
ಕೋವಿಡ್ ಲಕ್ಷಣ ಮುಚ್ಚಿಡುವುದು ಅಪಾಯಕಾರಿ: ಮುರುಘಾಶ್ರೀ
Team Udayavani, May 3, 2020, 5:43 PM IST

ಚಿತ್ರದುರ್ಗ: ಸಾಮಾಜಿಕ ಅಂತರದ ಮಹತ್ವದ ಕುರಿತು ಮಾಧ್ಯಮಗಳು, ಪೊಲೀಸರು, ಅಧಿಕಾರಿಗಳು ಎಷ್ಟು ಹೇಳಿದರೂ ಜನ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಬೇಸರ ವ್ಯಕ್ತಪಡಿಸಿದರು.
ಮುರುಘರಾಜೇಂದ್ರ ಮಠದಲ್ಲಿ ಗರ್ಭಿಣಿಯರಿಗೆ, ಗೃಹರಕ್ಷಕದಳ ಸಿಬ್ಬಂದಿ ಮತ್ತಿತರೆ ಸುಮಾರು 330 ಕುಟುಂಬಗಳಿಗೆ ದವಸ-ಧಾನ್ಯ ವಿತರಿಸಿ ಶರಣರು ಮಾತನಾಡಿದರು. ಕೋವಿಡ್
ಹಿನ್ನೆಲೆಯಲ್ಲಿ ಹಲವು ಕಡೆ ಸರ್ಕಾರ, ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು ಹಸಿದವರಿಗೆ ಅನ್ನ ನೀಡುವ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿರುವುದು ಉತ್ತಮ ಬೆಳವಣಿಗೆ. ಅತಿವೃಷ್ಟಿ, ಅನಾವೃಷ್ಟಿ ಇನ್ನಿತರೆ ರಾಷ್ಟ್ರವನ್ನು ಕಾಡುವ ಯಾವ ಸಮಸ್ಯೆಗಳು ಬಂದರೂ ಮಾನವೀಯತೆಯನ್ನು ಮೆರೆಯುವ ರಾಷ್ಟ್ರವೆಂದರೆ ಭಾರತ. ಆದರೆ ಜನರು ಸಮಸ್ಯೆಗಳ ಅರಿವಿಲ್ಲದೆ ಗುಂಪುಗೂಡಿ ಕಾನೂನು ಉಲ್ಲಂಘನೆ ಮಾಡಿ ರೋಗ ಮತ್ತೆ ಉಲ್ಬಣವಾಗುವಂತೆ ಮಾಡುತ್ತಿರುವುದು ಅನಾರೋಗ್ಯಕರ ಬೆಳವಣಿಗೆ. ಹೀಗಾಗಿಯೆ ಮತ್ತೆ ಲಾಕ್‌ಡೌನ್ ಮುಂದುವರಿಸಿದ್ದಾರೆ. ಸಾರ್ವಜನಿಕರ ಪ್ರಾಣ ಉಳಿಸಲು ವೈದ್ಯರು, ನರ್ಸ್‌ಗಳು, ಪೊಲೀಸ್ ಇಲಾಖೆಯವರು ಶ್ರಮಿಸುತ್ತಿದ್ದಾರೆ. ಕೆಲವರು ಕೋವಿಡ್ ಲಕ್ಷಣಗಳಿದ್ದರೂ ಮುಚ್ಚಿಡುತ್ತಾರೆ. ಇದು ಅತ್ಯಂತ ಅಪಾಯಕಾರಿ ಎಂದರು. ಗೃಹರಕ್ಷಕದಳದ ಲೋಕೇಶ್, ಸಿಡಿಪಿಒ ಸುಧಾ, ಎ.ಜೆ. ಪರಮಶಿವಯ್ಯ, ಮಲ್ಲಿಕಾರ್ಜುನಯ್ಯ, ಪೈಲ್ವಾನ್ ತಿಪ್ಪೇಸ್ವಾಮಿ ಮತ್ತಿತರರು ಇದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮತದಾರರನ್ನು ಭಿಕ್ಷುಕರ ಸಾಲಿನಲ್ಲಿ ನಿಲ್ಲಿಸಲು ಕಾಂಗ್ರೆಸ್ ಷಡ್ಯಂತ್ರ: ಎ.ನಾರಾಯಣಸ್ವಾಮಿ

Free Bus Pass ಕೊಡುವವರು ಮಹಿಳೆಯರ ರಕ್ಷಣೆ ಬಗ್ಗೆ ಯೋಚನೆ ಮಾಡುತ್ತಿಲ್ಲ: ವಿಜಯೇಂದ್ರ

ಸಿ.ಟಿ.ರವಿ ದುರಹಂಕಾರಕ್ಕೆ ಜನ ತಕ್ಕ ಪಾಠ ಕಲಿಸಿದ್ದಾರೆ: Minister Eshwar Khandre

Holalkere ಖಾಸಗಿ ಬಸ್ ಢಿಕ್ಕಿ ; ಪಾದಚಾರಿ ಮಹಿಳೆ ಮೃತ್ಯು

Lokayukta: ಹಸುವಿನ ಪೋಸ್ಟ್ ಮಾರ್ಟ್ಂ ರಿಪೋರ್ಟ್ ನೀಡಲು ಲಂಚ ಕೇಳಿದ ಪಶುವೈದ್ಯ ಲೋಕಾ ಬಲೆಗೆ
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ
ಹೊಸ ಸೇರ್ಪಡೆ

CSK Forever: ಮದುವೆ ಕಾರ್ಡ್‌ನಲ್ಲಿ ಧೋನಿ ಫೋಟೋ ಪ್ರಿಂಟ್ ಮಾಡಿಸಿದ ಅಭಿಮಾನಿ

ಹೊಸ ಇನ್ನಿಂಗ್ಸ್ ಆರಂಭಿಸಿದ ರುತುರಾಜ್: ಕ್ರಿಕೆಟ್ ಆಟಗಾರ್ತಿಯನ್ನೇ ವರಿಸಿದ CSK ಪ್ಲೇಯರ್

Chikkamagaluru: ಕಾಂಗ್ರೆಸ್ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಗಲಾಟೆ, ಯುವಕನ ಕೊಲೆ

ಮಂಗಳೂರು: ಹಳೆಯ “ನೈತಿಕ ಪೊಲೀಸ್‌ಗಿರಿ’ ಆರೋಪಿಗಳಿಂದ ಮುಚ್ಚಳಿಕೆ

ಮಣಿಪಾಲ: ರ್‍ಯಾಂಕಿಂಗ್‌ನಲ್ಲಿ ಮಾಹೆಗೆ ವಿಶ್ವದಲ್ಲಿ 4ನೇ ಸ್ಥಾನ