

Team Udayavani, Apr 17, 2018, 8:40 AM IST
ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಸೋಮವಾರ ಬೆಳ್ಳಿ ಮೂಡುವ ಹೊತ್ತಿಗೆ ಶ್ರೀ ದೇವರ ದೀಪ ಬಲಿ ಉತ್ಸವ ನಡೆಯಿತು. ಪ್ರತಿವರ್ಷ ಎ. 16 ರಂದು ಸೂರ್ಯೋದಯಕ್ಕೆ ಮೊದಲು ಈ ಉತ್ಸವ ನಡೆಯುತ್ತದೆ. ರವಿವಾರ ರಾತ್ರಿ ಪೇಟೆ ಸವಾರಿಗೆ ತೆರಳಿದ ದೇವರು ದೇವಾಲಯಕ್ಕೆ ಮರಳಿದ ಬಳಿಕ ತಡರಾತ್ರಿ ಉತ್ಸವ ಮುಗಿಯುತ್ತದೆ. ಅನಂತರ ಬ್ರಹ್ಮವಾಹಕರು, ತಂತ್ರಿಗಳು ಸಹಿತ ಉತ್ಸವಕ್ಕೆ ಸಂಬಂಧಪಟ್ಟ ಜವಾಬ್ದಾರಿಯವರು ಬೆಳ್ಳಿ ಮೂಡುವ ಮೊದಲೇ ಸ್ನಾನ ಮಾಡಿ ಮಡಿಯುಟ್ಟು ದೀಪ ಬಲಿ ಉತ್ಸವಕ್ಕೆ ಸಿದ್ಧರಾದ ಬಳಿಕ ದೀಪ ಹಚ್ಚಿ ದೇವರ ಬಲಿ ನಡೆಯುತ್ತದೆ.
ವರ್ಷದಲ್ಲಿ ಒಂದು ದಿನ ಮಾತ್ರ ಅಂದರೆ ಜಾತ್ರೆಯ ಸಂದರ್ಭದ ಎ. 16ರಂದು ಮಾತ್ರ ಶ್ರೀ ದೇವರ ದೀಪ ಬಲಿ ಉತ್ಸವ ನಡೆಯುತ್ತದೆ. ದೀಪ ಬಲಿ ಉತ್ಸವಕ್ಕೂ ಧಾರ್ಮಿಕ ಮಹತ್ವವಿದೆ. ಒಳಾಂಗಣದಲ್ಲಿ ಗುಡಿಗಳ, ಮಹಾಬಲಿ ಪೀಠದ, ಧ್ವಜ ಸ್ತಂಭದ ಬಳಿ ನೆಲದಲ್ಲಿ ಎಳ್ಳೆಣ್ಣೆ ಹಾಕಿ ಹಣತೆಗಳನ್ನು ಬೆಳಗಿಸಿ, ಅದೇ ಬೆಳಕಿನಲ್ಲಿ ದೀಪ ಬಲಿ ನಡೆಯುತ್ತದೆ. ಒಳಾಂಗಣದಲ್ಲಿ ಇತರ ದಿನ ನಡೆಯುವ ಉತ್ಸವದ ಸಂಪ್ರದಾಯಗಳನ್ನು ದೀಪ ಬಲಿ ಉತ್ಸವದಲ್ಲಿ ಪಾಲಿಸಲಾಗುತ್ತದೆ.
ಈಶನ ಬಂಡಿ ಉತ್ಸವ
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ ಹಿನ್ನೆಲೆಯಲ್ಲಿ ಎ. 15ರಂದು ರಾತ್ರಿ ಬಂಡಿ ಉತ್ಸವ ನಡೆಯಿತು. ಬೆಳಗ್ಗೆ ಸೌರಮಾನ ಯುಗಾದಿ ಆಚರಣೆ ನಡೆದು, ಬಲಿ ಉತ್ಸವ, ವಸಂತ ಕಟ್ಟೆಪೂಜೆ ನಡೆಯಿತು. ರಾತ್ರಿ ಉತ್ಸವ ಬಲಿ ಆರಂಭಗೊಂಡು, ಬಂಡಿ ಉತ್ಸವ (ಚಂದ್ರಮಂಡಲ) ನೆರವೇರಿತು. ಬಳಿಕ ಬನ್ನೂರು ಅಶೋಕನಗರ, ರೈಲ್ವೇ ಮಾರ್ಗ, ಕೊಂಬೆಟ್ಟು, ಸಕ್ಕರೆಕಟ್ಟೆ ಮಾರ್ಗವಾಗಿ ದೇವರ ಸವಾರಿ ಹೊರಟಿತು.
Ad
No health warning: ಸಮೋಸಾ, ಜಿಲೇಬಿಗೆ ಎಚ್ಚರಿಕೆ ಲೇಬಲ್ ಸುಳ್ಳು ಎಂದ ಕೇಂದ್ರ ಸರ್ಕಾರ
ಪ್ರಸಕ್ತ ಹಣಕಾಸು ವರ್ಷದಲ್ಲಿ ಕರ್ನಾಟಕಕ್ಕೆ 4.46 ಲಕ್ಷ ಕೋಟಿ ರೂ. ಸಾಲ: ನಬಾರ್ಡ್
ಅಳಿವೆ ಬಾಗಿಲು ಕಡೆ ಬಂದದ್ದೇ ಮುಳುವಾಯಿತೇ? ತೂಫಾನ್‌ಗೆ ಸಿಕ್ಕಿ ದೋಣಿ ಸಂಪೂರ್ಣ ದಿಕ್ಕಾಪಾಲು
Odisha se*xual harassment case: 3 ದಿನ ಬಳಿಕ ವಿದ್ಯಾರ್ಥಿನಿ ಸಾವು
Udupi: ಫೈಬರ್ ಮೂರ್ತಿ ಎಂದಿದ್ದ ಕಾಂಗ್ರೆಸ್ ಆರೋಪ ಸುಳ್ಳು: ಸುನಿಲ್ ಕುಮಾರ್
You seem to have an Ad Blocker on.
To continue reading, please turn it off or whitelist Udayavani.