
ಕಾಡಾನೆಗಳಿಂದ ಮತ್ತೆ ಕೃಷಿ ತೋಟಗಳಿಗೆ ದಾಳಿ
Team Udayavani, Nov 27, 2022, 6:05 AM IST

ಬೆಳ್ತಂಗಡಿ: ಸುಮಾರು ಎರಡು ತಿಂಗಳಿಂದ ಸದ್ದು ಮಾಡದ ಕಾಡಾನೆಗಳು ಕಳೆದೊಂದು ವಾರದಿಂದ ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಬಾರೆ, ಕುಂಚಾಡಿ, ಮುದ್ದಿನಡ್ಕ ಮೊದಲಾದ ಪ್ರದೇಶಗಳ ತೋಟಗಳಿಗೆ ದಾಳಿ ನಡೆಸಿ ಅಡಿಕೆ, ತೆಂಗು, ಬಾಳೆ ಕೃಷಿಗೆ ಹಾನಿ ಉಂಟು ಮಾಡಿವೆ.
ಉಪವಲಯ ಅರಣ್ಯಾಧಿಕಾರಿ ಭವಾನಿ ಶಂಕರ್ ಹಾಗೂ ಸಿಬಂದಿ ಆನೆಗಳು ದಾಳಿ ನಡೆಸಿರುವ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಎರಡು ಅಥವಾ ಹೆಚ್ಚಿನ ಆನೆಗಳ ಗುಂಪು ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಚಾರ್ಮಾಡಿ-ಕನಪಾಡಿ, ಮುಂಡಾಜೆ- ಕಾಪು ರಕ್ಷಿತಾರಣ್ಯ ಪ್ರದೇಶದ ಚಾರ್ಮಾಡಿ, ಚಿಬಿದ್ರೆ, ತೋಟತ್ತಾಡಿ, ಮುಂಡಾಜೆ, ನೆರಿಯ, ಕಡಿರುದ್ಯಾವರ ಮೊದಲಾದ ಕಡೆ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆಗಳ ದಾಳಿಗೆ ಹಲವಾರು ಎಕರೆ ಕೃಷಿ ಭೂಮಿ ಈಗಾಗಲೇ ನಾಶವಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಿಲ್ಯ: ಅಡಿಕೆ ತೋಟದಲ್ಲಿ ಅಕ್ರಮ ಮದ್ಯ ದಾಸ್ತಾನು; ಅಬಕಾರಿ ಇಲಾಖೆಯಿಂದ ದಾಳಿ, ಸೊತ್ತುಗಳು ವಶ

ಉದ್ಘಾಟನೆಗಾಗಿ ಮದುವಣಗಿತ್ತಿಯಂತೆ ಶೋಭಿಸುತ್ತಿದೆ ಜಿ.ಎಲ್.ಒನ್

ಬಂಟ್ವಾಳ: ದಾಖಲೆಗಳಿಲ್ಲದೆ ಅಕ್ಕಿ ಸಾಗಾಟ; ಲಾರಿ ಸಹಿತ ಲಕ್ಷಾಂತರ ರೂ. ಮೌಲ್ಯದ ಅಕ್ಕಿ ವಶ

ಪೇಂಟಿಂಗ್ ಕೆಲಸ ಮಾಡುತ್ತಿದ್ದ ವೇಳೆ ಆಯ ತಪ್ಪಿ ಬಿದ್ದು, ಗಂಭೀರಗಾಯಗೊಂಡ ವ್ಯಕ್ತಿ ಸಾವು

ವಾಟ್ಸ್‌ಆ್ಯಪ್ ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡ ಯುವಕ