ಅಂಚೆ-ಕುಂಚ: ಕಲಾವೈಭವ ಸಾಕ್ಷಾತ್ಕಾರ

ಧರ್ಮಸ್ಥಳ: ಮಹೋತ್ಸವ ಸಭಾಭವನ

Team Udayavani, May 6, 2019, 6:10 AM IST

0505CH1-D

ಬೆಳ್ತಂಗಡಿ: ಶ್ರೀ ಧ.ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್‌, ಶ್ರೀಕ್ಷೇತ್ರ ಧರ್ಮಸ್ಥಳ ರವಿವಾರ ಮಹೋತ್ಸವ ಸಭಾಭವನದಲ್ಲಿ ಹಮ್ಮಿಕೊಂಡ ಕುಂಚ – ಗಾನ – ನೃತ್ಯ ವೈಭವ ನೋಡುಗರನ್ನು ಮಂತ್ರಮುಗ್ಧಗೊಳಿಸಿತು.

ಡಾ| ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ. ಹೆಗ್ಗಡೆ ಸಮ್ಮುಖದಲ್ಲಿ ನಡೆದ 17ನೇ ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧಾ ವಿಜೇತರ ಪುರಸ್ಕಾರ ಸಮಾರಂಭದಲ್ಲಿ ಕಲಾ ಸಾಧಕರು ಪ್ರತಿಭೆ ಪ್ರದರ್ಶಿಸಿದರು.

ಕುಂಚ-ಗಾನ-ನೃತ್ಯ ವೈಭವ
ವೇದಿಕೆಯಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ಗಂಜೀಫ ರಘುಪತಿ ಭಟ್‌ ಅವರು ರೇಖಾ ಚಿತ್ರದ ಮೂಲಕ ಮಹಾತ್ಮಾ ಗಾಂಧೀಜಿ ಚಿತ್ರವನ್ನು ಪ್ರಸ್ತುತಪಡಿಸಿದರೆ, ವೇಗದ ಚಿತ್ರ ಕಲಾವಿದೆ ಶಬರಿ ಗಾಣಿಗ ಕುಂಚದಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಅತ್ಯಾಕರ್ಷಕ ಚಿತ್ತಾರವನ್ನು ಪ್ರದರ್ಶಿಸಿದರು.

ವೇದಿಕೆ ಮುಂಭಾಗ ಕಾವ್ಯಶ್ರೀ ಆಜೇರು ಅವರಿಂದ ಯಕ್ಷ ಗಾಯನ ಸುಶ್ರಾವ್ಯ ವಾಗಿ ಮೂಡಿಬಂದಿತು. ಯಕ್ಷ ನೃತ್ಯದ ಮೂಲಕ ಯಕ್ಷಕಲಾ ತಂಡ, ಶ್ರೀ ಧ.ಮಂ. ಕಾಲೇಜು ಉಜಿರೆ, ಹಿಮ್ಮೇಳದಲ್ಲಿ ಚೆಂಡೆವಾದಕರಾಗಿ ಬಿ. ಸೀತಾರಾಮ ತೋಳ್ಪಡಿತ್ತಾಯರು, ಮದ್ದಳೆಯಲ್ಲಿ ಜನಾರ್ದನ ತೋಳ್ಪಡಿತ್ತಾಯ ಅವರಿಂದ ಏಕಕಾಲದಲ್ಲಿ ಕುಂಚ-ಗಾನ-ನೃತ್ಯ ವೈಭವ ಸಾಕಾರಗೊಂಡಿತು. ಕುಂಚಕ್ಕೆ ಸರಿ ಯಾಗಿ ಗಾನ, ಗಾನಕ್ಕೆ ಸರಿಯಾಗಿ ನೃತ್ಯ ರಮಣೀಯವಾಗಿ ಮೂಡಿಬಂದಿತು.

ಮುಖ್ಯಮಂತ್ರಿ ಚಂದ್ರು ಮತ್ತು ಕುಟುಂಬಸ್ಥರು, ಶಬರಿ ಗಾಣಿಗ ಮತ್ತು ಪೋಷಕರು ಡಾ| ಹೆಗ್ಗಡೆ, ಹೇಮಾವತಿ ಹೆಗ್ಗಡೆ ಅವರನ್ನು ಸಮ್ಮಾನಿಸಿದರು. ಡಾ| ಹೆಗ್ಗಡೆ ಅವರು ಸಾಧಕರನ್ನು ಸಮ್ಮಾನಿಸಿದರು.

ಚಿತ್ರ ಸಂತೆ ಪ್ರದರ್ಶನ
1999ರಿಂದ ಪ್ರತಿ ವರ್ಷ ಅಂಚೆ-ಕುಂಚ ಚಿತ್ರ­ಕಲಾ ಸ್ಪರ್ಧೆ­ಗ­ಳನ್ನು ನಡೆ­ಸುತ್ತಾ ಬಂದಿ ರುವ ಶ್ರೀ ಧ.ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್‌, ಶ್ರೀಕ್ಷೇತ್ರ ಧರ್ಮಸ್ಥಳವು ಅನೇಕ ಕಲಾವಿದರಿಗೆ ವೇದಿಕೆಯಾಗಿಸಿದೆ. ಈ ವರೆಗೆ 2,09,685 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದು, ವೇದಿಕೆಯ ಹೊರಭಾಗದಲ್ಲಿ ಹಿಂದಿನ ವರ್ಷಗಳಲ್ಲಿ ಪುರಸ್ಕೃತರಾದ ಕುಂಚ ಕಲಾ ವಿದರು ರಚಿಸಿದ ವಿಶಿಷ್ಟ ಕಲೆಯನ್ನು ಚಿತ್ರ ಸಂತೆಯಲ್ಲಿ ಪ್ರದರ್ಶಿಸಲಾಗಿತ್ತು. ಡಾ| ಹೆಗ್ಗಡೆ ಮತ್ತು ಮುಖ್ಯಮಂತ್ರಿ ಚಂದ್ರು ಅವರಿಗೆ ಸ್ಪರ್ಧಾ ವಿಜೇತರು ತಾವು ರಚಿಸಿದ ಕಲಾಕೃತಿಯನ್ನು ಉಡುಗೊರೆ ನೀಡಿದರು.

7ನೇ ಬಾರಿ ಪ್ರಶಸ್ತಿ
ಪ್ರಾಥ­ಮಿಕ ವಿಭಾಗ, ಪ್ರೌಢ­ಶಾಲಾ ವಿಭಾಗ, ಕಾಲೇಜು ವಿಭಾಗ, ಸಾರ್ವ­ಜ­ನಿ­ಕ­ರಿ ಗಾಗಿ ಮಹಾತ್ಮಾ ಗಾಂಧೀಜಿ ವಿಷಯದಲ್ಲಿ ಪ್ರತ್ಯೇಕ ಸ್ಪರ್ಧೆ­ ಏರ್ಪಡಿಸಲಾಗಿತ್ತು .
ಈವರೆಗೆ ಅಂಕೋಲಾ ಆವರ್ಸೆಯ ದಿನೇಶ ದೇವರಾಯ ಮೇತ್ರಿ ಅಂಚೆ-ಕುಂಚ ಸ್ಪರ್ಧೆಯಲ್ಲಿ 7 ಬಾರಿ ಪ್ರಶಸ್ತಿ ಗಳಿಸಿದ್ದಾರೆ.ಅವರು ಪ್ರತಿಕ್ರಿಯಿಸಿ, ಈವರೆಗೆ ಪ್ರಾಥಮಿಕ-1, ಪ್ರೌಢ-2, ಸಾರ್ವಜನಿಕ-4 ಪ್ರಶಸ್ತಿ ಗಳಿಸಿದ್ದೇನೆ. ಪ್ರತಿ ವರ್ಷ ಹೊಸ ಅನುಭವ ನೀಡುತ್ತದೆ. ಇದು ಪ್ರತಿಭೆಗೆ ಪೂಜ್ಯರು ನೀಡಿದ ಅತ್ಯುತ್ತಮ ಕೊಡುಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 ಕನಸು ನನಸಾಗಿದೆ
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನನ್ನ ಮೊದಲ ವೇದಿಕೆ ಕಾರ್ಯಕ್ರಮ. ಡಾ| ಹೆಗ್ಗಡೆಯವರ ಆಶೀರ್ವಾದದೊಂದಿಗೆ ಅವರ ಕಲಾಕೃತಿ ರಚಿಸುವ ಮೂಲಕ ನನ್ನ ಕನಸು ನನಸಾಗಿದೆ. ಇಂತಹ ಕಾರ್ಯಕ್ರಮ ಮತ್ತಷ್ಟು ಸಾಧಕರಿಗೆ ವೇದಿಕೆಯಾಗಲಿ.
 - ಶಬರಿ ಗಾಣಿಗ, ವೇಗದ ಚಿತ್ರ ಕಲಾವಿದೆ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.