ನಿರುದ್ಯೋಗಿಗಳಿಗೆ ವರವಾದ ತೆಂಗಿನ ಮರ ಹತ್ತುವ ತರಬೇತಿ; ಕನಿಷ್ಠ 2,000 ರೂ. ಸಂಪಾದನೆ!

ಜಿಲ್ಲೆಯ ಈ ಕೇಂದ್ರಕ್ಕೆ 4 ಹಂತದ ತರಬೇತಿಗೆ ಅವಕಾಶ ದೊರಕಿದೆ

Team Udayavani, Jan 17, 2023, 3:32 PM IST

ನಿರುದ್ಯೋಗಿಗಳಿಗೆ ವರವಾದ ತೆಂಗಿನ ಮರ ಹತ್ತುವ ತರಬೇತಿ; ಕನಿಷ್ಠ 2,000 ರೂ. ಸಂಪಾದನೆ!ನಿರುದ್ಯೋಗಿಗಳಿಗೆ ವರವಾದ ತೆಂಗಿನ ಮರ ಹತ್ತುವ ತರಬೇತಿ; ಕನಿಷ್ಠ 2,000 ರೂ. ಸಂಪಾದನೆ!

ಎಕ್ಕೂರು: ದ.ಕ. ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ತೆಂಗು ಅಭಿವೃದ್ಧಿ ಮಂಡಳಿ ಪ್ರಾಯೋಜಕತ್ವದ “ತೆಂಗಿನ ಮರದ ಸ್ನೇಹಿತರು: ತೆಂಗಿನ ಮರ ಹತ್ತುವ’ ತರಬೇತಿ ದ.ಕ. ಜಿಲ್ಲೆಯ ಹಲವು ನಿರುದ್ಯೋಗಿ ಯುವಕರ ಪಾಲಿಗೆ ವರವಾಗಿದೆ. ಕಳೆದ ಸುಮಾರು ಎಂಟು ವರ್ಷಗಳಲ್ಲಿ ತರಬೇತಿ ಪಡೆದಿರುವ ದ.ಕ. ಜಿಲ್ಲೆಯ ಸುಮಾರು 50 ಮಂದಿ ಯುವಕರು ಇದನ್ನೇ ತಮ್ಮ ಸ್ವಉದ್ಯೋಗವನ್ನಾಗಿಸಿ ದಿನವೊಂದಕ್ಕೆ ಕನಿಷ್ಟ 2,000 ರೂ.ಗಳಷ್ಟು ಸಂಪಾದನೆ ಮಾಡುತ್ತಿದ್ದಾರೆ.

ಎಕ್ಕೂರಿನಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಪ್ರಸಕ್ತ ಸಾಲಿನ ಪ್ರಥಮ ಹಂತದ ತರಬೇತಿಗೆ ಸೋಮವಾರ ಚಾಲನೆ ನೀಡಲಾಯಿತು. ಈ ಸಂದರ್ಭ ಮಾಹಿತಿ ನೀಡಿದ, ದ.ಕ. ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಜ್ಞಾನಿ ಡಾ| ರಶ್ಮಿ “ದ.ಕ. ಜಿಲ್ಲೆಯಲ್ಲಿ ತೆಂಗಿನ ಮರ ಹತ್ತುವ ತರಬೇತಿ ಪಡೆಯಲು ಸಾಕಷ್ಟು ಬೇಡಿಕೆ ಇದೆ. ಕುಂದಾಪುರದಿಂದಲೂ ತರಬೇತಿಗಾಗಿ ಅರ್ಜಿ ಬಂದಿತ್ತು. ಆದರೆ ಇಲ್ಲಿ ದ.ಕ. ಜಿಲ್ಲೆಯ  ನಿರುದ್ಯೋಗಿಗಳಿಗೆ ಮಾತ್ರವೇ ತರಬೇತಿಯನ್ನು ಒದಗಿಸಲಾಗುತ್ತಿದೆ’ ಎಂದರು.

200 ಮಂದಿ ತರಬೇತಿ
2015ರಲ್ಲಿ ತೆಂಗು ಅಭಿವೃದ್ಧಿª ಮಂಡಳಿಯಿಂದ ಈ ತರಬೇತಿ ಪ್ರಾಯೋಜಿಸಲ್ಪಟ್ಟಿತ್ತು. ಆ ವರ್ಷ ಐದು ತಂಡಗಳಿಗೆ (ತಲಾ 20ರಂತೆ) ತರಬೇತಿ ನೀಡಲಾಗಿತ್ತು. ಅದಾಗಿ ಐದು ವರ್ಷಗಳ ಅನಂತರ 2020ರಲ್ಲಿ ಮತ್ತೆ ಒಂದು ತಂಡಕ್ಕೆ ತರಬೇತಿ ನೀಡಲಾಯಿತು. 2022ರಲ್ಲಿ ಎರಡು ತಂಡಕ್ಕೆ ತರಬೇತಿ ನೀಡಲಾಗಿತ್ತು. ಇದೀಗ ದ.ಕ. ಜಿಲ್ಲೆಯಲ್ಲಿ ಹೆಚ್ಚು ಬೇಡಿಕೆ ಇರುವುದರಿಂದ ರಾಜ್ಯದ ದ.ಕ. ಜಿಲ್ಲೆಯ ಈ ಕೇಂದ್ರಕ್ಕೆ 4 ಹಂತದ ತರಬೇತಿಗೆ ಅವಕಾಶ ದೊರಕಿದೆ. ಈವರೆಗೆ 200 ಮಂದಿ ತರಬೇತಿ ಪಡೆದಿದ್ದಾರೆ.

ದ.ಕ. ಜಿಲ್ಲೆಯಲ್ಲಿ 31 ಹೆಕ್ಟೇರ್‌ ಪ್ರದೇಶ ದಲ್ಲಿ ತೆಂಗು ಬೆಳೆಯಲಾಗುತ್ತದೆ. 45 ದಿನಗಳಿಗೊಮ್ಮೆ ತೆಂಗು ಕೀಳಬೇಕಾಗುತ್ತದೆ. ಕೀಳುವವರ ಸಮಸ್ಯೆಯಿಂದ ತೆಂಗು ಉತ್ಪನ್ನದಲ್ಲಿ ಕೊರತೆ ಉಂಟಾಗುತ್ತಿದ್ದು, ಸ್ವ-ಉದ್ಯೋಗ ಕಂಡುಕೊಳ್ಳುವಲ್ಲಿ ಈ ತರಬೇತಿ ಸಹಕಾರಿ ಎಂದು ಡಾ| ರಶ್ಮಿ ತಿಳಿಸಿದ್ದಾರೆ.

ಸ್ವ-ಉದ್ಯೋಗ
“ನಾನು ಪ್ರಥಮ ಬ್ಯಾಚ್‌ನಲ್ಲಿ ತರಬೇತಿ ಪಡೆದು ಇದನ್ನೀಗ ಸ್ವ- ಉದ್ಯೋಗವನ್ನಾಗಿಸಿಕೊಂಡಿದ್ದೇನೆ. ಮಾತ್ರ ವಲ್ಲದೆ ಸಾಕಷ್ಟು ಮಂದಿಗೆ ತರಬೇತಿ ನೀಡಿದ್ದೇನೆ.
ದಿನವೊಂದಕ್ಕೆ ಕನಿಷ್ಟ 2,000 ರೂ.ನಿಂದ 3,000 ರೂ.ವರೆಗೆ ದುಡಿಯುತ್ತೇನೆ’ ಎಂದು ಪ್ರಸ್ತುತ ಮರ ಹತ್ತುವ ಬಗ್ಗೆ ಮುಖ್ಯ ತರಬೇತುದಾರರಾಗಿರುವ ಸುರತ್ಕಲ್‌ ನಿವಾಸಿ ಅನುಷ್‌ ತಿಳಿಸಿದರು.

“ನಮ್ಮ ಮನೆಯಲ್ಲೂ ತೆಂಗಿನ ಮರಗಳಿವೆ. ತೆಂಗು ಕೀಳಲು ಜನ ಸಿಗುವುದಿಲ್ಲ. ಹಾಗಾಗಿ ತರಬೇತಿಯಲ್ಲಿ ಭಾಗವಹಿಸುತ್ತಿದ್ದೇನೆ’ ಎಂದು ತರಬೇತಿಯಲ್ಲಿ ಭಾಗವಹಿಸಿರುವ ಸ್ನಾತಕೋತ್ತರ ಪದವೀಧರೆ ಗಾಯತ್ರಿ ಎಂಬವರು ಅಭಿಪ್ರಾಯಿಸಿದರು. ಕಂಕನಾಡಿ ಸಂಚಾರ ನಿರೀಕ್ಷಕ ರಮೇಶ್‌ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಎಚ್‌.ಆರ್‌. ನಾಯಕ್‌ ಉಪಸ್ಥಿತರಿದ್ದರು.

5 ಲಕ್ಷ ರೂ. ಅಪಘಾತ ವಿಮೆ
ಆರು ದಿನಗಳ ಕಾಲ ನಡೆಯಲಿರುವ ಪ್ರಸಕ್ತ ಸಾಲಿನ ಮೊದಲ ಹಂತದ ತರಬೇತಿಯಲ್ಲಿ ದ.ಕ. ಜಿಲ್ಲೆಯ 20 ಮಂದಿ ನೋಂದಾಯಿಸಿಕೊಂಡಿದ್ದಾರೆ. ತರಬೇತಿಯಲ್ಲಿ ಮೂರು ಮಂದಿ ಮಹಿಳೆಯರೂ ಇದ್ದಾರೆ. ಉಚಿತ ಊಟ ವಸತಿ ಸೌಲಭ್ಯದ ಜತೆಗೆ ತರಬೇತಿಗೆ ಅಗತ್ಯವಾದ ಸಲಕರಣೆಯನ್ನು ನೀಡಲಾಗುತ್ತದೆ. ಅದಲ್ಲದೆ ತರಬೇತು ಪಡೆಯುವವರಿಗೆ ಒಂದು ವರ್ಷದ ತಲಾ 5 ಲಕ್ಷ ರೂ. ಮೌಲ್ಯದ ಅಪಘಾತ ವಿಮೆಯನ್ನುಒದಗಿಸಲಾಗುತ್ತದೆ.

ಟಾಪ್ ನ್ಯೂಸ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

15-1

ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.‌ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

14-bidar

Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ

ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Manipal ಆಸ್ಪತ್ರೆಯ ಡಾ.ರಾಮದಾಸ್‌ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್‌ ಸೇವೆ ಆರಂಭ

Manipal ಆಸ್ಪತ್ರೆಯ ಡಾ.ರಾಮದಾಸ್‌ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್‌ ಸೇವೆ ಆರಂಭ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

ಅಯ್ಯೋ ಬಿಸಿಲು! ಕರಾವಳಿಯಲ್ಲಿ ಮಣ್ಣಿನ ತೇವಾಂಶ ಕಡಿಮೆ: ನೀರಿಲ್ಲ, ಫಸಲಿಲ್ಲ

ಅಯ್ಯೋ ಬಿಸಿಲು! ಕರಾವಳಿಯಲ್ಲಿ ಮಣ್ಣಿನ ತೇವಾಂಶ ಕಡಿಮೆ: ನೀರಿಲ್ಲ, ಫಸಲಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.