ಬಿಜೆಪಿಯಿಂದ ಕುತಂತ್ರ ರಾಜಕಾರಣ
Team Udayavani, Jul 10, 2021, 4:05 PM IST
ಚಳ್ಳಕೆರೆ: ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ಪ್ರಗತಿಪರ ಯೋಜನೆಗಳನ್ನು ಜಾರಿಗೊಳಿಸದ ಆಡಳಿತರೂಢ ಬಿಜೆಪಿ ಗ್ರಾಮೀಣಭಾಗದ ಜನರ ವಿಶ್ವಾಸವನ್ನುಕಳೆದುಕೊಂಡಿದ್ದು, ಕಾಂಗ್ರೆಸ್ ನೇತಾರರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿರುವುದಾಗಿ ಸುಳ್ಳು ವದಂತಿ ಹಬ್ಬಿಸುವ ಮೂಲಕ ಕಾಂಗ್ರೆಸ್ ತೇಜೋಧೆಗೆ ತೆರೆ ಮರೆಯಲ್ಲಿ ಕಸರತ್ತು ನಡೆಸಿದೆ ಎಂದು ತಳಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಪಿ.ನಾಗೇಶ್‌ರೆಡ್ಡಿ ಆರೋಪಿಸಿದ್ದಾರೆ.
ಶುಕ್ರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಳಕು ಹೋಬಳಿ ವ್ಯಾಪ್ತಿಯ ಮನ್ನೇಕೋಟೆ ಗ್ರಾಪಂ ಅಧ್ಯಕ್ಷೆ ಪೆದ್ದಕ್ಕ ಕಾಂಗ್ರೆಸ್ ಬೆಂಬಲದಿಂದ ಕಳೆದ ಸುಮಾರು 8 ತಿಂಗಳಿನಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ಆಡಳಿತ ನಡೆಸುತ್ತಿದ್ದು, ಅವರ ಪತಿ ನಾಗೇಶರನ್ನು ಪಕ್ಷದ ವೇದಿಕೆಯಲ್ಲಿ ಕರೆದು ಬಿಜೆಪಿ ಸೇರ್ಪಡೆ ಮಾಡಿಕೊಂಡಿರುವುದಾಗಿ ಘೋಷಿಸಿಕೊಂಡು ಪ್ರಚಾರ ನಡೆಸುತ್ತಿದ್ದಾರೆ. ತಳಕು ಹೋಬಳಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಬಲವಾದ ಸಂಘಟನೆ ಹೊಂದಿದ್ದು, ಬಿಜೆಪಿಯ ಯಾವುದೇ ತಂತ್ರಗಳಿಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಒಳಗಾಗುವುದಿಲ್ಲ. ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನದಲ್ಲಿ ಜಯಗಳಿಸಿ ಕಾಂಗ್ರೆಸ್ ತನ್ನ ಶಕ್ತಿಯನ್ನು ಪ್ರದರ್ಶಿಸುವುದು ಎಂದು ತಿಳಿಸಿದ್ದಾರೆ.
ಮನ್ನೇಕೋಟೆ ಗ್ರಾಪಂ ಸದಸ್ಯರಾದ ಎಂ.ಟಿ.ರವಿಕುಮಾರ್, ಟಿ.ಚಂದ್ರಣ್ಣ, ರಾಮಣ್ಣ, ತಿಪ್ಪೇಸ್ವಾಮಿ, ಗ್ರಾಮದ ಮುಖಂಡರಾದ ಮಹಂತೇಶ್, ತಿಪ್ಪಯ್ಯ, ರಾಜಣ್ಣ, ನಾಗೇಶ್, ಚನ್ನಗಾನಹಳ್ಳಿ ರುದ್ರಮುನಿ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
10 ಕೋಟಿ ರೂ. ನೀಡದಿದ್ದರೆ… ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಕರೆ
ಈಶ್ವರಪ್ಪಗೆ 35 ವರ್ಷ ಅವಕಾಶ ಕೊಟ್ಟಾಯ್ತು, ಈ ಬಾರಿ ನನಗೆ ಕೊಡಲಿ: ಆಯನೂರು ಮಂಜುನಾಥ್
ರಾಹುಲ್ ಗಾಂಧಿ ಆಧುನಿಕ ಭಾರತದ ಮಿರ್ ಜಾಫರ್ – ಸಂಬಿತ್ ಪಾತ್ರ
80,000 ಪೊಲೀಸರಿದ್ದರೂ ಅಮೃತಪಾಲ್ ಪರಾರಿಯಾಗಲು ಹೇಗೆ ಸಾಧ್ಯ? ಸರ್ಕಾರಕ್ಕೆ ಹೈಕೋರ್ಟ್ ತರಾಟೆ
ಹಾವೇರಿ: ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪೊಲೀಸರು