Udayavni Special

ಪಚ್ಚನಾಡಿ ಪಾರಂಪರಿಕ ತ್ಯಾಜ್ಯ ಕರಗಿಸಲು “ಬಯೋ ಮೈನಿಂಗ್‌’ ವ್ಯವಸ್ಥೆ


Team Udayavani, Aug 6, 2021, 4:00 AM IST

ಪಚ್ಚನಾಡಿ ಪಾರಂಪರಿಕ ತ್ಯಾಜ್ಯ ಕರಗಿಸಲು “ಬಯೋ ಮೈನಿಂಗ್‌’ ವ್ಯವಸ್ಥೆ

ಮಹಾನಗರ: ತ್ಯಾಜ್ಯ ದುರಂತ ದಿಂದಾಗಿ ಪಚ್ಚನಾಡಿಯಲ್ಲಿ ರಾಶಿಬಿದ್ದಿರುವ “ಪಾರಂಪರಿಕ ತ್ಯಾಜ್ಯ’ ಕರಗಿಸಲು ಮಂಗಳೂರು ಮಹಾನಗರ ಪಾಲಿಕೆ ಇದೀಗ ಮುಂದಾಗಿದ್ದು, ಸುಮಾರು 53 ಕೋಟಿ ರೂ. ವೆಚ್ಚದಲ್ಲಿ ಬಯೋಮೈನಿಂಗ್‌ ವಿಧಾನದ ಮೂಲಕ ಈ ತ್ಯಾಜ್ಯವನ್ನು ಸಂಸ್ಕರಣೆ ಮಾಡಲು ನಿರ್ಧರಿಸಲಾಗಿದೆ.

2019ರ ಪಚ್ಚನಾಡಿ ತ್ಯಾಜ್ಯ ದುರಂತದಿಂದಾಗಿ ಸುಮಾರು 10 ಲಕ್ಷ ಟನ್‌ ಕಸ ಒಂದೆಡೆ ಶೇಖರಣೆಯಾಗಿತ್ತು. ಇದರ ಸಂಸ್ಕರಣೆ ಪಾಲಿಕೆ ಸವಾಲಾಗಿದ್ದು, ನ್ಯಾಯಾಲಯ ಕೂಡ ಈ ಕುರಿತಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಒತ್ತಾಯಿಸಿತ್ತು. ಸಂಸ್ಕರಣೆಯ ಉದ್ದೇಶಕ್ಕೆಂದು ಹಲವಾರು ವಿಧಾನಗಳ ಬಗ್ಗೆ ಚಿಂತಿಸಲಾಗಿತ್ತೇ ವಿನಾ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಇದೀಗ ಬಯೋಮೈನಿಂಗ್‌ ವಿಧಾನಕ್ಕೆ ಒಪ್ಪಿಗೆ ನೀಡಲಾಗಿದೆ.

ಹಣಕಾಸಿನ ನೆರವಿಗೆಂದು ಈಗಾಗಲೇ ಕೆಯುಐಡಿಎಫ್‌ಸಿಗೆ ಪಾಲಿಕೆ ಪತ್ರ ಬರೆದಿದ್ದು, ಅಲ್ಲಿಂದಲೂ ಪೂರಕ ಸ್ಪಂದನೆ ವ್ಯಕ್ತವಾಗಿದೆ. ಸುಮಾರು 4ರಿಂದ 5 ವರ್ಷಗಳವರೆಗಿನ ಯೋಜನೆ ಇದಾಗಿದ್ದು, ಟೆಂಡರ್‌ ಕರೆಯಲಾಗಿದೆ. ಆ. 9ಕ್ಕೆ ಟೆಂಡರ್‌ ಅವಧಿ ಕೊನೆಗೊಳ್ಳಲಿದೆ. ಈಗಾಗಲೇ ಅನೇಕ ಸಂಸ್ಥೆಗಳು ಟೆಂಡರ್‌ ವಹಿಸಿಕೊಳ್ಳಲು ಉತ್ಸುಕವಾಗಿದ್ದು, ಅಂತಿಮವಾದ ಬಳಿಕ ಈ ಯೋಜನೆಗೆ ಮತ್ತಷ್ಟು ವೇಗ ನೀಡಲು ನಿರ್ಧರಿಸಲಾಗಿದೆ.

ಪಚ್ಚನಾಡಿಯ ತ್ಯಾಜ್ಯ ದುರಂತ ಸಂಭವಿಸಿದ ಸ್ಥಳದಲ್ಲಿ ಮತ್ತಷ್ಟು ಅನಾಹುತ ಸಂಭವಿಸದಂತೆ ತಡೆಯಲು ಸುಮಾರು 7 ಮೀಟರ್‌ ಎತ್ತರದ ತಡೆಗೋಡೆ ನಿರ್ಮಿಸಲಾಗಿದ್ದು, ತ್ಯಾಜ್ಯದ ನೀರು ಶೇಖರಣೆಗೆ ಟ್ಯಾಂಕ್‌ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಸುತ್ತಮುತ್ತಲೂ ಸಿ.ಸಿ. ಕೆಮರಾ ಅಳವಡಿಸಲಾಗಿದೆ. ಅನಧಿಕೃತವಾಗಿ ಕಸ ವಿಲೇವಾರಿ ಮಾಡುವವರ ಬಗ್ಗೆ ನಿಗಾ ವಹಿಸಲಾಗಿದೆ.

ತ್ಯಾಜ್ಯ ದುರಂತಕ್ಕೆ ಎರಡು ವರ್ಷ:

ಪಚ್ಚನಾಡಿ ತ್ಯಾಜ್ಯರಾಶಿ ಜರಿದು ಮಂದಾರ ಪ್ರದೇಶವನ್ನು ತ್ಯಾಜ್ಯಮಯವಾಗಿ ಬದಲಾಯಿಸಿದ ಘಟನೆಗೆ ಆ. 6ಕ್ಕೆ ಎರಡು ವರ್ಷ ಪೂರ್ಣವಾಗುತ್ತಿದೆ. ಆದರೆ ಹರಡಿರುವ ತ್ಯಾಜ್ಯ ಇನ್ನೂ ಹಾಗೇ ಇದೆ. ಎರಡು ವರ್ಷಗಳ ಹಿಂದೆ ಪಚ್ಚನಾಡಿಯ ತ್ಯಾಜ್ಯರಾಶಿ ಜರಿದು ಮಂದಾರ ಭಾಗಕ್ಕೆ ಕುಸಿದು ಸುಮಾರು 2 ಕಿ.ಮೀ.ನಷ್ಟು ದೂರ, 50 ಮೀ. ಗಳಷ್ಟು ಎತ್ತರಕ್ಕೆ ವ್ಯಾಪಿಸಿತ್ತು. ಒಂದು ಮನೆಯನ್ನೂ ಮೀರಿಸುವಷ್ಟು ಎತ್ತರದಲ್ಲಿ ತ್ಯಾಜ್ಯ ರಾಶಿ ಹೊರಳಿಕೊಂಡು ಹೋಗಿತ್ತು. ಮಂದಾರ ಮನೆ, ಅದರ ಪಕ್ಕದ ಇಬ್ಬರ ಮನೆ ಕೂಡ ತ್ಯಾಜ್ಯರಾಶಿಗೆ ಸಿಲುಕಿದೆ. ಇಲ್ಲಿನ ಸುಮಾರು 27 ಮನೆಯವರಿಗೆ ಪ್ರತ್ಯೇಕ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. 14.8 ಕೋಟಿ ರೂ. ಮಧ್ಯಂತರ ಪರಿಹಾರ ಬಿಡುಗಡೆಯಾಗಿದೆ.

ಏನಿದು ಬಯೋಮೈನಿಂಗ್‌? :

ಗುಡ್ಡೆಯಂತೆ ಬೆಳೆದಿರುವ ಡಂಪಿಂಗ್‌ ಯಾರ್ಡ್‌ನ ತ್ಯಾಜ್ಯವನ್ನು ಜೈವಿಕ ವಿಧಾನದ ಮುಖೇನ ಕರಗಿಸುವ ವ್ಯವಸ್ಥೆಗೆ ಬಯೋಮೈನಿಂಗ್‌ ಎನ್ನಲಾಗುತ್ತದೆ. ಈ ವಿಧಾನದಲ್ಲಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ಬೇರ್ಪಡಿಸಲಾಗುತ್ತದೆ. ಪ್ರಕೃತಿಯಲ್ಲಿ ಕರಗುವ, ಕರಗದಿರುವ ತ್ಯಾಜ್ಯವನ್ನು ಬೇರ್ಪಡಿಸಿ ಉತ್ಪತ್ತಿಯಾಗುವ ಗೊಬ್ಬರ ವನ್ನು ರೈತರಿಗೆ ನೀಡಬಹುದು. ಅದೇ ರೀತಿ, ಪ್ಲಾಸ್ಟಿಕ್‌, ರಬ್ಬರ್‌, ಗಾಜು ಮರು ಬಳಕೆಗಾಗಿ ಸಿಮೆಂಟ್‌ ಕಾರ್ಖಾನೆಗೆ ನೀಡಬಹುದಾಗಿದೆ. ಹಸಿ ತ್ಯಾಜ್ಯವನ್ನು ಸಂಸ್ಕರಣೆ ಮಾಡಲಾಗುತ್ತದೆ. ಉಳಿದ ತ್ಯಾಜ್ಯ ನಾಶಪಡಿಸಲಾಗುತ್ತದೆ. ಇನ್ನು, ಮರಳನ್ನು ಸಂಸ್ಕರಿಸಿ ಮರು ಬಳಕೆ ಮಾಡಲು ಅವಕಾಶ ಇದೆ.

ತ್ಯಾಜ್ಯ ದುರಂತದಿಂದಾಗಿ ಪಚ್ಚನಾಡಿಯಲ್ಲಿ ರಾಶಿ ಬಿದ್ದಿರುವ ಸುಮಾರು 10 ಲಕ್ಷ ಟನ್‌ ಕಸವನ್ನು ಬಯೋಮೈನಿಂಗ್‌ ವಿಧಾನದ ಮುಖೇನ ಕರಗಿಸಲಾಗುವುದು. ಈಗಾಗಲೇ 53 ಕೋಟಿ ರೂ. ವೆಚ್ಚದಲ್ಲಿ ಟೆಂಡರ್‌ ಕರೆಯಲಾಗಿದೆ. ನಾಲ್ಕು ವರ್ಷಗಳಲ್ಲಿ ಈ ವಿಧಾನ ಪೂರ್ಣಗೊಳ್ಳಲಿದೆ. ಇದರಿಂದ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಇದೆ.-ಅಕ್ಷಯ್‌ ಶ್ರೀಧರ್‌, ಮನಪಾ ಆಯುಕ್ತ

ಪಚ್ಚನಾಡಿ ತ್ಯಾಜ್ಯ ದುರಂತ ಸಂಭವಿಸಿದ ಸ್ಥಳದಲ್ಲಿ ಸಮರ್ಪಕ ವ್ಯವಸ್ಥೆ ಅಳವಡಿಸಲಾಗಿದೆ. ಸುಮಾರು 7 ಮೀ. ಎತ್ತರದಲ್ಲಿ ತಡೆಗೋಡೆ ನಿರ್ಮಿಸಲಾಗಿದ್ದು, ತ್ಯಾಜ್ಯದ ನೀರು ಶೇಖರಣೆಗೆ ಟ್ಯಾಂಕ್‌ ವ್ಯವಸ್ಥೆ ಅಳವಡಿಸಲಾಗಿದೆ. ಅನಧಿಕೃತವಾಗಿ ಕಸ ವಿಲೇವಾರಿ ಮಾಡದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇದೀಗ ಬಯೋ ಮೈನಿಂಗ್‌ ವಿಧಾನದಲ್ಲಿ ಕಸ ಕರಗಿಸಲು ಉದ್ದೇಶಿಸಲಾಗಿದೆ. ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್‌

 

ನವೀನ್‌ ಭಟ್‌ ಇಳಂತಿಲ

 

ಟಾಪ್ ನ್ಯೂಸ್

ಪಾಕ್ ಗೆ ಬಿಗ್ ಶಾಕ್: ಭದ್ರತಾ ಭೀತಿಯಿಂದ ಟಾಸ್ ಗೆ ಮೊದಲು ಸರಣಿಯನ್ನೇ ರದ್ದು ಮಾಡಿದ ಕಿವೀಸ್

ಪಾಕ್ ಗೆ ಬಿಗ್ ಶಾಕ್: ಭದ್ರತಾ ಭೀತಿಯಿಂದ ಟಾಸ್ ಗೆ ಮೊದಲು ಸರಣಿಯನ್ನೇ ರದ್ದು ಮಾಡಿದ ಕಿವೀಸ್

ಗುಲಾಬಿ ಪ್ರೀತಿಯ ಸಂಕೇತ, ಮಲ್ಲಿಗೆ ಅದೃಷ್ಟದ ಸಂಕೇತ; ಜಡೆಗೆ ಹೂವು ಮುಡಿಯುವುದೇಕೆ?

ಗುಲಾಬಿ ಪ್ರೀತಿಯ ಸಂಕೇತ, ಮಲ್ಲಿಗೆ ಅದೃಷ್ಟದ ಸಂಕೇತ; ಜಡೆಗೆ ಹೂವು ಮುಡಿಯುವುದೇಕೆ?

ಎರಡನೇ ವಾರಕ್ಕೆ ಕಾಲಿಟ್ಟ ‘ಲಂಕೆ’

ಎರಡನೇ ವಾರಕ್ಕೆ ಕಾಲಿಟ್ಟ ‘ಲಂಕೆ’

ಚಿಕ್ಕಮಗಳೂರು: ಸಿಸಿಟಿವಿಯಲ್ಲಿ‌ ಸೆರೆಯಾಯ್ತು ಭೀಕರ ಅಫಘಾತದ ದೃಶ್ಯ

ಚಿಕ್ಕಮಗಳೂರು: ಸಿಸಿಟಿವಿಯಲ್ಲಿ‌ ಸೆರೆಯಾಯ್ತು ಭೀಕರ ಅಫಘಾತದ ದೃಶ್ಯ

ಬೇಳೂರು ಗೋಪಾಲಕೃಷ್ಣ

ಕಾಂಗ್ರೆಸ್ ಸರ್ಕಾರ, ಮುಸ್ಲಿಂ ಅಧಿಕಾರಿ ದೇವಳ ಒಡೆದಿದ್ದರೆ ಬೆಂಕಿ ಹಚ್ಚುತ್ತಿದ್ದರು: ಬೇಳೂರು

ಪುಕ್ಸಟ್ಟೆ  ಲೈಫು

‘ಪುಕ್ಸಟ್ಟೆ ಲೈಫು’ ಇನ್‌ಸೈಡ್‌ ಸ್ಟೋರಿ: ಸಂಚಾರಿ ವಿಜಯ್‌ ಚಿತ್ರಕ್ಕೆ ಕಿಚ್ಚನ ಮೆಚ್ಚುಗೆ

ಸ್ಪೇಸ್‌ ಟೂರ್‌ ಶುರು

ಸ್ಪೇಸ್‌ ಟೂರ್‌ ಶುರು; ಏನಿದು ಸ್ಪೇಸ್‌ ಟೂರಿಸಂ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಸ್ತಾವನೆಯಲ್ಲಿಯೇ ಬಾಕಿ ನಂತೂರು ಓವರ್‌ಪಾಸ್‌!

ಪ್ರಸ್ತಾವನೆಯಲ್ಲಿಯೇ ಬಾಕಿ ನಂತೂರು ಓವರ್‌ಪಾಸ್‌!

ನಾಳೆ ಕರಾವಳಿಯಲ್ಲಿ ಬೃಹತ್‌ ಲಸಿಕಾ ಮೇಳ

ನಾಳೆ ಕರಾವಳಿಯಲ್ಲಿ ಬೃಹತ್‌ ಲಸಿಕಾ ಮೇಳ

ಮೀನುಗಾರಿಕಾ ಬೋಟ್‌ಗಳಿಗೆ “ತೇಲುವ ಜೆಟ್ಟಿ’!

ಮೀನುಗಾರಿಕಾ ಬೋಟ್‌ಗಳಿಗೆ “ತೇಲುವ ಜೆಟ್ಟಿ’!

ದ. ಕ.ದಿಂದ ವಿದೇಶಕ್ಕೆ ನಿಷೇಧಿತ  ಸ್ಯಾಟಲೈಟ್‌ ಫೋನ್‌ ಸಂಪರ್ಕ  ?

ದ. ಕ.ದಿಂದ ವಿದೇಶಕ್ಕೆ ನಿಷೇಧಿತ ಸ್ಯಾಟಲೈಟ್‌ ಫೋನ್‌ ಸಂಪರ್ಕ  ?

ರಸ್ತೆ ದುರವಸ್ಥೆ; ನದಿಯ ಬದಿ ಇದ್ದೂ ನೀರಿಗೆ ಬರ

ರಸ್ತೆ ದುರವಸ್ಥೆ; ನದಿಯ ಬದಿ ಇದ್ದೂ ನೀರಿಗೆ ಬರ

MUST WATCH

udayavani youtube

LIVE : 16/09/21 ವಿಧಾನಮಂಡಲ ಅಧಿವೇಶನ 2021 |

udayavani youtube

ಹಿಂದೂ ಪರ ಸಂಘಟನೆಗಳ ಪ್ರತಿಭಟನೆ ಸಹಜವಾದದ್ದು : ಎಸ್.ಟಿ. ಸೋಮಶೇಖರ್

udayavani youtube

ಅರಮನೆ ಪ್ರವೇಶಿಸಿದ ಅಭಿಮನ್ಯು ನೇತೃತ್ವದ ಗಜಪಡೆ

udayavani youtube

ಮೋದಿಗೆ ನಿದ್ದೆ ಇಲ್ಲದ ರಾತ್ರಿ ಕಳೆಯುವಂತೆ ಮಾಡ್ತೇವೆ: ಖಲಿಸ್ತಾನ್|

udayavani youtube

ಮೂಡಿಗೆರೆ: ಬಿಜೆಪಿ ಸಂಸದರಿಗೆ ಹಿಂದೂಪರ ಕಾರ್ಯಕರ್ತರಿಂದ ಮುತ್ತಿಗೆ ಯತ್ನ|

ಹೊಸ ಸೇರ್ಪಡೆ

ಕಳೆದ 14 ತಿಂಗಳಿಂದ ವೇತನ ಇಲ್ಲದೆ ಕೆಲಸ

ಕಳೆದ 14 ತಿಂಗಳಿಂದ ವೇತನ ಇಲ್ಲದೆ ಕೆಲಸ

ಅನಧಿಕೃತ ವಾಹನಗಳ ಸಂಚಾರಕ್ಕೆ ಬ್ರೇಕ್‌

ಅನಧಿಕೃತ ವಾಹನಗಳ ಸಂಚಾರಕ್ಕೆ ಬ್ರೇಕ್‌

2 ಡೋಸ್‌ ಪಡೆದಿದ್ದರೂ ನೆಗೆಟಿವ್‌ ವರದಿ ಕಡ್ಡಾಯ

2 ಡೋಸ್‌ ಪಡೆದಿದ್ದರೂ ನೆಗೆಟಿವ್‌ ವರದಿ ಕಡ್ಡಾಯ

ಸರ್ಕಾರಿ ಪಿಯು ಕಾಲೇಜು ಪ್ರವೇಶಕ್ಕೆ ದುಬಾರಿ ಶುಲ್ಕ ವಸೂಲಿ ಸರಿನಾ?

ಸರ್ಕಾರಿ ಪಿಯು ಕಾಲೇಜು ಪ್ರವೇಶಕ್ಕೆ ದುಬಾರಿ ಶುಲ್ಕ ವಸೂಲಿ ಸರಿನಾ?

ಪಾಕ್ ಗೆ ಬಿಗ್ ಶಾಕ್: ಭದ್ರತಾ ಭೀತಿಯಿಂದ ಟಾಸ್ ಗೆ ಮೊದಲು ಸರಣಿಯನ್ನೇ ರದ್ದು ಮಾಡಿದ ಕಿವೀಸ್

ಪಾಕ್ ಗೆ ಬಿಗ್ ಶಾಕ್: ಭದ್ರತಾ ಭೀತಿಯಿಂದ ಟಾಸ್ ಗೆ ಮೊದಲು ಸರಣಿಯನ್ನೇ ರದ್ದು ಮಾಡಿದ ಕಿವೀಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.