ 23 ರಂದು ಶಂಕುಸ್ಥಾಪನೆ ನೆರವೇರಿಸಿದ್ದರು.

ಶಂಕುಸ್ಥಾಪನೆ ನೆರವೇರಿಸಿದ ನಂತರ ಭೂಸ್ವಾಧೀನ ಪ್ರಕ್ರಿಯೆಗೆಂದು ಆಗ ಸರ್ಕಾರವು 15 ಕೋಟಿ ರೂ. ಬಿಡುಗಡೆ ಮಾಡಿತ್ತು. ಆದರೂ ಸಹ ಭೂಸ್ವಾಧೀನ ಪ್ರಕ್ರಿಯೆ ಕುಂಟುತ್ತಲೇ ಸಾಗಿತ್ತು. ಭೂ ಸ್ವಾಧೀನಪಡಿಸಿಕೊಳ್ಳಬೇಕಿರುವ ಗ್ರಾಮಗಳಲ್ಲಿ ಜಿಲ್ಲಾಡಳಿತದ ವತಿಯಿಂದ ಗ್ರಾಮಸ್ಥರ ಸಭೆಯನ್ನೂ ನಡೆಸಲಾಗಿತ್ತು. ಇಷ್ಟೆಲ್ಲ ಆದರೂ ಸಹ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿರಲಿಲ್ಲ.

131 ಎಕರೆ: ರೈಲ್ವೆ ಕಾಮಗಾರಿಗೆ ಚಿಕ್ಕಮಗಳೂರು ತಾಲೂಕಿನಲ್ಲಿ 6 ಗ್ರಾಮಗಳ 282 ಕುಟುಂಬಗಳಿಗೆ ಸೇರಿದ 131-29 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ. ಗಂಜಲಗೋಡು ಗ್ರಾಮದಲ್ಲಿ 39 ಕುಟುಂಬಗಳ 17-2 ಎಕರೆ, ಮಳಲೂರು ಗ್ರಾಮದಲ್ಲಿ 108 ಕುಟುಂಬಗಳಿಂದ 37-33 ಎಕರೆ, ಹಾದಿಹಳ್ಳಿ ಗ್ರಾಮದಲ್ಲಿ 93 ಕುಟುಂಬಗಳಿಂದ 59-29 ಎಕರೆ, ಬಾಣಾವಾರ ಗ್ರಾಮದಲ್ಲಿ 12 ಕುಟುಂಬಗಳಿಂದ 9-04 ಎಕರೆ, ಹಳುವಳ್ಳಿ ಗ್ರಾಮದಲ್ಲಿ 6 ಕುಟುಂಬಗಳಿಂದ 1 ಎಕರೆ ಹಾಗೂ ಅಂಬಳೆ ಗ್ರಾಮದಲ್ಲಿ 24 ಕುಟುಂಬಗಳಿಂದ 7 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ.

ಭೂಸ್ವಾಧೀನ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದ್ದು, ಸ್ವಾಧೀನಪಡಿಸಿಕೊಳ್ಳಲಿರುವ ಜಮೀನಿಗೆ ದರ ನಿಗದಿಪಡಿಸುವ ಕಾರ್ಯ ಈಗ ಆರಂಭಗೊಂಡಿದೆ. ಉಪವಿಭಾಗಾಧಿಕಾರಿ ಶಿವಕುಮಾರ್‌ ಈ ಕಾರ್ಯವನ್ನು ಆರಂಭಿಸಿದ್ದು, ಈಗಾಗಲೇ ಸಂಬಂಧಪಟ್ಟ ರೈತರೊಂದಿಗೆ ಒಂದು ಬಾರಿ ಸಭೆಯನ್ನೂ ನಡೆಸಿದ್ದಾರೆ.

ನಾಲ್ಕು ಕುಟುಂಬಗಳು: ಹೊಸ ಭೂಸ್ವಾಧೀನ ನೀತಿಯಂತೆ ಯಾವುದೇ ಕಾಮಗಾರಿಗೆ ರೈತರಿಂದ ಸ್ವಾಧೀನಪಡಿಸಿಕೊಳ್ಳುವ ಜಮೀನು ಅವರ ಒಟ್ಟು ಆಸ್ತಿಯ ಶೇ.50ನ್ನು ಮೀರಿದ್ದರೆ, ಅಂತಹ ಕುಟುಂಬಕ್ಕೆ ಸ್ವಾಧೀನಪಡಿಸಿಕೊಂಡಲ್ಲಿ ಅವರ ಸ್ವಾಭಾವಿಕ ಜೀವನಕ್ಕೆ ಧಕ್ಕೆಯುಂಟಾಗುತ್ತದೆ ಎಂಬ ಕಾರಣದಿಂದ ಭೂಮಿಗೆ ಸೂಕ್ತ ಪರಿಹಾರ ನೀಡುವುದು ಮಾತ್ರವಲ್ಲದೆ, 1 ಕುಟುಂಬಕ್ಕೆ 5 ಲಕ್ಷ ರೂ.ಗಳಂತೆ ಹೆಚ್ಚುವರಿ ಹಣವನ್ನೂ ನೀಡಬೇಕಾಗುತ್ತದೆ.

ಅದೇ ರೀತಿ ಚಿಕ್ಕಮಗಳೂರು-ಬೇಲೂರು-ಸಕಲೇಶಪುರ ರೈಲ್ವೆ ಮಾರ್ಗಕ್ಕೆ ಭೂಮಿಯನ್ನು ಕಳೆದುಕೊಳ್ಳುತ್ತಿರುವ ಕುಟುಂಬಗಳ ಪೈಕಿ ಅಂಬಳೆ ಹಾಗೂ ಮಳಲೂರು ಗ್ರಾಮದ 2 ಕುಟುಂಬಗಳು ತಮ್ಮ ಒಟ್ಟು ಆಸ್ತಿಯ ಶೇ.50ಕ್ಕಿಂತ ಹೆಚ್ಚು ಭೂಮಿ ಕಳೆದುಕೊಳ್ಳುತ್ತಿದ್ದು, ಈ 4 ಕುಟುಂಬಗಳಿಗೆ ಸೂಕ್ತ ಪರಿಹಾರದೊಂದಿಗೆ ತಲಾ 5 ಲಕ್ಷ ರೂ. ಹೆಚ್ಚುವರಿ ಹಣವೂ ದೊರೆಯಲಿದೆ.

ಚಿಕ್ಕಮಗಳೂರು-ಬೇಲೂರು-ಸಕಲೇಶಪುರ ರೈಲ್ವೆ ಮಾರ್ಗದ ಕಾಮಗಾರಿ ಪೂರ್ಣಗೊಂಡಲ್ಲಿ, ಚಿಕ್ಕಮಗಳೂರಿನಿಂದ ಸಕಲೇಶಪುರ ಮೂಲಕ ಮಂಗಳೂರು, ಮೈಸ‌ೂರಿಗೆ ನೇರ ರೈಲ್ವೆ ಸಂಪರ್ಕ ದೊರೆಯಲಿದೆ. ಹೀಗಾದಲ್ಲಿ ಪ್ರವಾಸೋದ್ಯಮಕ್ಕೂ ಅನುಕೂಲಕರವಾಗುವುದಲ್ಲದೆ, ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ ಮತ್ತು ಮೆಣಸು ವ್ಯಾಪಾರಸ್ಥರಿಗೂ ಹೆಚ್ಚಿನ ಅನುಕೂಲಕರವಾಗಲಿದೆ.

•ಎಸ್‌.ಕೆ.ಲಕ್ಷ್ಮೀಪ್ರಸಾದ್‌

ಟಾಪ್ ನ್ಯೂಸ್

ಬರಲಿದೆ ಸ್ಮಾರ್ಟ್‌ ಸ್ಪೀಡ್‌ ವಾರ್ನಿಂಗ್‌ ಸಿಸ್ಟಂ

ಬರಲಿದೆ ಸ್ಮಾರ್ಟ್‌ ಸ್ಪೀಡ್‌ ವಾರ್ನಿಂಗ್‌ ಸಿಸ್ಟಂ

House washed away amid heavy rains in Mundakayam

ಭಾರೀ ಮಳೆಗೆ ಹೊಳೆಯಲ್ಲಿ ಕೊಚ್ಚಿಹೋಯ್ತು ಮನೆ; ವಿಡಿಯೋ ವೈರಲ್

ಆತ್ಮಹತ್ಯೆ – ಉಪ್ಪಿನಂಗಡಿ

ಕಣ್ಣಿಗೆ ಬಟ್ಟೆಕಟ್ಟಿ ನೇತ್ರಾವತಿ ನದಿಗೆ ಹಾರಿದ ವ್ಯಕ್ತಿ

fire

5 ಅಂತಸ್ತಿನ ಕಟ್ಟದಲ್ಲಿ ಬೆಂಕಿ ಅವಘಡ : 2 ಬಲಿ,70 ಮಂದಿ ರಕ್ಷಣೆ

230 ದಿನಗಳಲ್ಲಿ ಭಾರೀ ಇಳಿಕೆ;ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 13,596 ಕೋವಿಡ್ ಪ್ರಕರಣ ಪತ್ತೆ

230 ದಿನಗಳಲ್ಲಿ ಭಾರೀ ಇಳಿಕೆ;ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 13,596 ಕೋವಿಡ್ ಪ್ರಕರಣ ಪತ್ತೆ

ಸಿನಿಮಾಗಳು ಗೆದ್ದರೂ ಸಂಭ್ರಮಿಸುವ ಮೂಡ್‌ನಿಂದ ದೂರ ..

ಸಿನಿಮಾಗಳು ಗೆದ್ದರೂ ಸಂಭ್ರಮಿಸುವ ಮೂಡ್‌ನಿಂದ ದೂರ ..

ಟಿ20 ವಿಶ್ವಕಪ್: ಬಾಂಗ್ಲಾದೇಶಕ್ಕೆ ಸೋಲಿನ ರುಚಿ ತೋರಿಸಿದ ಸ್ಕಾಟ್ಲೆಂಡ್

ಟಿ20 ವಿಶ್ವಕಪ್: ಬಾಂಗ್ಲಾದೇಶಕ್ಕೆ ಸೋಲಿನ ರುಚಿ ತೋರಿಸಿದ ಸ್ಕಾಟ್ಲೆಂಡ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆಯ ಅಬ್ಬರಕ್ಕೆ ಅತಂತ್ರಗೊಂಡ ಕಾಫಿ ಬೆಳೆಗಾರ

ಮಳೆಯ ಅಬ್ಬರಕ್ಕೆ ಅತಂತ್ರಗೊಂಡ ಕಾಫಿ ಬೆಳೆಗಾರ

chikkamagalore news

ಕಾಫಿನಾಡಲ್ಲಿ ಪ್ರವಾಸಿ ತಾಣಕ್ಕೆ ಮುಗಿ ಬಿದ್ದ ಜನ

ಆರದವಳ್ಳಿ ಗ್ರಾಮದಲ್ಲಿ ಅಂಬು ಹೊಡೆಯುವ ಆಚರಣೆ

ಆರದವಳ್ಳಿ ಗ್ರಾಮದಲ್ಲಿ ಅಂಬು ಹೊಡೆಯುವ ಆಚರಣೆ

ಬಿಜೆಪಿ ಅಧಿಕಾರಕ್ಕೆ ಬರಲಿದೆಯಾ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

ಬಿಜೆಪಿ ಅಧಿಕಾರಕ್ಕೆ ಬರಲಿದೆಯಾ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

chikkamagalore news

ಹೊಸಹಳ್ಳಿಯಲ್ಲಿ ಹೊಯ್ಸಳರ ಕಾಲದ ವೀರಗಲ್ಲು ಪತ್ತೆ

MUST WATCH

udayavani youtube

ಅರರೆ… ಬಾಳೆ ಕಾಯಿ ಶ್ಯಾವಿಗೆ.. ರುಚಿ ಬಾಯಿಗೆ, ಉತ್ತಮ ಆರೋಗ್ಯಕ್ಕೆ

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಹೊಸ ಸೇರ್ಪಡೆ

6

ಯುವಕನ ಕುಟುಂಬಕ್ಕೆ ಒಂದು ಲಕ್ಷ ರೂ. ನೆರವು

online classes

ಆನ್‌ಲೈನ್‌-ಆಫ್ಲೈನ್‌ ಗೊಂದಲದಲ್ಲಿ ಮಕ್ಕಳು

ಬರಲಿದೆ ಸ್ಮಾರ್ಟ್‌ ಸ್ಪೀಡ್‌ ವಾರ್ನಿಂಗ್‌ ಸಿಸ್ಟಂ

ಬರಲಿದೆ ಸ್ಮಾರ್ಟ್‌ ಸ್ಪೀಡ್‌ ವಾರ್ನಿಂಗ್‌ ಸಿಸ್ಟಂ

House washed away amid heavy rains in Mundakayam

ಭಾರೀ ಮಳೆಗೆ ಹೊಳೆಯಲ್ಲಿ ಕೊಚ್ಚಿಹೋಯ್ತು ಮನೆ; ವಿಡಿಯೋ ವೈರಲ್

5

ಪ್ರಾಧ್ಯಾಪಕರ ಬಡ್ತಿ ಅನ್ಯಾಯ ಸರಿಪಡಿಸಲು ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.