ಕರಾವಳಿ ಭಾಗದ ಅಪರಾಧ ಸುದ್ದಿಗಳು

Team Udayavani, Aug 31, 2017, 6:50 AM IST

Crime-News-Symbolic-750.jpg

ಕೂಳೂರು: ಹಟ್ಟಿಯಿಂದ ದನ ಕಳವು
ಮಂಗಳೂರು
: ನಗರದ ಕೂಳೂರು ಸಮೀಪ ಪಂಜಿಮೊಗರು ಮೇಲುಕೊಪ್ಪಲದ ನವೀನ್‌ ಶೆಟ್ಟಿ  ಅತ್ರೆಬೈಲು ಅವರ ಹಟ್ಟಿಯಿಂದ ಮಂಗಳವಾರ ರಾತ್ರಿ ಒಂದು ದನ ಕಳವಾಗಿದೆ.

ರಾತ್ರಿ 9 ಗಂಟೆಗೆ ಹಟ್ಟಿಯಲ್ಲಿದ್ದ 7 ಜರ್ಸಿ ದನ ಹಾಗೂ ಎರಡು ಕರುಗಳಿಗೆ ಮೇವು ಹಾಕಿ ಕಬ್ಬಿಣದ ಬಾಗಿಲು ಮುಚ್ಚಿ ಮಲಗಿದ್ದರು.  ಬೆಳಗಿನ ಜಾವ  ಸುಮಾರು 3 ಗಂಟೆಗೆ ಹಟ್ಟಿಯಲ್ಲಿದ್ದ ದನಗಳು ಕೂಗುತ್ತಿದ್ದನ್ನು ಕೇಳಿ ನವೀನ್‌ ಶೆಟ್ಟಿ ಅವರಿಗೆ ಎಚ್ಚರವಾಯಿತು.

ಹಟ್ಟಿಯ ಬಳಿಗೆ ಹೋಗಿ ನೋಡಿದಾಗ ಹಟ್ಟಿಯ ಎದುರಿನ ಬಾಗಿಲು ತೆರೆದಿರುವುದು ಗಮನಕ್ಕೆ ಬಂತು. ಒಳಗೆ ಹೋಗಿ ನೋಡಿದಾಗ ಹಟ್ಟಿಯಲ್ಲಿ ಎರಡನೇ ಸಾಲಿನಲ್ಲಿ ಕಟ್ಟಿದ್ದ ಬೂದು ಬಣ್ಣದ ಜರ್ಸಿ ದನ ಕಾಣೆಯಾಗಿರುವುದು ಹಾಗೂ ಕಟ್ಟಿದ್ದ ಹಗ್ಗ ಕೂಡ ಗೂಟದಲ್ಲಿ ತುಂಡು ಮಾಡಿದ ಸ್ಥಿತಿಯಲ್ಲಿರುವುದು ಕಂಡು ಬಂದಿದೆ. 

ಈ ಬಗ್ಗೆ ಕಾವೂರು ಪೊಲೀಸ್‌ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ದನ ಕಳವು ಪ್ರಕರಣ ದಾಖಲಿಸಿದ್ದಾರೆ. 
ಕಳವಾದ ಗೋವಿನ ಬೆಲೆ 30,000 ರೂ. ಎಂದು ಅಂದಾಜಿಸಲಾಗಿದೆ. 

ಕ್ರಮಕ್ಕೆ ಆಗ್ರಹ
ಸ್ಥಳಕ್ಕೆ ಬುಧವಾರ ಬೆಳಗ್ಗೆ  ಬಿಜೆಪಿ ಮಂಗಳೂರು ಉತ್ತರ ಕ್ಷೇತ್ರ ಅಧ್ಯಕ್ಷ ಡಾ| ಭರತ್‌ ಶೆಟ್ಟಿ, ಬಿಜೆಪಿ ಜಿÇÉಾ ಕಾರ್ಯದರ್ಶಿ ರಣದೀಪ್‌ ಕಾಂಚನ್‌, ಕಾವೂರು ಶಕ್ತಿ ಕೇಂದ್ರ ಅಧ್ಯಕ್ಷ ಗುರುಚಂದ್ರ ಹೆಗ್ಡೆ ಗಂಗಾರಿ, ಬಿಜೆಪಿ 12 ವಾರ್ಡ್‌ ಕಾರ್ಯದರ್ಶಿ ವಿವೇಕ್‌ ಸುವರ್ಣ, ಬೂತ್‌ ಕಾರ್ಯದರ್ಶಿ ರಾಜೇಶ್‌, ಬಜರಂಗ ದಳ ಸಂಚಾಲಕ ವಿಕೇಶ್‌,  ಮಾಜಿ ಕಾರ್ಪೊರೇಟರ್‌ ಶರತ್‌ ಕುಂಜತ್‌ಬೈಲ…, ಧೀರಜ… ಮತ್ತಿತರರು ಭೇಟಿ ನೀಡಿ, ಪೊಲೀಸರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಶಿಕ್ಷಕಿಯ ವರ್ಗಾವಣೆಗೆ ಆಗ್ರಹ; ಶಾಲೆಗೆ  ಮುತ್ತಿಗೆ
ಮಡಂತ್ಯಾರು
: ಬೆಳ್ತಂಗಡಿ ತಾಲೂಕಿನ ಮಚ್ಚಿನ ಸರಕಾರಿ ಪ್ರೌಢಶಾಲೆಯಲ್ಲಿ ಕಳೆದ ಒಂದು ವರ್ಷದಿಂದ ಹಿಂದಿ ಶಿಕ್ಷಕಿಯ ಕುರಿತು ಕೆಟ್ಟ ಅಭಿಪ್ರಾಯಗಳು ಕೇಳಿಬರುತ್ತಿದ್ದು ಅವರನ್ನು ತೆರವುಗೊಳಿಸಿ ಬೇರೆ ಶಿಕ್ಷಕಿಯನ್ನು ನಿಯೋಜಿಸಬೇಕು ಎಂದು ಒತ್ತಾಯಿಸಿ ಬುಧವಾರ ಮಚ್ಚಿನ ಪ್ರೌಢಶಾಲೆಗೆ ಪೋಷಕರು ಮತ್ತು ಗ್ರಾಮಸ್ಥರು ಮುತ್ತಿಗೆ ಹಾಕಿದ್ದಾರೆ.

ಕಳೆದ ಕೆಲವು ದಿನಗಳಿಂದ ರಜೆಯಲ್ಲಿದ್ದ ಹಿಂದಿ ಶಿಕ್ಷಕಿ ಶಿಲ್ಪಾ ಎಂಬುವವರು ಇಂದು ಎಂದಿನಂತೆ ಶಾಲೆಗೆ ಬಂದಿದ್ದಾರೆ. ಇದನ್ನು ಗಮನಿಸಿದ ಗ್ರಾಮಸ್ಥರು ಮತ್ತು ಪೋಷಕರು ಶಾಲೆಗೆ ಮುತ್ತಿಗೆ ಹಾಕಿ ವಿರೋಧ ವ್ಯಕ್ತ ಪಡಿಸಿದರು.

ಸಾಮಾಜಿಕ ಜಾಲತಾಣದಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಶಿಕ್ಷಕಿಯ ನಡತೆ ಬಗ್ಗೆ ಕೆಟ್ಟ ಅಭಿಪ್ರಾಯಗಳು ಹರಿದಾಡುತ್ತಿದ್ದು ಇದರಿಂದ ಪೋಷಕರಿಗೆ, ಮಕ್ಕಳಿಗೆ,  ಶಾಲೆಯ ಘನತೆಗೆ ದಕ್ಕೆಯಾಗಿದೆ. ಮಕ್ಕಳ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ಶಿಕ್ಷಕಿಯನ್ನು ತೆರವುಗೊಳಿಸಲೇ ಬೇಕು ಎಂದು ತಾ.ಪಂ.ಸದಸ್ಯೆ ವಸಂತಿ ಎಲ್‌., ಗ್ರಾ.ಪಂ. ಉಪಾಧ್ಯಕ್ಷ ಚಂದ್ರಶೇಖರ್‌, ಮಾಜಿ ಅಧ್ಯಕ್ಷ ಪ್ರಮೋದ್‌ ಕುಮಾರ್‌ ಹಾಗೂ ಪೋಷಕರು ಆಗ್ರಹಿಸಿದರು.

ಪರಿಸ್ಥಿತಿ ವಿಕೋಪಕ್ಕೆ ತಲುಪಿದ್ದು ಪುಂಜಾಲಕಟ್ಟೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು  ಹತೋಟಿಗೆ ತಂದರು.ಒಂದು ವಾರದ ವರೆಗೆ ಶಿಕ್ಷಕಿಗೆ ಶಾಲೆಗೆ ಬಾರದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಸೂಚಿಸಿದ್ದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.ಶಾಲೆಯ ಘನತೆ ಉಳಿಸಿಕೊಳ್ಳಲು ಶಿಕ್ಷಕಿಯ ತೆರವು ಅಗತ್ಯ ಇದಕ್ಕೆ ತಪ್ಪಿದಲ್ಲಿ ಉಗ್ರ ಹೋರಾಟಮಾಡುವುದಾಗಿ  ಎಚ್ಚರಿಸಿದ್ದು ಶಾಲಾ ಮುಖ್ಯ ಶಿಕ್ಷಕರಿಗೆ ಮನವಿ ನೀಡಿದರು.

ಮೇರ್ಲಪದವು: ಪರ್ಸ್‌ ಮರಳಿಸಿ 
ಪ್ರಾಮಾಣಿಕತೆ  ಮೆರೆದ ರಿಕ್ಷಾ  ಚಾಲಕ
ಮಂಗಳೂರು:
ಪ್ರಯಾಣಿಕರೊಬ್ಬರು ರಿಕ್ಷಾದಿಂದ ಇಳಿಯುವ ಸಂದರ್ಭದಲ್ಲಿ  ರಿಕ್ಷಾದಲ್ಲಿ ಬಿಟ್ಟು  ಹೋಗಿದ್ದ ಪರ್ಸ್‌ನ್ನು ಅದರ ಮಾಲಕರಿಗೆ ತಲುಪಿಸುವ ಮೂಲಕ ರಿಕ್ಷಾ ಚಾಲಕ ಮೇರ್ಲಪದವಿನ ಬೆನೆಡಿಕ್ಟ್  ಮಸ್ಕರೇನ್ಹಸ್‌ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ. 

ಯೆನೆ‌ಪೊಯ ಆಸ್ಪತ್ರೆಯಲ್ಲಿ  ವೈದ್ಯರಾಗಿರುವ ಡಾ| ರಶ್ಮಿ ಎಸ್‌. ಅವರು ಸೋಮವಾರ ಬೆಳಗ್ಗೆ  ತಮ್ಮ ಕದ್ರಿ ಕಂಬಳದ ಮನೆ ಬಳಿ ಆಟೋ ರಿಕ್ಷಾ ಹಿಡಿದು ಅದರಲ್ಲಿ ಬಲ್ಮಠ ಕಲೆಕ್ಟರ್ಗೇಟ್‌ ವರೆಗೆ ಪ್ರಯಾಣಿಸಿ ಅಲ್ಲಿಂದ ಬಸ್‌ ಹಿಡಿದು ದೇರಳಕಟ್ಟೆಗೆ ತೆರಳಿದ್ದರು. ರಿಕ್ಷಾದಿಂದ ಇಳಿಯುವಾಗ ಪರ್ಸ್‌ ರಿಕ್ಷಾದಲ್ಲಿ ಬಾಕಿಯಾಗಿತ್ತು. 

ಡಾ| ರಶ್ಮಿ ಅವರು ಬಸ್‌ ಹತ್ತಿದ ಬಳಿಕ ತನ್ನಲ್ಲಿ ಪರ್ಸ್‌ ಇಲ್ಲದಿರುವ ವಿಷಯ ಗೊತ್ತಾಗಿತ್ತು.  ಪರ್ಸ್‌ನಲ್ಲಿ  ನಗದು 600 ರೂ. ಮತ್ತು ಡಾ| ರಶ್ಮಿ ಅವರ  ಪ್ಯಾನ್‌ಕಾರ್ಡ್‌, ಐಡಿ ಕಾರ್ಡ್‌ ಇತ್ತು. ರಿಕ್ಷಾ ಚಾಲಕ ಬೆನೆಡಿಕ್ಟ್ ಅಂಗಡಿಯೊಂದರ ಬಳಿ ತೆರಳಿ ಐಡಿ ಕಾರ್ಡ್‌ನಲ್ಲಿದ್ದ  ಫೋನ್‌ ನಂಬರಿಗೆ ಫೋನ್‌ ಮಾಡಿ ಪರ್ಸ್‌ ಸಿಕ್ಕಿರುವ ವಿಷಯ ತಿಳಿಸಿದರು.

ಮಧ್ಯಾಹ್ನ  ಬಳಿಕ ಡಾ| ರಶ್ಮಿ ಅವರು ಮಂಗಳೂರಿಗೆ ಹಿಂದಿರ ಗಿದ ಬಳಿಕ ರಿಕ್ಷಾ ಚಾಲಕ ಬೆನೆಡಿಕ್ಟ್  ಅವರು ಕದ್ರಿ ಕಂಬಳಕ್ಕೆ ತೆರಳಿ ಪರ್ಸ್‌ನ್ನು ಡಾ| ರಶ್ಮಿ ಅವರಿಗೆ ಮರಳಿಸಿದರು. 

ಬೈಕಿಗೆ ಲಾರಿ ಢಿಕ್ಕಿ: ಸವಾರನಿಗೆ ಗಾಯ
ಉಡುಪಿ:
ಮಣಿಪಾಲ ಕ್ಯಾಂಪಸ್‌ ಕಡೆ ಹೋಗುವ ಕಾಮತ್‌ ಸರ್ಕಲ್‌ ಸಮೀಪ ಆ. 29ರ ಅಪರಾಹ್ನ ಲಾರಿಯೊಂದು ಬೈಕಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಸವಾರ ಅಮುತವನ್‌ ಹಾಗೂ ಸಹಸವಾರ ಅಮಿತ್‌ ಕುಮಾರ್‌ ಗಾಯಗೊಂಡಿದ್ದಾರೆ.

ಎಂಡೋಪೀಡಿತ ಯುವಕ ಸಾವು
ಬೆಳ್ತಂಗಡಿ:
ಬೆಳಾಲಿನ ಮೈರಾಜೆ ನಿವಾಸಿ ಎಂಡೋಪೀಡಿತ ಪ್ರಶಾಂತ್‌ (17) ಬುಧವಾರ ಮೃತಪಟ್ಟಿದ್ದಾರೆ.ಮೈರಾಜೆ ಗಿರಿಜಾ-ಪೂವಣಿ ಗೌಡ ಅವರ ಏಕೈಕ ಪುತ್ರ ಪ್ರಶಾಂತ್‌ಗೆ ಕಳೆದ 8 ವರ್ಷಗಳಿಂದ ಅನಾರೋಗ್ಯವಿತ್ತು. ಗಿರಿಜಾ ಅವರಿಗೆ ಧರ್ಮಸ್ಥಳದ ಕಲ್ಲೇರಿಗೆ ವಿವಾಹವಾಗಿದ್ದರೂ ಪತಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಸಹೋದರನ ನೆರವಿನಿಂದ ತವರು ಮನೆ ಸಮೀಪ ಮೈರಾಜೆಯಲ್ಲಿ  ಮನೆ ಕಟ್ಟಿ ವಾಸಿಸುತ್ತಿದ್ದರು. ಅತ್ತ ಪತಿಗೂ ಅನಾರೋಗ್ಯ, ಇತ್ತ ಮಗನಿಗೆ ನಡೆದಾಡಲು ಆಗದೇ ಮಲಗಿದಲ್ಲೇ ಇರಬೇಕಾದ ಸ್ಥಿತಿ. ಇಬ್ಬರ ಆರೈಕೆಯಿಂದ ಕೂಲಿಗೂ ಹೋಗದ ಸ್ಥಿತಿಯಲ್ಲಿದ್ದರು. ಚಿಕಿತ್ಸೆಗೆ ಹಣ ಹೊಂದಿಸುವುದು ಕೂಡ ಕಷ್ಟವಾಗಿತ್ತು. ಇಷ್ಟೆಲ್ಲ ಹೋರಾಟಗಳ ನಡುವೆಯೂ ಮಗನನ್ನು ಸಾಕಿದ್ದು ಬುಧವಾರ ತೀವ್ರ ಅನಾರೋಗ್ಯದಿಂದ ಇದ್ದೊಬ್ಬ ಮಗನೂ ವಿಧಿವಶನಾದ.

ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ
ಉಡುಪಿ:
ಉಡುಪಿಯಲ್ಲಿ ಟೈಲ್ಸ್‌ ಕೆಲಸ ಮಾಡಿಕೊಂಡಿದ್ದ ಮೂಲತಃ ಮಧ್ಯಪ್ರದೇಶದ ಶತ್ರುಘನ್‌ ತಿವಾರಿ (24) ತಾನು ತಂಗಿದ್ದ ಸಂತೆಕಟ್ಟೆಯ ಜೀಬಾ ಕಾಂಪ್ಲೆಕ್ಸ್‌ನ ರೂಮಿನಲ್ಲಿ ಆ. 28ರ ಸಂಜೆ ಫ್ಯಾನಿಗೆ ಶಾಲು ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಟ್ಕಾ ನಿರತನ ಬಂಧನ
ಕೋಟ:
ಕೋಟ ಗಿಳಿಯಾರು  ಬಾರ್‌ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ   ಹರ್ತಟ್ಟು ನಿವಾಸಿ ಸತೀಶ್‌ದೇವಾಡಿಗೆ (31)ನನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.ಕೋಟ ಠಾಣೆಯ ಉಪನಿರೀಕ್ಷಕ ಸಂತೋಷ್‌ ಎ. ಕಾಯ್ಕಿಣಿ ಅವರು ಬುಧವಾರ ಸಿಬಂದಿ ಜತೆ ದಾಳಿ ನಡೆಸಿ  ವಶಕ್ಕೆ ಪಡೆದು ಆಟಕ್ಕೆ ಬಳಸಿದ್ದ 775ರೂ. ನಗದು ಹಾಗೂ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ.

ಮಂಗಳೂರು: ವಿಚಾರಣಾಧೀನ ಕೈದಿ 
ಸುಳ್ಯದ ಶಿವಪ್ಪ ಅಸೌಖ್ಯದಿಂದ ಸಾವು
ಮಂಗಳೂರು:
ವಿಚಾರಣಾಧೀನ ಕೈದಿಯಾಗಿ ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿದ್ದ ಸುಳ್ಯದ ಶಿವಪ್ಪ (47) ಅಸೌಖ್ಯದಿಂದ ವೆನಾಕ್‌ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದಾನೆ. 

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ  ಹಿನ್ನೆಲೆಯಲ್ಲಿ ಆತನನ್ನು ಚಿಕಿತ್ಸೆಗೆ ವೆನಾÉಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾನೆ. ಈತ 2016ರಲ್ಲಿ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಪೊಕೊÕ ಕಾಯ್ದೆಯಡಿ ಬಂಧಿತನಾಗಿ  ಜೈಲು ಸೇರಿದ್ದ. ಪಾಂಡೇಶ್ವರ ಪೊಲೀಸ್‌ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ಹೊಳೆಗೆ ಬಿದ್ದ  ಸ್ಕೂಟರ್‌: ಪಾರು
ಅಡೂರು:
ಪಳ್ಳತ್ತೂರು ಸೇತುವೆಯಲ್ಲಿ ಸಾಗುತ್ತಿದ್ದ ಸ್ಕೂಟರ್‌ ಹೊಳೆಗೆ ಬಿದ್ದು, ಸವಾರರಿಬ್ಬರು ಅಪಾಯದಿಂದ ಪಾರಾದ ಘಟನೆ ನಡೆದಿದೆ.ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಮುಳ್ಳೇರಿಯ ಅಂಬಿಕಾ ನಗರ ನಿವಾಸಿ ವಿನೋದ್‌ (35) ಮತ್ತು ಮನೋಹರ್‌ (38) ಅಪಾಯ ದಿಂದ ಪಾರಾಗಿದ್ದಾರೆ.ಪುತ್ತೂರಿನಿಂದ ಊರಿಗೆ ಮರಳುತ್ತಿದ್ದಾಗ ಆವರಣ ಗೋಡೆ ಯಿಲ್ಲದ ಈ ಸೇತುವೆಯಲ್ಲಿ ನೀರು ಹರಿಯುತ್ತಿತ್ತು. ಇದರಿಂದ ಮನೋಹರ್‌ ಇಳಿದರು. ವಿನೋದ್‌ ಸ್ಕೂಟರ್‌ನಲ್ಲಿ ಸಾಗಿ ದಾಗ ನೀರಿನ ಹರಿವಿಗೆ ಸ್ಕೂಟರ್‌ ಸಹಿತ ಹೊಳೆಗೆ ಬಿದ್ದರು. ಕೂಡಲೇ ಮನೋಹರ್‌ ರಕ್ಷಿಸಿದರು. 

ಮಟ್ಕಾ: ಬಂಧನ
ಪಡುಬಿದ್ರಿ:
ಉಚ್ಚಿಲ ಪೇಟೆಯಲ್ಲಿ ಮಟ್ಕಾ ಚೀಟಿ ಬರೆಯುತ್ತಿದ್ದ ಉಚ್ಚಿಲ ಭಾಸ್ಕರ ನಗರದ ಮಹಮ್ಮದ್‌ ಯೂಸುಫ್‌(55)ನನ್ನು ಉಡುಪಿ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಬಂಧಿಸಿದ್ದಾರೆ.ಆತನಿಂದ 1100 ರೂ. ನಗದು, ಚೀಟಿಗಳನ್ನು ವಶಪಡಿಸಿಕೊಂಡು ಪ್ರಕರಣವನ್ನು ಪಡುಬಿದ್ರಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಮಹೇಶ ಉಚ್ಚಿಲ(36) ತಲೆ ಮರೆಸಿಕೊಂಡಿದ್ದು ಆತನ ಬಂಧನವಾಗಬೇಕಿದೆ. 

2 ಮಸಾಜ್‌ ಪಾರ್ಲರ್‌ಗಳಿಗೆ ದಾಳಿ
11 ಯುವತಿಯರ ರಕ್ಷಣೆ,  7 ಮಂದಿ ಆರೋಪಿಗಳ ಸೆರೆ
ಮಂಗಳೂರು:
ನಗರದ ಸಿಸಿಬಿ ಮತ್ತು ಸಿಸಿಆರ್‌ಬಿ ಪೊಲೀಸರು ಬುಧವಾರ ಸಂಜೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಎರಡು ಮಸಾಜ್‌ ಪಾರ್ಲರ್‌ಗಳಿಗೆ ದಾಳಿ ಮಾಡಿ 11 ಮಂದಿ ಯುವತಿಯರನ್ನು ರಕ್ಷಿಸಿ 7 ಮಂದಿ ಆರೋಪಿಗಳನ್ನು ಬಂಧಿಸಿ 2000 ರೂ.ನಗದು ವಶ ಪಡಿಸಿಕೊಂಡಿದ್ದಾರೆ. ಕದ್ರಿ ಶಿವಬಾಗ್‌ನ ಕಂಪೌಂಡ್‌ ಒಂದರ ಕಟ್ಟಡದ ಎರಡನೇ ಮಹಡಿ ಯಲ್ಲಿರುವ ಆಯುರ್ವೇದಿಕ್‌ ಮಸಾಜ್‌ ಸೆಂಟರ್‌ನಲ್ಲಿ  5 ಮಂದಿ ಹುಡುಗಿಯರನ್ನು ರಕ್ಷಿಸಿದ್ದಾರೆ.

ಆರೋಪಿಗಳಾದ ತೊಕ್ಕೋಟಿನ ಪ್ರದೀಪ್‌ ಮತ್ತು ಪಿಂಪ್‌ ಸುರತ್ಕಲ್‌ ಹೊಸಬೆಟ್ಟಿನ  ರೇಶ್ಮಾ, ಗಿರಾಕಿಗಳಾದ ಅಭಿಷೇಕ್‌ ಮುಳಿಹಿತ್ಲು  ಮತ್ತು ಚಂದ್ರನಾಥ್‌  ಬೊಕ್ಕಪಟ್ನ ಅವರನ್ನು ಬಂಧಿಸಿ ನಗದು 1,500 ರೂ. ವಶ ಪಡಿಕೊಂಡಿದ್ದಾರೆ. ಆರೋಪಿಗಳನ್ನು ಮತ್ತು ಸೊತ್ತುಗಳನ್ನು ಕದ್ರಿ ಪೊಲೀಸ್‌ ಠಾಣೆಗೆ ಹಸ್ತಾಂತರಿಸಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ನಗರದ ಕೆ.ಎಸ್‌.ರಾವ್‌ ರಸ್ತೆಯ ಕಟ್ಟಡವೊಂದರ ಒಂದನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಯುರ್ವೇದಿಕ್‌ ಥೆರಫಿ ಕ್ಲಿನಿಕ್‌ಗೆ ದಾಳಿ ಮಾಡಿ 6 ಮಂದಿ ಯುವತಿಯರನ್ನು ಪೊಲೀಸರು ರಕ್ಷಿಸಿದ್ದಾರೆ. 

ಆರೋಪಿಗಳಾದ ಹರೀಶ್‌ ಶೆಟ್ಟಿ   ಮಂಗಳೂರು, ಪಿಂಪ್‌ ವೀಣಾ ಮತ್ತು ಗಿರಾಕಿ ಮಂಜೇಶ್ವರದ ರವಿ (31) ಯನ್ನು ಬಂಧಿಸಿ ನಗದು  500 ರೂ. ವಶ ಪಡಿಸಿದ್ದಾರೆ.  ಆರೋಪಿಗಳನ್ನು ಮತ್ತು ಸೊತ್ತುಗಳನ್ನು ಮುಂದಿನ ಕ್ರಮಕ್ಕಾಗಿ ಬಂದರು ಪೊಲೀಸ್‌ ಠಾಣೆಗೆ ಒಪ್ಪಿಸಲಾಗಿದೆ. ಮಸಾಜ್‌ ಪಾರ್ಲರ್‌ಗಳಲ್ಲಿ  ಅಕ್ರಮ ವ್ಯವಹಾರ ನಡೆಯುತ್ತಿದೆ ಎಂಬ ಆರೋಪಿದ ಮೇಲೆ ಈ ದಾಳಿ ನಡೆಸಲಾಗಿದೆ. 

ಶಿಕ್ಷೆ ತೀರ್ಪಿನ ವಿರುದ್ಧ ಮೇಲ್ಮನವಿ ನಿರ್ಧಾರ
ಬೆಳ್ತಂಗಡಿ
: ಇಲ್ಲಿನ ಹೆಚ್ಚುವರಿ ನ್ಯಾಯಾಲಯದ ಪ್ರತಿಬಂಧಕಾಜ್ಞೆ ಯನ್ನು ಉಲ್ಲಂಘಿಸಿ ಧರ್ಮಸ್ಥಳದ ಡಾ| ಡಿ.ವೀರೇಂದ್ರ ಹೆಗ್ಗಡೆ ಮತ್ತು ಅವರ ಸಂಸ್ಥೆಗಳ ವಿರುದ್ಧ ಆರೋಪ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಾಗರಿಕ ಸೇವಾ ಟ್ರಸ್ಟ್‌ ಅಧ್ಯಕ್ಷ ಕೆ.ಸೋಮನಾಥ ನಾಯಕ್‌ರಿಗೆ ಜೈಲು ಶಿಕ್ಷೆ ವಿಧಿಸಿ ತೀಪುì ಹೊರಬಂದಿದ್ದು ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.

ಮಂಗಳವಾರ ಟ್ರಸ್ಟ್‌ ಕಚೇರಿಯಲ್ಲಿ ನಡೆದ ಜಂಟಿ ಕ್ರಿಯಾ ಸಮಿತಿ ಸಭೆಯಲ್ಲಿ, ಸೋಮನಾಥ ನಾಯಕ್‌ರು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿಲ್ಲ. ಯಾವುದೇ ಸುಳ್ಳು ಆರೋಪಗಳನ್ನು ಮಾಡಿಲ್ಲ.  ಸರಕಾರ ದಿಂದ ಪಡೆದ ದಾಖಲೆಗಳನ್ನೇ ಧರ್ಮಸೂಕ್ಷ್ಮದಲ್ಲಿ ಪ್ರಕಟಿಸಲಾಗಿದೆ. ಸುಪ್ರೀಂ ಕೋರ್ಟ್‌ ತೀರ್ಪುಗಳ ಪ್ರಕಾರ ಸತ್ಯ ಹೇಳುವುದು ಮಾನನಷ್ಟದ ವ್ಯಾಪ್ತಿಗೆ ಬರುವುದಿಲ್ಲ. ತನ್ನನ್ನು ಸಮರ್ಥಿಸಲು ಹಲವು ದಾಖಲೆಗಳನ್ನು ಹಾಜರು ಪಡಿಸಲು ಅವಕಾಶ ನೀಡಬೇಕು, ಕಾನೂನಾತ್ಮಕವಾಗಿ ಸಮರ್ಥನೆಗೆ ಸಕಲ ಅವಕಾಶಗಳನ್ನು ನೀಡಬೇಕು. ನ್ಯಾಯಾಲಯದ ಈ ತೀಪುì ನಮಗೆ ಒಪ್ಪಿಗೆ ಇಲ್ಲವೆಂದೂ ಅಪೀಲು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ನಿರ್ಧರಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

ವ್ಯಕ್ತಿ ಸಾವು
ಉಡುಪಿ
: ಪುತ್ತೂರು ಗ್ರಾಮದ ನಿಟ್ಟೂರು ಬಾಳಿಗಾ ಫಿಶ್‌ನೆಟ್‌ ಸಮೀಪದ ಗಣೇಶ್‌ ಪ್ರಸಾದ್‌ ಹೊಟೇಲಿನ ಬಳಿಯ ನಿವಾಸಿ ಆನಂದ ಯಾನೆ ರಮೇಶ (65) ಆ. 29ರ ಸಂಜೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ನಗದು ಕಳವು
ಕುಂದಾಪುರ:
ಕುಂದೇ ಶ್ವರ ದೇವಸ್ಥಾನದಲ್ಲಿ  ಆ.28ರಂದು ನಡೆದ‌  ಗಣೇಶೋತ್ಸವದ ಮೆರವ ಣಿಗೆಗೆ ವೇಷ ಹಾಕಲು ಬಂದಿದ್ದ  ಬೈಲೂರಿನ ಯರ್ಲಪಾಡಿಯ ಸಚಿನ್‌ ದೇವಾಡಿಗ ಅವರ ಬ್ಯಾಗ್‌ನಿಂದ 24 ಸಾವಿರ  ರೂ. ಕಳವು ಮಾಡಿದ ಬಗ್ಗೆ  ಕುಂದಾಪುರ  ಠಾಣೆಯಲ್ಲಿ ದೂರು ದಾಖಲಾಗಿದೆ.

ಬೈಕ್‌ ಢಿಕ್ಕಿ : ಪಾದಚಾರಿ ಮಹಿಳೆ ಸಾವು
ಹಳೆಯಂಗಡಿ:
ರಾಷ್ಟ್ರೀಯ ಹೆದ್ದಾರಿ ಮುಕ್ಕ ಚೆಕ್‌ ಪೋಸ್ಟ್‌ ಬಳಿಯಲ್ಲಿ  ಪಾದಚಾರಿ ಮಹಿಳೆಯೋರ್ವರಿಗೆ ಬೈಕ್‌ ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ.ಕೊಂಕಣ ಬೈಲು ನಿವಾಸಿ ವಾರಿಜಾ (51) ಮೃತಪಟ್ಟವರು.ಹೆದ್ದಾರಿಯನ್ನು ದಾಟುತ್ತಿದ್ದಾಗ ಸುರತ್ಕಲ್‌ನತ್ತ ಸಂಚರಿಸುತ್ತಿದ್ದ ಬೈಕ್‌ ಏಕಾಏಕಿ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ವಾರಿಜಾ ಅವರ ತಲೆಗೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದು ಬಂದಿದೆ. 

ಬೈಕ್‌ ಸವಾರ ಕಿನ್ನಿಗೋಳಿ ಬಳಿಯ ಉಲ್ಲಂಜೆ ನಿವಾಸಿ ಗೌತಮ್‌ ಅವರಿಗೆ ಅಪಘಾತದಲ್ಲಿ ಕೈ ಹಾಗೂ ಕಾಲಿಗೆ ಗಂಭೀರ ಗಾಯವಾಗಿದ್ದು ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮಂಗಳೂರು ಉತ್ತರ ವಲಯದ ಸಂಚಾರ ಪೊಲೀಸ್‌ ಠಾಣೆಯಲ್ಲಿ  ಅಪಘಾತದ ಪ್ರಕರಣ ದಾಖಲಾಗಿದೆ.

ಪಳ್ಳತ್ತೂರು ಸೇತುವೆಯಲ್ಲಿ ಸಾಗುತ್ತಿದ್ದ ಸ್ಕೂಟರ್‌ ಹೊಳೆಗೆ ಬಿದ್ದು, ಸವಾರರಿಬ್ಬರು ಅಪಾಯದಿಂದ ಪಾರಾದ ಘಟನೆ ನಡೆದಿದೆ.ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಮುಳ್ಳೇರಿಯ ಅಂಬಿಕಾ ನಗರ ನಿವಾಸಿ ವಿನೋದ್‌ (35) ಮತ್ತು ಮನೋಹರ್‌ (38) ಅಪಾಯ ದಿಂದ ಪಾರಾಗಿದ್ದಾರೆ.ಪುತ್ತೂರಿನಿಂದ ಊರಿಗೆ ಮರಳುತ್ತಿದ್ದಾಗ ಆವರಣ ಗೋಡೆ ಯಿಲ್ಲದ ಈ ಸೇತುವೆಯಲ್ಲಿ ನೀರು ಹರಿಯುತ್ತಿತ್ತು. ಇದರಿಂದ ಮನೋಹರ್‌ ಇಳಿದರು. ವಿನೋದ್‌ ಸ್ಕೂಟರ್‌ನಲ್ಲಿ ಸಾಗಿ ದಾಗ ನೀರಿನ ಹರಿವಿಗೆ ಸ್ಕೂಟರ್‌ ಸಹಿತ ಹೊಳೆಗೆ ಬಿದ್ದರು. ಕೂಡಲೇ ಮನೋಹರ್‌ ರಕ್ಷಿಸಿದರು. 

ಮಟ್ಕಾ: ಬಂಧನ
ಪಡುಬಿದ್ರಿ:
ಉಚ್ಚಿಲ ಪೇಟೆಯಲ್ಲಿ ಮಟ್ಕಾ ಚೀಟಿ ಬರೆಯುತ್ತಿದ್ದ ಉಚ್ಚಿಲ ಭಾಸ್ಕರ ನಗರದ ಮಹಮ್ಮದ್‌ ಯೂಸುಫ್‌(55)ನನ್ನು ಉಡುಪಿ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಬಂಧಿಸಿದ್ದಾರೆ.ಆತನಿಂದ 1100 ರೂ. ನಗದು, ಚೀಟಿಗಳನ್ನು ವಶಪಡಿಸಿಕೊಂಡು ಪ್ರಕರಣವನ್ನು ಪಡುಬಿದ್ರಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಮಹೇಶ ಉಚ್ಚಿಲ(36) ತಲೆ ಮರೆಸಿಕೊಂಡಿದ್ದು ಆತನ ಬಂಧನವಾಗಬೇಕಿದೆ. 

2 ಮಸಾಜ್‌ ಪಾರ್ಲರ್‌ಗಳಿಗೆ ದಾಳಿ
11 ಯುವತಿಯರ ರಕ್ಷಣೆ, 7 ಮಂದಿ ಆರೋಪಿಗಳ ಸೆರೆ
ಮಂಗಳೂರು
: ನಗರದ ಸಿಸಿಬಿ ಮತ್ತು ಸಿಸಿಆರ್‌ಬಿ ಪೊಲೀಸರು ಬುಧವಾರ ಸಂಜೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಎರಡು ಮಸಾಜ್‌ ಪಾರ್ಲರ್‌ಗಳಿಗೆ ದಾಳಿ ಮಾಡಿ 11 ಮಂದಿ ಯುವತಿಯರನ್ನು ರಕ್ಷಿಸಿ 7 ಮಂದಿ ಆರೋಪಿಗಳನ್ನು ಬಂಧಿಸಿ 2000 ರೂ.ನಗದು ವಶ ಪಡಿಸಿಕೊಂಡಿದ್ದಾರೆ. ಕದ್ರಿ ಶಿವಬಾಗ್‌ನ ಕಂಪೌಂಡ್‌ ಒಂದರ ಕಟ್ಟಡದ ಎರಡನೇ ಮಹಡಿ ಯಲ್ಲಿರುವ ಆಯುರ್ವೇದಿಕ್‌ ಮಸಾಜ್‌ ಸೆಂಟರ್‌ನಲ್ಲಿ  5 ಮಂದಿ ಹುಡುಗಿಯರನ್ನು ರಕ್ಷಿಸಿದ್ದಾರೆ.

ಆರೋಪಿಗಳಾದ ತೊಕ್ಕೋಟಿನ ಪ್ರದೀಪ್‌ ಮತ್ತು ಪಿಂಪ್‌ ಸುರತ್ಕಲ್‌ ಹೊಸಬೆಟ್ಟಿನ  ರೇಶ್ಮಾ, ಗಿರಾಕಿಗಳಾದ ಅಭಿಷೇಕ್‌ ಮುಳಿಹಿತ್ಲು  ಮತ್ತು ಚಂದ್ರನಾಥ್‌  ಬೊಕ್ಕಪಟ್ನ ಅವರನ್ನು ಬಂಧಿಸಿ ನಗದು 1,500 ರೂ. ವಶ ಪಡಿಕೊಂಡಿದ್ದಾರೆ. ಆರೋಪಿಗಳನ್ನು ಮತ್ತು ಸೊತ್ತುಗಳನ್ನು ಕದ್ರಿ ಪೊಲೀಸ್‌ ಠಾಣೆಗೆ ಹಸ್ತಾಂತರಿಸಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ನಗರದ ಕೆ.ಎಸ್‌.ರಾವ್‌ ರಸ್ತೆಯ ಕಟ್ಟಡವೊಂದರ ಒಂದನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಯುರ್ವೇದಿಕ್‌ ಥೆರಫಿ ಕ್ಲಿನಿಕ್‌ಗೆ ದಾಳಿ ಮಾಡಿ 6 ಮಂದಿ ಯುವತಿಯರನ್ನು ಪೊಲೀಸರು ರಕ್ಷಿಸಿದ್ದಾರೆ. 

ಆರೋಪಿಗಳಾದ ಹರೀಶ್‌ ಶೆಟ್ಟಿ   ಮಂಗಳೂರು, ಪಿಂಪ್‌ ವೀಣಾ ಮತ್ತು ಗಿರಾಕಿ ಮಂಜೇಶ್ವರದ ರವಿ (31) ಯನ್ನು ಬಂಧಿಸಿ ನಗದು  500 ರೂ. ವಶ ಪಡಿಸಿದ್ದಾರೆ.  ಆರೋಪಿಗಳನ್ನು ಮತ್ತು ಸೊತ್ತುಗಳನ್ನು ಮುಂದಿನ ಕ್ರಮಕ್ಕಾಗಿ ಬಂದರು ಪೊಲೀಸ್‌ ಠಾಣೆಗೆ ಒಪ್ಪಿಸಲಾಗಿದೆ. ಮಸಾಜ್‌ ಪಾರ್ಲರ್‌ಗಳಲ್ಲಿ  ಅಕ್ರಮ ವ್ಯವಹಾರ ನಡೆಯುತ್ತಿದೆ ಎಂಬ ಆರೋಪಿದ ಮೇಲೆ ಈ ದಾಳಿ ನಡೆಸಲಾಗಿದೆ. 

ಶಿಕ್ಷೆ ತೀರ್ಪಿನ ವಿರುದ್ಧ ಮೇಲ್ಮನವಿ ನಿರ್ಧಾರ
ಬೆಳ್ತಂಗಡಿ:
ಇಲ್ಲಿನ ಹೆಚ್ಚುವರಿ ನ್ಯಾಯಾಲಯದ ಪ್ರತಿಬಂಧಕಾಜ್ಞೆ ಯನ್ನು ಉಲ್ಲಂಘಿಸಿ ಧರ್ಮಸ್ಥಳದ ಡಾ| ಡಿ.ವೀರೇಂದ್ರ ಹೆಗ್ಗಡೆ ಮತ್ತು ಅವರ ಸಂಸ್ಥೆಗಳ ವಿರುದ್ಧ ಆರೋಪ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಾಗರಿಕ ಸೇವಾ ಟ್ರಸ್ಟ್‌ ಅಧ್ಯಕ್ಷ ಕೆ.ಸೋಮನಾಥ ನಾಯಕ್‌ರಿಗೆ ಜೈಲು ಶಿಕ್ಷೆ ವಿಧಿಸಿ ತೀಪುì ಹೊರಬಂದಿದ್ದು ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.

ಮಂಗಳವಾರ ಟ್ರಸ್ಟ್‌ ಕಚೇರಿಯಲ್ಲಿ ನಡೆದ ಜಂಟಿ ಕ್ರಿಯಾ ಸಮಿತಿ ಸಭೆಯಲ್ಲಿ, ಸೋಮನಾಥ ನಾಯಕ್‌ರು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿಲ್ಲ. ಯಾವುದೇ ಸುಳ್ಳು ಆರೋಪಗಳನ್ನು ಮಾಡಿಲ್ಲ.  ಸರಕಾರ ದಿಂದ ಪಡೆದ ದಾಖಲೆಗಳನ್ನೇ ಧರ್ಮಸೂಕ್ಷ್ಮದಲ್ಲಿ ಪ್ರಕಟಿಸಲಾಗಿದೆ. ಸುಪ್ರೀಂ ಕೋರ್ಟ್‌ ತೀರ್ಪುಗಳ ಪ್ರಕಾರ ಸತ್ಯ ಹೇಳುವುದು ಮಾನನಷ್ಟದ ವ್ಯಾಪ್ತಿಗೆ ಬರುವುದಿಲ್ಲ. ತನ್ನನ್ನು ಸಮರ್ಥಿಸಲು ಹಲವು ದಾಖಲೆಗಳನ್ನು ಹಾಜರು ಪಡಿಸಲು ಅವಕಾಶ ನೀಡಬೇಕು, ಕಾನೂನಾತ್ಮಕವಾಗಿ ಸಮರ್ಥನೆಗೆ ಸಕಲ ಅವಕಾಶಗಳನ್ನು ನೀಡಬೇಕು. ನ್ಯಾಯಾಲಯದ ಈ ತೀಪುì ನಮಗೆ ಒಪ್ಪಿಗೆ ಇಲ್ಲವೆಂದೂ ಅಪೀಲು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ನಿರ್ಧರಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

ವ್ಯಕ್ತಿ ಸಾವು
ಉಡುಪಿ
: ಪುತ್ತೂರು ಗ್ರಾಮದ ನಿಟ್ಟೂರು ಬಾಳಿಗಾ ಫಿಶ್‌ನೆಟ್‌ ಸಮೀಪದ ಗಣೇಶ್‌ ಪ್ರಸಾದ್‌ ಹೊಟೇಲಿನ ಬಳಿಯ ನಿವಾಸಿ ಆನಂದ ಯಾನೆ ರಮೇಶ (65) ಆ. 29ರ ಸಂಜೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ನಗದು ಕಳವು
ಕುಂದಾಪುರ:
ಕುಂದೇ ಶ್ವರ ದೇವಸ್ಥಾನದಲ್ಲಿ  ಆ.28ರಂದು ನಡೆದ‌  ಗಣೇಶೋತ್ಸವದ ಮೆರವ ಣಿಗೆಗೆ ವೇಷ ಹಾಕಲು ಬಂದಿದ್ದ  ಬೈಲೂರಿನ ಯರ್ಲಪಾಡಿಯ ಸಚಿನ್‌ ದೇವಾಡಿಗ ಅವರ ಬ್ಯಾಗ್‌ನಿಂದ 24 ಸಾವಿರ  ರೂ. ಕಳವು ಮಾಡಿದ ಬಗ್ಗೆ  ಕುಂದಾಪುರ  ಠಾಣೆಯಲ್ಲಿ ದೂರು ದಾಖಲಾಗಿದೆ.

ಬೈಕ್‌ ಢಿಕ್ಕಿ : ಪಾದಚಾರಿ ಮಹಿಳೆ ಸಾವು
ಹಳೆಯಂಗಡಿ:
ರಾಷ್ಟ್ರೀಯ ಹೆದ್ದಾರಿ ಮುಕ್ಕ ಚೆಕ್‌ ಪೋಸ್ಟ್‌ ಬಳಿಯಲ್ಲಿ  ಪಾದಚಾರಿ ಮಹಿಳೆಯೋರ್ವರಿಗೆ ಬೈಕ್‌ ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ.ಕೊಂಕಣ ಬೈಲು ನಿವಾಸಿ ವಾರಿಜಾ (51) ಮೃತಪಟ್ಟವರು.ಹೆದ್ದಾರಿಯನ್ನು ದಾಟುತ್ತಿದ್ದಾಗ ಸುರತ್ಕಲ್‌ನತ್ತ ಸಂಚರಿಸುತ್ತಿದ್ದ ಬೈಕ್‌ ಏಕಾಏಕಿ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ವಾರಿಜಾ ಅವರ ತಲೆಗೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದು ಬಂದಿದೆ. 

ಬೈಕ್‌ ಸವಾರ ಕಿನ್ನಿಗೋಳಿ ಬಳಿಯ ಉಲ್ಲಂಜೆ ನಿವಾಸಿ ಗೌತಮ್‌ ಅವರಿಗೆ ಅಪಘಾತದಲ್ಲಿ ಕೈ ಹಾಗೂ ಕಾಲಿಗೆ ಗಂಭೀರ ಗಾಯವಾಗಿದ್ದು ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮಂಗಳೂರು ಉತ್ತರ ವಲಯದ ಸಂಚಾರ ಪೊಲೀಸ್‌ ಠಾಣೆಯಲ್ಲಿ  ಅಪಘಾತದ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್

anಯಾವ ಯಾವ ರಾಜ್ಯಗಳಲ್ಲಿ ಸೌಲಭ್ಯ- ಕೊಡುಗೆಗಳ ಮಹಾಪೂರ ಜಾರಿಯಲ್ಲಿವೆ? ಇಲ್ಲಿದೆ ಮಾಹಿತಿ

ಯಾವ ಯಾವ ರಾಜ್ಯಗಳಲ್ಲಿ ಸೌಲಭ್ಯ- ಕೊಡುಗೆಗಳ ಮಹಾಪೂರ ಜಾರಿಯಲ್ಲಿವೆ? ಇಲ್ಲಿದೆ ಮಾಹಿತಿ

Mangaluru Airport bomb case; ಆದಿತ್ಯ ರಾವ್‌ ವಿರುದ್ಧ ಜೈಲು ಅಧಿಕಾರಿಗಳೇ ದೂರು ದಾಖಲು

Mangaluru Airport bomb case; ಆದಿತ್ಯ ರಾವ್‌ ವಿರುದ್ಧ ಜೈಲು ಅಧಿಕಾರಿಗಳೇ ದೂರು ದಾಖಲು

Thailand Open Badminton: ಕಿರಣ್‌, ಸೇನ್‌ ಕ್ವಾರ್ಟರ್‌ ಫೈನಲಿಗೆ

Thailand Open Badminton: ಕಿರಣ್‌, ಸೇನ್‌ ಕ್ವಾರ್ಟರ್‌ ಫೈನಲಿಗೆ

ಪ್ರವಾಹ ಮುನ್ಸೂಚನೆ ನೀಡುವ ಗೂಗಲ್‌ನ ಫ್ಲಡ್‌ ಹಬ್‌

ಪ್ರವಾಹ ಮುನ್ಸೂಚನೆ ನೀಡುವ ಗೂಗಲ್‌ನ ಫ್ಲಡ್‌ ಹಬ್‌

Hunsur;ಪ್ರೀತಿಯ ನಾಯಿ ತಿಥಿ ಮಾಡಿ ಪ್ರೀತಿ ತೋರಿದ ಜನ

Hunsur;ಪ್ರೀತಿಯ ನಾಯಿ ತಿಥಿ ಮಾಡಿ ಪ್ರೀತಿ ತೋರಿದ ಜನ

Sri Lanka;ಏಕದಿನಕ್ಕೆ ಮರಳಿದ ದಿಮುತ್‌ ಕರುಣಾರತ್ನೆ

Sri Lanka;ಏಕದಿನಕ್ಕೆ ಮರಳಿದ ದಿಮುತ್‌ ಕರುಣಾರತ್ನೆ

ಉದ್ಯೋಗಿಗಳನ್ನು ಪೀಡಿಸಿಲ್ಲ: ಟಿಸಿಎಸ್‌ ಸ್ಪಷ್ಟನೆ!

TCS;ಉದ್ಯೋಗಿಗಳನ್ನು ಪೀಡಿಸಿಲ್ಲ: ಟಿಸಿಎಸ್‌ ಸ್ಪಷ್ಟನೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9 ವರ್ಷದಲ್ಲಿ ಕೇಂದ್ರದಿಂದ 38,000 ಕೋ.ರೂ… ಇನ್ನೂ 16 ಸಾವಿರ ಕೋ.ರೂ.ಗೆ ಪ್ರಸ್ತಾವನೆ

9 ವರ್ಷದಲ್ಲಿ ಕೇಂದ್ರದಿಂದ 38,000 ಕೋ.ರೂ… ಇನ್ನೂ 16 ಸಾವಿರ ಕೋ.ರೂ.ಗೆ ಪ್ರಸ್ತಾವನೆ

ಸೋಮೇಶ್ವರ ಬೀಚ್‌ನಲ್ಲಿ ತಂಡದಿಂದ ಮೂವರು ವಿದ್ಯಾರ್ಥಿಗಳ ಮೇಲೆ ದಾಳಿ

ಸೋಮೇಶ್ವರ ಬೀಚ್‌ನಲ್ಲಿ ತಂಡದಿಂದ ಮೂವರು ವಿದ್ಯಾರ್ಥಿಗಳ ಮೇಲೆ ದಾಳಿ

ಮಂಗಳೂರು: 12,950 ಕರುಗಳಿಗೆ ಕಂದು ರೋಗ ಲಸಿಕೆ

ಮಂಗಳೂರು: 12,950 ಕರುಗಳಿಗೆ ಕಂದು ರೋಗ ಲಸಿಕೆ

ಲೋಕಾ ದಾಳಿ: 10.66 ಲಕ್ಷ ರೂ., ಚಿನ್ನ, ಬೆಳ್ಳಿ ಪತ್ತೆ

ಲೋಕಾ ದಾಳಿ: 10.66 ಲಕ್ಷ ರೂ., ಚಿನ್ನ, ಬೆಳ್ಳಿ ಪತ್ತೆ

ಸುರತ್ಕಲ್‌: ಎಂಆರ್‌ಪಿಎಲ್‌ಎಂಡಿಯಾಗಿ ಸಂಜಯ್‌ ವರ್ಮ

Suratkal: ಎಂಆರ್‌ಪಿಎಲ್‌ಎಂಡಿಯಾಗಿ ಸಂಜಯ್‌ ವರ್ಮ

MUST WATCH

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

ಹೊಸ ಸೇರ್ಪಡೆ