ಡೀಸೆಲ್‌ ನಿರ್ಯಾತದ ಮೊರೆ ಹೊಕ್ಕ ಎಂಆರ್‌ಪಿಎಲ್‌

ಇಳಿಕೆ ಕಂಡ ದೇಶೀಯ ಬೇಡಿಕೆ

Team Udayavani, Nov 19, 2019, 5:21 AM IST

cc-37

ಮಂಗಳೂರು: ದೇಶೀ ಮಾರುಕಟ್ಟೆಯಲ್ಲಿ ಡೀಸೆಲ್‌ ಬಳಕೆ ಕುಸಿಯುತ್ತಿರುವುದರ ಪರಿಣಾಮ ಎಂಆರ್‌ಪಿಎಲ್‌ಗ‌ೂ ತಟ್ಟಲಾರಂಭಿ ಸಿದೆ. ಅದು ಡೀಸೆಲ್‌ ರಫ್ತು ಪ್ರಮಾಣವನ್ನು ಒಂದೆರಡು ತಿಂಗಳಿನಿಂದ ಶೇ. 20ರಷ್ಟು ಏರಿಸಿ ರುವುದು ಇದೇ ಕಾರಣಕ್ಕೆ. ಬೇಡಿಕೆ ಕುಸಿದ ಪರಿಣಾಮ ಎಂಆರ್‌ಪಿಎಲ್‌ನಲ್ಲಿ ಡೀಸೆಲ್‌ ದಾಸ್ತಾನು ಏರುತ್ತಿದೆ. ಇದನ್ನು ಸರಿದೂಗಿಸಿಕೊಳ್ಳಲು ನಿರ್ಯಾತವನ್ನು ಹೆಚ್ಚಿಸಲಾಗಿದೆ.

ವಾಣಿಜ್ಯ ವಾಹನಗಳ ಮಾರಾಟದಲ್ಲಿ ಕುಸಿತ, ಸರಕು ಸಾಗಣೆ ವೆಚ್ಚ ಇಳಿಸಲು ರೈಲಿನ ಬಳಕೆ, ಕಾರ್ಖಾನೆ ಸೇರಿದಂತೆ ಉತ್ಪಾದನೆ ವಲಯದಲ್ಲಿ ಕಡಿಮೆ ಬಳಕೆ ಸೇರಿದಂತೆ ಹಲವು ಕಾರಣಗಳಿಂದ ದೇಶೀ ಮಾರುಕಟ್ಟೆಯಲ್ಲಿ ಡೀಸೆಲ್‌ ಬಳಕೆ ಕಡಿಮೆ ಯಾಗಿದೆ ಎನ್ನಲಾಗಿದೆ.

ಅರ್ಧಕ್ಕಿಂತ ಅಧಿಕ ವಿದೇಶಕ್ಕೆ!
ಎಂಆರ್‌ಪಿಎಲ್‌ ತಿಂಗಳಿಗೆ ಸುಮಾರು 550 ಟನ್‌ಗಳಷ್ಟು ಡೀಸೆಲ್‌ ಉತ್ಪಾದಿಸುತ್ತದೆ. ಕೆಲವು ತಿಂಗಳ ಹಿಂದಿನ ವರೆಗೆ 200 ಟನ್‌ಗಳನ್ನು ರಫ್ತಾಗುತ್ತಿದ್ದರೆ ಉಳಿದುದು ದೇಶೀಯವಾಗಿ ಸರಬ ರಾಜಾಗುತ್ತಿತ್ತು. ಅಂದರೆ, ದೇಶೀಯ ಪೂರೈಕೆ ಶೇ.65ರಷ್ಟಿದ್ದರೆ ವಿದೇಶಗಳಿಗೆ ರಫ್ತು ಶೇ. 35 ಇತ್ತು. ಈಗ ಇದು ತಿರುವುಮುರುವಾಗಿದೆ. ಶೇ.35ರಷ್ಟಿದ್ದ ರಫ್ತು ಈಗ ಶೇ. 55ಕ್ಕೆ ಏರಿದೆ. ಉಳಿದ ಕೇವಲ ಶೇ. 45ರಷ್ಟು ಮಾತ್ರ ದೇಶೀಯವಾಗಿ ಬಳಕೆಯಾಗುತ್ತಿದೆ. ದೇಶೀಯವಾಗಿ ಐಒಸಿಎಲ್‌, ಎಚ್‌ಪಿಸಿಎಲ್‌, ಬಿಪಿಸಿಎಲ್‌ ಮತ್ತು ಎಂಆರ್‌ಪಿಎಲ್‌ ಔಟ್‌ಲೆಟ್‌ಗಳಿಗೆ ಎಂಆರ್‌ಪಿಎಲ್‌ನಿಂದ ಡೀಸೆಲ್‌ ಸರಬರಾಜಾಗುತ್ತಿದೆ.

ಕೆಲವು ತಿಂಗಳ ಹಿಂದೆ ನೀರಿನ ಸಮಸ್ಯೆಯಿಂದ ಎಂಆರ್‌ಪಿಎಲ್‌ನ ಯೂನಿಟ್‌ ಕಾರ್ಯ ಸ್ಥಗಿತಗೊಳಿಸಿದ್ದು ಮತ್ತು ಆ ಬಳಿಕ ಭಾರೀ ಮಳೆಯಿಂದಲೂ ಅಡ್ಡಿಯಾಗಿದ್ದರಿಂದ ಡೀಸೆಲ್‌ ಸರಬರಾಜಿನಲ್ಲಿ ಕೊಂಚ ವ್ಯತ್ಯಯವಾಗಿತ್ತು. ಸದ್ಯ ಒಂದೆರಡು ತಿಂಗಳುಗಳಿಂದ ಎಲ್ಲ ಯೂನಿಟ್‌ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ಡೀಸೆಲ್‌ ರಫ್ತಿಗೆ ನಿರ್ಧರಿಸ ಲಾಗಿದ್ದರೂ ಪೆಟ್ರೋಲ್‌ಗೆ ದೇಶೀಯವಾಗಿ ಸಾಕಷ್ಟು ಬೇಡಿಕೆ ಇದ್ದು, ರಫ್ತಿನ ಅಗತ್ಯ ಕಂಡುಬಂದಿಲ್ಲ.

ಅಮೆರಿಕಕ್ಕೂ ಮಂಗಳೂರಿನ ಡೀಸೆಲ್‌
ಸಿಂಗಾಪುರ, ಮಲೇಷ್ಯಾ ಸೇರಿದಂತೆ ವಿವಿಧ ದೇಶಗಳಿಗೆ ಸದ್ಯ ಎಂಆರ್‌ಪಿಎಲ್‌ ಡೀಸೆಲ್‌ ಪೂರೈಸುತ್ತಿದೆ. ಈಗ ಇದರ ಪ್ರಮಾಣ ಏರಿದೆ. ಯಾವ ದೇಶದ ತೈಲ ವ್ಯಾಪಾರ ಸಂಸ್ಥೆಗಳು ಬೇಡಿಕೆ ಸಲ್ಲಿಸುತ್ತವೆಯೋ ಅಲ್ಲಿಗೆ ಎಂಆರ್‌ಪಿಎಲ್‌ ಡೀಸೆಲ್‌ ಸರಬರಾಜು ಮಾಡುತ್ತಿದೆ. ವಿಶೇಷವೆಂದರೆ, ಒಮ್ಮೆ ಅಮೆರಿಕದ ಕಂಪೆನಿಗೂ ಎಂಆರ್‌ಪಿಎಲ್‌ ಡೀಸೆಲ್‌ ರಫ್ತು ಮಾಡಿದೆ.

ಬೆಂಗಳೂರು ಪೈಪ್‌ಲೈನ್‌ ಕೆಲವು ದಿನ ಬಂದ್‌!
ಮಂಗಳೂರಿನಿಂದ ಹಾಸನ- ಬೆಂಗಳೂರು ಮಧ್ಯೆ ಇರುವ ಪೆಟ್ರೋನೆಟ್‌ ಪೈಪ್‌ಲೈನ್‌ (ಎಂಬಿಪಿಎಲ್‌) ಮೂಲಕ ಎಂಆರ್‌ಪಿಎಲ್‌ನಿಂದ ಪ್ರತೀ ದಿನ ಡೀಸೆಲ್‌ ಸರಬರಾಜು ಆಗುತ್ತಿತ್ತು. ಸದ್ಯ ಬೆಂಗಳೂರು-ಹಾಸನ ಭಾಗದಲ್ಲಿ ಬೇಡಿಕೆ ಕಡಿಮೆ ಇದ್ದು, ಕೆಲವು ದಿನ ಪೈಪ್‌ಲೆನ್‌ ಬಂದ್‌ ಮಾಡುವ ಪರಿಸ್ಥಿತಿಯೂ ನಿರ್ಮಾಣಗೊಂಡಿದೆ. ಪ್ರತೀದಿನದ ಬದಲು ಎರಡು ಅಥವಾ ಮೂರು ದಿನಕ್ಕೊಮ್ಮೆ ಸರಬರಾಜು ಮಾಡುವ ಪರಿಸ್ಥಿತಿ ಇದೆ ಎಂದು ಎಂಆರ್‌ಪಿಎಲ್‌ ಮೂಲಗಳು ತಿಳಿಸಿವೆ.

ಡೀಸೆಲ್‌ ಬಳಕೆ ಕುಸಿತ
ಬಿಎಸ್‌4ನಿಂದ ಬಿಎಸ್‌6 ಮಾದರಿಗೆ ವಾಹನಗಳು ಬದಲಾಗುತ್ತಿರುವುದು ಮತ್ತು ಇತರ ಕೆಲವು ಕಾರಣಗಳಿಂದ ದೇಶೀಯವಾಗಿ ಡೀಸೆಲ್‌ ಬಳಕೆ ಪ್ರಮಾಣ ಕುಸಿಯುತ್ತಿದೆ. ಹೀಗಾಗಿ ಸದ್ಯ ಡೀಸೆಲ್‌ ರಫ್ತಿಗೆ ಆದ್ಯತೆ ನೀಡಲಾಗುತ್ತಿದೆ. ಮುಂದಿನ ತಿಂಗಳಿನಿಂದ ದೇಶೀಯ ಬೇಡಿಕೆ ಹೆಚ್ಚುವ ಸೂಚನೆ ಇರುವುದರಿಂದ ರಫ್ತು ಕಡಿಮೆ ಆಗಬಹುದು.
– ಎಂ. ವೆಂಕಟೇಶ್‌, ವ್ಯವಸ್ಥಾಪಕ ನಿರ್ದೇಶಕರು, ಎಂಆರ್‌ಪಿಎಲ್‌

– ದಿನೇಶ್‌ ಇರಾ

ಟಾಪ್ ನ್ಯೂಸ್

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

7-mng

Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್‌ ವಶ: ಜಿಲ್ಲಾಧಿಕಾರಿ ಮಾಹಿತಿ

Private Bus ಯಾನ ದರ 4 ಪಟ್ಟು ಹೆಚ್ಚಳ! ಮತದಾನಕ್ಕೆ ಬರುವವರ ಕಿಸೆಗೆ ಕತ್ತರಿ

Private Bus ಯಾನ ದರ 4 ಪಟ್ಟು ಹೆಚ್ಚಳ! ಮತದಾನಕ್ಕೆ ಬರುವವರ ಕಿಸೆಗೆ ಕತ್ತರಿ

Dakshina Kannada ರಾಜಕೀಯ ಮೇಲಾಟದ ಕ್ಷೇತ್ರದಲ್ಲಿ ಮತದಾರರದ್ದೇ ಕುತೂಹಲ!

Dakshina Kannada ರಾಜಕೀಯ ಮೇಲಾಟದ ಕ್ಷೇತ್ರದಲ್ಲಿ ಮತದಾರರದ್ದೇ ಕುತೂಹಲ!

ಅಧಿಕಾರಕ್ಕಾಗಿ ಪಿಎಫ್‌ಐಯ ರಾಜಕೀಯ ಮುಖವಾದ ಎಸ್‌ಡಿಪಿಐ ಜತೆ ಕಾಂಗ್ರೆಸ್‌ ಹೊಂದಾಣಿಕೆ: ನಳಿನ್‌

ಅಧಿಕಾರಕ್ಕಾಗಿ ಪಿಎಫ್‌ಐಯ ರಾಜಕೀಯ ಮುಖವಾದ ಎಸ್‌ಡಿಪಿಐ ಜತೆ ಕಾಂಗ್ರೆಸ್‌ ಹೊಂದಾಣಿಕೆ: ನಳಿನ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.