ಸೆಪ್ಟಂಬರ್ ಅಂತ್ಯದೊಳಗೆ 1 ಸಾವಿರ ಚಾರ್ಜಿಂಗ್ ಸೆಂಟರ್: ಸಚಿವ ಸುನಿಲ್
Team Udayavani, May 18, 2022, 12:02 AM IST
ಬಂಟ್ವಾಳ: ಜೂನ್ ಮೊದಲ ವಾರದಿಂದ ರಾಜ್ಯಾದ್ಯಂತ ವಾಹನಗಳ ಬ್ಯಾಟರಿ ಚಾರ್ಜಿಂಗ್ ಸೆಂಟರ್ ಅಭಿಯಾನ ನಡೆಯಲಿದ್ದು, ಮೂರ್‍ನಾಲ್ಕು ತಿಂಗಳಲ್ಲಿ 1 ಸಾವಿರ ಕೇಂದ್ರಗಳನ್ನು ಆರಂಭಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ರಾಜ್ಯ ಇಂಧನ ಖಾತೆ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಅವರು ಮಂಗಳವಾರ ಬಂಟ್ವಾಳದ ವಿದ್ಯಾಗಿರಿಯ ಬಳಿಯ ಅರ್ಬಿಗುಡ್ಡೆಯಲ್ಲಿ ಮೆಸ್ಕಾಂನಿಂದ ಅನುಷ್ಠಾನ ಗೊಂಡಿರುವ 11.98 ಕೋ.ರೂ. ವೆಚ್ಚದ ಗ್ಯಾಸ್ ಇನ್ಸು ಲೇಟೆಡ್ (ಜಿಐ) ವಿದ್ಯುತ್ ಉಪ ಕೇಂದ್ರ ವನ್ನು ಉದ್ಘಾಟಿಸಿ ಪತ್ರಕರ್ತರ ಜತೆ ಮಾತನಾಡಿದರು.
5,020 ಮೆಗಾವ್ಯಾಟ್ ಉತ್ಪಾದನೆ
ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಾಗ ದಂತೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ರಾಯಚೂರು, ಬಳ್ಳಾರಿಯ ಎಲ್ಲ ಯೂನಿಟ್‌ಗಳು ಕೂಡ ಕಾರ್ಯಾರಂಭ ಮಾಡಿವೆ. ಹಿಂದೆ ಪ್ರತೀ ಸಂದರ್ಭದಲ್ಲಿ 3, 6 ಯೂನಿಟ್‌ಗಳು ಸ್ಥಗಿತಗೊಳ್ಳುತ್ತಿದ್ದವು. ಕಳೆದ 7 ವರ್ಷಗಳಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ 5,020 ಮೆಗಾವ್ಯಾಟ್ ಉತ್ಪಾದನೆ ಮಾಡಿದ್ದು, ಕಲ್ಲಿದ್ದಲು ನಿರಂತರ ಸರಬರಾಜು ಇದ್ದ ಕಾರಣ ಇದು ಸಾಧ್ಯವಾಗಿದೆ. ಜತೆಗೆ ಅಧಿಕಾರಿಗಳು ಚೆನ್ನಾಗಿ ನಿರ್ವಹಣೆ ಮಾಡಿದ್ದಾರೆ ಎಂದರು.
ಪವರ್‌ಮನ್‌ಗಳ ನೇಮಕ
ಹೆಚ್ಚುವರಿ ಪವರ್‌ಮನ್‌ಗಳ ನೇಮ ಕಾತಿ ಪ್ರಕ್ರಿಯೆ ಆರಂಭಿಸಿದ್ದು, 899 ಹೊಸ ನೇಮಕಾತಿ ನಡೆದಿದೆ. ಮೆಸ್ಕಾಂನಲ್ಲೇ 600ಕ್ಕೂ ಅಧಿಕ ಪವರ್‌ಮನ್‌ಗಳ ನೇಮಕವಾಗಿದೆ. ಹುದ್ದೆ ಭರ್ತಿಯ ದೃಷ್ಟಿಯಿಂದ 1,500 ಮಂದಿಯ ನೇಮಕಾತಿಗಾಗಿ ಕೆಪಿಟಿಸಿಎಲ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಜೂನ್‌ನಲ್ಲಿ ಪರೀಕ್ಷೆ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಪವರ್‌ಮನ್‌ಗಳಿಗೆ ಅವಘಡದ ಸಂದರ್ಭ ನೀಡುವ ವಿಮೆಯ ಮೊತ್ತವನ್ನು 20 ಲಕ್ಷ ರೂ.ಗಳಿಂದ 40 ಲಕ್ಷ ರೂ.ಗಳಿಗೆ ಏರಿಸಲಾಗಿದೆ ಎಂದರು.
ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ದಿ ಮೈಸೂರ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ಅಧ್ಯಕ್ಷ ಸಂತೋಷ್ ಕುಮಾರ್ ರೈ, ಬುಡಾ ಅಧ್ಯಕ್ಷ ಬಿ. ದೇವದಾಸ್ ಶೆಟ್ಟಿ, ದ.ಕ. ಜಿ.ಪಂ. ಸಿಇಒ ಡಾ| ಕುಮಾರ್, ಮೆಸ್ಕಾಂ ಎಂಡಿ ಪ್ರಶಾಂತ್ ಕುಮಾರ್ ಮಿಶ್ರ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ರಸ್ತೆ ಮಧ್ಯೆಯೇ ಪ್ರವಾಸಿಗರ ಸೆಲ್ಪಿ… ಚಾರ್ಮಾಡಿ ಘಾಟ್ ನಲ್ಲಿ ವಾಹನ ಸವಾರರ ಪರದಾಟ
ವರ್ಷದ ಬಳಿಕ ತಾಯಿ ಮಡಿಲು ಸೇರಿದ ಮಗ: ವಿಳಾಸ ಪತ್ತೆಗೆ ನೆರವಾಯಿತು ಫೇಸ್ ಬುಕ್
ಉಡುಪಿ : ಆಟೋರಿಕ್ಷಾ ಬಳಿ ತೆರಳಿ ಪ್ರಕರಣ ಇತ್ಯರ್ಥಪಡಿಸಿದ ನ್ಯಾಯಾಧೀಶರು
ಸುಳ್ಯ, ಕೊಡಗಿನ ಕೆಲವೆಡೆ ಭಾರಿ ಶಬ್ದದೊಂದಿಗೆ ಭೂಕಂಪನ, ಗೋಡೆ ಬಿರುಕು
ಸಕಲೇಶಪುರ : ರಸ್ತೆ ಅಪಘಾತಕ್ಕೆ ದೈಹಿಕ ಶಿಕ್ಷಕ ಸ್ಥಳದಲ್ಲೇ ಸಾವು: ವಿದ್ಯಾರ್ಥಿಗಳ ಕಣ್ಣೀರು…
ಹೊಸ ಸೇರ್ಪಡೆ
ಒಂದೇ ದಿನ 45% ಏರಿಕೆ ಕಂಡ ಕೋವಿಡ್ ಪ್ರಕರಣಗಳ ಸಂಖ್ಯೆ; 17,073 ಹೊಸ ಪ್ರಕರಣಗಳು
ದನ ಮೇಯಿಸುತ್ತಿದ್ದ ಯುವತಿಯನ್ನು ಹೊತ್ತೊಯ್ದು ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರ: ಆರೋಪಿ ಬಂಧನ
ಅಂಜನಾದ್ರಿಗೆ ಮೈಸೂರು ಒಡೆಯರ್ ಕುಟುಂಬ ಭೇಟಿ; ದೇವರ ದರ್ಶನ
ಚಾಹಲ್-ಹೂಡಾ ಮಿಂಚು: ಮಳೆ ಕಾಡಿದ ಪಂದ್ಯದಲ್ಲಿ ಗೆದ್ದು ಬೀಗಿದ ಟೀಂ ಇಂಡಿಯಾ
ಜು. 1ರಿಂದ ಏಕಬಳಕೆ ಪ್ಲಾಸ್ಟಿಕ್ ನಿಷೇಧ: ರಾಜ್ಯದಲ್ಲೂ ಕಟ್ಟುನಿಟ್ಟಿನ ಜಾರಿಗೆ ಕ್ರಮ