ಫಾಝಿಲ್ ಹತ್ಯೆ ಸಮರ್ಥಿಸಿ ಹೇಳಿಕೆ: ಶರಣ್ ಬಂಧನಕ್ಕೆ ಫಾಝಿಲ್ ತಂದೆ ಆಗ್ರಹ
Team Udayavani, Jan 31, 2023, 7:20 AM IST
ಮಂಗಳೂರು : ಸುರತ್ಕಲ್‌ನಲ್ಲಿ ಕಳೆದ ವರ್ಷ ನಡೆದ ಮೊಹಮ್ಮದ್ ಫಾಝಿಲ್ ಹತ್ಯೆಯನ್ನು ಸಮರ್ಥಿಸಿ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಬಹಿರಂಗವಾಗಿ ಹೇಳಿಕೆ ನೀಡಿದ್ದು ಅವರನ್ನು ಬಂಧಿಸಿ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಫಾಝಿಲ್ ತಂದೆ ಉಮರ್ ಫಾರೂಕ್ ಸೋಮವಾರ ಮಂಗಳೂರು ಪೊಲೀಸ್
ಆಯುಕ್ತ ಎನ್. ಶಶಿಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಜು. 28ರಂದು ಫಾಝಿಲ್‌ನನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ 8 ಮಂದಿಯನ್ನು ಬಂಧಿಸಲಾಗಿದೆ. ಅವರ ಮೇಲೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಪ್ರಕರಣದ ಸೂತ್ರಧಾರರ ಬಗ್ಗೆ ತನಿಖೆ ನಡೆಸಲು ಈ ಹಿಂದೆಯೂ ಹಲವು ಬಾರಿ ಕೇಳಿಕೊಂಡಿದ್ದೆ. ಆದರೆ ಯಾವುದೇ ವ್ಯಕ್ತಿಗಳನ್ನು ತನಿಖೆಗೆ ಒಳಪಡಿಸಿಲ್ಲ. ಈ ನಡುವೆ ಶರಣ್ ಪಂಪ್‌ವೆಲ್ ಜ. 29ರಂದು ತುಮಕೂರಿನಲ್ಲಿ ಬಜರಂಗದಳದ ಶೌರ್ಯಯಾತ್ರೆಯಲ್ಲಿ ಬಹಿರಂಗ ಭಾಷಣದಲ್ಲಿ “ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಫಾಝಿಲ್‌ನನ್ನು ಕೊಲೆ ಮಾಡಲಾಯಿತು’ ಎಂದಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಶರಣ್‌ಗೆ ಕೃತ್ಯದ ಸಂಪೂರ್ಣ ಮಾಹಿತಿ ಇದ್ದು ಅವರನ್ನು ಬಂಧಿಸಿ ಹೆಚ್ಚುವರಿ ತನಿಖೆ ನಡೆಸಬೇಕು ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕನಸಿನಲ್ಲಿ ʼಶ್ರೀಕೃಷ್ಣʼ ದೇವರನ್ನು ಕಂಡು ನಿದ್ದೆಯಿಂದ ಎಚ್ಚೆದ್ದ ಸಚಿವ.!
Modi ಉಪನಾಮ ಪ್ರಕರಣ: ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲುಶಿಕ್ಷೆ ವಿಧಿಸಿದ ಕೋರ್ಟ್
ಸ್ಟಾರ್ಟ್‌ಅಪ್ ಕನಸು ಹೊತ್ತವರ ಚಿತ್ರ: ಮೇಡ್ ಇನ್ ಬೆಂಗಳೂರು
ಆನ್ಲೈನ್ ನಲ್ಲಿ ವಿದ್ಯುತ್ ಬಿಲ್ ಕಟ್ಟಲು ಹೋಗಿ 7 ಲಕ್ಷ ರೂ. ಕಳೆದುಕೊಂಡ ಮಹಿಳೆ
ರಣದೀಪ್ ಸಿಂಗ್ ಸುರ್ಜೆವಾಲ ಇತಿಹಾಸವನ್ನು ಓದಿಕೊಳ್ಳಬೇಕು: ಸಿಎಂ ಬೊಮ್ಮಾಯಿ