ಮೊದಲ ಹಂತಕ್ಕೆ ಶೇ. 86.65 ಮತದಾನ
Team Udayavani, Dec 24, 2020, 4:41 PM IST
ಹಿರಿಯೂರು: ಗ್ರಾಪಂ ಚುನಾವಣೆಗೆ ನಿಯೋಜಿತರಾಗಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನಗರದ ಗಿರೀಶಾ ಬಾಲಕಿಯರ ಕಾಲೇಜಿನಲ್ಲಿ ತರಬೇತಿ ಕಾರ್ಯಾಗಾರ ನಡೆಯುತ್ತಿದ್ದು, ಗ್ರಾಪಂ ಚುನಾವಣೆ ವೀಕ್ಷಕಿ ಶಾಂತಾ ಎಲ್. ಹುಲ್ಮನಿ ಭೇಟಿ ನೀಡಿ ಪರಿಶೀಲಿಸಿದರು.
ಚಿತ್ರದುರ್ಗ: ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಚಿತ್ರದುರ್ಗ, ಹೊಸದುರ್ಗ ಹಾಗೂ ಹೊಳಲ್ಕೆರೆತಾಲೂಕುಗಳ 100 ಗ್ರಾಮ ಪಂಚಾಯತ್ ಗಳ 1,588 ಸ್ಥಾನಗಳಿಗೆ ಸದಸ್ಯರ ಆಯ್ಕೆಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಶೇ. 86.75 ರಷ್ಟು ಮತದಾನವಾಗಿದೆ.
ಚಿತ್ರದುರ್ಗ ಶೇ. 86.50, ಹೊಸದುರ್ಗ ಶೇ. 86.75 ಹಾಗೂ ಹೊಳಲ್ಕೆರೆಯಲ್ಲಿ ಶೇ. 86.75 ರಷ್ಟು ಮತದಾನವಾಗಿದ್ದು, ಜಿಲ್ಲೆಯಲ್ಲಿ ಮೊದಲಹಂತದ ಚುನಾವಣೆಯಲ್ಲಿ ಶೇ. 86.65ರಷ್ಟುಮತದಾನವಾಗಿದೆ.ಚಿತ್ರದುರ್ಗ ತಾಲೂಕಿನ 38,ಹೊಸದುರ್ಗ ತಾಲೂಕಿನ 33 ಹಾಗೂ ಹೊಳಲ್ಕೆರೆತಾಲೂಕಿನ 29 ಗ್ರಾಮ ಪಂಚಾಯತ್‌ಗಳುಸೇರಿದಂತೆ ಒಟ್ಟು 100 ಗ್ರಾಮ ಪಂಚಾಯತ್‌ಗಳ 1,753 ಸ್ಥಾನಗಳಿಗೆ ಮೊದಲ ಹಂತದಲ್ಲಿಚುನಾವಣೆ ಘೋಷಣೆಯಾಗಿತ್ತು. 158 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, 6 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ. ಹೀಗಾಗಿ 1,588 ಸ್ಥಾನಗಳಿಗೆ ಮತದಾನ ನಡೆಸಲು ಮೊದಲ ಹಂತದ ಚುನಾವಣೆಗೆ ಜಿಲ್ಲೆಯಲ್ಲಿ ಚಿತ್ರದುರ್ಗ 323, ಹೊಸದುರ್ಗ 247 ಹಾಗೂ ಹೊಳಲ್ಕೆರೆಯಲ್ಲಿ 239 ಮತಗಟ್ಟೆಗಳು ಸೇರಿದಂತೆ ಒಟ್ಟು 809 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಮೊದಲ ಹಂತದ ಮೂರು ತಾಲೂಕುಗಳ ಚುನಾವಣೆಗೆ ಸಂಬಂಧಿಸಿದಂತೆ ಮತದಾನ ಬೆಳಿಗ್ಗೆ9ಕ್ಕೆ ಶೇ. 7.10, ಬೆಳಿಗ್ಗೆ 11ರ ಹೊತ್ತಿಗೆ ಶೇ. 23.70,ಮಧ್ಯಾಹ್ನ 1ರ ವೇಳೆಗೆ ಶೇ. 47.62, ಮಧ್ಯಾಹ್ನ 3ರ ಮತದಾನವಾಗಿತ್ತು.
ಮೊದಲ ಹಂತದ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ಚಿತ್ರದುರ್ಗ, ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲೂಕುಗಳಲ್ಲಿ ಒಟ್ಟು 5,27,485 ಮತದಾರರ ಪೈಕಿ 2,34,685ಪುರುಷ ಮತದಾರರು, 2,22,412 ಮಹಿಳಾ ಮತದಾರರು ಹಾಗೂ ಇತರೆ 2 ಮತದಾರರು ಸೇರಿದಂತೆ ಒಟ್ಟು 4,57,099 ಮತದಾರರು ಹಕ್ಕು ಚಲಾಯಿಸಿದ್ದಾರೆ.
ಚಿತ್ರದುರ್ಗ ತಾಲೂಕಿನಲ್ಲಿ 92,726ಪುರುಷರು, 89,331 ಮಹಿಳೆಯರು ಹಾಗೂ ಇತರೆ 2 ಮತದಾರರು ಸೇರಿದಂತೆ ಒಟ್ಟು1,82,059 ಮತದಾರರು ಹಕ್ಕು ಚಲಾಯಿಸಿದ್ದಾರೆ.ಹೊಸದುರ್ಗ ತಾಲೂಕಿನಲ್ಲಿ 73,236 ಪುರುಷರು,68,557 ಮಹಿಳಾ ಮತದಾರರು ಸೇರಿದಂತೆ ಒಟ್ಟು1,41,793 ಮತದಾರರು ಹಕ್ಕು ಚಲಾಯಿಸಿದ್ದಾರೆ.ಹೊಳಲ್ಕೆರೆ ತಾಲೂಕಿನಲ್ಲಿ 68,723 ಪುರುಷರು,64,524 ಮಹಿಳಾ ಮತದಾರರು ಸೇರಿದಂತೆ ಒಟ್ಟು 1,33,247 ಮತದಾರರು ಹಕ್ಕು ಚಲಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Punjalkatte:ಕೊಳಕ್ಕೆಬೈಲ್-ನಯನಾಡು ರಸ್ತೆ ದುರವಸ್ಥೆ;ಯುವಕರಿಂದ ಶ್ರಮದಾನದ ಮೂಲಕ ದುರಸ್ತಿ
BBK11: ಬಿಗ್ ಬಾಸ್ ಮನೆಯಲ್ಲಿ ಹೊಡೆದಾಟ; ಶೋನಿಂದ ಹೊರಬಿದ್ದ ಜಗದೀಶ್ – ರಂಜಿತ್?
Didupe ದರ್ಕಾಸು ಕೆಮ್ಮಟೆಯಲ್ಲಿ ಪಾಲದಲ್ಲೇ ಓಡಾಟ; ರೋಟರಿ ತಂಡದಿಂದ ಕಾಲುಸಂಕ ಭರವಸೆ
Explainer: ರಾಜ್ಯದ ಜಾತಿ ಜನ ಗಣತಿ ಕುರಿತು ಯಾಕೆ ಇಷ್ಟೊಂದು ಚರ್ಚೆ ?
Puttur: ಅಕ್ರಮ ಗೋ ಸಾಗಾಟ ಪತ್ತೆ ಹಚ್ಚಿದ ಬಜರಂಗದಳ ಕಾರ್ಯಕರ್ತರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.