
ನಕಲಿ ಮಂತ್ರವಾದಿ ಮೇಲೆ ಹಲ್ಲೆ ಪ್ರಕರಣ ರಾಜಿಯಲ್ಲಿ ಮುಕ್ತಾಯ
Team Udayavani, Jun 11, 2023, 5:03 AM IST

ಉಪ್ಪಿನಂಗಡಿ: ಗುಜರಿ ವ್ಯಾಪಾರಿಯೋರ್ವ ದಿಢೀರ್ ಮಂತ್ರವಾದಿಯಾದ ಬಗ್ಗೆ ಸಂದೇಹಗೊಂಡ ಯುವಕರ ಗುಂಪು ಆತನ ಮೇಲೆ ಹಲ್ಲೆ ನಡೆಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಘಟನೆಯ ಬಗ್ಗೆ ಹಲ್ಲೆಗೀಡಾದ ಮಂತ್ರವಾದಿಯು ಪೊಲೀಸರಿಗೆ ದೂರು ನೀಡಿದ್ದರೂ ಆ ಬಳಿಕ ಪ್ರಕರಣವನ್ನು ರಾಜಿಯಲ್ಲಿ ಮುಕ್ತಾಯಗೊಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ವಡೆಂಕೇರಿ ಮನೆ ನಿವಾಸಿ 59ರ ಹರೆಯದ ಮಹಮ್ಮದಾಲಿ ಹಲ್ಲೆಗೀಡಾದ ವ್ಯಕ್ತಿ. ಆತ ಬಜತ್ತೂರು ಗ್ರಾಮದ ವಳಾಲು ಎಂಬಲ್ಲಿ ದಂಪತಿಗಳ ಮಗುವಿನ ಅನಾರೋಗ್ಯಕ್ಕೆ ಸಂಬಂಧಿಸಿ ನೂಲು ಮಂತ್ರಿಸಿ ಕೊಡುವ ವೇಳೆ ಸ್ಥಳಕ್ಕೆ ಬಂದ ಅನ್ಸಾರ್ ಮತ್ತಿತರ ಯುವಕರ ಗುಂಪು ಗುಜರಿ ವ್ಯಾಪಾರದ ನಡುವೆ ಮಂತ್ರವಾದಿಯಾದ ಬಗೆ ಹೇಗೆಂದು ಪ್ರಶ್ನಿಸಿ ನಕಲಿ ಮಂತ್ರವಾದಿ ಎಂದು ಆರೋಪಿಸಿ ಹಲ್ಲೆ ನಡೆಸಿತ್ತು. ಈ ಬಗ್ಗೆ ಹಲ್ಲೆಗೀಡಾದ ಮಂತ್ರವಾದಿ ಪೊಲೀಸರಿಗೆ ದೂರು ನೀಡಿದ್ದರು.
ಈ ಪ್ರಕರಣವು ಜೂನ್ 3ರಂದು ನಡೆದಿದ್ದು, ಹಲ್ಲೆ ನಡೆಸುವ ವೀಡಿಯೋ ವೈರಲ್ ಆದ ಬಳಿಕ ಉಭಯ ತಂಡದಿಂದ ಮಾತುಕತೆ ನಡೆದು ಪ್ರಕರಣವನ್ನು ರಾಜಿಯಲ್ಲಿ ಬಗೆಹರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Jawan ತಂಡದಿಂದ ಪ್ರೇಕ್ಷಕರಿಗೆ ʼಬೈ1 ಗೆಟ್ 1 ಫ್ರೀʼ ಟಿಕೆಟ್ ಆಫರ್ ಘೋಷಿಸಿದ ಶಾರುಖ್ ಖಾನ್

Rajkot Odi; ತನ್ನ ಮಾದರಿ ನಡೆಯಿಂದ ಮೆಚ್ಚುಗೆ ಪಡೆದ ರೋಹಿತ್ ಶರ್ಮಾ| ವಿಡಿಯೋ

Ujjain: 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ: ರಿಕ್ಷಾ ಚಾಲಕ ಸೇರಿ ಮೂವರ ಬಂಧನ

Sandalwood; ನನ್ನಪಾತ್ರ ತುಂಬಾ ಹೊಸದಾಗಿದೆ: ತೋತಾಪುರಿ 2 ಮೇಲೆ ಧನಂಜಯ್ ನಿರೀಕ್ಷೆ

Animal Teaser: ಸಿರಿವಂತನ ರಗಡ್ ಕಹಾನಿ; ಮಾಸ್ ಲುಕ್ ನಲ್ಲಿ ಮಿಂಚಿದ ʼರಾಕ್ ಸ್ಟಾರ್ʼ