ಮೀನು ಸೇವನೆಗೆ ಆತಂಕ ಬೇಡ: ಮೀನು ಮಾರಾಟ ಫೆಡರೇಶನ್
Team Udayavani, Jun 26, 2018, 1:25 PM IST
ಉಡುಪಿ/ಮಂಗಳೂರು: ಕಳೆದೆರಡು ದಿನಗಳಿಂದ ಮೀನಿಗೆ ರಾಸಾಯನಿಕ ಪದಾರ್ಥಗಳನ್ನು ಮಿಶ್ರ ಮಾಡಲಾಗುತ್ತಿದೆ ಎನ್ನುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ಘಟನೆಗೂ ಮಹಿಳಾ ಮೀನು ಮಾರಾಟಗಾರರಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಆದುದರಿಂದ ಗ್ರಾಹಕರು ಈ ಹಿಂದಿನಂತೆ ಮೀನನ್ನು ಖರೀದಿಸಿ ಸೇವಿಸಬಹುದು. ಅಲ್ಲದೆ ಈ ಬಗ್ಗೆ ಯಾವುದೇ ಗೊಂದಲ, ಆತಂಕಕ್ಕೆ ಒಳಪಡುವ ಅಗತ್ಯವಿಲ್ಲ ಎಂದು ದ.ಕ., ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಎ.ಸುವರ್ಣ ತಿಳಿಸಿದ್ದಾರೆ.
ಹಲವಾರು ಶತಮಾನಗಳಿಂದ ಮಹಿಳಾ ಮೀನು ಮಾರಾಟಗಾರರು ತಮ್ಮ ಸಾಂಪ್ರದಾಯಿಕ ಕಸುಬಾದ ಮೀನು ಮಾರಾಟ ವೃತ್ತಿಯನ್ನು ನಡೆಸಿಕೊಂಡು ಬರುತ್ತಿದ್ದು, ಮೀನಿಗೆ ಯಾವುದೇ ರಾಸಾಯನಿಕಗಳನ್ನು ಬಳಸದೆ ತಾಜಾ ಮೀನನ್ನು ನೇರವಾಗಿ ಮೀನುಗಾರರಿಂದ ಗ್ರಾಹಕರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿ ಗ್ರಾಹಕರ ವಿಶ್ವಾಸ ಗಳಿಸಿದ್ದಾರೆ.
ಇತ್ತೀಚೆಗೆ ಕೇರಳ ರಾಜ್ಯದ ವಿವಿಧೆಡೆ ಆಹಾರ ಸುರಕ್ಷತಾ ಇಲಾಖೆ ದಾಳಿ ನಡೆಸಿದಾಗ ಕೆಲವು ಮಾಲ್ ಮತ್ತು ಮಳಿಗೆಗಳಲ್ಲಿ ಮಾತ್ರ ಮೀನನ್ನು ಸಂರಕ್ಷಿಸಿಡಲು ಹಾನಿಕಾರಕ ಫಾರ್ಮಾಲಿನ್ ರಾಸಾಯನಿಕವನ್ನು ಬಳಕೆ ಮಾಡಿದ್ದು, ಇಂತಹ ಸುಮಾರು 6 ಸಾವಿರ ಕೆಜಿ ಮೀನನ್ನು ವಶಪಡಿಸಿಕೊಂಡು ಕೇರಳದಲ್ಲಿ ಈ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಮಾರುಕಟ್ಟೆಗಳಲ್ಲಿ ಮೀನು ಮಾರಾಟಗಾರರು ಎಂದಿನಂತೆ ಗ್ರಾಹಕರಿಗೆ ಮೀನನ್ನು ಒದಗಿಸುತ್ತಿದ್ದಾರೆ. ಈಗಾಗಲೇ ಮತ್ಸಕ್ಷಾಮ,ವದಂತಿಗಳಿಂದ ತೀವ್ರ ತೊಂದರೆಗೊಳಗಾದ ಮೀನುಗಾರರಿಗೆ ಸೂಕ್ತ ನ್ಯಾಯ ಒದಗಿಸಿ, ಹಾನಿಕಾರಕ ರಾಸಾಯನಿಕ ಬಳಸುವವರ ವಿರುದ್ಧ ಕಠಿನ ಕ್ರಮಕೈಗೊಂಡು ಮತ್ಸ
ಗ್ರಾಹಕರಲ್ಲಿರುವ ಗೊಂದಲಗಳನ್ನು ಪರಿಹರಿಸಬೇಕೆಂದು ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳೂರು: ಕ್ರಿಪ್ಟೋ ಕರೆನ್ಸಿ ಹೆಸರಲ್ಲಿ ಕೋಟ್ಯಂತರ ರೂ. ವಂಚನೆ; ಆರೋಪಿ ಬಂಧನ
ರಾಜ್ಯ ಸರಕಾರಕ್ಕೆ ಇನ್ನು 35 ದಿನ ಮಾತ್ರ ಆಯಸ್ಸು: ಸರಕಾರದ ವಿರುದ್ಧ ಯು.ಟಿ.ಖಾದರ್ ಟೀಕೆ
ಈ ಬಾರಿಯೂ ಯುಗಾದಿ ಸಂದರ್ಭದಲ್ಲಿ ಹಲಾಲ್ ಕಟ್ ಬಹಿಷ್ಕಾರ: ಪ್ರಮೋದ್ ಮುತಾಲಿಕ್
ಉಳ್ಳಾಲ: ಪತ್ನಿ ಸಂಬಂಧಿಕರ ಮನೆಯಲ್ಲಿ ಪತಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ
ನಂತೂರು ಓವರ್‌ಪಾಸ್ ನಿರ್ಮಾಣ: ಹೆದ್ದಾರಿ ಪ್ರಾಧಿಕಾರ ತುರ್ತು ಕಾರ್ಯಪ್ರವೃತ್ತವಾಗಲಿ
MUST WATCH
ಹೊಸ ಸೇರ್ಪಡೆ
ಮೂಡಿಗೆರೆ JDS ನಲ್ಲಿ ಭಿನ್ನಮತ: ಬಿ.ಬಿ ನಿಂಗಯ್ಯಗೆ ಟಿಕೇಟ್ ನೀಡಲು ಸ್ವಪಕ್ಷದಲ್ಲಿ ವಿರೋಧ
ಮಂಗಳೂರು: ಕ್ರಿಪ್ಟೋ ಕರೆನ್ಸಿ ಹೆಸರಲ್ಲಿ ಕೋಟ್ಯಂತರ ರೂ. ವಂಚನೆ; ಆರೋಪಿ ಬಂಧನ
ರಾಜ್ಯ ಸರಕಾರಕ್ಕೆ ಇನ್ನು 35 ದಿನ ಮಾತ್ರ ಆಯಸ್ಸು: ಸರಕಾರದ ವಿರುದ್ಧ ಯು.ಟಿ.ಖಾದರ್ ಟೀಕೆ
ಪೂರ್ಣಿಮಾ ಹೆಗಲ ಮೇಲೆ ಕೈ ಇಟ್ಟು, ‘ನಮ್ಮ ಜೊತೆಯಲ್ಲೇ ಇದ್ದಾರೆ’ ಎಂದ ಬಿಎಸ್‌ವೈ
ಅಮೃತಾ ಫಡ್ನವಿಸ್ ಗೆ ಲಂಚದ ಆಮಿಷ, ಬೆದರಿಕೆ: ಡಿಸೈನರ್ ಅನಿಕ್ಷಾ ತಂದೆ ಅನಿಲ್ ಜೈಸಿಂಘಾನಿ ಬಂಧನ