
“ಅಂಚೆ ಕಚೇರಿಗಳಲ್ಲಿ ಕಾಮನ್ ಸರ್ವಿಸ್ ಸೆಂಟರ್’
Team Udayavani, Dec 25, 2020, 12:13 PM IST

ಮಹಾನಗರ, ಡಿ. 24: ಮಂಗಳೂರು ಅಂಚೆ ವಿಭಾಗಕ್ಕೊಳಪಡುವ 27 ಅಂಚೆ ಕಚೇರಿಗಳಲ್ಲಿ ಕಾಮನ್ ಸರ್ವಿಸ್ ಸೆಂಟರ್‌ಗಳನ್ನು ತೆರೆಯಲಾಗಿದ್ದು, ವಿವಿಧ ಸೇವೆಗಳನ್ನು ನೀಡಲಾಗುತ್ತಿದೆ ಎಂದು ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ತಿಳಿಸಿದ್ದಾರೆ.
ಪಾನ್ ಕಾರ್ಡ್, ಚಾಲನಾ ಪರವಾನಿಗೆ, ಪಾಸ್‌ಪೋರ್ಟ್‌ಗೆ ಅರ್ಜಿ, ಸಂಧ್ಯಾ ಸುರಕ್ಷಾ, ಎಸ್‌ಸಿಎಸ್‌ಎಸ್ ಕಾರ್ಡ್, ಬಸ್, ರೈಲು ವಿಮಾನ ಟಿಕೆಟ್ ಬುಕ್ಕಿಂಗ್, ಎನ್‌ಪಿಎಸ್/ಎಪಿವೈ/ಜಿಎಸ್‌ಟಿ/ ಐಟಿ, ಟಡಿಎಸ್ ರಿಟನ್ಸ್ ಸಲ್ಲಿಕೆ, ಜೀವಿತಾ ಪ್ರಮಾಣಪತ್ರ, ಪ್ರಧಾನ ಮಂತ್ರಿ ಯೋಜನೆಗಳು, ವಿದ್ಯುತ್‌ಬಿಲ್ ಪಾವತಿ, ಮೊಬೈಲ್ ರಿಚಾರ್ಚ್, ಜನನ/ಮರಣ ಪ್ರಮಾಣ ಪತ್ರ, ಫಾಸ್ಟಾಗ್, ವಿಮಾಕಂತು ಪಾವತಿ ಇತ್ಯಾದಿ ಸೇವೆಗಳು ಇಲ್ಲಿ ಲಭ್ಯವಾಗಲಿದೆ ಎಂದರು.
ಮಂಗಳೂರಿನ ಸೆಂಟರ್‌ಗಳು :
ಮಂಗಳೂರಿನ ಪ್ರಧಾನ ಅಂಚೆ ಕಚೇರಿ, ಕುಲಶೇಖರ ಪ್ರಧಾನ ಅಂಚೆ ಕಚೇರಿ, ಹಂಪನಕಟ್ಟೆ, ಕೊಡಿಯಾಲಬೈಲ್, ಕಂಕನಾಡಿ, ಅಶೋಕನಗರ, ಬಿಜೈ, ಬಲ್ಮಠ, ಸುರತ್ಕಲ್, ಮೂಲ್ಕಿ, ಬಜಪೆ, ಪಣಂಬೂರು, ಕೊಂಚಾಡಿ, ಕಿನ್ನಿಗೋಳಿ, ಕಾಟಿಪಳ್ಳ, ಮಂಗಳಗಂಗೋತ್ರಿ, ಕಿನ್ನಿಕಂಬÛ, ಗಂಜಿಮಠ, ಹಳೆಯಂಗಡಿ, ಬೆಳ್ಮಣ್, ಮುಂಡ್ಕೂರು, ಕಾವೂರು, ಕೂಳೂರು, ಕುಳಾಯಿ, ಪಡೀಲ್, ವಾಮಂಜೂರು ಮತ್ತು ಉಳ್ಳಾಲ ಅಂಚೆ ಕಚೇರಿಗಳಲ್ಲಿ ಸರ್ವಿಸ್ ಸೆಂಟರ್‌ಗಳು ಕಾರ್ಯ ನಿರ್ವಹಿಸುತ್ತಿವೆ.
ಸಾರ್ವಜನಿಕರು 107 ರೂ., ಗುರುತಿನ ಚೀಟಿ, ಜನ್ಮ ದಿನಾಂಕ, ವಿಳಾಸ ಪುರಾವೆಗಳನ್ನು ಪಾವತಿಸಿ ಪಾನ್ ಕಾರ್ಡ್ ಪಡೆಯಬಹುದು. ಪಾಸ್ ಪೋರ್ಟ್ ಪ್ರಾಧಿಕಾರವು ನಿಗದಿಪಡಿಸಿದ ಪಾಸ್‌ಪೋರ್ಟ್ ಶುಲ್ಕ (1,500 ರೂ.), 100 ರೂ. ಸೇವಾ ಶುಲ್ಕವನ್ನು ಪಾವತಿಸಿ ಮುಂಗಡ ಎಪಾಯಿಂಟ್‌ಮೆಂಟ್ ಪಡೆದು ಪಾಸ್‌ಪೋರ್ಟ್ ಮಾಡಿಸಿಕೊಳ್ಳಬಹುದು ಎಂದು ಶ್ರೀಹರ್ಷ ತಿಳಿಸಿದರು.
ಆಧಾರ್ ನೋಂದಣಿ , ತಿದ್ದುಪಡಿ :
ನಗರದ 39 ಅಂಚೆ ಕಚೇರಿಗಳಲ್ಲಿ ಆಧಾರ್ ನೋಂದಣಿ, ಹೆಸರು, ಜನ್ಮದಿನಾಂಕ, ವಿಳಾಸ ತಿದ್ದುಪಡಿ, ಬಯೋಮೆಟ್ರಿಕ್ ಅಪ್‌ಡೇಟ್, ಮೊಬೈಲ್ ಸಂಖ್ಯೆ/ಇಮೇಲ್ ಐಡಿ ಜೋಡಣೆ/ತಿದ್ದುಪಡಿ ಸೇವೆಯನ್ನು ನೀಡಲಾಗುತ್ತಿದೆ. ಈಗಾಗಲೇ 23,693 ಹೊಸ ನೋಂದಣಿ ಹಾಗೂ 2,39,186 ಮಂದಿ ಇತರ ಸೇವೆಯ ಸದುಪಯೋಗ ಪಡೆದುಕೊಂಡಿದ್ದಾರೆ ಎಂದರು.
ಸೇವೆ ಲಭ್ಯವಿರುವ ಅಂಚೆ ಕಚೇರಿಗಳು :
ಮಂಗಳೂರಿನ ಪ್ರಧಾನ ಅಂಚೆ ಕಚೇರಿ, ಕುಲಶೇಖರ ಪ್ರಧಾನ ಅಂಚೆ ಕಚೇರಿ, ಬಲ್ಮಠ, ಹಂಪನಕಟ್ಟೆ, ಕೊಡಿಯಾಲಬೈಲ್, ಕೊಂಚಾಡಿ, ಕಂಕನಾಡಿ, ಬಿಜೈ, ಆಶೋಕನಗರ, ಗಾಂಧಿನಗರ, ಮರ್ಕೆರಾ ಹಿಲ್ಸ್, ಫಿಶರೀಸ್ ಕಾಲೇಜು ಎಕ್ಕೂರು, ಕುಳೂರು, ಬೈಕಂಪಾಡಿ, ಪಣಂಬೂರು, ಕುಳಾಯಿ, ಬಜಪೆ, ಗಂಜೀಮಠ, ಕಾಟಿಪಳ್ಳ, ಕಾವೂರು, ವಾಮಂಜೂರು, ಸುರತ್ಕಲ್, ಕೋಟೆಕಾರು, ಮಂಗಳಗಂಗೋತ್ರಿ, ದೇರಳಕಟ್ಟೆ, ಉಳ್ಳಾಲ, ಪೆರ್ಮನ್ನೂರು, ಕುರ್ನಾಡು, ಫರಂಗಿಪೇಟೆ, ಪೆದಮಲೆ, ಐಕಳ, ಹಳೆಯಂಗಡಿ, ಕಟೀಲು, ಕಿನ್ನಿಗೋಳಿ, ಮೂಲ್ಕಿ, ಮುಂಡ್ಕೂರು, ಬೆಳ್ಮಣ್ ಅಂಚೆ ಕಚೇರಿಗಳಲ್ಲಿ ಆಧಾರ್ ನೋಂದಣಿ, ತಿದ್ದುಪಡಿ ಸೇವೆ ಸೇವೆ ದೊರೆಯಲಿದೆ. ಇದಲ್ಲದೆ ಅಂಚೆ ಕಚೇರಿಗಳಲ್ಲಿ ಸಾವರಿನ್ ಗೋಲ್ಡ್ ಹೂಡಿಕೆಗೆ ಡಿ. 28ರಿಂದ 2020ರ ಜ. 1ರ ವರೆಗೆ ಅವಕಾಶವಿದೆ ಎಂದು ಶ್ರೀಹರ್ಷ ಹೇಳಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು
ಹೊಸ ಸೇರ್ಪಡೆ

ನಿಮಿಷದಲ್ಲಿ ಸಾವಿರ ಸಸಿ ನೆಡುವ ಅಭಿಯಾನ

Mangaluru: ನೈತಿಕ ಪೊಲೀಸ್ ಗಿರಿ ತಡೆಗೆ ಆ್ಯಂಟಿ ಕಮ್ಯುನಲ್ ವಿಂಗ್ ಆರಂಭಿಸಲು ಸೂಚನೆ

Hybrid Model ಒಪ್ಪದ ಎಸಿಸಿ: ಏಷ್ಯಾ ಕಪ್ ಆಡದಿರಲು ಪಾಕಿಸ್ತಾನ ಚಿಂತನೆ

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಶಾಸಕರ ಜೊತೆ ಟೋಲ್ ಸಿಬ್ಬಂದಿ ಕಿರಿಕ್

ಮೊದಲ ಮಗುವಿನ ನಿರೀಕ್ಷೆಯಲ್ಲಿ ಫಹಾದ್ – ಸ್ವರಾ ಭಾಸ್ಕರ್ ದಂಪತಿ: Baby Bump ಫೋಟೋ ವೈರಲ್