ಕರಾವಳಿಯಾದ್ಯಂತ ಉತ್ತಮ ಮಳೆ

Team Udayavani, Jul 22, 2019, 5:19 AM IST

ಮಂಗಳೂರು/ಉಡುಪಿ/ ಕಾಸರಗೋಡು: ಮಹಾ ಮಳೆ ನಕ್ಷತ್ರ ಪುಷ್ಯಾದ ಎರಡನೆಯ ದಿನ ರವಿವಾರವೂ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಉತ್ತಮವಾದ ಮಳೆಯಾಗಿದೆ.

ಮಂಗಳೂರು ನಗರದಲ್ಲಿ ಸಂಜೆ ಮತ್ತು ರಾತ್ರಿ ವೇಳೆ ಮಳೆಯಾಗಿದೆ. ದ.ಕ. ಜಿಲ್ಲೆಯ ಎಲ್ಲೆಡೆ ಉತ್ತಮ ಮಳೆಯಾಗಿದೆ. ಉಡುಪಿ ನಗರ ಸಹಿತ ಜಿಲ್ಲೆಯಲ್ಲೂ ಸಾಕಷ್ಟು ಮಳೆ ಬಿದ್ದಿದೆ.

ಕಾಸರಗೋಡು: ಭಾರೀ ಗಾಳಿ ಮಳೆ ಮುನ್ನೆಚ್ಚರಿಕೆ
ಕಾಸರಗೋಡು ಜಿಲ್ಲೆಯಲ್ಲಿ ಮುಂದಿನ 24 ಗಂಟೆಗಳಲ್ಲಿ ವ್ಯಾಪಕ ಮಳೆ ಮತ್ತು ಭಾರೀ ಗಾಳಿ ಬೀಸುವ ಸಾಧ್ಯತೆ ಇದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ತಾಲೂಕು ಮಟ್ಟದಲ್ಲಿ ಕಂಟ್ರೋಲ್‌ ರೂಂ ಆರಂಭಿಸಿದೆ. ಗ್ರಾ.ಪಂ. ಕಾರ್ಯದರ್ಶಿ, ವಿಲೇಜ್‌ ಆಫೀಸರ್‌ಗಳಿಗೆ ಸಂಭಾವ್ಯ ಅಪಾಯಗಳ ಬಗ್ಗೆ ಎಚ್ಚರ ವಹಿಸಲು ಸೂಚನೆ ನೀಡಲಾಗಿದ್ದು, ಸಾರ್ವಜನಿಕರು ಜಾಗ್ರತೆ ವಹಿಸಲು ಕರೆ ಕೊಡಲಾಗಿದೆ.

ಗುಡ್ಡ ಕುಸಿದು ಮನೆಗೆ ಹಾನಿ
ಜಿಲ್ಲೆಯಾದ್ಯಂತ ರವಿವಾರವೂ ಉತ್ತಮ ಮಳೆಯಾಗಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಬದಿಯಡ್ಕ -ಪೆರ್ಲ ಮಧ್ಯೆ ಕರಿಂಬಿಲ ಎಂಬಲ್ಲಿ ಮುಖ್ಯ ರಸ್ತೆಗೆ ಗುಡ್ಡ ಜರಿದಿದೆ. ಬದಿಯಡ್ಕದ ಚೆನ್ನಾರ್‌ಕಟ್ಟೆಯ ವಿಶ್ವನಾಥ ರೈ ಅವರ ಮನೆಯ ತಾರಸಿಗೆ ಪಕ್ಕದ ಗುಡ್ಡ ಜರಿದು ಹಾನಿಯಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ