ಮಂಗಳೂರಿನಲ್ಲಿ ಮೂರು ದಿನಗಳ ಬೈಬಲ್‌ ಪ್ರದರ್ಶನಕ್ಕೆ ಚಾಲನೆ

Team Udayavani, Jan 27, 2023, 6:30 AM IST

ಮಂಗಳೂರಿನಲ್ಲಿ ಮೂರು ದಿನಗಳ ಬೈಬಲ್‌ ಪ್ರದರ್ಶನಕ್ಕೆ ಚಾಲನೆ

ಮಂಗಳೂರು: ಮಂಗಳೂರು ಧರ್ಮಕ್ಷೇತ್ರದ ಬೈಬಲ್‌, ಸುವಾರ್ತ ಪ್ರಸಾರ, ಸಾಮಾಜಿಕ ಸಂಪರ್ಕ ಮತ್ತು ಕಿರುಕ್ರೆçಸ್ತ ಸಮುದಾಯದ ಆಯೋಗಗಳ ಸಹಭಾಗಿತ್ವದಲ್ಲಿ ಸಂತ ಅಂತೋನಿ ಆಶ್ರಮ, ಸಂತ ಜೋಸೆಫ್‌ ಸೆಮಿನರಿ, ಕಾಸ್ಸಿಯಾ, ಜಪ್ಪು ಮತ್ತು ವೆಲೆನ್ಸಿಯಾ ಚರ್ಚ್‌ಗಳು ಜಂಟಿಯಾಗಿ ನಗರದ ಜಪ್ಪು ಸಂತ ಅಂತೋನಿ ಆಶ್ರಮದಲ್ಲಿ ಮೂರು ದಿನಗಳವರೆಗೆ ಬೈಬಲ್‌ ಪ್ರದರ್ಶನಕ್ಕೆ ಗುರುವಾರ ಚಾಲನೆ ನೀಡಲಾಯಿತು.

ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಗುರು ಮತ್ತು ಇಂಗ್ಲಿಷ್‌ ಹೊಸ ಒಡಂಬಡಿಕೆಯನ್ನು ಕೊಂಕಣಿ ಭಾಷೆಗೆ ಭಾಷಾಂತರಿಸಿ ವಂ| ಡಾ| ವಿಲಿಯಂ ಬಬೋìಜಾ ಮಾತನಾಡಿ, “ಬೈಬಲ್‌ ಆಲಿಸಿ, ಬೈಬಲ್‌ ಓದಿ, ಬೈಬಲ್‌ ಅಧ್ಯಯನ ಮಾಡಿ, ಬೈಬಲ್‌ನಲ್ಲಿ ಪ್ರಾರ್ಥಿಸಿ ಮತ್ತು ಬೈಬಲ್‌ ಅನ್ನೇ ಜೀವಿಸಿ.’ ಸುಮಾರು 40 ವರ್ಷಗಳ ಹಿಂದೆ ಮಂಗಳೂರು ಬಂದರಿಗೆ ಬಂದ ಲೋಗೋಸ್‌ ಶಿಪ್‌ನಲ್ಲಿ ಸೆಟ್‌ ಮಾಡಿದ ಬೈಬಲ್‌ ಲೈಬ್ರೆರಿಯಲ್ಲಿ ಕೇಳಿದ ಈ ಸುಂದರವಾದ ಪದಗಳು ನೆನಪಿಗೆ ಬರುತ್ತವೆ. ಈ ಮಾತು ನಮ್ಮ ಜೀವನವನ್ನು ಸಮೃದ್ಧಗೊಳಿಸುತ್ತದೆ ಎಂದು ಹೇಳಿದರು.

ಸಹಾಯಕ ನಿರ್ದೇಶಕ ವಂ| ಲ್ಯಾರಿ ಪಿಂಟೋ ಮಾತನಾಡಿ, ಕಥೊಲಿಕ ಕ್ರೆçಸ್ತರ ಪೂಜಾವಿಧಿಯ ಕ್ಯಾಲೆಂಡರ್‌ನ ಮೂರನೇ ರವಿವಾರ-ಈ ವರ್ಷ ಜ.22 ರಂದು ಸಾರ್ವತ್ರಿಕವಾಗಿ ಆಚರಿಸಲಾದ ಬೈಬಲ್‌ ಭಾನುವಾರದ ಪ್ರಯುಕ್ತ ಹಾಗೂ ಸಂತ ಆಂತೋನಿ ಆಶ್ರಮದ 125 ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ಈ ಪ್ರದರ್ಶನ ಆಯೋಜಿಸಲಾಗಿದೆ ಎಂದರು.

ವಂ| ಜೆ.ಬಿ. ಕ್ರಾಸ್ತ ಸ್ವಾಗತಿಸಿದರು. ಬೈಬಲ್‌ ಅನ್ನು ಕೊಂಕಣಿಗೆ ಭಾಷಾಂತರಿಸಲು ಶ್ರಮಿಸಿದ ವಂ| ಡಾ| ವಿಲಿಯಂ ಬಬೊìಜಾ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.

ಬೆ„ಬಲ್‌ ಗ್ರಂಥವನ್ನು ವಿಶೇಷ ಗೌರವದೊಂದಿಗೆ ಪ್ರಾರ್ಥನಾ ಮಂದಿರದಿಂದ ಪ್ರದರ್ಶನ ಸಭಾಂಗಣದವರೆಗೆ ಮೆರವಣಿಗೆಯಲ್ಲಿ ತರಲಾಯಿತು. ವಂ| ಡಾ| ರೊನಾಲ್ಡ್‌ ಸೆರಾವೊ, ವಂ| ಡಾ| ವಿಲಿಯಂ ಬಬೋìಜಾ ಮತ್ತು ವಂ| ಜೆ.ಬಿ. ಕ್ರಾಸ್ತಾ ಅವರು ಬೈಬಲ್‌ಗೆ ಹಾರಾರ್ಪಣೆಗೈದು, ಧೂಪ ಹಾಕಿ ಗೌರವಿಸಿದರು. ಪ್ರದರ್ಶನದ ಆವರಣವನ್ನು ಪವಿತ್ರಜಲದಿಂದ ಆಶೀರ್ವದಿಸಿದರು. ಈ ಸಂದರ್ಭ ಪ್ರಾರ್ಥನೆಯ ಮೂಲಕ ಬೈಬಲ್‌ನ ಒಂದು ಭಾಗವನ್ನು ಓದಲಾಯಿತು.
ವಂ| ರೂಪೇಶ್‌, ಸ್ವಯಂಸೇವಕರಲ್ಲಿ ಒಬ್ಬರಾದ ಟ್ರೆಸ್ಸಿ ಡಿಸೋಜಾ ಅವರು ಮಾತನಾಡಿದರು.

ಜ.28ರವರೆಗೆ ಪ್ರದರ್ಶನ
ಪ್ರದರ್ಶನದಲ್ಲಿ ಬೈಬಲ್‌ ವ್ಯಾಖ್ಯಾನಗಳು, ಕೈಬರಹದ ಬೈಬಲ್‌ಗ‌ಳು, ದೊಡ್ಡಗಾತ್ರದ ಬೈಬಲ್‌, ಬೈಬಲ್‌ ಕಲೆ, ಬೈಬಲ್‌ ಚಿತ್ರಗಳು, ಪ್ರತಿಮಾಶಾಸ್ತ್ರ, ಭಾರತೀಯ ಕಲೆ ಮತ್ತು ಬೈಬಲ್‌ ಇತಿಹಾಸಗಳ ಪ್ರದರ್ಶನ ಸೇರಿದಂತೆ ಪ್ರಾದೇಶಿಕ ಮತ್ತು ಸ್ಥಳೀಯ ಭಾಷೆಗಳನ್ನು ಒಳಗೊಂಡ ಬೈಬಲ್‌ ಪ್ರತಿಗಳ ವಿಭಿನ್ನ ಅನುವಾದಗಳನ್ನು ಪ್ರದರ್ಶಿಸಲಾಯಿತು. ಪದ್ಯಗಳು, ಬೈಬಲ್‌ ವರ್ಣಚಿತ್ರಗಳು ಮತ್ತು ಪ್ರಮುಖ ಬೈಬಲ್‌ ಘಟನೆಗಳ ಪ್ರದರ್ಶನ ಇತ್ತು.

ಪ್ರದರ್ಶನವು ಜ.28ರವರೆಗೆ ಬೆಳಗ್ಗೆ 9 ರಿಂದ ಸಂಜೆ 7 ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ. ಪ್ರತಿದಿನ ಸಂಜೆ 4.30ರಿಂದ 7ರವರೆಗೆ ಬೈಬಲ್‌ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಜ.28ರಂದು ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.

ಸಂತ ಅಂತೋನಿ ದತ್ತಿ ಸಂಸ್ಥೆಗಳ ಸಂಚಾಲಕ ಹಾಗೂ ವಸ್ತು ಪ್ರದರ್ಶನದ ಸಂಚಾಲಕ ವಂ| ಜೆ.ಬಿ.ಕ್ರಾಸ್ತಾ, ಜಪ್ಪುವಿನ ಸೇಂಟ್‌ ಜೋಸೆಫ್‌ ಸೆಮಿನರಿಯ ರೆಕ್ಟರ್‌ ವಂ| ಡಾ| ರೊನಾಲ್ಡ್‌ ಸೆರಾವೊ, ಸಣ್ಣ ಕ್ರೆçಸ್ತ ಸಮುದಾಯದ ಸಂಚಾಲಕ ವಂ| ಜೋಕಿಮ್‌ ಫೆನಾಂìಡಿಸ್‌, ಕೆನರಾ ಕಮ್ಯುನಿಕೇಷ‌ನ್‌ ಸೆಂಟರ್‌ ನಿರ್ದೇಶಕ ವಂ| ಅನಿಲ್‌ ಫೆನಾಂìಡಿಸ್‌, ಧರ್ಮಕ್ಷೆತ್ರದ ಸುವಾರ್ತ ಪ್ರಸಾರ ಆಯೋಗದ ಕಾರ್ಯದರ್ಶಿ ಮತ್ತು ಕಾರ್ಯಕ್ರಮದ ಸಂಯೋಜಕ ವಂ| ರೂಪೇಶ್‌ ತಾವ್ರೊ, ´ೋರ್‌ವಿಂಡ್ಸ್‌ ಜಾಹಿರಾತು ಸಂಸ್ಥೆಯ ನಿರ್ದೇಶಕ ಏಲಿಯಾಸ್‌ ಫೆನಾಂìಡಿಸ್‌, ಸಂತ ಅಂತೋನಿ ಆಶ್ರಮದ ಸಹಾಯಕ ನಿರ್ದೇಶಕ ವಂ| ಲ್ಯಾರಿ ಪಿಂಟೊ, ಮತ್ತು ಆರ್ಸುಲಾಯ್ನ ಸಿ| ಡೋರೀನ್‌ ಹಾಗೂ ಅನೇಕ ಧಾರ್ಮಿಕ ಸಹೋದರಿಯರು, ಯುವಜನರು ಮತ್ತು ಸಂತ ಅಂತೋನಿ ಆಶ್ರಮದ ನಿವಾಸಿಗಳು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.