ಮಂಗಳೂರು: ಡಿಜೆ ಆಪರೇಟರ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
Team Udayavani, Jan 18, 2023, 9:19 PM IST
ಮಂಗಳೂರು : ಪಬ್ನಲ್ಲಿ ಡಿಜೆ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಧನುಷ್ ಕೆ.(21) ಎಂಬವರು ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ಧನುಷ್ ಜ.15ರಂದು ರಾತ್ರಿ ಕೆಲಸ ಮುಗಿಸಿಕೊಂಡು ನಗರದ ಮೇರಿಹಿಲ್ನಲ್ಲಿರುವ ಮಾವನ ಮನೆಯಲ್ಲಿ ಉಳಿದುಕೊಂಡಿದ್ದರು. ಮರುದಿನ ಬೆಳಗ್ಗೆ 7.45ಕ್ಕೆ ಮನೆಯಿಂದ ಹೊರಟು ತಂದೆಯ ಮನೆಗೆ ಹೋಗುವುದಾಗಿ ಮಾವನಲ್ಲಿ ಹೇಳಿ ಹೋಗಿದ್ದರು. ಆದರೆ ಅನಂತರ ಧನುಷ್ಗೆ ಕರೆ ಮಾಡಿದಾಗ ಆತನ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಕಂಕನಾಡಿ ನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ತೆಕ್ಕಟ್ಟೆ: ಲಾರಿ ಢಿಕ್ಕಿ ಹೊಡೆದು ಪಾದಚಾರಿಗೆ ಗಂಭೀರ ಗಾಯ