ಅಸಂಘಟಿತ ಕಾರ್ಮಿಕರಿಗೂ ಪರಿಹಾರ ಘೋಷಿಸಿ


Team Udayavani, Sep 25, 2020, 7:36 PM IST

cd-tdy-1

ಮೊಳಕಾಲ್ಮೂರು: ಲಾಕ್‌ಡೌನ್‌ ಅವಧಿಯಲ್ಲಿ ಅಸಂಘಟಿತ ಕಾರ್ಮಿಕರಿಗೆ ಪೂರ್ಣ ವೇತನ ಸಿಕ್ಕಿಲ್ಲ. ಸಂಕಷ್ಟಕ್ಕೆ ಸಿಲುಕಿರುವ ಎಲ್ಲಾ ಅಸಂಘಟಿತರಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಿಸಬೇಕೆಂದು ಒತ್ತಾಯಿಸಿ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಸಿಐಟಿಯು ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಸಿಐಟಿಯು ಜಿಲ್ಲಾಧ್ಯಕ್ಷ ಡಿ.ಎಂ. ಮಲಿಯಪ್ಪ ಮಾತನಾಡಿ, ಕೋವಿಡ್‌-19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕತೆ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ರಾಜ್ಯದ ಅಸಂಘಟಿತ ವಲಯದ ಕೈಗಾರಿಕಾ ಕಾರ್ಮಿಕರು ಅಸಂಘಟಿತ ಕಾರ್ಮಿಕರು,

ರೈತರು ಹಾಗೂ ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕೋವಿಡ್‌-19 ಸಾಂಕ್ರಾಮಿಕ ರೋಗದ ಆತಂಕವಿದೆ. ಆನ್‌ ಲಾಕ್‌ 4.0 ಜಾರಿಯಲ್ಲಿದ್ದರೂ ರಾಜ್ಯದ ಆರ್ಥಿಕ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡಿಲ್ಲ. ಹೊರಗುತ್ತಿಗೆ ಕಾರ್ಮಿಕರು, ಟ್ರೈನಿಗಳು ಮುಂತಾದ ಉದ್ಯೋಗ ಭದ್ರತೆಯಿಲ್ಲದ ಶೇ. 70ರಷ್ಟು ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಕಾಯಂ ಕಾರ್ಮಿಕರಿಗೆ ವಿಆರ್‌ಎಸ್‌ ಕೊಟ್ಟು ಕಾರ್ಖಾನೆ ಮುಚ್ಚಿ ಮನೆಗೆ ಕಳುಹಿಸುವ ಪ್ರಕರಣಗಳು ಹೆಚ್ಚುತ್ತಿವೆ ಎಂದು ಆರೋಪಿಸಿದರು.

ರಾಜ್ಯದ ಆರ್ಥಿಕ ಪುನಶ್ಚೇತನಕ್ಕೆ ಜನತೆಯ ಕೈಗೆ ಹಣ ನೀಡುವ ಕೆಲಸ ಆಗಬೇಕಿದೆ. ಅದಕ್ಕಾಗಿ ಅಸಂಘಟಿತರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರ ಮುಂದಾಗಬೇಕಿದೆ. ಅಸಂಘಟಿತ ಕಾರ್ಮಿಕರಿಗೆ ಲಾಕ್‌ ಡೌನ್‌ ಅವಧಿಯ ಪೂರ್ಣ ವೇತನವನ್ನು ಖಾತ್ರಿಪಡಿಸಬೇಕು. ಕೋವಿಡ್ ಸೊಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಕೈಗಾರಿಕಾ ಕಾರ್ಮಿಕರು ಸಹ ಸೋಂಕಿಗೆ ತುತ್ತಾಗುತ್ತಿದ್ದಾರೆ. ಇಎಸ್‌ಐ ವ್ಯಾಪ್ತಿಯ ಸೋಂಕಿತ ಕಾರ್ಮಿಕರಿಗೆ ಹಾಲಿ 28 ದಿನಗಳ ವೇತನ ಸಹಿತ ರಜೆ ಕ್ವಾರಂಟೈನ್‌ ಅವಧಿಯ ವೇತನ ಲಭಿಸಲಿದೆ. ಇಎಸ್‌ಐ ವ್ಯಾಪ್ತಿಯಿಂದ ಹೊರಗಿರುವವರಿಗೂ ಈ ಸೌಲಭ್ಯವನ್ನು ವಿಸ್ತರಿಸಿ ದುಡಿಯುವ ಜನರಿಗೆ ಅನುಕೂಲ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು.

ತಹಶೀಲ್ದಾರ್‌ ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಿಐಟಿಯು ಪದಾಧಿ ಕಾರಿಗಳಾದ ಬಿ.ಟಿ. ಪರಮೇಶ್ವರಪ್ಪ, ಚನ್ನಪ್ಪ, ದುರುಗೇಶ್‌, ಎಲ್‌. ಅಂಜಿನಪ್ಪ, ಹೊನ್ನೂರಪ್ಪ, ಹನುಮಂತಪ್ಪ, ಸಲೀಂ, ನೀಲಕಂಠಾಚಾರಿ, ವಿಜಯಲಕ್ಷ್ಮೀ, ಪಾರ್ವತಮ್ಮ, ಎಚ್‌. ಶಿವಮ್ಮ, ಸನಾವುಲ್ಲಾ, ಪಂಪಣ್ಣ, ಗೌರಮ್ಮ, ಬಸಮ್ಮ, ಜ್ಯೋತಿ, ನಾಗರತ್ನಮ್ಮ, ರುಕ್ಮಿಣಿ ಭಾಗವಹಿಸಿದ್ದರು.

Ad

ಟಾಪ್ ನ್ಯೂಸ್

ಮೂಡುಬಿದಿರೆಯ ಮಹಿಳೆ ನಾಪತ್ತೆ; ಪ್ರಕರಣ ದಾಖಲು

ಮೂಡುಬಿದಿರೆಯ ಮಹಿಳೆ ನಾಪತ್ತೆ; ಪ್ರಕರಣ ದಾಖಲು

Davanagere: RTO ಹೆಸರಲ್ಲಿ ನಾಗರಿಕರ ಹಣ ದೋಚಲು ತಂತ್ರ ರೂಪಿಸಿ ಸೈಬರ್ ವಂಚಕರು

Davanagere: RTO ಹೆಸರಲ್ಲಿ ನಾಗರಿಕರ ಹಣ ದೋಚಲು ತಂತ್ರ ರೂಪಿಸಿ ಸೈಬರ್ ವಂಚಕರು

ಏಷ್ಯಾದ ಅತ್ಯಂತ ಹಿರಿಯ ಆನೆ ‘ವತ್ಸಲ’ ಸಾವು…

Oldest Elephant: ಬದುಕಿನ ಯಾನ ನಿಲ್ಲಿಸಿದ ವತ್ಸಲಾ.. ಏಷ್ಯಾದ ಅತ್ಯಂತ ಹಿರಿಯ ಆನೆ ಇನ್ನಿಲ್ಲ

Rekha-Gupta-CM

ದಿಲ್ಲಿ ಸಿಎಂ ಅಧಿಕೃತ ನಿವಾಸ ನವೀಕರಣ ಟೆಂಡರ್‌ ರದ್ದುಗೊಳಿಸಿದ ಸರಕಾರ

ಸಿಎಂ ನೇತೃತ್ವದ ನಿಯೋಗದಿಂದ ರಕ್ಷಣಾ ಸಚಿವರ ಭೇಟಿ, 2 ಡಿಫೆನ್ಸ್‌ ಕಾರಿಡಾರ್‌ಗೆ ಮನವಿ

ಸಿಎಂ ನೇತೃತ್ವದ ನಿಯೋಗದಿಂದ ರಕ್ಷಣಾ ಸಚಿವರ ಭೇಟಿ, 2 ಡಿಫೆನ್ಸ್‌ ಕಾರಿಡಾರ್‌ಗೆ ಮನವಿ

ರಾಜ್ಯದ ಮನವಿಗಳಿಗೆ ಕೇಂದ್ರ ರಕ್ಷಣಾ ಸಚಿವರ ಸಕಾರಾತ್ಮಕ ಸ್ಪಂದನೆ: ಸಿದ್ದರಾಮಯ್ಯ

ರಾಜ್ಯದ ಮನವಿಗಳಿಗೆ ಕೇಂದ್ರ ರಕ್ಷಣಾ ಸಚಿವರ ಸಕಾರಾತ್ಮಕ ಸ್ಪಂದನೆ: ಸಿದ್ದರಾಮಯ್ಯ

Aranthodu: ಆಕಸ್ಮಿಕ ಬೆಂಕಿ… ಹೊತ್ತಿ ಉರಿದ ಗ್ರಾಮ ಪಂಚಾಯತ್‌ನ ಘನತ್ಯಾಜ್ಯ ಘಟಕ

Aranthodu: ಆಕಸ್ಮಿಕ ಬೆಂಕಿ… ಹೊತ್ತಿ ಉರಿದ ಗ್ರಾಮ ಪಂಚಾಯತ್‌ನ ಘನತ್ಯಾಜ್ಯ ಘಟಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

muruga seer

ಕೋರ್ಟ್‌ಗೆ ಹಾಜರಾಗಿ ಹೇಳಿಕೆ ದಾಖಲಿಸಿದ ಮುರುಘಾ ಶ್ರೀ

karajola

ಡಿಸೆಂಬರ್‌ನಲ್ಲಿ ಸರಕಾರ ಪತನ, ಬಿಜೆಪಿ ಅಧಿಕಾರಕ್ಕೆ: ಗೋವಿಂದ ಕಾರಜೋಳ

Chitradurga: ಜೈಲು ಪರಿಶೀಲನೆಗೆ ತೆರಳಿದ್ದ ಅಧಿಕಾರಿಗಳ ಮೇಲೆಯೇ ಕೈದಿಗಳ ಹ*ಲ್ಲೆ!

Chitradurga: ಜೈಲು ಪರಿಶೀಲನೆಗೆ ತೆರಳಿದ್ದ ಅಧಿಕಾರಿಗಳ ಮೇಲೆಯೇ ಕೈದಿಗಳ ಹ*ಲ್ಲೆ!

ರಾಜೀನಾಮೆ ಕೇಳದೆ, ಉಪಾಯ ಹೇಳಿಕೊಟ್ಟ ಕೈ ವರಿಷ್ಠರು: ಛಲವಾದಿ

ರಾಜೀನಾಮೆ ಕೇಳದೆ, ಉಪಾಯ ಹೇಳಿಕೊಟ್ಟ ಕೈ ವರಿಷ್ಠರು: ಛಲವಾದಿ

Chitradurga: ರೇಣುಕಾಸ್ವಾಮಿ ಹ*ತ್ಯೆಯಾಗಿ ಒಂದು ವರ್ಷ: ಆತ್ಮಶಾಂತಿಗಾಗಿ ಪೂಜೆ

Chitradurga: ರೇಣುಕಾಸ್ವಾಮಿ ಹ*ತ್ಯೆಯಾಗಿ ಒಂದು ವರ್ಷ: ಆತ್ಮಶಾಂತಿಗಾಗಿ ಪೂಜೆ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

ಮೂಡುಬಿದಿರೆಯ ಮಹಿಳೆ ನಾಪತ್ತೆ; ಪ್ರಕರಣ ದಾಖಲು

ಮೂಡುಬಿದಿರೆಯ ಮಹಿಳೆ ನಾಪತ್ತೆ; ಪ್ರಕರಣ ದಾಖಲು

Davanagere: RTO ಹೆಸರಲ್ಲಿ ನಾಗರಿಕರ ಹಣ ದೋಚಲು ತಂತ್ರ ರೂಪಿಸಿ ಸೈಬರ್ ವಂಚಕರು

Davanagere: RTO ಹೆಸರಲ್ಲಿ ನಾಗರಿಕರ ಹಣ ದೋಚಲು ತಂತ್ರ ರೂಪಿಸಿ ಸೈಬರ್ ವಂಚಕರು

3

Kundapura: ಹೊಟೇಲ್‌ನಲ್ಲಿ ಹ*ಲ್ಲೆ; ಪ್ರಕರಣ ದಾಖಲು

24

Udyavara: ಕಂಟೈನರ್‌ಗೆ ಪಿಕಪ್‌ ಢಿಕ್ಕಿ; ಓರ್ವ ಸಾವು

4

Sullia: ವಿದ್ಯುತ್‌ ಶಾಕ್‌; ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.