ಮಲೇಷ್ಯಾ ಮರಳಿಗೆ ಮುಕ್ತಿ; ಕೆಲವೇ ದಿನಗಳಲ್ಲಿ ವಿತರಣೆ

Team Udayavani, Dec 9, 2022, 8:30 AM IST

ಮಲೇಷ್ಯಾ ಮರಳಿಗೆ ಮುಕ್ತಿ; ಕೆಲವೇ ದಿನಗಳಲ್ಲಿ ವಿತರಣೆ

ಮಂಗಳೂರು: ಐದು ವರ್ಷಗಳ ಹಿಂದೆ ಮಲೇಷ್ಯಾದಿಂದ ಆಮದು ಮಾಡಿ ನವಮಂಗಳೂರು ಬಂದರಿನಲ್ಲಿ ಶೇಖರಿಸಿಟ್ಟಿರುವ 75,400 ಮೆಟ್ರಿಕ್‌ ಟನ್‌ ಮರಳನ್ನು ಜಿಲ್ಲೆಯಲ್ಲಿ ವಿತರಿಸುವುದಕ್ಕೆ ವಾರದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ತಿಳಿಸಿದ್ದಾರೆ.

ಗುರುವಾರ ಈ ಮಾಹಿತಿ ನೀಡಿದ ಅವರು, ನಾಲ್ಕು ದಿನಗಳ ಹಿಂದೆ ಎನ್‌ಎಂಪಿಎಯಲ್ಲಿ ಅಷ್ಟು ಪ್ರಮಾಣದ ಮರಳು ಸಂಗ್ರಹ ಇರುವ ವಿಚಾರ ತಿಳಿದು ಅಚ್ಚರಿಯಾಗಿತ್ತು. ಇದು ಎಂಸ್ಯಾಂಡ್‌ ಅಲ್ಲ, ಆದರೆ ಉತ್ತಮ ಗುಣಮಟ್ಟದ ಮರಳಾಗಿದೆ. ಅದನ್ನು 10 ಟನ್‌ಗೆ 10,000 ರೂ.ಗಳಂತೆ ಜಿಲ್ಲೆಯಲ್ಲಿ ಪೂರೈಕೆ ಮಾಡಲಾಗುವುದು. ಇದಲ್ಲದೆ ಜಿಲ್ಲೆಯಲ್ಲಿ ಈಗಾಗಲೇ ವಿವಿಧ ಕಡೆಗಳಿಂದ ವಶಪಡಿಸಿಕೊಳ್ಳಲಾದ 1 ಸಾವಿರ ಮೆಟ್ರಿಕ್‌ ಟನ್‌ ಮರಳು ಲಭ್ಯವಿದೆ. ಅದನ್ನು ಕೂಡ ಲೋಡ್‌ ಒಂದಕ್ಕೆ 7 ಸಾವಿರ ರೂ.ಗಳಂತೆ ವಿತರಿಸಲಾಗುವುದು ಎಂದರು.

ಎನ್‌ಎಂಪಿಎಯಲ್ಲಿ ಮರಳು ಸಂಗ್ರಹದ ಜಾಗದಲ್ಲಿ ಸೂಕ್ತ ಸಿಸಿ ಕೆಮರಾಗಳ ಕಣ್ಗಾವಲಿನಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಂಡು ಆರ್‌ಟಿಒದಿಂದ ಪರವಾನಿಗೆ ಹೊಂದಿರುವ ಲಾರಿಗಳ ಮೂಲಕ ಮರಳು ಅಗತ್ಯವಿದ್ದವರಿಗೆ ವಿತರಿಸಲಾಗುವುದು. ಪ್ರತೀ ದಿನ ವಿತರಣೆಯಾಗುವ ಪ್ರಮಾಣ, ಸಾಗಿಸುವ ಲಾರಿಗಳ ಕುರಿತಂತೆ ಸೂಕ್ತ ಮಾಹಿತಿಯನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಜತೆಗೆ ಜಿಲ್ಲಾಡಳಿತ, ಪೊಲೀಸ್‌ ಆಯುಕ್ತರು, ಅಧೀಕ್ಷಕರು ಹಾಗೂ ಮಾಧ್ಯಮದ ಮೂಲಕ ಎಲ್ಲರಿಗೂ ಲಭಿಸುವಂತೆ ಮಾಡಲಾಗುವುದು ಎಂದರು.

ಇದಲ್ಲದೆ ಜಿಲ್ಲೆಯ ಸಿಆರ್‌ಝಡ್‌ ಹಾಗೂ ನಾನ್‌ ಸಿಆರ್‌ಝಡ್‌ ವಲಯದಲ್ಲಿÉ ಅರ್ಹ ಮರಳು ಗುತ್ತಿಗೆದಾರರ ಆಯ್ಕೆ ಪ್ರಕ್ರಿಯೆ ಅಂತಿಮಗೊಂಡಿದೆ.  ಶೀಘ್ರವೇ ಅಂತಿಮ ಆದೇಶ ಹೊರಡಿಸಲಾಗುವುದು ಎಂದು ಅವರು ತಿಳಿಸಿದರು.

ಮಲೇಷ್ಯಾ ಮರಳು ಹಿನ್ನೆಲೆ:

ನವಮಂಗಳೂರು ಬಂದರಿನಲ್ಲಿ ಖಾಸಗಿ ಸಂಸ್ಥೆಯೊಂದು ಒಂದು ಲಕ್ಷ ಟನ್‌ ಮರಳು ಆಮದು ಮಾಡಿಕೊಂಡಿದ್ದು, ಅದರ ವಿತರಣೆಗೆ ಸರಕಾರ ಅನುಮತಿ ನೀಡಿರಲಿಲ್ಲ. ಈ ಬಗ್ಗೆ ವಿವಾದ ಹೈಕೋರ್ಟ್‌ ಮೆಟ್ಟಿಲೇರಿದ್ದು 2019ರ ಫೆಬ್ರವರಿ 11ರಂದು ಹೊರರಾಜ್ಯಗಳಿಗೆ ಮರಳು ಸಾಗಾಣಿಕೆಗೆ ಪರವಾನಿಗೆ ವಿತರಿಸಲು ಕ್ರಮ ಕೈಗೊಳ್ಳುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ತಿಳಿಸಲಾಗಿತ್ತು. ಪ್ರಸ್ತುತ ಇರುವ 75,400 ಮೆ.ಟನ ಮರಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಖನಿಜ ಸಾಗಾಣಿಕೆ ಪರವಾನಿಗೆಯೊಂದಿಗೆ ಜಿಲ್ಲೆಯಲ್ಲಿನ ಸಾರ್ವಜನಿಕ ಕಟ್ಟಡ ಕಾಮಗಾರಿಗಳಿಗೆ ಪಡೆಯಬಹುದು ಎಂದು ಜಿಲ್ಲಾಧಿಕಾರಿಗಳ ಪ್ರಕಟನೆ ತಿಳಿಸಿದೆ.

ಟಾಪ್ ನ್ಯೂಸ್

STREET DG

ಬೀದಿ ನಾಯಿಗಳಿಗೆ “ಡಂಪಿಂಗ್‌ ಯಾರ್ಡ್‌ʼ ಆಶ್ರಯತಾಣ !

ಧಾರವಾಡ: ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ನಿಧನ

ಧಾರವಾಡ: ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ನಿಧನ

helipad

ಮೊಟೆತ್ತಡ್ಕದ ಎನ್‌ಆರ್‌ಸಿಸಿ ಮುಂಭಾಗ ಶಾಶ್ವತ ಹೆಲಿಪ್ಯಾಡ್‌ ನಿರ್ಮಾಣ

Mallikarjun Kharge wears Louis Vuitton Scarf Worth Rs 56,332

56,332 ರೂ ಬೆಲೆಯ ಶಾಲು ಧರಿಸಿದ ಮಲ್ಲಿಕಾರ್ಜುನ ಖರ್ಗೆ; ಬಿಜೆಪಿ ಟೀಕೆ

add-thumb-2

ಕಲಿಕೆಯ “ಜಂಬೋ” ಅವಕಾಶ: ಪೋದಾರ್‌ ಲರ್ನ್ ಸ್ಕೂಲ್‌

ಬಾರ್ಡರ್- ಗಾವಸ್ಕರ್ ಟ್ರೋಫಿ ಆರಂಭ

ಬಾರ್ಡರ್- ಗಾವಸ್ಕರ್ ಟ್ರೋಫಿ ಆರಂಭ: ಟೀಂ ಇಂಡಿಯಾಗೆ ಇಬ್ಬರು ಪದಾರ್ಪಣೆ

add-thumb-1

ಕಲಘಟಗಿ ಪೊಲೀಸ್‌ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಫುಡ್ ಪಾಯ್ಸನ್‌ ಘಟನೆ: ಓರ್ವ ವಿದ್ಯಾರ್ಥಿನಿಗೆ ಚಿಕಿತ್ಸೆ ಮುಂದುವರಿಕೆ

ಫುಡ್ ಪಾಯ್ಸನ್‌ ಘಟನೆ: ಓರ್ವ ವಿದ್ಯಾರ್ಥಿನಿಗೆ ಚಿಕಿತ್ಸೆ ಮುಂದುವರಿಕೆ

ಗೋವಾದಲ್ಲಿ ಅಖೀಲ ವಿಶ್ವ ಕೊಂಕಣಿ ಸಮ್ಮೇಳನ ಆಯೋಜನೆ: ಡಾ| ಪ್ರಮೋದ್‌ ಸಾವಂತ್‌

ಗೋವಾದಲ್ಲಿ ಅಖೀಲ ವಿಶ್ವ ಕೊಂಕಣಿ ಸಮ್ಮೇಳನ ಆಯೋಜನೆ: ಡಾ| ಪ್ರಮೋದ್‌ ಸಾವಂತ್‌

ಬೀಡಿ ಕಂಟ್ರಾಕ್ಟ್ದಾರರು ಮುಷ್ಕರ ಹಿಂಪಡೆಯುವಂತೆ ಮನವಿ

ಬೀಡಿ ಕಂಟ್ರಾಕ್ಟ್ದಾರರು ಮುಷ್ಕರ ಹಿಂಪಡೆಯುವಂತೆ ಮನವಿ

ಸುರತ್ಕಲ್: ಕ್ಷುಲ್ಲಕ ಕಾರಣಕ್ಕೆ ಎರಡು ತಂಡಗಳ ನಡುವೆ ಮಾರಾಮಾರಿ: ಪೊಲೀಸ್ ಬಿಗಿ ಬಂದೋಬಸ್ತ್

ಸುರತ್ಕಲ್: ಕ್ಷುಲ್ಲಕ ಕಾರಣಕ್ಕೆ ಎರಡು ತಂಡಗಳ ನಡುವೆ ಮಾರಾಮಾರಿ: ಪೊಲೀಸ್ ಬಿಗಿ ಬಂದೋಬಸ್ತ್

ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರಕಾರ: ಗೋವಾ ಸಿಎಂ

ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರಕಾರ: ಗೋವಾ ಸಿಎಂ

MUST WATCH

udayavani youtube

ಪಾಂಗಳ: ಕೋಲದಲ್ಲಿ ಭಾಗಿಯಾಗಿದ್ದ ಯುವಕನನ್ನು ಕರೆಸಿ ಹತ್ಯೆಗೈದರೇ ಪರಿಚಿತರು?

udayavani youtube

ಮೀನುಗಾರಿಕಾ ಬೋಟ್ ನ ಒಳಗೆ ಹೇಗಿರುತ್ತೆ ನೋಡಿ|

udayavani youtube

ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

ಹೊಸ ಸೇರ್ಪಡೆ

STREET DG

ಬೀದಿ ನಾಯಿಗಳಿಗೆ “ಡಂಪಿಂಗ್‌ ಯಾರ್ಡ್‌ʼ ಆಶ್ರಯತಾಣ !

ಧಾರವಾಡ: ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ನಿಧನ

ಧಾರವಾಡ: ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ನಿಧನ

helipad

ಮೊಟೆತ್ತಡ್ಕದ ಎನ್‌ಆರ್‌ಸಿಸಿ ಮುಂಭಾಗ ಶಾಶ್ವತ ಹೆಲಿಪ್ಯಾಡ್‌ ನಿರ್ಮಾಣ

Mallikarjun Kharge wears Louis Vuitton Scarf Worth Rs 56,332

56,332 ರೂ ಬೆಲೆಯ ಶಾಲು ಧರಿಸಿದ ಮಲ್ಲಿಕಾರ್ಜುನ ಖರ್ಗೆ; ಬಿಜೆಪಿ ಟೀಕೆ

add-thumb-2

ಕಲಿಕೆಯ “ಜಂಬೋ” ಅವಕಾಶ: ಪೋದಾರ್‌ ಲರ್ನ್ ಸ್ಕೂಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.