
ಅಡುಗೆ ಮನೆ ಸೇರಿದ್ದ ಚಿರತೆಯನ್ನು ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ
Team Udayavani, May 8, 2021, 10:25 AM IST

ಚಿತ್ರದುರ್ಗ: ತಾಲೂಕಿನ ಮುದ್ದಾಪುರ ಗ್ರಾಮದ ಮನೆಯೊಂದಕ್ಕೆ ನಸುಕಿನಲ್ಲೇ ನುಗ್ಗಿದ ಚಿರತೆಯೊಂದನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಬೆಳಗ್ಗೆ 5.30 ರ ವೇಳೆಗೆ ಮುದ್ದಾಪುರದ ಚಿದಾನಂದ ಎಂಬುವವರ ಮನೆಗೆ ನುಗ್ಗಿದ ಚಿರತೆ, ಅಡುಗೆ ಮನೆಯ ಶೆಲ್ಫ್ ಮೇಲೆ ಪಾತ್ರೆ, ಡಬ್ಬಗಳ ನಡುವೆ ಬಚ್ಚಿಟ್ಟುಕೊಂಡಿತ್ತು. ಮನೆಯೊಳಗೆ ಚಿರತೆ ಕಂಡು ಮನೆಯವರು ಆತಂಕಗೊಂಡು, ಹೊರಗೆ ಓಡಿ ಬಂದು ಬಾಗಿಲು ಬಂದ್ ಮಾಡಿದ್ದರು.
ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಸಿಬ್ಬಂದಿ ಬೋನು ಅಳವಡಿಸಿ ಚಿರತೆಯನ್ನು ಹಿಡಿದಿದ್ದಾರೆ. ಮನೆಯ ಬಾಗಿಲಿಗೆ ಬೋನು ಅಳವಡಿಸಿ, ಹೊರಗಡ ಬಕೆ ಹಾಕಿ ಚಿರತೆ ಹಿಡಿಯಲಾಗಿದೆ.
ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿ ಅಡುಗೆ ಮನೆಯ ಪಾತ್ರೆಗಳ ನಡುವೆ ಬಚ್ಚಿಟ್ಟುಕೊಂಡ ಚಿರತೆ!
ಸದ್ಯ ಚಿರತೆಯನ್ನು ಆಡುಮಲ್ಲೇಶ್ವರ ಪ್ರಾಣಿಸಂಗ್ರಹಾಲಯಕ್ಕೆ ತೆಗೆದುಕೊಂಡು ಹೋಗಿತ್ತಿದ್ದು, ಡಿಎಫ್ಓ ಸೂಚನೆ ನಂತರ ಕಾಡಿಗೆ ಬಿಡಲಾಗುವುದು ಎಂದು ಆರ್ಎಫ್ಓ ಸಂದೀಪ್ ನಾಯಕ್ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಳಲ್ಕೆರೆ: ಆಕಸ್ಮಿಕ ಬೆಂಕಿಗೆ ಸುಟ್ಟು ಕರಕಲಾದ ಮನೆ, ಕಂಗಾಲಾದ ಮನೆ ಮಾಲೀಕ

ಪೂರ್ಣಿಮಾ ಹೆಗಲ ಮೇಲೆ ಕೈ ಇಟ್ಟು, ‘ನಮ್ಮ ಜೊತೆಯಲ್ಲೇ ಇದ್ದಾರೆ’ ಎಂದ ಬಿಎಸ್‌ವೈ

ಕಾಲಮಿತಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣ: ಸಿಎಂ ಬೊಮ್ಮಾಯಿ

ಬಯಲುಸೀಮೆ ಅಡಿಕೆ ಬೆಳೆಗಾರರಿಗೆ ಡ್ರಿಪ್ ಸಬ್ಸಿಡಿ ಪರಿಶೀಲನೆ: ಸಿಎಂ ಬೊಮ್ಮಾಯಿ

ವಿಧಾನ ಕದನ 2023: ಕೋಟೆನಾಡಲ್ಲಿ ಗೆಲುವಿಗಿಂತ ಟಿಕೆಟ್‌ಗಾಗಿ ಮಹಾಯುದ್ಧ