ವಾರದ ಹಿಂದೆಯೇ ಮಂಗಳೂರಿಗೆ ಬಂದಿದ್ದ ಶಾರೀಕ್; ನಾಗುರಿ ಘಟನೆಗೆ ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಪ್ರಭಾವ

Team Udayavani, Nov 21, 2022, 1:05 PM IST

ವಾರದ ಹಿಂದೆಯೇ ಮಂಗಳೂರಿಗೆ ಬಂದಿದ್ದ ಶಾರೀಕ್; ನಾಗುರಿ ಘಟನೆಗೆ ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಪ್ರಭಾವ

ಮಂಗಳೂರು: ಇಲ್ಲಿನ ನಾಗುರಿ ಬಳಿ ಕಳೆದ ಶನಿವಾರ ಸಂಜೆ ನಡೆದ ಆಟೋ ರಿಕ್ಷಾ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರ ತಂಡ ಮಹತ್ವದ ಪ್ರಗತಿ ಸಾಧಿಸಿದೆ.

ಘಟನೆಯಲ್ಲಿ ಗಾಯಗೊಂಡಿದ್ದ ಶಂಕಿತ ಶಾರೀಕ್ ನನ್ನು ಆತನ ಮನೆಯವರು ಗುರುತು ಪತ್ತೆ ಮಾಡಿದ್ದಾರೆ. ತೀರ್ಥಹಳ್ಳಿಯಿಂದ ಬಂದಿದ್ದ ಮೂವರು ಸಂಬಂಧಿಕರು ಆತನ ಗುರುತು ಪತ್ತೆ ಮಾಡಿದ್ದಾರೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದದ ಎಡಿಜಿಪಿ ಅಲೋಕ್ ಕುಮಾರ್, ಶಾರಿಕ್ ಸಹಿತ ಮೂವರು ಪೊಲೀಸರ ವಶದಲ್ಲಿದ್ದಾರೆ. ಇಬ್ಬರನ್ನು ಮೈಸೂರಿನಿಂದ ಓರ್ವನನ್ನು ಮಂಗಳೂರಿನಲ್ಲಿ ವಶಕ್ಕೆ ಪಡೆಯಲಾಗಿದೆ. ಓರ್ವನನ್ನು ಊಟಿಯಿಂದ ಕರೆದುಕೊಂಡು ಬರಲಾಗುತ್ತಿದೆ. ಸ್ಪೋಟದ ಒಂದು ವಾರದ ಹಿಂದೆಯೆ ಶಾರಿಕ್ ಮಂಗಳೂರಿಗೆ ಬಂದು ವಾಪಸಾಗಿದ್ದ ಎಂದಿದ್ದಾರೆ.

ನಾಗುರಿ ಘಟನೆಗೆ ಅಂತಾರಾಷ್ಟ್ರೀಯ ಭಯೋತ್ಪಾದನಾ ಸಂಘಟನೆಯ ಪ್ರಭಾವವಿದೆ. ಅವರ ಜೊತೆ ಅರಾಫತ್ ಅಲಿ ಎಂಬಾತನಿದ್ದ. ಅಲ್ಲದೆ ಅಬ್ದುಲ್ ತಾಹಾ ಎಂಬಾತ ಉಗ್ರನಿದ್ದ ಎಂದು ಎಡಿಜಿಪಿ ಮಾಹಿತಿ ನೀಡಿದರು.

ಆತನಿಂದ ವಶಪಡಿಸಿಕೊಂಡ ಮೊಬೈಲ್ ಮತ್ತು ಕುಟುಂಬದವರು ಗುರುತಿಸಿರುವ ಕಾರಣದಿಂದ ಆರೋಪಿ ಮೊಹಮ್ಮದ್ ಶಾರೀಕ್ (24 ವ) ಎಂದು ತಿಳಿದು ಬಂದಿದೆ. ಈತನ ಮೇಲೆ ಮಂಗಳೂರು ಪೂರ್ವ ಮತ್ತು ಉತ್ತರ ಠಾಣೆ ಹಾಗೂ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದಾರೆ.

2020ರ ನವೆಂಬರ್ 27ರಂದು ಮಂಗಳೂರು ಪೂರ್ವ ಠಾಣಾ ವ್ಯಾಪ್ತಿಯಲ್ಲಿ ಮತ್ತು 28ರಂದು ಮಂಗಳೂರು ಉತ್ತರ ಠಾಣಾ ವ್ಯಾಪ್ತಿಯಲ್ಲಿ ಪ್ರಚೋದನಕಾರಿ ಗೋಡೆ ಬರಹ ಬರೆದ ಪ್ರಕರಣದಲ್ಲಿ ಬಂಧನವಾಗಿದ್ದ. ಈತನ ಜತೆ ಮಾಜ್ ಮುನೀರ್ ಎಂಬಾತನೂ ಸಿಕ್ಕಿ ಬಿದ್ದಿದ್ದ. ಬಳಿಕ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

ಈ ವರ್ಷದ ಅಗಸ್ಟ್  15ರಂದು ಶಿವಮೊಗ್ಗ ಗಲಾಟೆ ಸಂಧರ್ಭದಲ್ಲಿ ಶಿವಮೊಗ್ಗ ದಲ್ಲಿ ಜಬೀವುಲ್ಲಾ ಎಂಬಾತನನ್ನು ದಸ್ತಗಿರಿ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಶಾರೀಕ್ ಅಲರ್ಟ್ ಆಗಿ ಊರು ಬಿಟ್ಟು ಹೋಗಿದ್ದ‌. ಕೊಯಂಬತ್ತೂರು, ಕೇರಳ, ಮೈಸೂರು ಗೆ ಹೋಗಿದ್ದ. ಆತ ಮೈಸೂರಿನ ಬಾಡಿಗೆ ಮನೆಯಲ್ಲಿದ್ದ. ನವೆಂಬರ್ 19ರಂದು ಮೈಸೂರಿನಿಂದ ಹೊರಟು ಹುಣಸೂರು ಮಡಿಕೇರಿ ಮೂಲಕ ಮಂಗಳೂರಿಗೆ ಬಂದು ಆಟೋದಲ್ಲಿ ಪಂಪ್ ವೆಲ್ ಕಡೆಗೆ ಹೋಗುತ್ತಿದ್ದಾಗ ಘಟನೆ ನಡೆದಿದೆ.

ಶಾರೀಕ್ ನು ತಾನಿದ್ದ ಬಾಡಿಗೆ ಮನೆಯಿಂದ ಸಲ್ಪೆಕ್ಸ್ ಸಲ್ಫರ್ ಪೌಡರ್, ನಟ್ ಬೋಲ್ಟ್ ಗಳು, ಸರ್ಕ್ಯುಟ್ ಗಳು, ಮಲ್ಟಿಫಂಕ್ಷನ್ ಡಿಲೆ ಟೈಮರ್, ಗ್ರೈಂಡರ್ ಮಿಕ್ಸರ್, ಮ್ಯಾಚ್ ಬಾಕ್ಸ್, ಬ್ಯಾಟರಿ, ಟೈಮರ್, ಆಧಾರ್, ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.

ಕೊಯಮತ್ತೂರು ಸ್ಪೋಟಕ್ಕೆ ನಂಟು: ತಮಿಳುನಾಡಿನ ಕೊಯಮತ್ತೂರಿನಲ್ಲಿ ಇತ್ತೀಚೆಗೆ ನಡೆದ ಸ್ಪೋಟಕ್ಕೂ ಶಾರೀಕ್ ಗೂ ನಂಟಿರುವ ಹಿನ್ನೆಲೆಯಲ್ಲಿ ತಮಿಳುನಾಡು ಪೊಲೀಸರ ತಂಡ ಮಂಗಳೂರಿಗೆ ಬಂದಿದೆ ಎಂದರು.

ಟಾಪ್ ನ್ಯೂಸ್

navazuddin

ನಟ ನವಾಜುದ್ದೀನ್,ಮಾಜಿ ಪತ್ನಿಗೆ ಮಕ್ಕಳ ಸಲುವಾಗಿ ಹಾಜರಾಗಲು ಹೇಳಿದ ಹೈಕೋರ್ಟ್

ಬೆಂದೂರ್ ವೆಲ್; ಖಾಸಗಿ ಬಸ್ ಧಾವಂತಕ್ಕೆ ಮತ್ತೊಂದು ಬಲಿ, ನಿಲ್ಲಿಸದೆ ಪರಾರಿಯಾದ ಚಾಲಕ

ಬೆಂದೂರ್ ವೆಲ್; ಖಾಸಗಿ ಬಸ್ ಧಾವಂತಕ್ಕೆ ಮತ್ತೊಂದು ಬಲಿ, ನಿಲ್ಲಿಸದೆ ಪರಾರಿಯಾದ ಚಾಲಕ

4-mangaluru

ಮಂಗಳೂರು: 14ನೇ ಮಹಡಿಯಿಂದ ಬಿದ್ದು ಯುವಕ ಮೃತ್ಯು

ಸಿನಿಮಾಕ್ಕೆ ಭಾಷೆಗಳ ಗಡಿ ಸಲ್ಲದು…: ಕನ್ನಡಕ್ಕೆ ಬಂದ ಅನುಪಮ್ ಖೇರ್

ಸಿನಿಮಾಕ್ಕೆ ಭಾಷೆಗಳ ಗಡಿ ಸಲ್ಲದು…: ಕನ್ನಡಕ್ಕೆ ಬಂದ ಅನುಪಮ್ ಖೇರ್

tdy-10

ಚನ್ನಪಟ್ಟಣಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಯಾರು?

ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ: ಯಡಿಯೂರಪ್ಪ

ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ: ಯಡಿಯೂರಪ್ಪ

ODI World Cup 2023: Mumbai, Ahmedabad To Hosts Semis And Final

ಮುಂಬೈನಲ್ಲಿ ವಿಶ್ವಕಪ್ ಸೆಮಿಫೈನಲ್ ಮ್ಯಾಚ್; ಭಾರತ- ಪಾಕ್ ಪಂದ್ಯ ನಡೆಯುವುದು ಎಲ್ಲಿ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ: ಯಡಿಯೂರಪ್ಪ

ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ: ಯಡಿಯೂರಪ್ಪ

ಚುನಾವಣಾ ಅಕ್ರಮ ಆರೋಪ: ಜೆಡಿಎಸ್ ಶಾಸಕ ಗೌರಿ ಶಂಕರ್ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್

ಚುನಾವಣಾ ಅಕ್ರಮ ಆರೋಪ: ಜೆಡಿಎಸ್ ಶಾಸಕ ಗೌರಿ ಶಂಕರ್ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್

2–gadaga

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಚುನಾವಣಾ ಪ್ರಚಾರ ಸಾಮಗ್ರಿ ವಶಕ್ಕೆ

ಶಿಕ್ಷಕರ ವರ್ಗಾವಣೆ ಚೆಂಡು ಚುನಾವಣ ಆಯೋಗದ ಅಂಗಣಕ್ಕೆ

ಶಿಕ್ಷಕರ ವರ್ಗಾವಣೆ ಚೆಂಡು ಚುನಾವಣ ಆಯೋಗದ ಅಂಗಣಕ್ಕೆ

ಚುನಾವಣ ಆಯೋಗವೇ “ಸೂಪರ್‌ ಪವರ್‌’; ರಾಜ್ಯಾದ್ಯಂತ ನೀತಿ ಸಂಹಿತೆ ಜಾರಿ

ಚುನಾವಣ ಆಯೋಗವೇ “ಸೂಪರ್‌ ಪವರ್‌’; ರಾಜ್ಯಾದ್ಯಂತ ನೀತಿ ಸಂಹಿತೆ ಜಾರಿ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

crime (2)

ಬಳ್ಳಾರಿ: ತವರು ಮನೆ ಸೇರಿದ್ದ ಪತ್ನಿಯ ಕೊಲೆಗೆ ಯತ್ನಿಸಿದ ಕುಡುಕ ಗಂಡ

navazuddin

ನಟ ನವಾಜುದ್ದೀನ್,ಮಾಜಿ ಪತ್ನಿಗೆ ಮಕ್ಕಳ ಸಲುವಾಗಿ ಹಾಜರಾಗಲು ಹೇಳಿದ ಹೈಕೋರ್ಟ್

ಬೆಂದೂರ್ ವೆಲ್; ಖಾಸಗಿ ಬಸ್ ಧಾವಂತಕ್ಕೆ ಮತ್ತೊಂದು ಬಲಿ, ನಿಲ್ಲಿಸದೆ ಪರಾರಿಯಾದ ಚಾಲಕ

ಬೆಂದೂರ್ ವೆಲ್; ಖಾಸಗಿ ಬಸ್ ಧಾವಂತಕ್ಕೆ ಮತ್ತೊಂದು ಬಲಿ, ನಿಲ್ಲಿಸದೆ ಪರಾರಿಯಾದ ಚಾಲಕ

TDY-15

ರಾಹುಲ್‌ ಕೋಲಾರಕ್ಕೆ ಬಂದರೇನು ಬದಲಾವಣೆ ಆಗಲ್ಲ

tdy-14

ಅಧಿಕಾರಿ ಕಚೇರಿ ಆವರಣದಲ್ಲೇ ನೀತಿ ಸಂಹಿತೆ ಉಲ್ಲಂಘನೆ