
ಬೆಂದೂರ್ ವೆಲ್; ಖಾಸಗಿ ಬಸ್ ಧಾವಂತಕ್ಕೆ ಮತ್ತೊಂದು ಬಲಿ, ನಿಲ್ಲಿಸದೆ ಪರಾರಿಯಾದ ಚಾಲಕ
Team Udayavani, Mar 30, 2023, 1:21 PM IST

ಮಂಗಳೂರು: ಖಾಸಗಿ ಬಸ್ ಢಿಕ್ಕಿ ಹೊಡೆದು ಹನ್ನೊಂದು ವರ್ಷದ ಬಾಲಕ ಅಸುನೀಗಿದ ಪ್ರಕರಣದ ನೆನಪು ಮಾಸುವ ಮುನ್ನ ಬೆಂದೂರ್ ವೆಲ್ ನಲ್ಲಿ ಮತ್ತೊಂದು ಅಪಘಾತ ನಡೆದಿದೆ.
ಖಾಸಗಿ ಬಸ್ ನ ಧಾವಂತಕ್ಕೆ ಒಂದು ವಾರದ ನಡುವೆ ಎರಡನೇ ಘಟನೆ ಇದಾಗಿದೆ. ಪಾದಾಚಾರಿ ಮಹಿಳೆಗೆ ಖಾಸಗಿ ಬಸ್ ಢಿಕ್ಕಿ ಹೊಡೆದಿದ್ದು, ಬಸ್ ಚಾಲಕ ಬಸ್ ನಿಲ್ಲಿಸದೆ ಪರಾರಿಯಾಗಿದ್ದಾನೆ.
ಇದನ್ನೂ ಓದಿ:ಕಚೇರಿಯಲ್ಲಿ ಕುರ್ಚಿ ವಿಚಾರಕ್ಕೆ ವಾಗ್ವಾದ ; ಸಹೋದ್ಯೋಗಿಯ ಮೇಲೆ ಗುಂಡು!
ಘಟನೆಯಲ್ಲಿ ಮಹಿಳೆ ಸ್ಥಳದಲ್ಲೇ ಅಸುನೀಗಿದ್ದಾರೆ. ಪರಾರಿಯಾಗಿರುವ ಬಸ್ ಬಗ್ಗೆ ಪೊಲೀಸರು ಸಿಸಿ ಟಿವಿ ದೃಶ್ಯ ಆಧರಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಮಾರ್ಚ್ 24ರಂದು ಖಾಸಗಿ ಬಸ್ ನ ಧಾವಂತಕ್ಕೆ ಬೆಂದೂರ್ ವೆಲ್ ನಲ್ಲಿ ಬಾಲಕ ಮೃತ ಪಟ್ಟಿದ್ದ. ಬಸ್ ಸ್ಕೂಟರ್ ಗೆ ಢಿಕ್ಕಿ ಹೊಡೆದ ಕಾರಣ ಹಿಂದೆ ಕುಳಿತಿದ್ದ ಹುಡುಗ ಬಸ್ ಚಕ್ರದಡಿ ಸಿಲುಕಿದ್ದ.
ಟಾಪ್ ನ್ಯೂಸ್
