ಕೋಕಂ ಜ್ಯೂಸ್ ಮಾರಾಟ ನೆಪದಲ್ಲಿ ಗಾಂಜಾ ಸಾಗಾಟ; ಬೆಳ್ತಂಗಡಿಯ ಓರ್ವ ಸಹಿತ ಮೂವರ ಬಂಧನ
Team Udayavani, May 16, 2022, 1:07 PM IST
ಮೂಡಿಗೆರೆ: ಬೆಳ್ತಂಗಡಿ ತಾಲೂಕಿನ ಕಡುರುದ್ಯಾವರ ಗ್ರಾಮದ ಕುಕ್ಕಾವು ಮನೆಯೊಂದರಲ್ಲಿ ತಯಾರಿಸಿ ಮೂಡಿಗೆರೆ ಕಡೆ ಕ್ವಾಲಿಸ್ ಕಾರಿನಲ್ಲಿ ಕೋಕಂ ಜ್ಯೂಸ್ ಮಾರಾಟ ಮಾಡುವ ನೆಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಗ್ಯಾಂಗ್ ನ್ನು ಬಂಧಿಸುವಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕಡುರುದ್ಯಾವರ ಗ್ರಾಮದ ಕುಕ್ಕಾವು ನಿವಾಸಿ ಅಬೂಬಕ್ಕರ್ ಸಿದ್ದಿಕ್(31) , ಮೂಡಿಗೆರೆಯ ಅಮೃತ್ ಬಿಜುವಳ್ಳಿ , ಮೂಡಿಗೆರೆ ಟೌನ್ ನಿವಾಸಿ ರಿಷಬ್ ರಾಜ್ ಎಂಬವರನ್ನು ಬಂಧಿಸಲಾಗಿದೆ.
ಬೆಳ್ತಂಗಡಿಯ ಅಬೂಬಕ್ಕರ್ ಸಿದ್ದಿಕ್ ಗೆ ಸೇರಿದ ಕ್ವಾಲಿಸ್ ಕಾರಿನಲ್ಲಿ 250 ಗ್ರಾಂ ಗಾಂಜಾ ಪತ್ತೆಯಾಗಿದೆ ಮತ್ತು ಒಂದು ಬೈಕ್ ಕೂಡ ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮೂವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉದಯಪುರ ವ್ಯಕ್ತಿ ಶಿರಚ್ಛೇಧ; ದೇಶ ತಲೆ ತಗ್ಗಿಸೋ ವಿಚಾರ- ಆಂದೋಲಾ ಸ್ವಾಮಿ
ಎರಡು ಸಾವಿರ ಅಗ್ನಿಶಾಮಕ ಹುದ್ದೆಗಳ ಭರ್ತಿ: ಗೃಹ ಸಚಿವ ಆರಗ ಜ್ಞಾನೇಂದ್ರ
ಸರಕಾರ ಎಂಟು ವರ್ಷ ಪೂರೈಕೆ: ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ಪುಸ್ತಕ
ಸದ್ಯದಲ್ಲೇ ಸಂಪುಟ ವಿಸ್ತರಣೆ; ನಿಗಮ ಮಂಡಳಿಗಳಿಗೆ ಪಟ್ಟಿಯೂ ಅಂತಿಮ?
ಹಳೆ ಪ್ರಸ್ತಾಪಕ್ಕೆ ಹೊಸ ರೂಪ; ಯಕ್ಷ ರಂಗಾಯಣದಲ್ಲೇ ಕಚೇರಿಗೆ ಚಿಂತನೆ