

Team Udayavani, Nov 3, 2018, 11:19 AM IST
ಪುತ್ತೂರು: ಮಿಂಚಿಪದವು ಗೇರು ಪ್ಲಾಂಟೇಷನ್ ಕೇರಳದ್ದಾದರೂ ಕರ್ನಾಟಕದ ಗಡಿಗೆ ತಾಗಿಯೇ ಇದೆ. ಇಲ್ಲಿನ ಬಾವಿಯಲ್ಲಿ ದಶಕದ ಹಿಂದೆ ಹೂತಿಡಲಾದ ಎಂಡೋಸಲ್ಫಾನ್ ಈಗ ಹಾಲಾಹಲವಾಗಿ ಅಂತರ್ಜಲದ ಜತೆ ಬೆರೆತಿದೆ.
ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಟ್ನೂರು ಗ್ರಾ.ಪಂ.ನ ಕುಮಾರನಾಥ ಎಂಬವರು ವರ್ಷಗಳ ಹಿಂದೆ ಬೋರ್‌ವೆಲ್ ಕೊರೆಸಿದ್ದರು. ನೀರನ್ನು ಬಳಸುವ ಮೊದಲು ಪರೀಕ್ಷಿಸಲು ನಿರ್ಧರಿಸಿ ಬೆಂಗಳೂರಿನ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸ್ಯಾಂಪಲ್ ರವಾನಿಸಿದರು. ಇಲಾಖೆ ಕಳುಹಿಸಿದ ಪರೀಕ್ಷಾ ವರದಿ ಅವರ ಆತಂಕವನ್ನು ನಿಜ ಮಾಡಿತು. ಬೋರ್‌ವೆಲ್ ನೀರಿನಲ್ಲಿ ಆಲ್ಫಾ ಎಂಡೋಸಲ್ಫಾನ್ 0.025 ಮೈಕ್ರೊಗ್ರಾಮ್ಸ್/ಲೀ. ಹಾಗೂ ಬೇಟಾ ಎಂಡೋಸಲ್ಫಾನ್ 0.025 ಮೈಕ್ರೊಗ್ರಾಮ್ಸ್/ಲೀ. ನಷ್ಟು ಇದೆ. ಇವುಗಳನ್ನು ಮನುಷ್ಯ ಸ್ವೀಕರಿಸಬಹುದಾದ ಮಿತಿ 0.4 ಮೈಕ್ರೊಗ್ರಾಮ್ಸ್/ಲೀ. ಎಂದು ವರದಿ ಹೇಳಿತ್ತು.
ನಿಜವಾದ ಆತಂಕ
ಇಲ್ಲಿನ ಬಾವಿಯಲ್ಲಿ ಎಂಡೋ ಹೂತಿಟ್ಟದ್ದು ಬಹಿರಂಗಗೊಂಡಾಗಲೇ ಅದು ಅಂತರ್ಜಲಕ್ಕೆ ಸೇರುವ ಆತಂಕ ಮೂಡಿತ್ತು. ಈಗ ಬೋರ್‌ವೆಲ್ ನೀರಿನಲ್ಲಿ ಎಂಡೋ ಅಂಶ ಇದೆ ಎನ್ನುವುದನ್ನು ಮಂಡಳಿ ದೃಢಪಡಿಸಿದೆ. ಈ ಎಂಡೋ ವಿಷ ಎಲ್ಲಿಂದ ಸೇರಿದೆ ಎನ್ನುವುದರ ಬಗ್ಗೆ ಸಂಬಂಧಪಟ್ಟವರು ಎಚ್ಚರಿಕೆ ಕ್ರಮ ಕೈಗೊಳ್ಳಬೇಕಿತ್ತು. ಹಿಂದೊಮ್ಮೆ ಸಹಾಯಕ ಆಯುಕ್ತರಾಗಿದ್ದ ಡಾ| ರಾಜೇಂದ್ರ ಕೆ.ವಿ. ಅವರ ಗಮನ ಸೆಳೆದಾಗ, ಸ್ಥಳ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ಕಳುಹಿಸಿದ್ದರು. ಆದರೆ ವರದಿ ಕಡತದಲ್ಲೇ ಬಾಕಿ ಆಗಿದೆ.
ಕಾಸರಗೋಡು ಜಿಲ್ಲಾಧಿಕಾರಿಯವರನ್ನು ಸಂ± ರ್ಕಿಸಿ, ಕೇರಳ ಸರಕಾರದ ಜತೆ ಮಾತುಕತೆ ನಡೆಸುವ ಕೆಲಸವೂ ನಡೆದಿಲ್ಲ. ಸರಕಾರ ಹಾಗೂ ಜಿಲ್ಲಾಡಳಿತದ ಮಟ್ಟದಲ್ಲಿ ಮಾತುಕತೆ ನಡೆಸಿ, ಹೂತಿಟ್ಟ ಎಂಡೋ ವಿಷವನ್ನು ಹೊರ ತೆಗೆಯುವ ಕೆಲಸವಾಗಬೇಕಿತ್ತು. ಎಂಡೋ ವಿಚಾರದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ತಳೆದಿರುವ ದಿವ್ಯ ನಿರ್ಲಕ್ಷ್ಯಕ್ಕೆ ಜನಸಾಮಾನ್ಯರು ಬಲಿಯಾಗುತ್ತಲೇ ಇದ್ದಾರೆ. ಈಗ ಅಂತರ್ಜಲ ಮಲಿನಗೊಂಡಿರುವುದು ದೃಢಪಟ್ಟಿದೆ.
ಆರು ಬಾವಿ
ದಿ ಪ್ಲಾಂಟೇಷನ್ ಕಾರ್ಪೊರೇಷನ್ ಆಫ್ ಕೇರಳದ ಗೇರು ತೋಟ 141.30 ಹೆಕ್ಟೇರ್ ಇದೆ. ಇದರಲ್ಲಿರುವ 6 ಬಾವಿಗಳಲ್ಲಿ ಎಂಡೋ ಹೂತಿಡಲಾಗಿದೆ ಎನ್ನಲಾಗು ತ್ತಿದೆ. ಒಂದು ಬಾವಿ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಟ್ನೂರು ಗ್ರಾ.ಪಂ.ಗೆ ತಾಗಿದೆ. ಎಂಡೋ ಹೂತಿಟ್ಟದ್ದು ಬಹಿರಂಗಗೊಳ್ಳುತ್ತಿದ್ದಂತೆ ದೊಡ್ಡ ಸುದ್ದಿ ಯಾಗಿತ್ತು. ಹೂತಿಟ್ಟ ಎಂಡೋ ನಿವಾರಿಸುವ ಅಥವಾ ಪರ್ಯಾಯ ಕ್ರಮ ನಡೆದಿಲ್ಲ. ಬೋರ್‌ವೆಲ್ ನೀರಿಗೆ ಎಂಡೋ ಬೆರೆತಿದೆ ಎಂದು ತಿಳಿದ ಮೇಲಾದರೂ ಎಚ್ಚೆತ್ತುಕೊಳ್ಳುವ ಕೆಲಸ ಆಗಬೇಕಿತ್ತು. ಅದೂ ಆಗಿಲ್ಲ.
ಬಹಿರಂಗಗೊಂಡದ್ದು ಹೀಗೆ
ಕೇರಳದ ಗೇರು ನಿಗಮದ ತೋಟದ ಬಾವಿಯಲ್ಲಿ ಎಂಡೋಸಲ್ಫಾನ್ ಹೂತಿಡಲಾಗಿದೆ ಎಂದು ಬಹಿರಂಗಪಡಿಸಿದ್ದು ಸ್ವತಃ ಹೂತಿಟ್ಟಾತನೇ. 2013ರ ಅಕ್ಟೋಬರ್‌ನಲ್ಲಿ ನಿಗಮದ ನಿವೃತ್ತ ಕಾರ್ಮಿಕ ಅಚ್ಯುತ ಮಣಿಯಾಣಿ ಈ ವಿಷಯವನ್ನು ಹೊರಗೆಡವಿದರು. 2005ರ ಆಸುಪಾಸಿನಲ್ಲಿ ಎಂಡೋಸಲ್ಫಾನ್ ತುಂಬಿದ ಡಬ್ಬಿ, ಬಾಟಲಿಗಳನ್ನು ಈ ಬಾವಿಯೊಳಗೆ ನಿಗಮದ ಅಧಿಕಾರಿಗಳ ಸೂಚನೆಯಂತೆ ಸುರಿದಿದ್ದೇನೆ. ಇದಕ್ಕೆ ಮೊದಲು ಎಂಡೋ ಸಿಂಪರಣೆಗೆ ಬರುತ್ತಿದ್ದ ಹೆಲಿಕಾಪ್ಟರ್‌ಗಳಿಗೆ ತಾನೇ ಎಂಡೋ ತುಂಬಿಸುತ್ತಿದ್ದೆ ಎಂದಿದ್ದರು. ಅವರು ಬಹಿರಂಗಪಡಿಸಲು ಕಾರಣವಾದದ್ದು ಅವರಿಗೂ ಕಾಡಿದ್ದ ಎಂಡೋ ಬಾಧೆ.
ನಿಗದಿತ ಪ್ರಮಾಣದ ಒಳಗೆ ರಾಸಾಯನಿಕದ ಅಂಶ ಇದ್ದರೆ ಸಮಸ್ಯೆ ಇಲ್ಲ. ಆದರೂ ಈ ವಿಷಯದ ಬಗ್ಗೆ ಪರಿಶೀಲಿಸುತ್ತೇನೆ. ವರ್ಷಗಳ ಹಿಂದೆ ಸಹಾಯಕ ಆಯುಕ್ತರು ಕಳುಹಿಸಿದ ವರದಿಯನ್ನು ಗಣನೆಗೆ ತೆಗೆದು ಕೊಳ್ಳುತ್ತೇನೆ.
ಶಶಿಕಾಂತ ಸೆಂಥಿಲ್, ಜಿಲ್ಲಾಧಿಕಾರಿ, ದ.ಕ.
ಗಣೇಶ್ ಎನ್. ಕಲ್ಲರ್ಪೆ
Ad
Smart meter ನಮ್ಮಲ್ಲೇಕೆ ದುಬಾರಿ?: ರಾಜ್ಯ ಸರಕಾರಕ್ಕೆ ಹೈಕೋರ್ಟ್ ತರಾಟೆ
BJP; ಮೋದಿ ವಾಪಸಾದ ಬಳಿಕ ರಾಜ್ಯಾಧ್ಯಕ್ಷ ಅಂತಿಮ: ಬಿ.ವೈ.ವಿಜಯೇಂದ್ರ
ಮರಾಠಿ ಮಾತನಾಡುವ ಸ್ತ್ರೀಯ ನಿಂದಿಸಿದ ರಾಜ್‌ಪಕ್ಷದ ಮುಖಂಡನ ಪುತ್ರ
Uttar Pradesh: “ಪಂಚಗವ್ಯ’ ಬಳಸಿ ಆಯುರ್ವೇದ ಔಷಧ ತಯಾರಿಕೆ
ಆಜಾನ್ ಶಬ್ದ ಮಾಲಿನ್ಯ ತಗ್ಗಿಸಲು ಹೊಸ ತಂತ್ರಜ್ಞಾನ ಬಳಸಲಿ: ಕೆ.ಎಸ್.ಈಶ್ವರಪ್ಪ ಆಗ್ರಹ
You seem to have an Ad Blocker on.
To continue reading, please turn it off or whitelist Udayavani.