

Team Udayavani, May 21, 2024, 11:19 PM IST
ಮೊಳಕಾಲ್ಮೂರು: ಮಳೆಯಿಂದ ವಿದ್ಯುತ್ ಕಡಿತ, ಜನರೇಟರ್ ಕೂಡ ಸರಿ ಇಲ್ಲ. ಪರಿಣಾಮ ವೈದ್ಯರು ರೋಗಿಗಳಿಗೆ ಮೇಣದಬತ್ತಿ ಹಾಗೂ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಚಿಕಿತ್ಸೆ ನೀಡಬೇಕಾದ ದುಸ್ಥಿತಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಎದುರಾಗಿದೆ.
ತಾಲೂಕಿನಾದ್ಯಂತ ಮಳೆಯಾಗುತ್ತಿರುವು ದರಿಂದ ರಾತ್ರಿ ವೇಳೆ ವಿದ್ಯುತ್ ಕಡಿತಣವಾಗುತ್ತಿದೆ. 4-5 ದಿನಗಳಿಂದ ಸಮರ್ಪಕ ವಿದ್ಯುತ್ ಸೌಲಭ್ಯ ಇಲ್ಲದ್ದರಿಂದ ಮೇಣದಬತ್ತಿ ಬೆಳಕಿನಲ್ಲೇ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಆಸ್ಪತ್ರೆಯಲ್ಲಿರುವ ಜನರೇಟರ್ ಕೆಟ್ಟು ಹೋಗಿದ್ದು, ದುರಸ್ತಿ ಮಾಡಿಸದೆ ಇರುವುದರಿಂದ ಈ ಆವಸ್ಥೆ ಒದಗಿದೆ. ವಿದ್ಯುತ್ ವ್ಯತ್ಯಯ ಉಂಟಾಗಿದ್ದರಿಂದ ಹೊರರೋಗಿಗಳು ಹಾಗೂ ಆಸ್ಪತ್ರೆಗೆ ದಾಖಲಾದ ಒಳ ರೋಗಿಗಳಿಗೆ ಹಾಗೂ ಎಕ್ಸ್‌ರೇ ವಿಭಾಗಕ್ಕೂ ತೊಂದರೆಯಾಗಿದೆ. ಜನರೇಟರ್ ಕೆಟ್ಟರೆ ದಾವಣಗೆರೆ ಇಲ್ಲವೇ ಬೆಂಗಳೂರಿನಿಂದ ತಂತ್ರಜ್ಞರನ್ನು ಕರೆಸಿ ರಿಪೇರಿ ಮಾಡಿಸಲಾಗುತ್ತಿತ್ತು. ಆದರೆ ಈ ಬಾರಿ ಅವರೂ ಕೈಕೊಟ್ಟಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿದೆ.
ಡಿಎಚ್‌ಒ ಭೇಟಿ
ಜನರೇಟರ್ ಕೆಟ್ಟಿದ್ದರಿಂದ ಮೇಣದಬತ್ತಿ ಬೆಳಕಿನಲ್ಲಿ ಚಿಕಿತ್ಸೆ ನೀಡುವುದನ್ನು ಅರಿತ ಜಿಲ್ಲಾ ಆರೋಗ್ಯಾಧಿಕಾರಿ ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜನರೇಟರ್ ದುರಸ್ತಿ ಮಾಡಿಸುವಂತೆ ಸೂಚನೆ ನೀಡಿದ್ದರು. ಬೆಂಗಳೂರಿನಿಂದ ತಂತ್ರಜ್ಞರು ಆಗಮಿಸಿ ಜನರೇಟರ್ ದುರಸ್ತಿಗೊಳಿಸಿದ್ದಾರೆ. ಅಲ್ಲಿಯವರೆಗೂ ತುರ್ತು ಚಿಕಿತ್ಸಾ ವಿಭಾಗದಲ್ಲಿ ಮೇಣದಬತ್ತಿ ಬೆಳಕಿನಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ.
Ad
You seem to have an Ad Blocker on.
To continue reading, please turn it off or whitelist Udayavani.