
ಕರಾವಳಿಯಲ್ಲಿ ಮುಂದುವರಿದ ಚಳಿ: ಇನ್ನಷ್ಟು ತೀವ್ರತೆ ಪಡೆಯುವ ಸಾಧ್ಯತೆ
Team Udayavani, Jan 16, 2023, 6:40 AM IST

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಚಳಿ ಮುಂದುವರಿದಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ರವಿವಾರ ಬೆಳಗ್ಗಿನ ವೇಳೆ ಭಾರೀ ಚಳಿ ಮತ್ತು ಮಂಜಿನಿಂದ ಕೂಡಿದ ವಾತಾವರಣ ಇತ್ತು. ಶನಿವಾರ ರಾತ್ರಿ ಕೂಡ ಮಂಜಿನಿಂದ ಕೂಡಿದ್ದು, ಚಳಿ ವಾತಾವರಣವಿತ್ತು. ಗ್ರಾಮಾಂತರ ಪ್ರದೇಶದಲ್ಲಿ ಚಳಿ ತೀವ್ರವಾಗಿತ್ತು.
ಮಂಗಳೂರು ವಿಮಾನ ನಿಲ್ದಾಣ ದಲ್ಲಿ ರವಿವಾರ 31.3 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 2 ಡಿ.ಸೆ. ಕಡಿಮೆ ಇತ್ತು. 21.5 ಡಿ.ಸೆ. ಕನಿಷ್ಠ ತಾಪಮಾನ ಇತ್ತು. ಪಣಂಬೂರಿನಲ್ಲಿ ಗರಿಷ್ಠ ತಾಪಮಾನ 32.6 ಡಿ.ಸೆ. ಇದ್ದರೆ, ಕನಿಷ್ಠ ತಾಪಮಾನ 20.5 ಡಿ.ಸೆ. ಆಗಿತ್ತು. ಇದು ವಾಡಿಕೆಗಿಂತ ಒಂದು ಡಿ.ಸೆ. ಕಡಿಮೆಯಾಗಿತ್ತು.
ಹವಾಮಾನ ಮುನ್ಸೂಚನೆಯಂತೆ ದಕ್ಷಿಣ ಒಳನಾಡಿನಲ್ಲಿ ಶೀತಗಾಳಿ ಬೀಸಲಿದ್ದು, ಚಳಿ ಇನ್ನಷ್ಟು ತೀವ್ರತೆ ಪಡೆಯುವ ಸಾಧ್ಯತೆ ಇದೆ. ಇಲ್ಲಿ ಕನಿಷ್ಠ ಉಷ್ಣಾಂಶ 3ರಿಂದ 6 ಡಿಗ್ರಿ ಸೆಲ್ಸಿಯಸ್‌ವರೆಗೆ ಇಳಿಕೆಯಾಗುವ ಸಂಭವ ಇದೆ. ಕರಾವಳಿಯಲ್ಲಿ ನಿಧಾನಕ್ಕೆ ಕನಿಷ್ಠ ತಾಪಮಾನ ಏರಿಕೆ ಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಪಕ್ಷ ಕಟ್ಟಲು ಶ್ರಮಿಸಿದ ನಾನೇಕೆ ಹೊರ ಹೋಗಲಿ: ಯತ್ನಾಳ್ ಪ್ರಶ್ನೆ
ಟಾಪ್ ನ್ಯೂಸ್
