ಪದವಿ ಉತ್ತರಪತ್ರಿಕೆ ಮೌಲ್ಯ ಮಾಪನ ಇನ್ನು ಡಿಜಿಟಲ್‌! ಮಂಗಳೂರು ವಿ.ವಿ. ತೀರ್ಮಾನ


Team Udayavani, Jan 12, 2023, 7:10 AM IST

ಪದವಿ ಉತ್ತರಪತ್ರಿಕೆ ಮೌಲ್ಯ ಮಾಪನ ಇನ್ನು ಡಿಜಿಟಲ್‌! ಮಂಗಳೂರು ವಿ.ವಿ. ತೀರ್ಮಾನ

ಮಂಗಳೂರು: ಎನ್‌ಇಪಿ ಪದವಿ ಫಲಿತಾಂಶದಲ್ಲಿ ಎದುರಾದ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಂದಿನ ಸೆಮಿಸ್ಟರ್‌ನ ಉತ್ತರಪತ್ರಿಕೆಯ “ಡಿಜಿಟಲ್‌ ಮೌಲ್ಯಮಾಪನ’ ಮಾಡಲು ಮಂಗಳೂರು ವಿಶ್ವವಿದ್ಯಾನಿಲಯ ಮಹತ್ವದ ತೀರ್ಮಾನ ಕೈಗೊಳ್ಳಲಿದೆ.

ಫೆಬ್ರವರಿಯಲ್ಲಿ ನಡೆಯುವ ಪರೀಕ್ಷೆಯನ್ನು ಹೊರತುಪಡಿಸಿ, ಮೇಯಲ್ಲಿ ನಡೆಯುವ ಪರೀಕ್ಷೆಯ ಉತ್ತರ ಪತ್ರಿಕೆ ಡಿಜಿಟಲ್‌ ಸ್ವರೂಪ ದಲ್ಲಿಯೇ ಮೌಲ್ಯ ಮಾಪನವಾಗುವ ಸಾಧ್ಯತೆಗಳಿವೆ.

ಮೈಸೂರು ಹಾಗೂ ಕುವೆಂಪು ವಿ.ವಿ.ಯಲ್ಲಿ ಈಗಾಗಲೇ ಜಾರಿಯಲ್ಲಿರುವ ಡಿಜಿಟಲ್‌ ಮೌಲ್ಯಮಾಪನವನ್ನು ಮಂಗ ಳೂರಿ  ನಲ್ಲಿಯೂ ಅನುಷ್ಠಾನಿಸಲಾಗುತ್ತದೆ. ಪರೀಕ್ಷೆ ನಡೆದ ಅನಂತರ ವಿವಿಗೆ ಬರುವ ಎಲ್ಲ ಉತ್ತರ ಪತ್ರಿಕೆಯನ್ನು ಸ್ಕ್ಯಾನಿಂಗ್‌ ಮಾಡಿ ಯುಯುಸಿಎಂಎಸ್‌ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ.

ಮೌಲ್ಯ ಮಾಪನ ಮಾಡುವವರ “ಮ್ಯಾಪಿಂಗ್‌’ ಮಾಡ ಲಾಗುತ್ತದೆ. ಅದರ ಆಧಾರದಲ್ಲಿ ಅವರಿಗೆ “ಕೋಡ್‌’ ಹಾಗೂ “ರಿಮೋಟ್‌ ಆ್ಯಕ್ಸೆಸ್‌’ ನೀಡಲಾಗುತ್ತದೆ. ಹೀಗಾಗಿ ಸಂಬಂಧ ಪಟ್ಟ ಪ್ರಾಧ್ಯಾಪಕರು ಆಯಾಯ ಕಾಲೇಜಿ ನಲ್ಲಿಯೇ ಮೌಲ್ಯಮಾಪನ ಮಾಡಲು ಸಾಧ್ಯವಾಗಲಿದೆ.

ಮನೆಯಲ್ಲೂ ಮೌಲ್ಯಮಾಪನ!
ಉತ್ತರ ಪತ್ರಿಕೆಯ ಮೌಲ್ಯಮಾಪನವನ್ನು ಡಿಜಿಟಲ್‌ ಮಾದರಿಯಲ್ಲಿ ಮಾಡುವಾಗ ಅತ್ಯುನ್ನತ ತಂತ್ರಜ್ಞಾನದ ಸಾಫ್ಟ್ವೇರ್‌ ಸಹಾಯದಿಂದ ನಡೆಸಲು ಚಿಂತನೆ ನಡೆಸ ಲಾಗಿದೆ. ಇದರಂತೆ ಉಪನ್ಯಾಸಕರ ಮನೆಯ ಕಂಪ್ಯೂಟರ್‌/ಲ್ಯಾಪ್‌ಟಾಪ್‌ಗ್ಳಲ್ಲಿ “ಫೇಸ್‌ ರೆಕಗ್ನಿಷನ್‌’ ಸಾಫ್ಟ್‌ವೇರ್‌ ಹಾಕಿ ಉತ್ತರಪತ್ರಿಕೆಯನ್ನು ಮನೆಯಲ್ಲಿಯೇ ಮೌಲ್ಯಮಾಪನ ಮಾಡುವಾಗ ಎಲ್ಲ ಅಪ್‌ಡೇಟ್‌ಗಳು ಕೇಂದ್ರ ಕಚೇರಿಯಲ್ಲಿ ಸಂಗ್ರಹವಾಗಿರುವಂತೆ ವ್ಯವಸ್ಥೆ ಮಾಡುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ.

ಪ್ರಾಯೋಗಿಕ ಯಶಸ್ವಿ
ಮೌಲ್ಯಮಾಪನ ಡಿಜಿಟಲೀಕರಣ ಗೊಳಿ ಸಲು ವರ್ಷದ ಹಿಂದೆಯೇ ವಿ.ವಿ. ತೀರ್ಮಾನಿ ಸಿತ್ತು. ಅದರಂತೆ ಪ್ರಾಯೋಗಿಕ ವಾಗಿ ಎಂಬಿಎ 3ನೇ ಸೆಮಿಸ್ಟರ್‌ನ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಡಿಜಿಟಲ್‌ ಮೂಲಕ ನಡೆಸಲಾಗಿತ್ತು. ವಿ.ವಿ. ವ್ಯಾಪ್ತಿಯ ಜಿಲ್ಲೆಗಳಲ್ಲಿ ಒಂದೊಂದು ಕೇಂದ್ರವನ್ನು ಗುರುತಿಸಿ ಅಲ್ಲಿ ಒಂದು ಸ್ಕಾ Âನಿಂಗ್‌ ಸೆಂಟರ್‌ ಸ್ಥಾಪಿಸಲು ತೀರ್ಮಾನಿಸಲಾಗಿತ್ತು. ಆದರೆ ಕೊರೊನಾ ಹಾಗೂ ಮಳೆಯ ನೆಪದಿಂದ ಇದು ಜಾರಿಯಾಗಿರಲಿಲ್ಲ!

ಲಾಭವೂ… ನಷ್ಟವೂ!
ಮೌಲ್ಯಮಾಪನಕ್ಕೆ ಪ್ರಾಧ್ಯಾಪಕರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಬರುವ ಸಮಸ್ಯೆಗೆ ಪರಿಹಾರ ಡಿಜಿಟಲ್‌ ಮೌಲ್ಯಮಾಪನದಿಂದ ದೊರೆಯಲಿದೆ. ಜತೆಗೆ ಯುಯುಸಿಎಂಎಸ್‌ ಬಂದ ನಂತರ ಎದುರಾಗಿರುವ “ಕೋಡಿಂಗ್‌’ ಹಾಗೂ “ಡಿಕೋಡಿಂಗ್‌’ ಸಮಸ್ಯೆಗೂ ಪರಿಹಾರವಾಗಲಿದೆ. ಯಾಕೆಂದರೆ ಡಿಜಿಟಲ್‌ ಮೌಲ್ಯಮಾಪನದಲ್ಲಿ ಕೋಡಿಂಗ್‌-ಡಿಕೋಡಿಂಗ್‌ ಇರುವುದಿಲ್ಲ. ಆದರೆ ಡಿಜಿಟಲ್‌ ಮೌಲ್ಯಮಾಪನ ಆಗಬೇಕಾದರೆ ಕಾಲೇಜಿನಲ್ಲಿ ಇಂಟರ್‌ನೆಟ್‌ ವ್ಯವಸ್ಥೆ ಉತ್ತಮವಾಗಿ ಇರಬೇಕು ಹಾಗೂ ಉಪನ್ಯಾಸಕರಿಗೆ ವಿಶೇಷ ತರಬೇತಿಯೂ ಅಗತ್ಯ. ಕಂಪ್ಯೂಟರ್‌ ಹಾಗೂ ಲ್ಯಾಬ್‌ ಸಹಿತ ವಿವಿಧ ಮೂಲಭೂತ ವ್ಯವಸ್ಥೆಗಳು ಸರಿ ಇರಬೇಕು. ಬಹುಮುಖ್ಯವಾಗಿ ಈಗಾಗಲೇ ತಾಂತ್ರಿಕ ಎಡವಟ್ಟುಗಳಿಗೆ ಕಾರಣವಾಗಿರುವ ಯುಯುಸಿಎಂಎಸ್‌ನಲ್ಲಿ ಮುಂದೆ ತಾಂತ್ರಿಕ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕಾದ ದೊಡ್ಡ ಸವಾಲು ಇದೆ.

ಮೌಲ್ಯಮಾಪನ ಮತ್ತೆ “ಏಕಕೇಂದ್ರಿತ’!
ಏಕಕಾಲದಲ್ಲಿ ತರಗತಿ, ಪರೀಕ್ಷೆ ಹಾಗೂ ಮೌಲ್ಯಮಾಪನ ನಡೆ ಸಲು ಅನುಕೂಲವಾಗುವಂತೆ ಏಕಕೇಂದ್ರದಲ್ಲಿ ಇದ್ದ ಮೌಲ್ಯಮಾಪನ ವನ್ನು 8 ಕೇಂದ್ರಗಳಿಗೆ ವಿಸ್ತರಿ ಸಿದ ಇತ್ತೀಚಿನ ತೀರ್ಮಾನವನ್ನು ಕೈಬಿಟ್ಟು, ಏಕ ಕೇಂದ್ರ ದಲ್ಲಿಯೇ ಮತ್ತೆ ನಡೆಸಲು ವಿ.ವಿ. ನಿರ್ಧರಿಸಿದೆ.

ಡಿಜಿಟಲ್‌ ಮೌಲ್ಯಮಾಪನ ಆರಂಭಕ್ಕೂ ಮುನ್ನ ಫೆಬ್ರವರಿಯಲ್ಲಿ ನಡೆಯಲಿರುವ 1, 3 ಹಾಗೂ 5ರ ಪದವಿ ವಿವಿಧ ಹಂತದ ಪರೀಕ್ಷೆಯ ಉತ್ತರ ಪತ್ರಿಕೆ ಯನ್ನು ಏಕಕೇಂದ್ರದಲ್ಲಿಯೇ ನv ೆಸಲು ವಿ.ವಿ. ಚಿಂತನೆ ನಡೆಸಿದೆ. ಹೀಗಾಗಿ ಮಡಿಕೇರಿ, ಉಡುಪಿ, ಸುಳ್ಯ ಸಹಿತ ವಿವಿಧ ಭಾಗದ ಪ್ರಾಧ್ಯಾಪಕರು ತರಗತಿ ಬಿಟ್ಟು ಮಂಗಳೂರಿಗೆ ಬಂದು ಮೌಲ್ಯಮಾಪನ ನಡೆಸಬೇಕಾದ ಪ್ರಮೇಯ ಮತ್ತೆ ಎದುರಾಗಲಿದೆ!

ಪದವಿ ಪರೀಕ್ಷೆಯ ಮೌಲ್ಯಮಾಪನವನ್ನು ಡಿಜಿಟಲ್‌ ಮಾಡಲು ಈ ಹಿಂದೆಯೇ ತೀರ್ಮಾನಿಸಲಾಗಿದ್ದರೂ ವಿವಿಧ ಕಾರಣದಿಂದ ಸಾಧ್ಯವಾಗಿರಲಿಲ್ಲ. ಆದರೆ ಮುಂಬರುವ ಮೌಲ್ಯಮಾಪನವನ್ನು ಡಿಜಿಟಲ್‌ ಸ್ವರೂಪದಲ್ಲಿಯೇ ನಡೆಸಲು ಈಗಾಗಲೇ ಸೂಚನೆ ಬಂದಿದೆ. ಇದರಂತೆ ಸಿದ್ಧತೆ ನಡೆಸಲಾಗುವುದು.
– ಪ್ರೊ| ಪಿ.ಎಲ್‌.ಧರ್ಮ, ಕುಲಸಚಿವರು (ಪರೀಕ್ಷಾಂಗ) ಮಂಗಳೂರು ವಿ.ವಿ.

-ದಿನೇಶ್‌ ಇರಾ

ಟಾಪ್ ನ್ಯೂಸ್

Laxmi hebbalkar

ಬಜರಂಗದಳ, ಆರ್ ಎಸ್ಎಸ್ ಬ್ಯಾನ್ ಮಾಡುತ್ತೇವೆಂದು ಎಲ್ಲೂ ಹೇಳಿಲ್ಲ: Laxmi hebbalkar

Sharad pawar (2)

New Parliament ಧಾರ್ಮಿಕ ವಿಧಿ ವಿಧಾನಗಳನ್ನು ಮಾಡಿದ್ದು ಸರಿಯಲ್ಲ: ಪವಾರ್

Kharge (2)

Democracy ಎಂದರೆ ಕೇವಲ ಕಟ್ಟಡಗಳಲ್ಲ…: ಮಲ್ಲಿಕಾರ್ಜುನ ಖರ್ಗೆ ಆಕ್ರೋಶ

Arvind Kejriwal meets Satyendar Jain in hospital

NewDelhi: ಆಸ್ಪತ್ರೆಯಲ್ಲಿ ಸತ್ಯೇಂದ್ರ ಜೈನ್ ಭೇಟಿಯಾದ ಅರವಿಂದ ಕೇಜ್ರಿವಾಲ್

1-dsadsa

New Parliament ಹೊಸ ಭಾರತಕ್ಕೆ ಕೊಡುಗೆ ಎಂದ ಶಾರುಖ್,ಅಕ್ಷಯ್ ಕುಮಾರ್

TDY-18

ಮುಟ್ಟಿನ ಕಪ್‌ ಬಳಕೆ ಸುಲಭ, ಕಿರಿಕಿರಿಯೂ ಇಲ್ಲ

ಭಾರತವನ್ನು ವಿಶ್ವಗುರು ಸ್ಥಾನಕ್ಕೆ ಕೊಂಡೊಯ್ಯಲು ಪ್ರತಿಯೊಬ್ಬ ಭಾರತೀಯರ ಸಹಭಾಗಿತ್ವ ಅವಶ್ಯ

ಭಾರತವನ್ನು ವಿಶ್ವಗುರು ಸ್ಥಾನಕ್ಕೆ ಕೊಂಡೊಯ್ಯಲು ಪ್ರತಿಯೊಬ್ಬ ಭಾರತೀಯರ ಸಹಭಾಗಿತ್ವ ಅವಶ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sasad

Mangaluru Airport 1.69 ಕೋಟಿ ರೂ. ಮೌಲ್ಯದ ವಜ್ರದ ಹರಳು ಜಪ್ತಿ

ನಗರದಲ್ಲಿ ಹೆಚ್ಚುತ್ತಿದೆ ಬೀದಿ ನಾಯಿಗಳ ಉಪಟಳ

ನಗರದಲ್ಲಿ ಹೆಚ್ಚುತ್ತಿದೆ ಬೀದಿ ನಾಯಿಗಳ ಉಪಟಳ

ಶಾಲಾರಂಭಕ್ಕೆ ಕಾಡಲಿದೆಯೇ ನೀರಿನ ಅಭಾವ: ಸುರಿಯದ ಮಳೆ: ಏರುತ್ತಿರುವ ಬಿಸಿಲ ಝಳ

ಶಾಲಾರಂಭಕ್ಕೆ ಕಾಡಲಿದೆಯೇ ನೀರಿನ ಅಭಾವ: ಸುರಿಯದ ಮಳೆ: ಏರುತ್ತಿರುವ ಬಿಸಿಲ ಝಳ

thumb-4

ಕರಾವಳಿಯಲ್ಲಿ ನಾಲ್ಕು ದಿನ ಎಲ್ಲೋ ಅಲರ್ಟ್‌

ಪೋಲಾಗುವ ಬೀಜಗಳಿಗೆ ಕಾಡಂಚಿನಲ್ಲಿ ಜೀವ! ಎಲ್ಲ ಜಿಲ್ಲೆಗಳಲ್ಲಿ ಹಣ್ಣಿನ ಬೀಜ ಬಿತ್ತಲು ನಿರ್ಧಾರ

ಪೋಲಾಗುವ ಬೀಜಗಳಿಗೆ ಕಾಡಂಚಿನಲ್ಲಿ ಜೀವ! ಎಲ್ಲ ಜಿಲ್ಲೆಗಳಲ್ಲಿ ಹಣ್ಣಿನ ಬೀಜ ಬಿತ್ತಲು ನಿರ್ಧಾರ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

Laxmi hebbalkar

ಬಜರಂಗದಳ, ಆರ್ ಎಸ್ಎಸ್ ಬ್ಯಾನ್ ಮಾಡುತ್ತೇವೆಂದು ಎಲ್ಲೂ ಹೇಳಿಲ್ಲ: Laxmi hebbalkar

Sharad pawar (2)

New Parliament ಧಾರ್ಮಿಕ ವಿಧಿ ವಿಧಾನಗಳನ್ನು ಮಾಡಿದ್ದು ಸರಿಯಲ್ಲ: ಪವಾರ್

Kharge (2)

Democracy ಎಂದರೆ ಕೇವಲ ಕಟ್ಟಡಗಳಲ್ಲ…: ಮಲ್ಲಿಕಾರ್ಜುನ ಖರ್ಗೆ ಆಕ್ರೋಶ

Arvind Kejriwal meets Satyendar Jain in hospital

NewDelhi: ಆಸ್ಪತ್ರೆಯಲ್ಲಿ ಸತ್ಯೇಂದ್ರ ಜೈನ್ ಭೇಟಿಯಾದ ಅರವಿಂದ ಕೇಜ್ರಿವಾಲ್

ಮಿಶ್ರಬೆಳೆ ಬೇಸಾಯದಿಂದ ಅಧಿಕ ಲಾಭ

ಮಿಶ್ರಬೆಳೆ ಬೇಸಾಯದಿಂದ ಅಧಿಕ ಲಾಭ