
ಅಕ್ರಮ ಗೋ ಮಾಂಸ ಅಡ್ಡೆಗೆ ದಾಳಿ: ಮೂವರು ಸೆರೆ
Team Udayavani, Jan 23, 2023, 11:18 PM IST

ಬೆಳ್ತಂಗಡಿ: ಮದ್ದಡ್ಕ ಬಳಿ ಅಕ್ರಮವಾಗಿ ಗೋ ಮಾಂಸ ತಯಾರಿಸುತ್ತಿದ್ದ ಅಡ್ಡೆಗೆ ಪೊಲೀಸರು ದಾಳಿ ನಡೆಸಿದ ಆರೋಪಿಗಳನ್ನು ವಶಕ್ಕೆ ಪಡೆದ ಘಟನೆ ಜ. 20ರ ರಾತ್ರಿ ನಡೆದಿದೆ.
ಕೃತ್ಯದಲ್ಲಿ ಭಾಗಿಯಾಗಿದ್ದ ಮದ್ದಡ್ಕದ ಹಮೀದ್ (46), ಬೇಲೂರು ಗೋಣಿಬೀಡಿನ ಇಸ್ಮಾಯಿಲ್ (41) ಮತ್ತು ಹ್ಯಾರಿಸ್ (30)ನನ್ನು ವಶಕ್ಕೆ ಪಡೆಯಲಾಗಿದೆ.
ಕುವೆಟ್ಟು ಗ್ರಾಮದ ಮದ್ದಡ್ಕದ ಅನಿಲ ಎಂಬಲ್ಲಿಯ ಮನೆಯೊಂದರಲ್ಲಿ ಗೋವಧೆ ಮಾಡಿ ಅಕ್ರಮವಾಗಿ ಮಾಂಸ ತಯಾರಿಸುತ್ತಿರುವ ಬಗ್ಗೆ ಸ್ಥಳೀಯ ಬಜರಂಗ ದಳದ ಕಾರ್ಯಕರ್ತರಿಗೆ ಮಾಹಿತಿ ಲಭಿಸಿದ್ದು, ಈ ಬಗ್ಗೆ ಅವರು ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ತತ್‌ಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ರಾತ್ರಿ ವೇಳೆ ದಾಳಿ ನಡೆಸಿ ಸುಮಾರು 55 ಕೆ.ಜಿ.ಯಷ್ಟು ಗೋಮಾಂಸ ಹಾಗೂ ಮಾಂಸ ತಯಾರಿಸುತ್ತಿದ್ದ ಸೊತ್ತುಗಳನ್ನು ವಶಕ್ಕೆ ಪಡೆದು ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣ ಅಧಿನಿಯಮದಡಿ ಪ್ರಕರಣ ದಾಖಲಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಜ್ಜಿಯನ್ನು ಬಡಿದು ಕೊಂದಿದ್ದ ಪ್ರಕರಣ: ಜೈಲಿನಲ್ಲಿದ್ದ ಆರೋಪಿ ಮೊಮ್ಮಗ ಆಸ್ಪತ್ರೆಯಲ್ಲಿ ಸಾವು

Road Side ತ್ಯಾಜ್ಯ ಎಸೆದವರ ಪತ್ತೆ ಹಚ್ಚಿ ಅವರಿಂದಲೇ ಶುಚಿಗೊಳಿಸಿದ ಕೊಳ್ನಾಡಿನ ಯುವಕರು

Charmadi Ghat ಬಸ್-ಸ್ಕೂಟರ್ ಅಪಘಾತ: ಓರ್ವ ಸಾವು, ಸಹಸವಾರ ಗಂಭೀರ

Belthangady: ರಸ್ತೆ ವಿಚಾರದಲ್ಲಿ ಕುಟುಂಬದ ನಡುವೆ ಹೊಡೆದಾಟ

Sulliapadavu: ಮರದ ದಿಮ್ಮಿ ಮೈಮೇಲೆ ಬಿದ್ದು ವ್ಯಕ್ತಿ ಮೃತ್ಯು
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
