ಬಸವ ವಸತಿ ಯೋಜನೆ: ಶೇ. 70 ಗುರಿ ಮುಟ್ಟಿಲ್ಲ 

Team Udayavani, Oct 29, 2018, 10:02 AM IST

29-october-1.gif

ಸುಳ್ಯ : ಮರಳು ಸಿಗದೆ, ಸಹಾಯಧನ ಬಾರದೆ ಬಸವ ವಸತಿ ಯೋಜನೆ ಫಲಾನುಭವಿಗಳು ಅಕ್ಷರಶಃ ಅತಂತ್ರ ಸ್ಥಿತಿಯಲ್ಲಿದ್ದಾರೆ! ಸಹಾಯಧನ ನಂಬಿ ಮನೆ ಕಟ್ಟಲು ಆರಂಭಿಸಿದ ಫಲಾನುಭವಿಗಳಿಗೆ ಸರಕಾರದ ದ್ವಂದ್ವ ನೀತಿ ಮಗ್ಗುಲ ಮುಳ್ಳಾಗಿದೆ. 70 ಶೇ. ದಷ್ಟು ಮನೆಗಳು ಆರಂಭದಲ್ಲಿ ಮತ್ತು ಅರ್ಧದಲ್ಲಿ ತೆವಳುತ್ತಿದ್ದು, ಗುರಿ ಮುಟ್ಟಲು ಪ್ರಯಾಸಪಡುತ್ತಿದೆ.

ಕಳೆದ ವರ್ಷ ಬಸವ ವಸತಿ ಯೋಜನೆಯಡಿ ತಾಲೂಕಿಗೆ 711 ಮನೆಗಳು ಮಂಜೂರಾತಿಗೊಂಡಿತ್ತು. ಅದರಲ್ಲಿ 220 ಮನೆಗಳು ಮಾತ್ರ ಪೂರ್ಣಗೊಂಡಿವೆ. 172 ಮನೆ ನಿರ್ಮಾಣ ಕೆಲಸ ಆರಂಭ ಆಗಿಲ್ಲ. 319 ಮನೆಗಳು ಕಾಮಗಾರಿ ಹಂತದಲ್ಲಿ ಬಾಕಿ ಇವೆ. ಸ್ಥಳೀಯವಾಗಿ ಮರಳು ಸಿಗದಿರುವುದು, ದುಬಾರಿ ದರ ಮತ್ತು ಸರಕಾರದ ಸಹಾಯಧನ ಬ್ಯಾಂಕ್‌ ಖಾತೆಗೆ ಜಮೆ ಆಗದಿರುವುದು ವಿಳಂಬಕ್ಕೆ ಮುಖ್ಯ ಕಾರಣ.

ಪ್ರಗತಿ ಕುಂಠಿತ
ತಾಲೂಕಿನ ಒಟ್ಟು ಅಂಕಿ ಅಂಶ ಗಮನಿಸಿದರೆ ವಸತಿ ಯೋಜನೆಯಲ್ಲಿ ಶೇ. 30ರಷ್ಟು ಪ್ರಗತಿ ಕಂಡಿದೆ. ಶೇ. 70ರಷ್ಟು ಬಾಕಿ ಇದೆ. ಇದರಲ್ಲಿ ಶೇ. 44.86 ಕಾಮಗಾರಿಗಳು ಹಂತದಲ್ಲಿವೆ. ಇದು ಹಿಂದಿನ ವರ್ಷದ ವಸತಿ ಯೋಜನೆಯಲ್ಲಿ ಮಂಜೂರಾದ ಕಾಮಗಾರಿಯ ಕಥೆ. ಮರಳು, ಸಹಾಯಧನ ಅವ್ಯವಸ್ಥೆಯಿಂದ ಪ್ರಗತಿಗೂ ತೊಡರಾಗಿದೆ.

ಮರಳು ಇಲ್ಲ!
ಎರಡು ಪ್ರಮುಖ ನದಿಗಳು ಹರಿಯುವ ತಾಲೂಕಿನಲ್ಲಿ ಮರಳಿಗೆ ಬರ ಬಂದಿದೆ. ಅದು ಆಡಳಿತ ವ್ಯವಸ್ಥೆ ಲೋಪದ ಬರ. ಕುಮಾರಧಾರಾ, ಪಯಸ್ವಿನಿ ನದಿಗಳಲ್ಲಿ ಮರಳು ನಿಕ್ಷೇಪಕ್ಕೆ ಕೊರತೆ ಇಲ್ಲ. ಹಿಂದೆ ಸಾಂಪ್ರದಾಯಿಕ ಪದ್ಧತಿಯಲ್ಲಿ ಮರಳುಗಾರಿಕೆ ನಡೆಯುತ್ತಿದ್ದ ಸಂದರ್ಭದಲ್ಲಿ ಭರಪೂರ ಮರಳು ಸಿಗುತ್ತಿತ್ತು.

ಸ್ಥಳೀಯ ಪಂಚಾಯತ್‌ಗೆ ತೆರಿಗೆ ಪಾವತಿಸಿ ಮರಳು ತೆಗೆದು ಮಾರಾಟ ಮಾಡುವ ವ್ಯವಸ್ಥೆ ಇತ್ತು. ನದಿ ಸಂಪತ್ತಿಗೆ ಧಕ್ಕೆ ಮತ್ತು ಹೊರ ಜಿಲ್ಲೆ ಮತ್ತು ರಾಜ್ಯಗಳಿಗೆ ಅಕ್ರಮವಾಗಿ ಮರಳು ಕೊಂಡೊಯ್ಯುವ ಕಾರಣ ಒಡ್ಡಿ ಮರಳುಗಾರಿಕೆ ಸ್ಥಗಿತಕ್ಕೆ ಸರಕಾರ ಆದೇಶ ನೀಡಿತ್ತು. ಬಳಿಕ ಗಣಿ ಇಲಾಖೆ ಮೂಲಕ ಹೊಸ ವ್ಯವಸ್ಥೆಯಲ್ಲಿ ಕೇನ್ಯ ಬಳಿ ಕುಮಾರಧಾರಾ ನದಿಯಲ್ಲಿ ನಿಕ್ಷೇಪ ಗುರುತಿಸಿ ಮರುಳುಗಾರಿಕೆಗೆ ಟೆಂಡರ್‌ ಆಹ್ವಾನಿಸಲಾಗಿತ್ತು. ಆದರೆ ಧಾರಣೆ ಪಟ್ಟಿ ಕಾರ್ಯಸಾಧುವಲ್ಲ ಎಂಬ ಕಾರಣದಿಂದ ಯಾರು ಟೆಂಡರ್‌ ವಹಿಸಿಕೊಳ್ಳಲಿಲ್ಲ. ಇದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಯಿತು. ಮರಳಿನ ಸಂಗ್ರಹವಿದ್ದರೂ, ಕಾನೂನಿನ ಪ್ರಕಾರ ಹೊಳೆಯಿಂದ ತೆಗೆಯುವಂತಿಲ್ಲ. ಹಾಗಾಗಿ ಇಲ್ಲಿನ ಜನರಿಗೆ ಯಾವುದೇ ಪ್ರಯೋಜನ ಇಲ್ಲದ ಸ್ಥಿತಿ ಉಂಟಾಗಿದೆ. 

ದುಬಾರಿ ದರ
ಮಂಗಳೂರಿನಿಂದ ಮರಳು ತಂದು ಮನೆ ಕಟ್ಟುವ ಸ್ಥಿತಿಯಲ್ಲಿ ಫಲಾನುಭವಿಗಳು ಇಲ್ಲ. ಲೋಡುವೊಂದಕ್ಕೆ ಆರೇಳು ಸಾವಿರ ರೂ. ಇದ್ದ ದರೆ ಈಗ 25 ಸಾವಿರ ರೂ. ದಾಟಿದೆ. ಇದರಿಂದ ಸಹಾಯಧನದಲ್ಲಿ ದೊರೆಯುವ ಶೇ. 75 ಹಣ ಮರಳು ಖರೀದಿಗೆ ಖರ್ಚು ಮಾಡಬೇಕು. ಒಂದು ಲೋಡ್‌ ಖರೀದಿಸಬೇಕಾದರೆ ವಾರಗಟ್ಟಲೆ, ತಿಂಗಳುಗಟ್ಟಲೇ ಕಾದದ್ದೂ ಇವೆ ಎನ್ನುತ್ತಾರೆ ತಾಲೂಕಿನ ಫಲಾನುಭವಿ ಭಾರತಿ.

ಸಹಾಯಧನ ಸಿಗುತ್ತಿಲ್ಲ
2018ರ ಜನವರಿಯಿಂದಲೇ ಸಹಾಯಧನ ಪಾವತಿ ವಿಳಂಬವಾಗಿದೆ. ಈ ತನಕ ಪಾವತಿ ಪ್ರಕ್ರಿಯೆ ಸಮರ್ಪಕವಾಗಿಲ್ಲ. 2018-19ರಲ್ಲಿ ಮನೆ ಮಂಜೂರಾತಿ ಆಗಿಯೇ ಇಲ್ಲ. ಅಡಿಪಾಯ, ಗೋಡೆ, ಛಾವಣಿ ಹಂತದಲ್ಲಿ ಮನೆ ಕಾಮಗಾರಿಗಳು ನಿಂತಿವೆ. ನಾಲ್ಕು ಹಂತದಲ್ಲಿ ಸಿಗುವ ಹಣಕ್ಕೆ ಎಲ್ಲ ನಿಯಮ ಪಾಲಿಸಿದ ಮೇಲೂ ಕಾಯಬೇಕಾದ ಸ್ಥಿತಿ ಉಂಟಾಗಿದೆ.

ಸಹಾಯಧನಕ್ಕೆ ಸಾರಣೆ ಕಡ್ದಾಯ
ಸಹಾಯಧನ ಪಡೆದು ಕಟ್ಟುವ ಮನೆಯನ್ನು ಒಂದು ವರ್ಷದೊಳಗೆ ನಿರ್ಮಿಸಬೇಕು ಎನ್ನುವುದು ಸರಕಾರದ ವಸತಿ ಇಲಾಖೆಯ ಗಡುವು. ಆದರೆ ಮನೆ ಕಟ್ಟಲು ಬೇಕಾದ ಮರಳಿನ ಪೂರೈಕೆ ಸಮಸ್ಯೆ ಬಗೆಹರಿಸಲು ವರ್ಷಗಳೇ ಉರುಳಿದರೂ, ಇನ್ನು ಬಗೆಹರಿದಿಲ್ಲ. ಇಲ್ಲಿ ವಸತಿ ಸಹಾಯಧನ ಸಿಗಬೇಕಾದರೆ ಗೋಡೆ ಸಾರಣೆ ಆಗಬೇಕು ಎಂಬ ನಿಯಮವಿದೆ. ಮರಳಿಲ್ಲದೆ ಸಾರಣೆ ಮಾಡುವುದು ಹೇಗೆ ಅನ್ನುವುದು ಫಲಾನುಭವಿಯ ಪ್ರಶ್ನೆ. ಇದಕ್ಕೆ ಸರಕಾರದ ಬಳಿಯು ಉತ್ತರ ಇಲ್ಲ. ಹಾಗಂತ ನಿಯಮ ಕೂಡ ಸಡಿಲಿಸದೆ ಫಲಾನುಭವಿಯನ್ನು ಇಕಟ್ಟಿಗೆ ಸಿಲುಕಿಸಲಾಗಿದೆ.

ಗಮನಕ್ಕೆ ಬಂದಿಲ್ಲ
ಮನೆ ಕಟ್ಟಲು ಮರಳು ಸಮಸ್ಯೆ ಇರುವುದು ನಮ್ಮ ಗಮನಕ್ಕೆ ಬಂದಿಲ್ಲ. ಲೋಕೋಪಯೋಗಿ ಇಲಾಖೆ ಕೇನ್ಯದಲ್ಲಿ ನಿಕ್ಷೇಪ ಗುರುತಿಸಿ ಮರುಳುಗಾರಿಕೆಗೆ ಅನುಮತಿ ಕೋರಿದ್ದು, ಅದು ಒಪ್ಪಿಗೆ ದೊರೆಯುವ ಹಂತದಲ್ಲಿದೆ. ವಸತಿ ಸಹಾಯಧನ ಪಾವತಿ ಒಂದೆರಡು ತಿಂಗಳಿನಿಂದ ವ್ಯತ್ಯಾಸ ಆಗುತ್ತಿರುವುದು ನಿಜ. ಅದು ಸರಿಯಾಗಲಿದೆ.
– ಆರ್‌. ಮಧುಕುಮಾರ್‌
ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ., ಸುಳ್ಯ

 ಕಿರಣ್‌ ಪ್ರಸಾದ್‌ ಕುಂಡಡ್ಕ 

Ad

ಟಾಪ್ ನ್ಯೂಸ್

Kudupu Mob Lynching: ಮೊಹಮ್ಮದ್ ಅಶ್ರಫ್ ಕೊಲೆ ಪ್ರಕರಣದ ಆರೋಪಿಗಳ ಜಾಮೀನು ಅರ್ಜಿ ವಜಾ

Tragedy: ಶಾರ್ಜಾದಲ್ಲಿ ಒಂದೂವರೆ ವರ್ಷದ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ಕೇರಳದ ಮಹಿಳೆ

Tragedy: ಶಾರ್ಜಾದಲ್ಲಿ ಒಂದೂವರೆ ವರ್ಷದ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ಕೇರಳದ ಮಹಿಳೆ

9-moodbidri

ವಿದ್ಯಾರ್ಥಿನಿ ಮೇಲೆ ಅತ್ಯಾ*ಚಾರ:ಇಬ್ಬರು ಉಪನ್ಯಾಸಕರು, ಗೆಳೆಯ ಸೇರಿ ಮೂವರು ಆರೋಪಿಗಳ ಬಂಧನ

ನಮ್ಮೂರ ಗೆಳೆಯರ ಬಳಗ; ಹಡಿಲು ಗದ್ದೆಗಳಲ್ಲಿ ಭತ್ತ ಬೆಳೆಯುವ ಸಗ್ರಿ ಯುವಕರು!

ನಮ್ಮೂರ ಗೆಳೆಯರ ಬಳಗ; ಹಡಿಲು ಗದ್ದೆಗಳಲ್ಲಿ ಭತ್ತ ಬೆಳೆಯುವ ಸಗ್ರಿ ಯುವಕರು!

ರೈತ ಹೋರಾಟಕ್ಕೆ ಜಯ; ದೇವನಹಳ್ಳಿ ಭೂ ಸ್ವಾಧೀನ ಕೈಬಿಟ್ಟ ರಾಜ್ಯ ಸರ್ಕಾರ

Devanahalli: ರೈತ ಹೋರಾಟಕ್ಕೆ ಜಯ; ದೇವನಹಳ್ಳಿ ಭೂ ಸ್ವಾಧೀನ ಕೈಬಿಟ್ಟ ರಾಜ್ಯ ಸರ್ಕಾರ

ʼಕೂಲಿʼ ಟ್ರೇಲರ್‌ ರಿಲೀಸ್, ಆಮಿರ್‌ ಖಾನ್‌ ಜತೆಗಿನ ಸಿನಿಮಾದ ಬಗ್ಗೆ ಅಪ್ಡೇಟ್‌ ಕೊಟ್ಟ ಲೋಕೇಶ್

ʼಕೂಲಿʼ ಟ್ರೇಲರ್‌ ರಿಲೀಸ್, ಆಮಿರ್‌ ಖಾನ್‌ ಜತೆಗಿನ ಸಿನಿಮಾದ ಬಗ್ಗೆ ಅಪ್ಡೇಟ್‌ ಕೊಟ್ಟ ಲೋಕೇಶ್

Spinner Shoaib Bashir has been ruled out of the Test series against India

INDvsENG: ಭಾರತ ವಿರುದ್ದದ ಟೆಸ್ಟ್‌ ಸರಣಿಯಿಂದ ಹೊರಬಿದ್ದ ಸ್ಪಿನ್ನರ್‌ ಶೋಯೆಬ್‌ ಬಶೀರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

Kudupu Mob Lynching: ಮೊಹಮ್ಮದ್ ಅಶ್ರಫ್ ಕೊಲೆ ಪ್ರಕರಣದ ಆರೋಪಿಗಳ ಜಾಮೀನು ಅರ್ಜಿ ವಜಾ

Tragedy: ಶಾರ್ಜಾದಲ್ಲಿ ಒಂದೂವರೆ ವರ್ಷದ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ಕೇರಳದ ಮಹಿಳೆ

Tragedy: ಶಾರ್ಜಾದಲ್ಲಿ ಒಂದೂವರೆ ವರ್ಷದ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ಕೇರಳದ ಮಹಿಳೆ

9-moodbidri

ವಿದ್ಯಾರ್ಥಿನಿ ಮೇಲೆ ಅತ್ಯಾ*ಚಾರ:ಇಬ್ಬರು ಉಪನ್ಯಾಸಕರು, ಗೆಳೆಯ ಸೇರಿ ಮೂವರು ಆರೋಪಿಗಳ ಬಂಧನ

ನಮ್ಮೂರ ಗೆಳೆಯರ ಬಳಗ; ಹಡಿಲು ಗದ್ದೆಗಳಲ್ಲಿ ಭತ್ತ ಬೆಳೆಯುವ ಸಗ್ರಿ ಯುವಕರು!

ನಮ್ಮೂರ ಗೆಳೆಯರ ಬಳಗ; ಹಡಿಲು ಗದ್ದೆಗಳಲ್ಲಿ ಭತ್ತ ಬೆಳೆಯುವ ಸಗ್ರಿ ಯುವಕರು!

ರೈತ ಹೋರಾಟಕ್ಕೆ ಜಯ; ದೇವನಹಳ್ಳಿ ಭೂ ಸ್ವಾಧೀನ ಕೈಬಿಟ್ಟ ರಾಜ್ಯ ಸರ್ಕಾರ

Devanahalli: ರೈತ ಹೋರಾಟಕ್ಕೆ ಜಯ; ದೇವನಹಳ್ಳಿ ಭೂ ಸ್ವಾಧೀನ ಕೈಬಿಟ್ಟ ರಾಜ್ಯ ಸರ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.